ಮಾನವ ವ್ಯವಹಾರ ದರ್ಶನ

ಮಧ್ಯಸ್ಥ ದರ್ಶನ (ಸಹ-ಅಸ್ತಿತ್ವವಾದ)

1

ಮಧ್ಯಸ್ಥ ದರ್ಶನ (ಸಹ-ಅಸ್ತಿತ್ವವಾದ)

ಪ್ರಥಮ ಭಾಗ

ಮಾನವ ವ್ಯವಹಾರ ದರ್ಶನ

ಪ್ರಣೀತ

ಮುಗಡಿ ಅಗ್ರಹಾರ ನಾಗರಾಜ್

(ಮೂಲತಃ ಹಿಂದಿ ಭಾಷೆಯಲ್ಲಿ)

ದಿವ್ಯ ಪಥ ಸಂಸ್ಥಾನ ಅಮರ್ಕಂಟಿಕ್

ಭಾಷಾಂತರಕಾರರ ಟಿಪ್ಪಣಿ

2

ಮಧ್ಯಸ್ಥ ದರ್ಶನದ ಗ್ರಂಥಗಳು ಮೂಲತಃ ಹಿಂದಿ ಭಾಷೆಯಲ್ಲಿವೆ. ಪೂಜ್ಯ ಶ್ರೀ ಎ. ನಾಗರಾಜ್ ನವರ ಸಲಹೆ ಹಾಗು ಪ್ರೇರಣೆಯಿಂದ ನಾನು ಇದರ ಕನ್ನಡ ಭಾಷಾಂತರ ಮಾಡಲಾರಂಭಿಸಿದೆ. ಮಧ್ಯಸ್ಥ ದರ್ಶನದ ಹಾಗು ಅದರ ಪರಿಷ್ಕರಣೆಯ ಅಧಿಕಾರ ಶ್ರೀ ಎ. ನಾಗರಾಜ್ ನವರದಾಗಿದ್ದು, ಈ ಭಾಷಾಂತರದ ಜವಾಬ್ದಾರಿಯನ್ನು ನಾನು ವಹಿಸುತ್ತೇನೆ. ಕನ್ನಡ ಭಾಷೆಯಲ್ಲಿ ನನ್ನ ಸಾಮರ್ಥ್ಯ ಸಾಧಾರಣ. ಮಧ್ಯಸ್ಥ ದರ್ಶನದ ವಿದ್ಯಾರ್ಥಿಯಾಗಿ, ಇದನ್ನು ನಾನು ನನ್ನ ಅಧ್ಯಯನದ ಕ್ರಮದಲ್ಲಿ ಒಂದು ಸಹಾಯಕ ಹಾಗು ಪುಷ್ಟಿದಾಯಕ ಅಭ್ಯಾಸವೆಂದು ಪರಿಗಣಿಸುತ್ತೇನೆ. ಈ ಭಾಷಾಂತರದಲ್ಲಿ ಪರಿಷ್ಕರಣೆಗೆ ಅವಕಾಶವಿದೆ. ನನ್ನ ಸ್ವಂತ ಅಧ್ಯಯನ ಮುಂದುವರಿದಂತೆ ಹಾಗು ಕನ್ನಡ ಭಾಷೆಯಲ್ಲಿ ವ್ಯಕ್ತ ಪಡಿಸುವ ಸಾಮರ್ಥ್ಯಯಲ್ಲಿ ಸುಧಾರಣೆ ಆದಂತೆ ಇದರಲ್ಲಿ ಪರಿಷ್ಕರಣೆ ಆಗುತ್ತದೆ. ಮಧ್ಯಸ್ಥ ದರ್ಶನದಲ್ಲಿ ಅಧ್ಯಯನ ರತರಾದವರು ಹಾಗು ಈ ಭಾಷಾಂತರ ಕಾರ್ಯವನ್ನು ಪಠಿಸುವವರು, ಶಿಕ್ಷಣದಲ್ಲಿ ಪ್ರಯೋಗಿಸುವವರು, ನೀಡುವ ಆಲೋಚನೆ ಹಾಗು ಸಲಹೆಯ ಆಧಾರದಮೇಲೆ ಇದರ ಪರಿಷ್ಕರಣವಾಗುತ್ತಲಿರುತ್ತದೆ. ಈ ಭಾಷಾಂತರದಿಂದ ಶ್ರೀ ಎ. ನಾಗರಾಜ್ ಪ್ರತಿಪಾದಿಸಿರುವ ಮಧ್ಯಸ್ಥ ದರ್ಶನದ ಮೂಲ ಪ್ರತಿಪಾದನೆಯನ್ನು ಕನ್ನಡಭಾಷೆಯರಿಗೆ ಸುಲಭಸಾಧ್ಯವಾಗಲೆಂದು ನಾನು ಆಶಿಸುತ್ತೇನೆ.

ಗೌರಿ ಶ್ರೀಹರಿ

(ಅಮರ್ಕಂಟಕ)

gowrisrihari@gmail.com

ಹೆಚ್ಚು ಮಾಹಿತಿಗೆ www.madhyasth-darshan.info ನೋಡಿ

The final version will have the original Hindi text along with the kannda text. This book is to be always read with the original in Hindi. Due to technical reasons the Hindi version has not been incorporated here. The original book in Hindi is provided in the zip file. Please download it and read it along with the kannda version.

ಅಂತಿಮ ಸಂಸ್ಕರಣದಲ್ಲಿ ಕನ್ನಡ ಭಾಷೆಯ ಪಠ್ಯದೊಂದಿಗೆ ಮೂಲ ಹಿಂದಿ ಪಠ್ಯವನ್ನು ಹೊಂದಿರುತ್ತದೆ ಈ ಪುಸ್ತಕವನ್ನು ಯಾವಾಗಲು ಮೂಲ ಹಿಂದಿ ಭಾಷೆಯ ಪುಸ್ತಕದ ಜೊತೆ ಓದುವುದೇ ಉತ್ತಮ. ತಾಂತ್ರಿಕ ಕಾರಣಗಳಿಂದ ಮೂಲ ಹಿಂದಿ ಪಠ್ಯವನ್ನು ಇಲ್ಲಿ ಅಳವಡಿಸಲಾಗಿಲ್ಲ. ಹಿಂದಿ ಭಾಷೆಯ ಮೂಲ ಪುಸ್ತಕವನ್ನು ಜಿಪ್ ಫೈಲ ನಲ್ಲಿ ಒದಗಿಸಲಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಅದನ್ನು ಕೂಡಾ ಕನ್ನಡ ಪುಸ್ತಕದೊಂದಿಗೆ ಓದಿ.

3

ಮಧ್ಯಸ್ಥ ದರ್ಶನದ ಮೂಲ ತತ್ವ

೧. ಉದ್ದೇಶ

ಬಾಳಲು ಬಿಟ್ಟು ಬಾಳು

೨. ಮಂಗಳ - ಕಾಮನೆ

ಭೂಮಿ ಸ್ವರ್ಗತಾಂ ಯಾತು,

ಮನುಷ್ಯೋ ಯಾತು ದೇವತಾಂ

ಧರ್ಮೋ ಸಫಲತಾಂ ಯಾತು

ನಿತ್ಯಂ ಯಾತು ಶುಭೋದಯಂ ||

ಧರಣಿ ಸ್ವರ್ಗವಾಗಲಿ

ಮಾನವ ದೇವತನಾಗಲಿ

ಧರ್ಮ ಜಯವಾಗಲಿ

ನಿತ್ಯವೂ ಶುಭವಿರಲಿ ||

೩. ಅನುಭವ ಜ್ಞಾನ

ಸತ್ತಾವಿನಲ್ಲಿ ಸಂಪ್ಪಕ್ತ ಜಡ-ಚೈತನ್ಯ ಪ್ರಕೃತಿ, ಸತ್ತಾವಿನಲ್ಲಿ (ವ್ಯಾಪಕದಲ್ಲಿ) ಸಂಪ್ಪಕ್ತ ಜಡ - ಚೈತನ್ಯ ಇಕಾಯಿಗಳು ಅನಂತ.

ವ್ಯಾಪಕ (ಪಾರಗಾಮಿ ಹಾಗು ಪಾರದರ್ಶಿ) ಸತ್ತಾವಿನಲ್ಲಿ ಸಂಪ್ಪಕ್ತ ಎಲ್ಲಾ ಇಕಾಯಿಗಳು ರೂಪ, ಗುಣ, ಸ್ವಭಾವ ಹಾಗು ಧರ್ಮ ಸಂಪನ್ನ, ತ್ವ ಸಹಿತ ವ್ಯವಸ್ಥೆ, ಸಮಗ್ರ ವ್ಯವಸ್ಥೆಯಲ್ಲಿ ಬಾಗವಹಿಸುವ ರೂಪದಲ್ಲಿವೆ.

೪. ಸಿದ್ಧಾಂತ

4

ಶ್ರಮ-ಗತಿ-ಪರಿಣಾಮ

೫. ಉಪದೇಶ

ತಿಳಿದಿರುವುದನ್ನು ನಂಬು

ನಂಬಿರುವುದನ್ನು ತಿಳಿದುಕೊ

೬. ಸ್ಥಿತಿ

ಸ್ಥಿತಿಪೂರ್ಣ ಸತ್ತಾವಿನಲ್ಲಿ ಸಂವೃತ್ತ ಸ್ಥಿತಿಶೀಲ ಪ್ರಕೃತಿ

ಸಹ-ಅಸ್ತಿತ್ವ ನಿತ್ಯ ವರ್ತಮಾನ

೭. ಪ್ರಮಾಣ

ಅನುಭವ ವ್ಯವಹಾರ ಪ್ರಯೋಗ

ಅನುಭವವೇ ಪ್ರಮಾಣ, ಪರಮ

ಪ್ರಮಾಣವೇ ಅರಿವು, ಜ್ಞಾನ

ಅರಿವೇ ಪ್ರತ್ಯಕ್ಷ

ಪ್ರತ್ಯಕ್ಷವೇ ಸಮಾಧಾನ ಕಾರ್ಯ - ವ್ಯವಹಾರ,

ಕಾರ್ಯ ವ್ಯವಹಾರವೇ ಪ್ರಮಾಣ,

ಪ್ರಮಾಣವೇ ಜಾಗೃತ ಪರಂಪರೆ

ಜಾಗೃತ ಪರಂಪರೆಯೇ ಸಹ-ಅಸ್ತಿತ್ವ

೮. ಯಥಾರ್ಥ

ಬ್ರಹ್ಮ ಸತ್ಯ, ಜಗತ್ತು ಶಾಶ್ವತ

ಬ್ರಹ್ಮ (ಸತ್ತ್ವ) ವ್ಯಾಪಕ, ಜೀವನ ಪುಂಜ ಅನೇಕ

ಜೀವನ ಪುಂಜದಲ್ಲಿ ಅವಿಭಾಜ್ಯ ಆತ್ಮ, ಬುದ್ಧಿ, ಚಿತ್ತ, ವೃತ್ತಿ, ಮನ

5

ಜೀವನ ಮತ್ತು ಶರೀರದ ಸಂಯುಕ್ತ ರೂಪದಲ್ಲಿ ಮಾನವನ ವೈಭವ

ಈಶ್ವರ ವ್ಯಾಪಕ, ದೇವತೆ ಅನೇಕ

ಮಾನವ ಜಾತಿ ಒಂದು, ಕರ್ಮ ಅನೇಕ

ಭೂಮಿ (ಅಖಂಡ ರಾಷ್ಟ್ರ) ಒಂದು, ರಾಜ್ಯ ಅನೇಕ

ಮಾನವ ಧರ್ಮ ಒಂದು, ಸಮಾಧಾನ ಅನೇಕ

ಜೀವನ ನಿತ್ಯ, ಜನ್ಮ ಮೃತ್ಯು ಒಂದು ಘಟಕ

೯. ವಾಸ್ತವಿಕತೆ

ಸಹ ಅಸ್ತಿತ್ವದಲ್ಲಿ ವಿಕಾಸ ಕ್ರಮ - ವಿಕಾಸ

ಜಾಗೃತಿ ಕ್ರಮ - ಜಾಗೃತಿ

ಜಾಗೃತಿ ಪೂರ್ವಕ ಅಭಿವ್ಯಕ್ತಿಗಳು ಅರಿವುಳ್ಳ ಮಾನವ ಪರಂಪರೆ

೧೦. ಜ್ಞಾನ

ಸಹ ಅಸ್ತಿತ್ವದಲ್ಲಿ ಜೀವನ ಜ್ಞಾನ

ಸಹ-ಅಸ್ತಿತ್ವ ರೂಪಿ ಅಸ್ತಿತ್ವ ದರ್ಶನ ಜ್ಞಾನ

ಮಾನವೀಯತೆಪೂರ್ಣ ಆಚರಣ ಜ್ಞಾನ

ಅನುಭವವೇ ಜ್ಞಾನ

೧೧. ಅನುಸಂಧಾನ

ಘಟಕ-ಪೂರ್ಣತೆ

ಕ್ರಿಯೆ-ಪೂರ್ಣತೆ

ಆಚರಣ-ಪೂರ್ಣತೆ

೧೨. ಆಧಾರ

ಸತ್ತಾವಿನಲ್ಲಿ ಸಂವೃತ್ತ ಪ್ರಕೃತಿ (ಸಹ-ಅಸ್ತಿತ್ವ)

೧೩. ಪ್ರತಿಪಾದನೆ

6

ಭೌತಿಕ ರಾಸಾಯನಿಕ ಪ್ರಕೃತಿಯೇ ವಿಕಾಸ ಕ್ರಮದಲ್ಲಿದೆ. ಪರಮಾಣುವೇ ವಿಕಸಿತ ರೂಪದಲ್ಲಿ ಚೈತನ್ಯ ಇಕಾಯಿಯಾಗಿದೆ.

ಚೈತನ್ಯ ಇಕಾಯಿ ಅರ್ಥಾತ್ ಜೀವನವೇ ಜಾಗೃತಿ ಪೂರ್ವಕ ಮಾನವ ಪರಂಪರೆಯಲ್ಲಿ ಅಖಂಡ ಸಾಮಾಜಿಕತೆ ಸಹಜ ಪ್ರಮಾಣ

ಸತರ್ಕತೆಪೂರ್ಣ ಮಾನವೀಯತೆ ಹಾಗು ಸಾಮಾಜಿಕತೆ

ಸತರ್ಕತೆ ಸಹಿತ ಸಂಜ್ಞಾನೀಯತೆಪೂರ್ಣ ಸಜಗತೆ ಸಹಿತ ದೇವ-ಮಾನವೀಯತೆ

ಸಜಗತೆಪೂರ್ಣ ಸಹಜತೆ ಸಹಿತ ದಿವ್ಯ-ಮಾನವೀಯತೆ

ಘಟನ-ಪೂರ್ಣತೆ ಕ್ರಿಯೆ-ಪೂರ್ಣತೆ ಹಾಗು ಆಚರಣ-ಪೂರ್ಣತೆ

೧೪. ಸತ್ಯತೆ

ಸತ್ತಾವಿನಲ್ಲಿ ಸಂವೃತ್ತ ಪ್ರಕೃತಿಯೇ ಸೃಷ್ಟಿ

ಪ್ರಕೃತಿಯೇ ನಿಯತಿ

ನಿಯತಿಯೇ ವ್ಯವಸ್ಥೆ

ವ್ಯವಸ್ಥೆಯೇ ವಿಕಾಸ ಹಾಗು ಜಾಗೃತಿ

ವಿಕಾಸ ಹಾಗು ಜಾಗೃತಿಯೇ ಸೃಷ್ಟಿಯಾಗಿದೆ

ನಿಯಮವೇ ನ್ಯಾಯ, ನ್ಯಾಯವೇ ಧರ್ಮ, ಧರ್ಮವೇ ಸತ್ಯ, ಸತ್ಯವೇ ಐಶ್ವರ್ಯ (ಸಹ-ಅಸ್ತಿತ್ವ), ಐಶ್ವರ್ಯಾನುಭೂತಿಯೇ ಆನಂದ, ಆನಂದವೇ ಜೀವನ, ಜೀವನವೇ ನಿಯಮವಾಗಿದೆ.

ಭ್ರಮಿತ ಮಾನವನೇ ಕರ್ಮ ಮಾಡುವ ಸಮಯ ಸ್ವತಂತ್ರ ಹಾಗು ಫಲವನ್ನು ಭೋಗಿಸುವ ಸಮಯ ಪರತಂತ್ರನಾಗಿದ್ದಾನೆ.

ಜಾಗೃತ ಮಾನವ ಕರ್ಮ ಮಾಡುವ ಸಮಯ ಹಾಗು ಫಲವನ್ನು ಭೋಗಿಸುವ ಸಮಯ ಸ್ವತಂತ್ರನಾಗಿದ್ದಾನೆ.

೧೫. ಮಾನವ ಶರಣ

ಅಖಂಡ - ಸಾಮಾಜಿಕತೆ ಸಾರ್ವಭೌಮ ವ್ಯವಸ್ಥೆ (ಸಹ-ಅಸ್ತಿತ್ವ) ಸಹಜ ಪ್ರಮಾಣ ಪರಂಪರೆ

೧೬. ಮಾನವೀಯ ವ್ಯಾವಸ್ಥೆ

7

ಮಾನವೀಯತೆ. ಮಾನವತ್ವ ಸಹಿತ ವ್ಯವಸ್ಥೆ, ಸಮಗ್ರ ವ್ಯವಸ್ಥೆಯಲ್ಲಿ ಭಾಗವಹಿಸುವಿಕೆ.

೧೭. ವ್ಯಕ್ತಿಯಲ್ಲಿ ಪೂರ್ಣತೆ

ಕಿರ್ಯ-ಪೂರ್ಣತೆ

ಆಚರಣ-ಪೂರ್ಣತೆ

೧೮. ಸಮಾಜದಲ್ಲಿ ಪೂರ್ಣತೆ

ಸರ್ವತೋಮುಖಿ ಸಮಾಧನಾ

ಸಮೃದ್ಧಿ

ಅಭಯ

ಸಹ-ಅಸ್ತಿತ್ವ ಸಹಜ ಪ್ರಮಾಣ ಪರಂಪರೆ

೧೯. ರಾಷ್ಟ್ರದಲ್ಲಿ ಪೂರ್ಣತೆ

ಕುಶಲತೆ

ನಿಪುಣತೆ

ಪಾಂಡಿತ್ಯ

೨೦. ಅಂತರಾಷ್ಟ್ರದಲ್ಲಿ ಪೂರ್ಣತೆ (ಅಖಂಡ ರಾಷ್ಟ್ರ)

ಮಾನವೀಯ ಸಂಸ್ಕೃತಿ-ಸಭ್ಯತೆ-ವಿಧಿ-ವ್ಯವಸ್ಥೆಯಲ್ಲಿ ಏಕಾತ್ಮತೆ (ಸಾರ್ವಭೌಮತೆ)

೨೧. ಮಾನವ ಧರ್ಮ

ಸುಖ, ಶಾಂತಿ, ಸಂತೋಷ ಹಾಗು ಆನಂದ

೨೨. ಧರ್ಮನೀತಿಯ ಆಧಾರ

ತನ, ಮನ, ಹಾಗು ಧನ ರೂಪವಾದ ಅರ್ಥದ ಸದುಪಯೋಗಕ್ಕಾಗಿ ವ್ಯವಸ್ಥೆ

೨೩. ರಾಜ್ಯ ನೀತಿಯ ಆಧಾರ

8

ತನ, ಮನ ಹಾಗು ಧನ ರೂಪವಾದ ಅರ್ಥದ ರಕ್ಷಣೆಗಾಗಿ ವ್ಯವಸ್ಥೆ

೨೪. ಅನುಗಮನ ಮತ್ತು ಚಿಂತನೆ

ಸ್ಥೂಲದಿಂದ ಸೂಕ್ಷ್ಮ

ಸೂಕ್ಷ್ಮದಿಂದ ಕಾರಣ

ಕಾರಣದಿಂದ ಮಹಾಕಾರಣ

೨೫. ಜಾಗೃತಿಯ ಪ್ರಮಾಣ

ಅಮಾನವೀಯತೆಯಿಂದ ಮಾನವೀಯತೆ

ಮಾನವೀಯತೆಯಿಂದ ದೇವ-ಮಾನವೀಯತೆ

ದೇವ-ಮಾನವೀಯತೆಯಿಂದ ದಿವ್ಯ - ಮಾನವೀಯತೆ

೨೬. ಮಾಂಗಲ್ಯ

ಜೀವನ ಮಂಗಳ

ಉದಯ ಮಂಗಳ

ಸಮಾಧಾನ ಮಂಗಳ

ಜಾಗೃತಿ ಮಂಗಳ

ಅನುಭವ ಮಂಗಳ

೨೭. ಸರ್ವ ಮಾಂಗಲ್ಯ

ಮಾನವನ ನಾಲ್ಕು ಆಯಾಮ (ಕಾರ್ಯ, ವ್ಯವಹಾರ, ವಿಚಾರ ಹಾಗು ಅನುಭೂತಿ), ಐದು ಸ್ಥಿತಿ (ವ್ಯಕ್ತಿ, ಪರಿವಾರ, ಸಮಾಜ, ರಾಷ್ಟ್ರ ಹಾಗು ಅಂತರಾಷ್ಟ್ರ) ಹಾಗು ಹತ್ತು ಸೋಪಾನೀಯ ಪರಿವಾರ ಮೂಲಕ ಸ್ವರಾಜ್ಯ ವ್ಯವಸ್ಥೆಯಲ್ಲಿ ನಿರ್ವಿಶಮತೆ (ಸಾಮರಸ್ಯತೆ) ಹಾಗು ಏಕಸೂತ್ರತೆ.

೨೮. ಮಹಾ ಮಾಂಗಲ್ಯ

ಸತ್ಯಾನುಭೂತಿ ಜಾಗೃತಿ (ಭ್ರಮೆ ಮುಕ್ತಿ)

9

೧೯. ಉಪಲಬ್ಧತೆ

ಸಹ-ಅಸ್ತಿತ್ವದಲ್ಲಿ ಸ್ಥಾಪಿತ ಮೌಲ್ಯಗಳಲ್ಲಿ ಅನುಭೂತಿ

ಸಮಾಧಾನ, ಸಮೃದ್ಧಿ, ಅಭಯ, ಸಹ-ಅಸ್ತಿತ್ವ ಸಹಜ ಪ್ರಮಾಣ- ಇದೇ ಸರ್ವಶುಭ

ಭ್ರಮೆ ಮುಕ್ತಿ ಮತ್ತು ನಿತ್ಯ ಜಾಗರಣೆ

೨೦. ಶಿಕ್ಷಣದಲ್ಲಿ ಪೂರ್ಣತೆ

ಚೇತನ ವಿಕಾಸ ಮೌಲ್ಯ ಶಿಕ್ಷಣ

ಕಾರಿಗಾರಿ (ತಂತ್ರ) ಶಿಕ್ಷಣ

10

ಲೇಖಕರ ಟಿಪ್ಪಣಿ

ಮಾನವನಲ್ಲಿ ಸಾಮಾನ್ಯತಃ ಕಂಡುಬರುವ ರೂಪ, ಬಲ ಹಾಗು ಬುದ್ಧಿಯ ಯೋಗಫಲದಿಂದ ನಿರ್ಮಿತ ಪದ ಹಾಗು ಧನ ಮತ್ತು ಇವೆಲ್ಲರ ಯೋಗಫಲದಿಂದ ಉತ್ಪನ್ನ ಶಿಷ್ಟತೆಗಳು ಹಾಗು ಭೌಗೋಳಿಕ ಸಂರಚನೆಗಳು ಮತ್ತು ತದನುಸಾರ ಆವಶ್ಯಕತೆಗಳ ಆಧಾರದ ಮೇಲೆ ಪರಸ್ಪರ ಸಾಮರಸ್ಯತೆಯ ಕಾಮನ ಕಂಡುಬರುತ್ತದೆ.

ಶಿಷ್ಟತೆಯ ವೈವಿಧ್ಯತೆ, ಸಂಪತ್ತಿ ಹಾಗು ಸ್ವತ್ತದ ವಿಸ್ತಾರ-ಪ್ರವೃತ್ತಿಯ ಉತ್ಕಟತೆಯ ಅನುಸಾರ ಮಾನವನಲ್ಲಿ ಪರಿಮಿತಿಗಳು ದೃಷ್ಟವ್ಯವಾಗಿದೆ. ಮಾನವನಲ್ಲಿ ಪ್ರತ್ಯೇಕ ಸೀಮಿತ ಸಂಘಟನೆ ಪ್ರಧಾನತಃ ಭಯ-ಮುಕ್ತಿ ಪಡೆಯುವ ಉದ್ದೇಶದಿಂದಾಗಿದೆ. ಸರ್ವಪ್ರಥಮ ಮಾನವನೇ ಜೀವ-ಭಯ ಹಾಗು ಪ್ರಾಕೃತಿಕ ಭಯದಿಂದ ಮುಕ್ತನಾಗುವುದಕ್ಕಾಗಿ ಸಾಧಾರಣ (ಆಹಾರ, ಆವಾಸ, ಅಲಂಕಾರ) ಹಾಗು ಹಿಂಸಕ ಸಾಧನಗಳ ಆವಿಷ್ಕಾರ ಮಾಡಿದನು. ಈ ಹಿಂಸಕ ಸಾಧನಗಳಿಂದ ಮಾನವನ ಪರಸ್ಪರತೆಯಲ್ಲಿ ಅರ್ಥಾತ್ ಪರಸ್ಪರ ಎರಡು ಮಾನವನಲ್ಲಿ, ಪರಿವಾರ ಹಾಗು ವರ್ಗ ಹಾಗು ಸಮುದಾಯಗಳ ಸಂಘರ್ಷದಲ್ಲಿ ನಿಯುಕ್ತವಾಗುವುದೇ ಯುದ್ಧ. ಇದರ ಮೂಲದಲ್ಲಿ ಪ್ರಧಾನತಃ ಸಂಸ್ಕೃತಿ, ಸಭ್ಯತೆ, ವಿಧಿ ಹಾಗು ವ್ಯವಸ್ಥೆಯ ವೈವಿಧ್ಯತೆಯಿದೆ. ಜೊತೆಗೆ ಅದರ ಅನುಸರಣೆಯಲ್ಲಿ ಸ್ವತ್ತ ಹಾಗು ಸಂಪತ್ತಿಯ ವಿಸ್ತಾರ ಮಾಡುವ ಪ್ರವೃತ್ತಿಯೊಂದಿಗೆ. ಇದೇ ಕೇಂದ್ರ-ಬಿಂದುವಾಗಿದೆ. ಮಾನವ, ಮಾನವನ ಜೊತೆ ಸಂಘರ್ಷ ಮಾಡಲು, ಪ್ರತ್ಯೇಕ ಸಂಘಟಿತ ಇಕಾಯಿ ಅರ್ಥಾತ್ ಪರಿವಾರ ಹಾಗು ವರ್ಗ ತನ್ನ ಸಭ್ಯತೆ ಹಾಗು ಸಂಸ್ಕೃತಿಯನ್ನು ಶ್ರೇಷ್ಠವೆಂದು ನಂಬುವ ಆಧಾರದ ಮೇಲೆ ಸ್ವತ್ತ ಮತ್ತು ಸಂಪತ್ತಿಕರಣೆಯ ವಿಸ್ತಾರ ಮಾಡುವುದನ್ನು ನ್ಯಾಯ-ಸಮ್ಮತ ಸ್ವೀಕರಿಸುತ್ತಾನೆ, ಫಲತಃ ಅದರ ಪ್ರತಿಪಾದನೆ ಮಾಡುತ್ತಾನೆ ಮತ್ತು ಆಚರಣ ಹಾಗು ವ್ಯವಹಾರದಲ್ಲಿ ಪ್ರಕಟಿಸುತ್ತಾನೆ. ಇದೇ ಸ್ಥಿತಿ ಪ್ರತ್ಯೇಕ ಪರಿಮಿತಿಯ ಜೊತೆಯಿದೆ.

ಪ್ರತ್ಯೇಕ ಸಾಮುದಾಯಿಕ ಇಕಾಯಿಯ ಮೂಲದಲ್ಲಿ ಸಾರ್ವಭೌಮಿಕತೆಯನ್ನು ಪಡೆಯುವ ಶುಭ ಸಂಕಲ್ಪವಿದೆಯೆಂದು ಈ ಐತಿಹಾಸಿಕ ತಥ್ಯದಿಂದ ಜ್ಞಾತವಾಗುತ್ತದೆ. ಅದನ್ನು ಚರಿತಾರ್ಥ ಅಥವಾ ಸಫಲ ಮಾಡುವ ಉಪಾಯ ಸುಲಭಸಾಧ್ಯವಾಗಿದೆ, ಇದು “ಮಧ್ಯಸ್ಥ ದರ್ಶನ”ದ ರೂಪದಲ್ಲಿ ಮುಖರಿತವಾಗಿದೆ. ಇದು ಮಾನವೀಯತೆಪೂರ್ಣ ಸಭ್ಯತೆ, ಸಂಸ್ಕೃತಿ, ವಿಧಿ ಹಾಗು ವ್ಯವಸ್ಥೆಗಾಗಿ ಪ್ರಮಾಣಗಳ ಆಧಾರದ ಮೇಲೆ ವರ್ತಮಾನ ಬಿಂದುವಿನಲ್ಲಿ ದಿಶೆಯನ್ನು ಸ್ಪಷ್ಟ ಮಾಡುತ್ತದೆ.

11

“ವರ್ಗ-ವಿಹೀನ ಸಮಾಜವನ್ನು ಪಡೆಯುವ ಜೊತೆಗೆ ಪ್ರತ್ಯೇಕ ವ್ಯಕ್ತಿಯಲ್ಲಿ ಕಂಡುಬರುವ ನ್ಯಾಯ - ಪಿಪಾಸ, ಸಮಾಧಾನ ಹಾಗು ಸಮೃದ್ಧಿ - ವಾಂಛೆ ಹಾಗು ಸಹ-ಅಸ್ತಿತ್ವದಲ್ಲಿ ಪೂರ್ಣ ಸಮೃದ್ಧಿಯನ್ನು ಸಫಲ ಮಾಡುವ ಆಪ್ತ ಕಾಮನೆಯ ಆಧಾರದ ಮೇಲೆ ಮಧ್ಯಸ್ಥ ದರ್ಶನವನ್ನು ಪ್ರಕಟಿಸುವ ಶುಭ ಅವಸರ ನನಗೆ ಪ್ರಾಪ್ತವಾಗಿದೆ.”

“ಸಹ-ಅಸ್ತಿತ್ವ ಸೂತ್ರ ವ್ಯಾಖ್ಯೆಯೇ ಸ್ವಯಂನಲ್ಲಿ ಸಾಮರಸ್ಯತೆಯಾಗಿದೆ.” ಸಾಮರಸ್ಯತೆ ಸ್ಥಿತಿ ರೂಪ, ಗುಣ, ಸ್ವಭಾವ ಹಾಗು ಧರ್ಮದ ಸಾಮ್ಯತೆ ಸಮಾಧಾನದ ಮೇಲೆ ಆಧಾರಿತವಾಗಿದೆ. ಪದಾರ್ಥಾವಸ್ಥೆಯ ಪ್ರಕೃತಿಯಲ್ಲಿ ರೂಪ ಸಾಮರಸ್ಯತೆ, ವನಸ್ಪತಿ ಅರ್ಥಾತ್ ಪ್ರಾಣಾವಸ್ಥೆಯ ಪ್ರಕೃತಿಯಲ್ಲಿ ಗುಣ ಸಾಮರಸ್ಯತೆ, ಜೀವಾವಸ್ಥೆಯ ಪ್ರಕೃತಿಯಲ್ಲಿ ಪರಸ್ಪರ ಬಾಳುವ ಆಶೆ ಹಾಗು ಸ್ವಭಾವ ಸಾಮರಸ್ಯತೆಯ ಪ್ರಕಟನೆ ಸ್ಪಷ್ಟವಾಗಿದೆ, ಇದು ದೃಷ್ಟವ್ಯವಾಗಿದೆ ಅರ್ಥಾತ್ ಅರಿವಾಗುತ್ತದೆ. ಧರ್ಮ ಸಾಮರಸ್ಯತೆಯೇ ಮಾನವನಲ್ಲಿ ಅಖಂಡತೆ. ಇದಲ್ಲದೆ ಅನ್ಯ ಅವಸ್ಥೆಗಳಲ್ಲಿ ಕಂಡುಬರುವ ಧರ್ಮ, ಸ್ವಭಾವ, ಗುಣ ಹಾಗು ರೂಪದ ಪರಿಮಿತಿಯಲ್ಲಿ ಸಾಮರಸ್ಯತೆಯ ಪೂರ್ಣತೆಯನ್ನು ಪಡೆಯಲು ಸಂಭವವಿಲ್ಲ. ಸಂಭವವಾಗಿದ್ದರೆ ಮಾನವನ ಹಿಂದಿನ ಅವಸ್ಥೆಗಳಲ್ಲಿ ಸಹ-ಅಸ್ತಿತ್ವದ ತೃಪ್ತಿಯನ್ನು ತಿಳಿದುಕೊಂಡು-ನಂಬಬೇಕಾಗಿತ್ತು, ಆದರೆ ಇದಾಗದಿರುವುದು ನೋಡಲಾಗಿದೆ. ಫಲತಃ ಅಗ್ರಿಮ ವಿಕಾಸದಲ್ಲಿ ಸಂಕ್ರಮಣ ಹಾಗು ಪದದಲ್ಲಿ ಆರೂಢತೆ ದೃಷ್ಟವ್ಯವಾಗಿದೆ. ಮಾನವನಲ್ಲಿಯೇ ಧರ್ಮ ಸಾಮರಸ್ಯತೆಯನ್ನು ಪಡೆಯಲು ಸಂಭವನೀಯತೆ ಸ್ಪಷ್ಟವಾಗಿದೆ. ಇದನ್ನು ಪಡೆಯುವುದೇ ಮಾನವನ ಪರಮೋದ್ದೇಶವಾಗಿದೆ, ಅದನ್ನು ಸರ್ವಸುಲಭ ಮಾಡುವುದೇ ಮಧ್ಯಸ್ಥ ದರ್ಶನದ ಅಭೀಷ್ಟ. ಧರ್ಮ ಸಾಮರಸ್ಯತೆಯ ತಾತ್ಪರ್ಯ ಸರ್ವತೊಮುಖಿ ಸಮಾಧಾನ ಸಂಪನ್ನವಾಗುವುದು.

“ಮಾನವ-ಜೀವನ ಸಫಲವಾಗಲಿ”

“ಅನ್ಯರಲ್ಲಿ ಸಂತುಲನ ಪ್ರಮಾಣಿತವಾಗಲಿ”

- ಪಿ. ನಾಗರಾಜ್

12

ಸಂದೇಶ

ಭೂಮಿ ಸ್ವರ್ಗತಾಂ ಯಾತು, ಮನುಷ್ಯೋ ಯಾತು ದೇವತಾಂ |

ಧರ್ಮೋ ಸಫಲತಾಂ ಯಾತು, ನಿತ್ಯಂ ಯಾತು ಶುಭೋದಯಂ |

ವ್ಯಾಪಕ ಶೂನ್ಯಾವಕಾಶದಲ್ಲಿ ಸ್ಥಿತ ಅನಂತ ಭ್ರಹ್ಮಾಂಡಗಳಲ್ಲಿ ಒಂದು ಭ್ರಹ್ಮಾಂಡದಲ್ಲಿ ಅಂಗಭೂತ ಈ ಪೃಥ್ವಿಯ ಮೇಲೆ ವರ್ತಮಾನದಲ್ಲಿ ಕಂಡುಬರುವ ಮಾನವ ಅತ್ಯಂತ ಸೌಭಾಗ್ಯಶಾಲಿಯಾಗಿದ್ದಾನೆ, ಏಕೆಂದರೆ ಇವನಿಗೆ ಹಾಸ ಹಾಗು ವಿಕಾಸದ ಅಧ್ಯಯನ ಮತ್ತು ಪ್ರಯೋಗ ಮಾಡುವ ಸುವರ್ಣ ಅವಸರ ಹಾಗು ಸಾಧನ ಪ್ರಾಪ್ತವಿದೆ.

ಅಭ್ಯುದಯ (ಸರ್ವತೋಮುಖಿ ಸಮಾಧಾನ) ಎಲ್ಲರಿಗೂ - “ಸ್ವಯಂನ ಮೌಲೀಕರಣೆ ಮಾಡಿಕೊ - ತಪ್ಪನ್ನು ಅಪರಾಧವನ್ನು ಮಾಡದಿದ್ದರೆ ಫಲತಃ ದುಃಖಿ, ಪೀಡಿತ ಮತ್ತು ದರಿದ್ರನಾಗುವುದಿಲ್ಲ” ಎಂದು ಸರ್ವತ್ರ ಉತ್ಕೇರಿತ ಮಾಡುತ್ತಿದೆ.

ಸ್ವಯಂನ ಮೌಲೀಕರಣೆ ಮಾಡಲು ಸ್ವಯಂ-ಸಿದ್ಧ ಮೂಲಭೂತ ಆಧಾರ ಅಂಗೀಕೃತ ಮಾಡಬೇಕಾಗುತ್ತದೆ, ಇದು

೧. ಭೂಮಿ (ಅಖಂಡ ರಾಷ್ಟ್ರ) ಒಂದು - ರಾಜ್ಯ ಅನೇಕ,

೨. ಮಾನವ ಜಾತಿ ಒಂದು - ಕರ್ಮ ಅನೇಕ,

೩. ಮಾನವ ಧರ್ಮ ಒಂದು - ಸಮಾಧಾನ ಅನೇಕ,

೪. ಈಶ್ವರ (ವ್ಯಾಪಕ) - ದೇವತೆ ಅನೇಕ.

ಒಂದು - ಪ್ರತ್ಯೇಕ ಮಾನವ ಮಾನವನನ್ನು ಮಾತ್ರ ಒಂದು ಇಕಾಯಿಯ ರೂಪದಲ್ಲಿ ತಿಳಿದುಕೊಂಡು ಮತ್ತು ಅವನ ಸಹಿತ ತದಾನುಸಾರ ನಿರ್ವಾಹ ಮಾಡುವಂತೆ - ಕ್ಷಮತೆ, ಯೋಗ್ಯತೆ ಮತ್ತು ಪಾತ್ರತೆ ಸಹಜ ವಿಕಾಸಕ್ಕಾಗಿ,

ಎರಡು - ಸಹ-ಅಸ್ತಿತ್ವ , ಸಂತುಲನ, ಸಮಾಧಾನ, ಅಭಯ ಮತ್ತು ಸುಖ ಸಹಜ ಅಕ್ಷುಣ್ಣತೆಗಾಗಿ,

ಮೂರು - ಸ್ವಧನ, ಸ್ವನಾರಿ / ಸ್ವ ಪುರುಷ ತಥಾ ದಯೆ ಪೂರ್ಣ ಕಾರ್ಯ ವ್ಯವಹಾರ ಸಂಪನ್ನ ಜೀವನ ದೃಢತೆ ಪೂರ್ವಕ ಬಾಳುವುದರಲ್ಲಿ ಸಮರ್ಥವಾಗುವುದಕ್ಕಾಗಿ,

13

ನಾಲ್ಕು - ಅಮಾನವೀಯತೆಯಿಂದ ಮಾನವೀಯತೆ ಮತ್ತು ಮಾನವೀಯತೆಯಿಂದ ಅತಿ-ಮಾನವೀಯತೆಯ ದಿಕ್ಕಿನಲ್ಲಿ ಗತಿಗಾಗಿ, ಸುಗಮ ಮಾರ್ಗ ಪಡೆಯುವುದಕ್ಕಾಗಿ,

ಐದು - ಅಖಂಡ ಸಮಾಜ ಸಾರ್ವಭೌಮ ವ್ಯವಸ್ಥೆಯಲ್ಲಿ ದಾಯಿತ್ವಗಳ ಸಹಜತೆಪೂರ್ವಕ ನಿರ್ವಹಿಸುವುದಕ್ಕಾಗಿ,

ಆರು - ಆಶಿತ ಮಾನವೀಯ ಸಂಸ್ಕೃತಿ ಹಾಗು ಸಭ್ಯತೆಯ ಜ್ಞಾನ ಸಹಿತ ಪ್ರಮಾಣಿತವಾಗುವುದಕ್ಕಾಗಿ -

ಏಳು - ರಾಷ್ಟ್ರದಲ್ಲಿ ಮಾನವೀಯತೆ ಪೂರ್ಣ ಸಂಸ್ಕೃತಿ ಹಾಗು ಸಭ್ಯತೆ ಸಹಜ ವಿಕಾಸಕ್ಕೆ ಅವಶ್ಯಕ ವಿಧಿ, ವ್ಯವಸ್ಥೆ ಹಾಗು ನೀತಿ ಪಕ್ಷದಲ್ಲಿ ಪಾರಂಗತವಾಗುವುದಕ್ಕಾಗಿ, ಇವುಗಳ ಆಧಾರ ಭೂತ ತಥ್ಯಗಳ ಅಧ್ಯಯನ ಅವಶ್ಯಕವಾಗಿದೆ.

ಪೂರ್ವೋಕ್ತ ಅಧ್ಯಯನವನ್ನು ಸುಲಭ ಮಾಡಲು ಈ ಗ್ರಂಥ “ಮಧ್ಯಸ್ಥ ದರ್ಶನ (ಸಹ - ಅಸ್ತಿತ್ವವಾದ)”, ಇದರ ಪ್ರಥಮ ಭಾಗ ‘ಮಾನವ ವ್ಯವಹಾರ ದರ್ಶನ’ ನಾಮದಿಂದ ಸಂಪೂರ್ಣ ಮಾನವ ಸಮಾಜಕ್ಕೆ ಅರ್ಪಿತ ಮಾಡುತ್ತಾ, ನಾನು ಪರಮ ಪ್ರಸನ್ನತೆಯನ್ನು ಅನುಭವಿಸುತ್ತಿದ್ದೇನೆ.

ಸಾಂಕೇತಿಕ ತಥ್ಯಗಳ ಅಧ್ಯಯನ ಮಾಡಿದ ನಂತರ ಈ ಗ್ರಂಥ ನಿಮಗೆ ವ್ಯವಹಾರ ಹಾಗೆ ಆಚರಣದಲ್ಲಿ ಮಾನವೀಯತೆ ಪೂರ್ಣ ದೃಷ್ಟಿ, ಗುಣ ಹಾಗು ಪ್ರವೃತ್ತಿಯನ್ನು ಪ್ರಸ್ತಾಪಿತ ಮಾಡುವ ಪ್ರೇರಣೆ ನೀಡುತ್ತದೆ ಹಾಗು ನಿಮ್ಮ ವ್ಯಕ್ತಿತ್ವದ ವಿಕಾಸದಲ್ಲಿ ಸಹಾಯಕವಾಗುತ್ತದೆ ಎಂಬುವ ಪೂರ್ಣ ವಿಶ್ವಾಸವಿದೆ, ಇದರಿಂದ -

ಧರಣಿಯೇ ಸ್ವರ್ಗವಾಗುತ್ತದೆ, ಮಾನವನೇ ದೇವತನಾಗುತ್ತಾನೆ

ಧರ್ಮ ಜಯವಾಗುತ್ತದೆ ಮತ್ತು ನಿತ್ಯವೂ ಶುಭವಿರುತ್ತದೆ ||

- ಏ ನಾಗರಾಜ್

14

ಮಧ್ಯಸ್ಥ ದರ್ಶನದಲ್ಲಿ ಪ್ರತಿಪಾದಿತ ಮೂಲ ಬಿಂದು

ಸತ್ತಾ ಮಧ್ಯಸ್ಥವಾಗಿದೆ, ವ್ಯಾಪಕವಾಗಿದೆ. ಸತ್ತಾವಿನಲ್ಲಿ ಪ್ರಕೃತಿ ಸಮ-ವಿಷಮ ಮತ್ತು ಮಧ್ಯಸ್ಥ ಕ್ರಿಯೆಯಾಗಿದೆ, ಸೀಮಿತವಾಗಿದೆ. ಆದ್ದರಿಂದ ಸತ್ತಾ ಸ್ಥಿತಿಪೂರ್ಣವಾಗಿದೆ.

ಸತ್ತಾವಿನಲ್ಲಿ ಜಡ ಚೈತನ್ಯ ಪ್ರಕೃತಿ ಸ್ಥಿತಿಶೀಲವಾಗಿದೆ, ಆದ್ದರಿಂದ ಸತ್ತಾವಿನಲ್ಲಿ ಪ್ರಕೃತಿ ಒಳಗೊಂಡಿದೆ. ಅತಃ ಸತ್ತಾವಿನಲ್ಲಿ ಪ್ರಕೃತಿ ಮುಳುಗಿದೆ. ಅಸ್ತು ಸತ್ತಾವಿನಲ್ಲಿ ಪ್ರಕೃತಿ ಸಂಪ್ಪಕ್ತವಾಗಿದೆ ಆದ್ದರಿಂದಲೇ ಪ್ರಕೃತಿ ಪೂರ್ಣತೆಯ ಉರ್ಜ ಸಂಪನ್ನವಾಗಿದೆ. ಅಸ್ತು ಪ್ರಕೃತಿ ಕ್ರಿಯಾಶೀಲವಾಗಿದೆ. ಅತಃ ಪ್ರಕೃತಿ ಶ್ರಮ, ಗತಿ ಹಾಗು ಪರಿಣಾಮಶೀಲವಾಗಿದೆ. ಫಲಸ್ವರೂಪ ಪ್ರಕೃತಿಯೇ ನಾಲ್ಕು ಅವಸ್ಥೆಗಳಲ್ಲಿ ಪ್ರತ್ಯಕ್ಷವಾಗಿದೆ. ಆದ್ದರಿಂದ ಸತ್ತಾವಿನಲ್ಲಿ ಸಂಪ್ಪಕ್ತ ಜಡ ಚೈತನ್ಯ ಪ್ರಕೃತಿಯಲ್ಲಿ ಪ್ರಕೃತಿಯಿಂದ ಚೈತನ್ಯ ಪ್ರಕೃತಿ ಜ್ಞಾನಾವಸ್ಥೆಯಲ್ಲಿ ಅನುಭವಿಸುವ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯಿಂದ ಸಂಪನ್ನವಾಗುವ ಅವಸರ ಸಮೀಚೀನವಾಗಿದೆ ತಥಾ ನಾಲ್ಕು ಅವಸ್ಥೆಗಳು ಒಂದಕ್ಕೊಂದು ಪೂರ್ಣತೆ ಸಂಪೂರ್ಣತೆಯ ಅರ್ಥದಲ್ಲಿ ಅನುಬಂಧಿತವಾಗಿದೆ.

ಸತ್ತಾ ಮಧ್ಯಸ್ಥವಾಗಿದೆ. ಆದುದರಿಂದ ಮಧ್ಯಸ್ಥ ಸತ್ತಾವಿನಲ್ಲಿ ಸಂಪ್ಪಕ್ತ ಪ್ರಕೃತಿ ನಿಯಂತ್ರಿತ ಹಾಗು ಸಂರಕ್ಷಿತವಾಗಿದೆ. ಪ್ರತ್ಯೇಕ ಪರಮಾಣುವಿನಲ್ಲಿ ಕಂಡುಬರುವ ಮಧ್ಯಾಂಶ (ನಾಭಿಕ) ಮಧ್ಯಸ್ಥ ಕ್ರಿಯೆಯಾಗಿದೆ. ಆದ್ದರಿಂದ ಸಮ-ವಿಷಮಾತ್ಮಕ ಕ್ರಿಯೆಗಳು ಹಾಗು ಸಾಪೇಕ್ಷ ಶಕ್ತಿಗಳು ನಿಯಂತ್ರಿತ ಹಾಗು ಸಂರಕ್ಷಿತವಾಗಿವೆ.

ಅನಂತ ಕ್ರಿಯೆ ಹಾಗು ಕ್ರಿಯೆ-ಸಮೂಹವೇ ಪ್ರಕೃತಿಯಾಗಿದೆ. ಇದು ಜಡ ಮತ್ತು ಚೈತನ್ಯ ರೂಪದಲ್ಲಿ ಗಮ್ಯವಾಗಿದೆ. ಜಡ ಪ್ರಕೃತಿಯೇ ವಿಕಾಸ ಪೂರ್ಣತೆಯ ಅನಂತರ ಚೈತನ್ಯ-ಪದವನ್ನು ಪಡೆಯುತ್ತದೆ ಇದು ನಿಯತಿ ವಿಧಿಯಿಂದ ಸಂಪನ್ನವಾಗಿರುತ್ತದೆ. ಮಾನವ ಜಡ ಹಾಗು ಚೈತನ್ಯದ ಸಂಯುಕ್ತ ರೂಪನಾಗಿದ್ದಾನೆ ಜೊತೆಗೆ ಪ್ರಕೃತಿಯ ಅಂಶವೂ ಆಗಿದ್ದಾನೆ.

ವಿಕಾಸ ಕ್ರಮದಲ್ಲಿ ಘಟನಪೂರ್ಣತೆಯೇ ವಿಕಾಸ/ಜಾಗೃತಿ ಕ್ರಮದಲ್ಲಿ ಭ್ರಮಿತ ಮಾನವನಲ್ಲಿ ಜಾಗೃತಿಯೇ ಕ್ರಿಯೆ-ಪೂರ್ಣತೆ ಹಾಗು ಆಚರಣ-ಪೂರ್ಣತೆಯಾಗಿದೆ. ಜಾಗೃತ ಮಾನವ ಕಡಿಮೆ ವಿಕಸಿತ ಪ್ರಕೃತಿಯ ಸಹಿತ ವ್ಯವಹಾರ ವ್ಯವಸಾಯಪೂರ್ವಕ ಸದುಪಯೋಗ, ಪ್ರಯೋಜನೀಯತೆಯ ಪೋಷಣೆ ಮಾಡುತ್ತಾನೆ. ಮಾನವ ಮಾನವನ ಸಹಿತ ವ್ಯವಹಾರ, ಅಧಿಕ ಜಾಗೃತನ ಸಹಿತ ಗೌರವಿಸುವುದು ದಾಯಿತ್ವವಾಗಿದೆ ಹಾಗು ಅಧಿಕ ಜಾಗೃತಿಗೆ ಅಭ್ಯಾಸ, ಅಧ್ಯಯನ ಹಾಗು ಚಿಂತನಮಾಡುತ್ತಾನೆ.

15

ಭ್ರಮಿತ ಮಾನವನೇ ಕರ್ಮ ಮಾಡುವ ಸಮಯ ಸ್ವತಂತ್ರ ಹಾಗು ಫಲವನ್ನು ಭೋಗಿಸುವ ಸಮಯ ಪರತಂತ್ರನಾಗಿದ್ದಾನೆ.

ಈ ಪೃಥ್ವಿಯ ಮೇಲೆ ಮಾನವ ಜಾಗೃತಿಕ್ರಮದಲ್ಲಿದ್ದಾನೆ. ಅವನಿಗೆ ಜಾಗೃತಿಪೂರ್ಣವಾಗಲು ಅವಸರ, ವಾಂಛೆ ಹಾಗು ಸಂಭವನೀಯತೆ ಪ್ರಾಪ್ತವಾಗಿದೆ. ಜಾಗೃತ ಮಾನವನ ಕಡಿಮೆ ವಿಕಸಿತಕ್ಕೆ ಸಹಾಯಕವಾಗಿರುವುದೇ ಪ್ರಧಾನ ಲಕ್ಷಣವಾಗಿದೆ.

ಪದಾರ್ಥಾವಸ್ಥೆಗಿಂತ ಪ್ರಾಣಾವಸ್ಥೆ ವಿಕಸಿತ, ಪ್ರಾಣಾವಸ್ಥೆಗಿಂತ ಜೀವಾವಸ್ಥೆ ವಿಕಸಿತ, ತಥಾ ಜೀವಾವಸ್ಥೆಗಿಂತ ಭ್ರಾಂತಿ ಜ್ಞಾನಾವಸ್ಥೆಯ ಪಶು-ಮಾನವ ವಿಕಸಿತನಾಗಿದ್ದಾನೆ. ಭ್ರಾಂತಿ ಜ್ಞಾನಾವಸ್ಥೆಯ ಪಶು - ಮಾನವನಿಗಿಂತ ಭ್ರಾಂತಿ ರಾಕ್ಷಸ ಮಾನವ ವಿಕಸಿತ, ಭ್ರಾಂತಿ ರಾಕ್ಷಸ ಮಾನವನಿಗಿಂತ ಭ್ರಾಂತಾಭ್ರಾಂತ ಮಾನವ ವಿಕಸಿತ ತಥಾ ಭ್ರಾಂತಾಭ್ರಾಂತ ಮಾನವನಿಗಿಂತ ದೇವ ಮಾನವ ವಿಕಸಿತವಾಗಿದ್ದಾನೆ. ನಿರ್ಭ್ರಾಂತ ದೇವಮಾನವಗಿಂತ ದಿವ್ಯಮಾನವ ವಿಕಾಸ ಹಾಗು ಜಾಗೃತಿಪೂರ್ಣವಾಗಿದ್ದಾನೆ.

ಜ್ಞಾನಾವಸ್ಥೆಯ ಇಕಯೀ ದರ್ಶನ ಕ್ಷಮತೆ ಸಂಪನ್ನವಾಗಿದ್ದಾನೆ. ದರ್ಶನ, ವ್ಯಾಪಕದಲ್ಲಿ ಅವಸ್ಥಿತ ಜಡ-ಚೈತನ್ಯಾತ್ಮಕ ಪ್ರಕೃತಿಯ ಸಂದರ್ಭದಲ್ಲಿ

ನಿರ್ಭ್ರಮ ಅವಸ್ಥೆಯಲ್ಲಿಯೇ ಅನುಭವ ಜ್ಞಾನ ಹಾಗು ದರ್ಶನ ಪೂರ್ಣವಾಗುತ್ತದೆ. ಆದ್ದರಿಂದ - ನಿರ್ಭ್ರಮತೆಯೇ ಜಾಗೃತಿ, ಜಾಗೃತಿಯೇ ಪ್ರಬುದ್ಧತೆ, ಪ್ರಬುದ್ಧತೆಯೇ ಸಂಪ್ರಭುತ, ಸಂಪ್ರಭುತವೇ ಪ್ರಭುಸತ್ತಾ, ಪ್ರಭುಸತ್ತಾವೇ ಅಖಂಡ ಸಮಾಜ, ಸಾರ್ವಭೌಮ ವ್ಯವಸ್ಥೆಯಾಗಿದೆ.

“ಮಾನವನೇ ಮಾನವನಿಗೆ ಹಾಸ ಹಾಗು ವಿಕಾಸದಲ್ಲಿ ಪ್ರಧಾನತಃ ಸಹಾಯಕನಾಗಿದ್ದಾನೆ”

“ಜ್ಞಾನಾತ್ಮನೋರ್ವಿಜಯತೆ”

16

ಕೃತಜ್ಞತೆ

ಆ ಎಲ್ಲಾ ಸುಪಥ ಪ್ರದರ್ಶಕರು, ಯಾರಿಂದ ಇವತ್ತಿಗೂ ಯಥಾರ್ಥತೆಯ ಸ್ತೋತ್ರ ಜೀವಿತವಾಗಿದೆಯೋ, ಅವರ ಪ್ರತಿ ನಾನು ಕೃತಜ್ಞನಾಗಿದ್ದೇನೆ. ಕೃತಜ್ಞತೆ ಜಾಗೃತಿಯ ದಿಕ್ಕಿನಲ್ಲಿ ಪ್ರಗತಿಗಾಗಿ ಮೌಲಿಕ ಮೌಲ್ಯವಾಗಿದೆ. ಕೃತಜ್ಞತೆಯೇ ಮೂಲತಃ ಸಂಸ್ಕೃತಿ ಹಾಗು ಸಭ್ಯತೆಯ ಆಧಾರಗ್ರಾಹಿ ಹಾಗು ಸಂರಕ್ಷಕ ಮೌಲ್ಯ.

ಯಾವ ಮಾನವ ಕೃತಜ್ಞನಾಗಿಲ್ಲವೋ, ಅವನು ಸಂಸ್ಕೃತಿ ಹಾಗು ಸಭ್ಯತೆಯ ವಾಹಕನಾಗುವ ಪ್ರಮಾಣ ಪ್ರಸ್ತುತಮಾಡಲಾಗುವುದಿಲ್ಲ. ಯಾವ ಮಾನವ ಸಂಸ್ಕೃತಿ ಹಾಗು ಸಭ್ಯತೆಯನ್ನು ವಹಿಸಲಾಗುವುದಿಲ್ಲವೋ, ಅವನು ವಿಧಿ ಹಾಗು ವ್ಯವಸ್ಥೆಯನ್ನು ಪಾಲಿಸಲಾಗುವುದಿಲ್ಲ.

ಸಂಸ್ಕೃತಿ, ಸಭ್ಯತೆ, ವಿಧಿ ಹಾಗು ವ್ಯವಸ್ಥೆ ಪರಸ್ಪರ ಪೂರಕವಾಗಿದೆ. ಇವೆಲ್ಲದೆ ಅಖಂಡ ಸಮಾಜ ಹಾಗು ಸಾಮಾಜಿಕತೆಯ ನಿರ್ಧಾರಣ ಸಾಧ್ಯವಿಲ್ಲ. ಅಸ್ತು, ಕೃತಜ್ಞತೆಯಿಲ್ಲದೆ ಗೌರವ, ಗೌರವವಿಲ್ಲದೆ ಸರಳತೆ, ಸರಳತೆಯಿಲ್ಲದೆ ಸಹ-ಅಸ್ತಿತ್ವ, ಸಹ-ಅಸ್ತಿತ್ವವಿಲ್ಲದೆ ಕೃತಜ್ಞತೆಯ ನಿರಂತರತೆಯಿಲ್ಲ.

ಯಾವ ಮಾನವ ಕೃತಜ್ಞತೆಯನ್ನು ವಹಿಸುತ್ತಾನೋ, ಅವನ ಆಚರಣವೇ ಅಗ್ರಿಮ ಪೀಳಿಗಾಗಿ ಶಿಕ್ಷಣಪ್ರದ ಹಾಗು ಪ್ರೇರಣಾದಾಯಿಯಾಗಿರುತ್ತದೆ. ಇದು ಮಾನವೀಯತೆಯಲ್ಲಿಯೇ ಸಫಲವಾಗುತ್ತದೆ. ಯಾವುದೇ ವಿಧಿಯಿಂದ ಚೇತನ ವಿಕಾಸ ಮೌಲ್ಯ ಶಿಕ್ಷಣಕ್ಕಾಗಿ ಸಹಜ ಸಹಾಯತೆ ದೊರಕಿದೆಯೋ ಅವೆಲ್ಲದಕ್ಕೂ ಕೃತಜ್ಞತೆಯಿದೆ.

“ಜ್ಞಾನಾತ್ಮನೋರ್ವಿಜಯತೆ”

- ಪಿ. ನಾಗರಾಜ್

17

ಪುಸ್ತಕದಲ್ಲಿ ನಿಯುಕ್ತ ಸಂಕೇತ

ಅನುಭೂತಿಗಳು

ಪರಿಭಾಷೆಗಳು

ಸಂಬಂಧ ಹಾಗು ಸ್ಪಷ್ಟೀಕರಣ

ವಿಶ್ಲೇಷಣೆ - ಅನುಭೂತಿಗಳ ಅಥವಾ ಪರಿಭಾಷೆಗಳ

18

ಅಧ್ಯಾಯ - ಒಂದು

ಸಹ - ಅಸ್ತಿತ್ವ

ನಾನು ನಿತ್ಯ, ಸತ್ಯ, ಶುದ್ಧ ಹಾಗು ಬುದ್ಧ ವ್ಯಾಪಕ ಸತ್ತಾವಿನಲ್ಲಿ ಸಂಪ್ರತ್ಚ ಜಡ-ಚೈತನ್ಯ ಪ್ರಕೃತಿಯನ್ನು ಅನುಭವಪೂರ್ವಕ ಸ್ಮರಣೆ ಮಾಡುತ್ತಾ “ಮಾನವ ವ್ಯವಹಾರ ದರ್ಶನದ” ವಿಶ್ಲೇಷಣೆ ಮಾಡುತ್ತೇನೆ.

ನಿತ್ಯ - ಸದಾ-ಸದಾ ಒಂದೇ ಸಮಾನ ವಿದ್ಯಮಾನವಾಗಿದೆ.

ಸತ್ಯ - ಸದಾ - ಸದಾ ಒಂದೇ ಸಮಾನ ಭಾಸ-ಆಭಾಸ ಮಾನ ಹಾಗು ಅನುಭವಗಮ್ಯವಾಗಿದೆ.

ಶುದ್ಧ - ಸದಾ-ಸದಾ ಒಂದೇ ಸಮಾನ ಸುಖಪ್ರದವಾಗಿದೆ (ಅನುಭವದಲ್ಲಿ).

ಬುದ್ಧ - ಸದಾ - ಸದಾ ಒಂದೇ ಸಮಾನ ಬೋಧಗಮ್ಯವಾಗಿದೆ.

ಸತ್ತಾ - ಸದಾ - ಸದಾ ಪ್ರಕೃತಿಯಿರುವ ಹಾಗು ಇಲ್ಲದೆಯಿರುವ ಸ್ಥಳದಲ್ಲಿ ವೈಭವ. ಸತ್ತಾ, ಜಡ-ಚೈತನ್ಯದಲ್ಲಿ ಪಾರಗಾಮಿ ಹಾಗು ಪರಸ್ಪರತೆಯಲ್ಲಿ ಪಾರದರ್ಶಿಯಾಗಿದೆ. ಸತ್ತಾಮಯತೆಯನ್ನು ಪರಮಾತ್ಮ, ಈಶ್ವರ, ಲೋಕೇಶ, ಚೇತನ, ಶೂನ್ಯ, ನಿರಪೇಕ್ಷ ಉರ್ಜ, ಪೂರ್ಣ ಎಂದು ಸಂಜ್ಞೆ.

ಸಂಪ್ರತ್ಚ - ಸತ್ತಾವಿನಲ್ಲಿ ಮುಳುಗಿರುವ, ನೆನದಿರುವ, ಆವೃತವಾಗಿರುವ ಜಡ - ಚೈತನ್ಯ ಪ್ರಕೃತಿಯಿದೆ. ಇದೇ ಸಹ-ಅಸ್ತಿತ್ವ, ಸಹ-ಅಸ್ತಿತ್ವವೇ ನಿತ್ಯವಾಗಿದೆ, ಇದೇ ಜ್ಞಾನ. ಸಹ-ಅಸ್ತಿತ್ವದಲ್ಲಿಯೇ ನಿಯಮ, ನಿಯಂತ್ರಣ, ಸಂತುಲನ, ನ್ಯಾಯ, ಧರ್ಮ, ಪರಮ ಸತ್ಯ ಸ್ಪಷ್ಟವಾಗಿದೆ.

ಜಡ - ತಮ್ಮ ಉದ್ದ, ಎತ್ತಿರ, ಅಗಲದ ಸೀಮೆಯಲ್ಲಿ ಕ್ರಿಯಾಶೀಲವಾಗಿರುವ ಇಕಾಯಿಗಳು

ಚೈತನ್ಯ - ತಮ್ಮ ಉದ್ದ, ಎತ್ತಿರ, ಅಗಲದ ಸೀಮೆಗಿಂತ ಅಧಿಕ ಸ್ಥಳಿಯಲ್ಲಿ ಪುಂಜಾಕಾರ ರೂಪದಲ್ಲಿ ಕ್ರಿಯಾಶೀಲವಾಗಿರುವ ಇಕಾಯಿಗಳು. ಇಲ್ಲಿ ಸ್ಥಳಿಯ ತಾತ್ಪರ್ಯ ಸತ್ತಾಮಯತೆ.

ಜಾಗೃತ ಮಾನವನೇ ದೃಷ್ಟಾ ಪದ ಪ್ರತಿಷ್ಠೆಯಲ್ಲಿ ಗಣ್ಯನಾಗಿದ್ದಾನೆ

ಮಾನವ - ಮನಾಕಾರವನ್ನು ಸಾಕಾರ ಮಾಡುವವನು ತಥಾ ಮನಃ

19

ಸ್ವಸ್ಥತೆಯ ಆಶಾವಾದಿ ಮತ್ತು ಪ್ರಮಾಣಿತ ಮಾಡುವವನಿಗೆ ಮಾನವನೆಂದು ಸಂಜ್ಞೆ.

¤ ವ್ಯವಹಾರ - ಒಬ್ಬನಿಗಿಂತ ಅಧಿಕ ಮಾನವ ಏಕತ್ರಿತವಾಗುವುದಕ್ಕೆ ಅಥವಾ ಏಕತ್ರಿತವಾದುದರಿಂದಾಗುವ ಶ್ರಮ ನಿಯೋಜನೆಗೆ ವ್ಯವಹಾರವೆಂದು ಸಂಜ್ಞೆ.

¤ ದರ್ಶನ - ದೃಷ್ಟಿಯಿಂದ ಪ್ರಾಪ್ತ ಅರಿವು, ಅವಧಾರಣ ಮತ್ತು ಅನುಭವವೇ ದರ್ಶನ

¤ ದೃಷ್ಟಿ - ವಾಸ್ತವಿಕತೆಗಳನ್ನು ನೋಡುವ, ಅರಿತುಕೊಳ್ಳುವ, ಗುರುತಿಸುವ ಮತ್ತು ಮೌಲಿಕರಣ ಮಾಡುವ ಕ್ರಿಯೆಯೇ ದೃಷ್ಟಿ

¤ ವಿಶ್ಲೇಷಣೆ - ಪರಿಭಾಷೆಗಳ ಪ್ರಯೋಜನೆಯ ಅರ್ಥದಲ್ಲಿ ವ್ಯಾಖ್ಯೆ

¤ ಪರಿಭಾಷೆ - ಅರ್ಥವನ್ನು ಇಂಗಿತ ಮಾಡುವುದಕ್ಕಾಗಿ ನಿಯುಕ್ತ ಶಬ್ದ ಸಮೂಹ.

ವ್ಯಾಪಕ ವಸ್ತು ಅಖಂಡ ಹಾಗು ಇಕಾಯಿಗಳು ಅನಂತ.

¤ ವ್ಯಾಪಕ - ಯಾವುದು ಸರ್ವ ದೇಶ ಕಾಲದಲ್ಲಿ ವಿದ್ಯಮಾನವಾಗಿದೆಯೋ ತಥಾ ನಿತ್ಯ ವರ್ತಮಾನವಾಗಿದೆಯೋ.

¤ ಇಕಾಯಿ - ಆರು ದಿಕ್ಕಿನಿಂದ (ಎಲ್ಲಾ ದಿಕ್ಕಿನಿಂದ) ಸೀಮಿತ ಪದಾರ್ಥ ಪಿಂಡವೇ ಇಕಾಯಿ. ವ್ಯಾಪಕ ವಸ್ತುವಿನಲ್ಲಿ ಸಂಪೂರ್ಣ ಇಕಾಯಿಗಳು ಸಹ-ಅಸ್ತಿತ್ವದಲ್ಲಿ ಅವಿಭಾಜ್ಯ ರೂಪದಲ್ಲಿ ವಾರ್ತಮಾನವಾಗಿದೆ.

¤ ಅನಂತ - ಸಂಖ್ಯೆಯಲ್ಲಿ ಅಗ್ರಾಹ್ಯ ಕ್ರಿಯೆಯೇ ಅನಂತ. ಇದನ್ನು ಮಾನವ ಗಣನ ಮಾಡುವುದರಲ್ಲಿ ಅಸಮರ್ಥನಾಗಿದ್ದಾನೆ ಅಥವಾ ಗಣನ ಮಾಡುವ ಅವಶ್ಯಕತೆಯಿಲ್ಲ, ಇದೇ ಅನಂತ.

ವ್ಯಾಪಕ ಸತ್ತ ಜಾಗೃತ ಮಾನವನಲ್ಲಿ, ಮಾನವನಿಂದ, ಮಾನವನಿಗೆ ಕಾರ್ಯ - ವ್ಯವಹಾರ ಕಾಲದಲ್ಲಿ ನಿಯಮದ ರೂಪದಲ್ಲಿ, ವಿಚಾರ ಕಾಲದಲ್ಲಿ ಸಮಾಧಾನದ ರೂಪದಲ್ಲಿ, ಅನುಭವ ಕಾಲದಲ್ಲಿ ಆನಂದದ ರೂಪದಲ್ಲಿ ಮತ್ತು ಆಚರಣ ಕಾಲದಲ್ಲಿ ನ್ಯಾಯದ ರೂಪದಲ್ಲಿ ಪ್ರಾಪ್ತವಾಗಿದೆ ಏಕೆಂದರೆ ಸತ್ತಾವಿನಲ್ಲಿ ಸಂಪೂರ್ಣ ಪ್ರಕೃತಿ ಸಂವೃತ್ತ ಅವಿಭಾಜ್ಯ ರೂಪದಲ್ಲಿ ವಿದ್ಯಮಾನವಾಗಿದೆ. ಇದೇ ಸಹ-ಅಸ್ತಿತ್ವ.

¤ ಕಾಲ - ಕ್ರಿಯೆಯ ಅವಧಿಯೇ ಕಾಲ

20

ನಿಯಮ - ಆಚರಣ ಮತ್ತು ಕ್ರಿಯೆಯ ನಿಯಂತ್ರಣ ಪೃಷ್ಠಭೂಮಿಯೇ ನಿಯಮ.

ಸಮಾಧಾನ - ಯಾಕೆ ಮತ್ತು ಹೇಗೆಯ ಪೂರ್ತಿಯೇ (ಉತ್ತರವೇ) ಸಮಾಧಾನ

ಆನಂದ - ಸಹ-ಅಸ್ತಿತ್ವ ರೂಪಿ ಪರಮ ಸತ್ಯಾನುಭೂತಿಯೇ ಆನಂದ

ನ್ಯಾಯ - ಪರಸ್ಪರತೆಯಲ್ಲಿ ಮಾನವೀಯತೆಪೂರ್ಣ ವ್ಯವಹಾರವೇ ನ್ಯಾಯ

* ಮಾನವೀಯತೆಪೂರ್ಣ ವ್ಯವಹಾರ - ಧೀರತೆ, ವೀರತೆ, ಉದಾರತೆ, ದಯೆ, ಕೃಪಾ, ಕರುಣೆ ಪೂರ್ಣ ಸ್ವಭಾವ; ನ್ಯಾಯ, ಧರ್ಮ ಹಾಗು ಸತ್ಯತೆಪೂರ್ಣ ದೃಷ್ಟಿ ಮತ್ತು ವಿತ್ತೇಷಣ, ಪುತ್ರೇಷಣ ಹಾಗು ಲೋಕೇಷಣಾತ್ಮಕ ಪ್ರವೃತ್ತಿಯಿಂದ ಯುಕ್ತ ವ್ಯವಹಾರವೇ ಮಾನವೀಯತೆಪೂರ್ಣ ವ್ಯವಹಾರ.

* ಅಸ್ತಿತ್ವದಲ್ಲಿ, ಅಸ್ತಿತ್ವದಿಂದ, ಅಸ್ತಿತ್ವಕ್ಕಾಗಿ ತಿಳಿದುಕೊಳ್ಳುವ, ಗುರುತಿಸುವ ಮತ್ತು ಅನುಭವ ಮಾಡುವ ಪ್ರಯಾಸ ಹಾಗು ಅಧ್ಯಯನ ಮಾನವ ಮಾಡುತ್ತಾ ಬಂದಿದ್ದಾನೆ ಮತ್ತು ಮಾಡುತ್ತಲಿರುತ್ತಾನೆ.

ಜ್ಞಾನವನ್ನು ಅನುಭವ ಕಾಲದಲ್ಲಿ ಆನಂದ; ಸರ್ವತ್ರ ಒಂದೇ ಸಮಾನ ಅನುಭವದಲ್ಲಿ ಬರುವ ಕಾರಣ ಸತ್ಯ; ಜ್ಞಾನದಲ್ಲಿ ಸಮಸ್ತ ಕ್ರಿಯೆಗಳು ಸಂರಕ್ಷಿತ ಮತ್ತು ನಿಯಂತ್ರಿತವಾಗಿರುವ ಕಾರಣ ಲೋಕೇಶ; ಸರ್ವತ್ರ ಒಂದೇ ಸಮಾನ ವಿದ್ಯಮಾನವಾಗಿರುವ ಕಾರಣ ವ್ಯಾಪಕ; ಚೈತನ್ಯದ ಸಹಿತ ಚೇತನ; ಆತ್ಮಗಿಂತ ಸೂಕ್ಷ್ಮತಮವಾಗಿರುವ ಕಾರಣ ಪರಮಾತ್ಮ; ಪ್ರತ್ಯೇಕ ವಸ್ತು ಸತ್ಯಾವಿನಲ್ಲಿ ಸಂವೃತ್ತ, ಸಕ್ರಿಯವಾಗಿರುವ ಕಾರಣದಿಂದ ಇದನ್ನು ನಿರಪೇಕ್ಷ ಉರ್ಜ ತಥ ಅಪರಿಣಾಮಿತೆಯ ಕಾರಣ ಪೂರ್ಣವೆಂದು ಸಂಜ್ಞೆ.

• ಸಹ-ಅಸ್ತಿತ್ವದಲ್ಲಿ ಅನುಭವವೇ ಜ್ಞಾನದ ಉದ್ಘಾಟನೆ. ಸಹ-ಅಸ್ತಿತ್ವದಲ್ಲಿ ಅನುಭವದಲ್ಲಿ, ಅನುಭವದಿಂದ, ಅನುಭವಕ್ಕಾಗಿ ಅಧ್ಯಯನವಿದೆ. ಜ್ಞಾನವೇ ವಿವೇಕ ಹಾಗು ವಿಜ್ಞಾನ ರೂಪದಲ್ಲಿ ಪ್ರಮಾಣವಾಗಿದೆ. ಇದೇ ಜ್ಞಾನಾವಸ್ಥೆಯಲ್ಲಿ ಮಾನವ ಸಹಜ ಮೌಲಿಕತೆಯಾಗಿದೆ.

* ಜ್ಞಾನ ಸ್ವಯಂ ಕ್ರಿಯೆ ಮಾಡದೆ ಅಥವಾ ಕ್ರಿಯೆಯಾಗಿಲ್ಲದೆ ಮಾನವ ಜೀವನದಲ್ಲಿ ಅನುಭವ ಸ್ಥಿತಿಯಲ್ಲಿ ಆನಂದ ಸಹಜ ವೈಭವ ಪ್ರಾಮಾಣವಾಗಿದೆ. ಅನುಭವಪೂರ್ವಕ ಅಭಿವ್ಯಕ್ತಿಯೇ ಜ್ಞಾನವಾಗಿದೆ. ಜ್ಞಾನವೇ ಜಾಗೃತ ಮಾನವನಲ್ಲಿ ಸಮಸ್ತ ಸಕಾರಾತ್ಮಕ ಕ್ರಿಯೆಗಳ ಆಧಾರ ಅಥವಾ ಪ್ರೇರಣೆ ಸ್ಫೂರ್ತವಾಗಿದೆ.

21

ಜ್ಞಾನವೇ ಶೂನ್ಯ ಮತ್ತು ಶೂನ್ಯವೇ ಜ್ಞಾನವಾಗಿದೆ.

* ಕ್ರಿಯೆಹೀನತೆಯ ಸ್ಥಿತಿಗೆ ಶೂನ್ಯವೆಂದು ಸಂಜ್ಞೆ ತಥಾ ಜ್ಞಾನ ಸ್ವಯಂ ಕ್ರಿಯೆ ಮಾಡದಿರದೆ ಅಥವಾ ಕ್ರಿಯೆಯಾಗಿದ್ದರೂ ಸಮಸ್ತ ಕ್ರಿಯೆಗಳ ಆಧಾರ ಹಾಗು ಪ್ರೇರಣೆ ಸ್ಫೋಟವಾಗಿದೆ. ಅತಃ ಜ್ಞಾನ ಮತ್ತು ವ್ಯಾಪಕ ಸತ್ತಾ ಎರಡೂ ಒಂದೇ ಸಿದ್ಧವಾಗುತ್ತದೆ ತಥಾ ಇದರಲ್ಲಿ ಅವಸ್ಥಿತವಾಗುವುದರಿಂದ ಕ್ರಿಯೆಗಾಗಿ ಪ್ರೇರಣೆ ಪ್ರಾಪ್ತವಾಗಿದೆ. ಜ್ಞಾನದಿಂದ ರಿಕ್ತ ಮತ್ತು ಮುಕ್ತ ಇಕಾಯಿಯಿಲ್ಲ.

“ಸರ್ವ ಶುಭವಾಗಲಿ”

22

ಅಧ್ಯಾಯ - ಎರಡು

ಕೃತಜ್ಞತೆ

ನಾನು ಕೃತಜ್ಞತೆ ಪೂರ್ವಕ, ಆ ಸುಪಥ ಪ್ರದರ್ಶಕರ ವಂದನೆ ಮಾಡುತ್ತೇನೆ, ಯಾರಿಂದ ಯಥಾರ್ಥತೆಯ ಸ್ತೋತ್ರ ಇಂದಿಗೂ ಜೀವಿತವಾಗಿದೆಯೋ.

ಕೃತಜ್ಞತೆ - ಉನ್ನತಿ ಮತ್ತು ಜಾಗೃತಿಗಾಗಿ ಪ್ರೇರಣೆ ಮತ್ತು ಸಹಾಯತೆಯ ಸ್ವೀಕೃತಿ

ಸುಪಥ - ಸಮಾಧಾನ, ಸಮೃದ್ಧಿ, ಅಭಯ ಹಾಗು ಸಹ-ಅಸ್ತಿತ್ವದ ದಿಕ್ಕಿನಲ್ಲಿ ನಿಶ್ಚಿತ ದಿಶೆ.

ಉನ್ನತಿ - ಉತ್ಥಾನಕ್ಕಾಗಿ (ಸಮಾಧಾನ, ಸಮೃದ್ಧಿ, ಅಭಯ, ಸಹ-ಅಸ್ತಿತ್ವ) ಪ್ರಾಪ್ತ ಪ್ರೇರಣೆ ಹಾಗು ಸಹಾಯತೆ.

ಯಥಾರ್ಥತೆಯ ಸ್ತೋತ್ರ (ಅಕೃತ್ರಿಮತೆ ಪೂರ್ವಕ ಅಥವಾ ಆಡಂಬರಹೀನ) ವಾಸ್ತವಿಕತೆಪೂರ್ಣ ರೀತಿಯಲ್ಲಿ ಮಾಡಲಾಗಿರುವ ಅಭಿವ್ಯಕ್ತಿ ಅಥವಾ ಪ್ರಯಾಸ. ಸತ್ಕಾರಿಯಲ್ಲಿ ಸಂವೃತ್ತ ಪ್ರಕೃತಿ ರೂಪಿ ಸಹ-ಅಸ್ತಿತ್ವವನ್ನು ಸ್ಪಷ್ಟ ಮಾಡುವುದೇ ಯಥಾರ್ಥತೆಯ ಸ್ತೋತ್ರವಾಗಿದೆ.

ಸ್ಥಿತಿ ಸತ್ಯ, ವಸ್ತು ಸ್ಥಿತಿ ಸತ್ಯ ಹಾಗು ವಸ್ತುಗತ ಸತ್ಯವನ್ನು ಬೋಧಿಸುವ ಪರಂಪರೆಯೇ ಯಥಾರ್ಥತೆಯ ಸ್ತೋತ್ರ.

ವಂದನೆ - ಗೌರವತೆಯನ್ನು ವ್ಯಕ್ತ ಪಡಿಸಲು ನಿಯುಕ್ತ ಚೇಷ್ಟೆ.

ಗೌರವತೆ - ನಿರ್ವಿರೋಧ ಪೂರ್ವಕ ಅಂಗೀಕಾರ ಮಾಡಿರುವ ಅನುಕರಣ ಪ್ರಯಾಸ, ಪ್ರವೃತ್ತಿಯೇ ಗೌರವತೆ.

ಕೃತಜ್ಞತೆಯಿಂದ ಗೌರವತೆ, ಗೌರವತೆಯಿಂದ ಸರಳತೆ, ಸರಳತೆಯಿಂದ ಸಹಜತೆ, ಸಹಜತೆಯಿಂದ ಮಾನವೀಯತೆ, ಮಾನವೀಯತೆಯಿಂದ ಸಹ-ಅಸ್ತಿತ್ವ ತಥಾ ಸಹ-ಅಸ್ತಿತ್ವದಲ್ಲಿ ಸಹ-ಅಸ್ತಿತ್ವದಿಂದ, ಸಹ-ಅಸ್ತಿತ್ವಕ್ಕಾಗಿ ಕೃತಜ್ಞತೆ ಪ್ರಕಟವಾಗುತ್ತದೆ.

ಸರಳತೆ - ಅಭಿಮಾನದಿಂದ ರಹಿತ ಮತ್ತು ಯಥಾರ್ಥತೆಯನ್ನು ವ್ಯಕ್ತ ಪಡಿಸುವ ವಿಚಾರ ಹಾಗು ವ್ಯವಹಾರ ಪದ್ಧತಿಯೇ ಸರಳತೆ

ಅಭಿಮಾನ - ಆರೋಪಿತ ಮಾಪನ, ಇದೇ ಅಧಿಮೌಲೀಕರಣೆ, ಅವಮೌಲೀಕರಣೆ, ನಿರ್ಮೌಲೀಕರಣೆ ದೋಷವಾಗಿದೆ.

23

ಸಹಜತೆ - ಆಡಂಬರ ತಥಾ ರಹಸ್ಯತೆಯಿಂದ ಮುಕ್ತ ನ್ಯಾಯಪೂರ್ಣ ವ್ಯವಹಾರ ಹಾಗು ರೀತಿಯ ಸಹಜತೆಯಾಗಿದೆ.

ಸಹ-ಅಸ್ತಿತ್ವ - ಪರಸ್ಪರತೆಯಲ್ಲಿ ನಿರ್ವಿರೋಧ ಸಹಿತ ಸಮಾಧಾನಪೂರ್ಣ ಅಭಿವ್ಯಕ್ತಿಯೇ ಸಹ-ಅಸ್ತಿತ್ವವಾಗಿದೆ.

ಮಾನವನ ಸಮಗ್ರ ವ್ಯವಹಾರ ಕೃತಜ್ಞತೆ ತಥಾ ಕೃತಜ್ಞತೆಯ ಆಧಾರದಮೇಲೆಯೇ ಅವಲಂಬಿತವಾಗಿರುತ್ತದೆ ತಥಾ ಮೌಲಿಕೃತ ಹಾಗು ಸಮೀಕ್ಷಿತವಾಗುತ್ತದೆ.

ಕೃತಜ್ಞತೆ - ಯಾರಾರಿಂದ ಉನ್ನತಿ ಹಾಗು ಜಾಗೃತಿಯ ದಿಕ್ಕಿನಲ್ಲಿ ಪ್ರಾಪ್ತಿಯಲ್ಲಿ ಸಹಾಯತೆ, ಸಫಲತೆ ದೊರಕಿದೆಯೋ ಅದನ್ನು ಅಸ್ತೀಕರಿಸುವುದೇ ಕೃತಜ್ಞತೆ.

“ಸರ್ವ ಶುಭವಾಗಲಿ”

24

ಅಧ್ಯಾಯ - ಮೂರು

ಸೃಷ್ಟಿ-ದರ್ಶನ

ಮಾನವನು ಸೃಷ್ಟಿ ದರ್ಶನ ಮಾಡುವ ಕಾಮನೇ ಹಾಗು ಪ್ರಯಾಸ ಮಾಡಿದ್ದಾನೆ, ಯಥಾ ಜೀವ-ಜಗತ್ತು, ಈಶ್ವರ ಮಾತು ಸ್ವಯಂನನ್ನು ಪ್ರತಿಪಾದಿತ ಹಾಗು ವ್ಯಾಖ್ಯಾಯಿತ ಮಾಡುವ ಪ್ರಯಾಸ ಮಾಡಿದ್ದಾನೆ.

¤ ಸೃಷ್ಟಿ - ಪದಾರ್ಥದ ಸಂಘಟನೆ ಹಾಗು ರಚನೆ ಮತ್ತು ಸಮೃದ್ಧ ಧರಣಿ ತಥಾ ಧರಣಿಯ ಮೇಲೆ ಪ್ರಾಣಾವಸ್ಥೆ, ಜೀವಾವಸ್ಥೆ, ಜ್ಞಾನಾವಸ್ಥೆಯ ಪ್ರಕಾಶನೆಯೇ ಸೃಷ್ಟಿ.

ಸೃಜನ, ವಿಸರ್ಜನ, ಪೋಷಣ ಅಥವಾ ಶೋಷಣದ ಭೇದದಿಂದ ಸೃಷ್ಟಿ ದರ್ಶನವಿದೆ.

¤ ಸೃಜನ - ಇಕಾಯಿ + ಇಕಾಯಿ

¤ ವಿಸರ್ಜನ - ಇಕಾಯಿ - ಇಕಾಯಿ

¤ ಪೋಷಣೆ - ಇಕಾಯಿ + ಅನುಕೂಲ ಇಕಾಯಿ

¤ ಶೋಷಣೆ - ಇಕಾಯಿ - ಅನುಕೂಲ ಇಕಾಯಿ

¤ ಪದಾರ್ಥ - ಪದ ಭೇದದಿಂದ ಅರ್ಥ ಭೇದವನ್ನು ಸ್ಪಷ್ಟ ಮಾಡುವ ವಸ್ತುವಿಗೆ ಪದಾರ್ಥವೆಂದು ಸಂಜ್ಞೆ. ವಸ್ತುವಿನ ಅರ್ಥ ವಾಸ್ತವಿಕತೆಯೇ.

ನಿರಪೇಕ್ಷ ಉರ್ಜ ಹಾಗು ಪದಾರ್ಥಗಳ ಸಹ-ಅಸ್ತಿತ್ವದಲ್ಲಿಯೇ ಸೃಷ್ಟಿ ಕಾರ್ಯವಿದೆ.

¤ ನಿರಪೇಕ್ಷ ಉರ್ಜ - ಯಾವುದು ವ್ಯಾಪಕ ರೂಪದಲ್ಲಿ ಸಹಜ ಸತ್ತಾ ಅಸ್ತಿತ್ವವಾಗಿದೆ ಆದರೆ ಯಾವುದರ ಉತ್ಪತ್ತಿಯ ಕಾರಣ ಸಿದ್ಧವಾಗಿಲ್ಲವೋ, ಅದಕ್ಕೆ ನಿರಪೇಕ್ಷ ಉರ್ಜವೆಂದು ಸಂಜ್ಞೆ.

ನಿರಪೇಕ್ಷ ಉರ್ಜ ಸ್ಥಿತಿಯಲ್ಲಿ ಸರ್ವತ್ರ ವ್ಯಾಪ್ತವಾಗಿದೆ.

¤ ಶೂನ್ಯ - ಯಾವುದು ಸ್ವಯಂನಲ್ಲಿ ಕ್ರಿಯೆಯಾಗಿಲ್ಲವೋ ಆದರೆ ಎಲ್ಲ ಕ್ರಿಯೆಗಳು ಅದರಲ್ಲಿ ಸಮಾಹಿತವಾಗಿದೆಯೋ, ಅದಕ್ಕೆ ಶೂನ್ಯವೆಂದು ಸಂಜ್ಞೆ.

ಸಾಪೇಕ್ಷ ಹಾಗು ನಿರಪೇಕ್ಷ ಭೇದದಿಂದ ಉರ್ಜವಿದೆ. ಇದನ್ನು ಸಾಪೇಕ್ಷ ಉರ್ಜ ಹಾಗು ನಿರಪೇಕ್ಷ ಉರ್ಜದ ರೂಪದಲ್ಲಿ ಗುರುತಿಸುವುದು ಮತ್ತು ಅರಿತುಕೊಳ್ಳುವುದಾಗುತ್ತದೆ.

25

ಕಾರ್ಯ ಉರ್ಜಾ ಸಾಪೇಕ್ಷವಾಗಿದೆ ಹಾಗು ವ್ಯಾಪಕ ರೂಪದಲ್ಲಿ ನಿರಪೇಕ್ಷ ಉರ್ಜಾ ನಿತ್ಯ ವರ್ತಮಾನವಾಗಿದೆ.

¤ ಸಾಪೇಕ್ಷ ಉರ್ಜಾ - ಇಕಾಯಿಗಳ ಪರಸ್ಪರತೆಯಿಲ್ಲದೆ ಯಾವ ಶಕ್ತಿಯ ಪ್ರಕಟಣೆಯಿಲ್ಲವೋ, ಅದು ಸಾಪೇಕ್ಷ ಉರ್ಜಾ.

ಭೌತಿಕ ರಾಸಾಯನಿಕ ವಸ್ತುಗಳ ಪರಸ್ಪರತೆಯಲ್ಲಿ ಅಥವಾ ಪರಸ್ಪರತೆವಶ ಪ್ರಕಟವಾಗುವ ಶಕ್ತಿಗಳು, ಒತ್ತಡ, ತರಂಗ ಹಾಗು ಪ್ರಭಾವವನ್ನು ಸಾಪೇಕ್ಷ ಉರ್ಜಾದ ರೂಪದಲ್ಲಿ ಗುರುತಿಸಲಾಗುತ್ತದೆ. ತಾಪ, ಧ್ವನಿ, ವಿದ್ಯುತವೂ ಸಾಪೇಕ್ಷ ಉರ್ಜಾಗಳಾಗಿವೆ.

ನಿರಪೇಕ್ಷ ಉರ್ಜಾ ಸಂಪನ್ನತೆ ವಶ ಪದಾರ್ಥಗಳಲ್ಲಿ ಮೂಲ ಚೇಷ್ಟೆ ತಥಾ ಪದಾರ್ಥವಿಲ್ಲದೆ ನಿರಪೇಕ್ಷ ಉರ್ಜಾದ ಪರಿಚಯವಿಲ್ಲ. ನಿರಪೇಕ್ಷ ಉರ್ಜಾದಲ್ಲಿ ಪ್ರಕೃತಿ ನಿತ್ಯ ವರ್ತಮಾನವಾಗಿದೆ.

¤ ಮೂಲ ಚೇಷ್ಟೆ - ಶ್ರಮ, ಗತಿ ಹಾಗು ಪರಿಣಾಮದ ಸಮ್ಮಿಲಿತ ಕ್ರಿಯೆಯೇ ಮೂಲ ಚೇಷ್ಟೆ.

ಸಂಪೂರ್ಣ ಪದಾರ್ಥ ತಮ್ಮ ಪರಮಾಣಿಕ ಸ್ಥಿತಿಯಲ್ಲಿ ಸಚೇಷ್ಟವಾಗಿದೆ. ಆದ್ದರಿಂದ ಅದಕ್ಕೆ ಉರ್ಜಾ ಪ್ರಾಪ್ತವಾಗಿದೆಯೆಂದು ಸ್ಪಷ್ಟವಾಗುತ್ತದೆ. ಇದೇ ನಿರಪೇಕ್ಷ ಉರ್ಜಾ

ಉಕ್ತ ರೀತಿಯಿಂದ ಪದಾರ್ಥ ಹಾಗು ನಿರಪೇಕ್ಷ ಉರ್ಜಾವಿನ ಸಹ-ಅಸ್ತಿತ್ವ ಸದಾ-ಸದಾ ಅವಿಭಾಜ್ಯ ರೂಪದಲ್ಲಿರುವುದು ಸಿದ್ಧವಾಗುತ್ತದೆ.

ಮಾನವ ಗತಕಾಲದಿಂದ ವರ್ತಮಾನದ ವರೆಗೆ ಪರಮಾಣುಗಳಲ್ಲಿ ಕಂಡುಬರುವ ಕ್ರಿಯಶೀಲತೆಗಾಗಿ ಮೂಲ ಉರ್ಜಾ ಸ್ತೋತ್ರದ ಸಂದರ್ಭದಲ್ಲಿ ಅಜ್ಞಾತನಾಗಿದ್ದಾನೆ. ಇವಾಗ ಇದು ಸಹ-ಅಸ್ತಿತ್ವ ವಿಧಿಯಿಂದ ಸ್ಪಷ್ಟವಾಗಿದೆ. ಸತ್ತಾ ರೂಪೀ ಉರ್ಜಾವಿನ ಅಸ್ತಿತ್ವವನ್ನು ನಿರಪೇಕ್ಷ ಉರ್ಜಾದ ರೂಪದಲ್ಲಿ ಸ್ವೀಕರಿಸಲಾಗಿದೆ, ಏಕೆಂದರೆ ಇದನ್ನು ನಾವು ಪರಮಾಣುಗಳ ಕ್ರಿಯೆಯ ಮೂಲದಲ್ಲಿ ಪಡೆಯುತ್ತೇವೆ. ಇದು ನಿರಪೇಕ್ಷ ಉರ್ಜಾ ಸರ್ವತ್ರ ಒಂದೇ ರೀತಿಯಲ್ಲಿ ಇರುವ ಕಾರಣ ಇದಕ್ಕೆ ಸಾಮ್ಯ ಉರ್ಜಾವೆಂದು ಸಂಜ್ಞೆಯಿದೆ. ಶೂನ್ಯ ನಾಮದಿಂದ ಇದನ್ನು ಸರ್ವತ್ರ ಸಾಮ್ಯತಃ ಕಂಡುಬರುತ್ತದೆ.

26

ಶೂನ್ಯದಿಂದ ರಿಕ್ತ ಹಾಗು ಮುಕ್ತ ಕ್ರಿಯೆ ಸಿದ್ಧವಾಗುವುದಿಲ್ಲ. ಸತ್ತಾವೇ ವ್ಯಾಪಕ. ಶೂನ್ಯವೇ ನಿರಪೇಕ್ಷ ಉರ್ಜ, ಶೂನ್ಯವೇ ಸತ್ತಾ.

ನಿರಪೇಕ್ಷ ಉರ್ಜ ಹಾಗು ಪದಾರ್ಥದಲ್ಲಿ ಎಷ್ಟು ಅಂತರವಿದೆಯೆಂದರೆ ನಿರಪೇಕ್ಷ ಉರ್ಜ ಪ್ರತಿಯೊಂದು ಕಾಲ, ಸ್ಥಾನ ಹಾಗು ವಸ್ತುವಿನಲ್ಲಿ ವ್ಯಾಪ್ತವಾಗಿದೆ. ನಿರಪೇಕ್ಷ ಉರ್ಜವಿಲ್ಲದಿರುವಂತಹ ಯಾವ ಸ್ಥಾನ ಹಾಗು ವಸ್ತು ಇಂದಿಗೂ ಪ್ರಾಪ್ತ ಅಥವಾ ಸಿದ್ಧವಾಗಿಲ್ಲ, ಆದರೆ ಪದಾರ್ಥವಿಲ್ಲದಿರುವಂತಹ ಸ್ಥಾನವಿದೆ, ಆದರೆ ಅಂತಹ ಕಾಲ ಸಿದ್ಧವಾಗಿಲ್ಲ.

¤ ಸ್ಥಾನ - ವ್ಯಾಪಕ ಸತ್ತಾ ಅಥವಾ ಶೂನ್ಯ ಏಕೆಂದರೆ ಒಂದೊಂದು ವಸ್ತು ಸತ್ತಾವಿನಲ್ಲಿ ಒಳಗೊಂಡಿದೆ.

ಪದಾರ್ಥದ ಸಂಘಟನೆ ತಥಾ ಅವಸ್ಥೆ ಭೇದದಿಂದಲೇ ಪದಾರ್ಥದ ಮಾತಾ ಹಾಗು ರೂಪದ ಅವಧಿಗಳಿವೆ.

ಸಮಸ್ತ ಪದಾರ್ಥ ಗಟ್ಟಿ, ತರಳ ಅಥವಾ ವಿರಳದ (ವಾಯು) ರೂಪದಲ್ಲಿ ಉಪಲಭವಾಗಿದೆ. ಈ ಅವಸ್ಥೆಗಳಲ್ಲಿ ಪದಾರ್ಥ ತಾತ್ವಿಕ, ಯೌಗಿಕ ಅಥವಾ ಮಿಶ್ರಣದ ರೂಪದಲ್ಲಿ ಪ್ರಾಪ್ತವಾಗಿದೆ.

¤ ತಾತ್ವಿಕ - ಸಜಾತೀಯ ಪರಮಾಣ್ಣಿಕ ಸಮೂಹದ ಘಟಣೆಗೆ ತಾತ್ವಿಕವೆಂದು ಸಂಜ್ಞೆ.

¤ ಮಿಶ್ರಣ - ವಿಜಾತೀಯ ಪರಮಾಣ್ಣಿಕ ಅಥವಾ ಆಣ್ಟಿಕ ಸಮೂಹದಂತಹ ಘಟಣೆ, ಯಾವುದರಲ್ಲಿ ಎಲ್ಲಾ ತಮ್ಮ - ತಮ್ಮ ಆಚರಣವನ್ನು ಕಾಪಾಡಿರುತ್ತವೆ.

¤ ಯೌಗಿಕ - ಎರಡು ಅಥವಾ ಅಧಿಕ ಪ್ರಜಾತಿಯ ವಸ್ತುಗಳು ನಿಶ್ಚಿತ ಅನುಪಾತದಲ್ಲಿ ಸೇರಿ, ತಮ್ಮ-ತಮ್ಮ ಆಚರಣವನ್ನು ತ್ಯಜಿಸಿ ಅನ್ಯ ಪ್ರಕಾರದ ಆಚರಣವನ್ನು ಪ್ರಸ್ತುತ ಮಾಡುತ್ತದೆ.

¤ ಯೌಗಿಕದಲ್ಲಿ ರಾಸಾಯನಿಕ ತಥಾ ಭೌತಿಕ ಎರಡೂ ಪರಿಣಾಮವಿರುತ್ತದೆ, ಆದರೆ ಮಿಶ್ರಣದಲ್ಲಿ ಕೇವಲ ಭೌತಿಕ ಪರಿಣಾಮವಿರುತ್ತದೆ.

• ಪರಮಾಣುಗಳ ಮಧ್ಯಾಂಶ ಹಾಗು ಆಶ್ರಿತ ಅಂಶಗಳ ಸಂಖ್ಯೆ ಭೇದದಿಂದ ಪರಮಾಣುಗಳ ಜಾತಿ ಹಾಗು ಅವಸ್ಥೆ ಮತ್ತು ಮಾತಾವಿನ ನಿರ್ಣಯವಾಗುತ್ತದೆ.

¤ ವಾಯು - ವಿರಳ ಪದಾರ್ಥ ರಾಶಿಯ ನೃತ್ಯ (ತರಂಗ) ರೂಪದಲ್ಲಿ

27

ಗತಿಶೀಲವಾಗಿರುವುದೇ ವಾಯು. ಇದರ ಯೋಗದಿಂದ ದ್ರವ ಹಾಗು ತಾಪದ ಪ್ರಸವವಿದೆ.

ಯೋಗ - ಮಿಲನಕ್ಕೆ ಯೋಗವೆಂದು ಸಂಜ್ಞೆ. ಯೋಗದ ಎರಡು ಭೇದಗಳಿವೆ.

೧.ಐಕ್ಯ ೨. ಸಹವಾಸ

✠ ಐಕ್ಯ - ಸಜಾತೀಯ ಮಿಲನಕ್ಕೆ ಐಕ್ಯವೆಂದು ಸಂಜ್ಞೆ.

✠ ಸಹವಾಸ - ಯಾವ ಯೋಗದ ನಂತರ ವಿಲಗೀಕರಣ ಸಂಭವವೋ, ಅದಕ್ಕೆ ಸಹವಾಸವೆಂದು ಸಂಜ್ಞೆ.

✠ ಸಹವಾಸದ ನಂತರ ಉನ್ನತಿಯ ದಿಕ್ಕಿನಲ್ಲಿ ಪ್ರಾಪ್ತ ಸಂವೇಗಗಳಿಗೆ ಪ್ರೇರಣೆಯೆಂದು ಸಂಜ್ಞೆ ಹಾಗು ಇದರ ವಿಪರೀತ ಪ್ರಾಪ್ತ ಸಂವೇಗಗಳಿಗೆ ಪ್ರತಿಕ್ರಾಂತಿ ಅಥವಾ ಹಾಸವೆಂದು ಸಂಜ್ಞೆ. ಧಾರಣವಿನ ಪ್ರತಿಕೂಲ ಚೇಷ್ಟೆಯನ್ನು ಅಥವಾ ಸಮಸ್ಯೆಯ ದಿಕ್ಕಿನಲ್ಲಿ ಪ್ರಾಪ್ತ ವಿವಷತೆಗೂ ಪ್ರತಿಕ್ರಾಂತಿಯೆಂದು ಸಂಜ್ಞೆ.

✠ ಉನ್ನತಿ - ಗುರು ಮೌಲಿಕರಣದ ದಿಕ್ಕಿನಲ್ಲಿ ಅಥವಾ ಸಮಾಧಾನದ ದಿಕ್ಕಿನಲ್ಲಿ ಪ್ರಗತಿಯೇ ಉನ್ನತಿ

✠ ಸಂವೇಗ - ಸಂಯೋಗದಿಂದ ಪ್ರಾಪ್ತ ವೇಗವೇ ಸಂವೇಗ

✠ ಧಾರಣ - ಯಾವುದರಿಂದ ಯಾವುದರ ವಿಲಗೀಕರಣ ಸಂಭವವಿಲ್ಲವೋ, ಅದು ಅದರ ಧಾರಣ. ಯಾವುದು ನಾಲ್ಕು ಪದಗಳಲ್ಲಿ ತಮ್ಮ - ತಮ್ಮ ಸ್ಥಿತಿಯ ಅನುಸಾರ ಸ್ಪಷ್ಟವಾಗಿವೆಯೋ.

✠ ಸಮಸ್ಯೆ - ಯಾವುದೇ ಘಟನೆ ಅಥವಾ ಕ್ರಿಯೆಯ ಅರಿವಿಲ್ಲದಿರುವುದೇ ಸಮಸ್ಯೆ ಅಥವಾ ಹೇಗೆ ಮತ್ತು ಯಾಕೆ, ಅರಿವಾಗದಿರುವುದೇ ಸಮಸ್ಯೆ.

✠ ಸಮಾಧಾನ - ಯಾವುದೇ ಘಟನೆ ಅಥವಾ ಕ್ರಿಯೆಯ ನಿಯಮದ ಅರಿವಿರುವುದೇ ಸಮಾಧಾನ ಅಥವಾ ಹೇಗೆ ಮತ್ತು ಯಾಕೆಯ ಪೂರ್ತಿಯೇ ಸಮಾಧಾನ

✠ ಗುರುಮೌಲಿಕರಣ- ದೀರ್ಘ ಕಾಲಿನ ಪರಿಣಾಮ ಅಥವಾ ಅಪರಿಣಾಮಿತೆಯೇ ಗುರುಮೌಲಿಕರಣ

28

ಸಹವಾಸದಲ್ಲಿಯೇ ಪ್ರೇರಣೆಯ ಪ್ರಸವ ಮತ್ತು ಅನುಭವವಿದೆ ತಥಾ ಇದರ ವಿವರಿತ ವಿವರಣೆಗೆ ಪ್ರತಿಕ್ರಾಂತಿಯ ಸಮೀಕ್ಷೆಯಿದೆ.

ಪ್ರೇರಣಾವಾದಿ ಸಹವಾಸದಿಂದ ಉಭಯ ಸುಕೃತಿಗಳು ಪ್ರತಿಕ್ರಾಂತಿವಾದಿ ಸಹವಾಸದಿಂದ ಉಭಯವಿಕೃತಿಗಳಿವೆ.

¤ ಉಭಯ ಸುಕೃತಿಗಳು - ಗುರುಮೌಲೀಕರಣ ಅಥವಾ ದೀರ್ಘ ಪರಿಣಾಮ ಅಥವಾ ಅಪರಿಣಾಮಿತೆ.

¤ ಉಭಯ ವಿಕೃತಿಗಳು - ಅವಮೌಲೀಕರಣದ ದಿಕ್ಕಿನಲ್ಲಿ ಹಾಸ ಅಥವಾ ಸಮಸ್ಯೆಯ ದಿಕ್ಕಿನಲ್ಲಿ ದ್ರುತ ಪರಿಣಾಮ.

ಸಹವಾಸವೇ ಸೃಷ್ಟಿಯ (ರಚನೆಯ) ಮೂಲ ಕಾರಣ. ಸಹವಾಸ ಸಹ-ಅಸ್ತಿತ್ವದಲ್ಲಿ ಅಭಿವ್ಯಕ್ತಿಯಾಗಿದೆ. ಸಹ-ಅಸ್ತಿತ್ವ ನಿತ್ಯ ವರ್ತಮಾನ ಹಾಗು ನಿತ್ಯ ಪ್ರಭಾವಿಯಾಗಿದೆ.

* ಪ್ರಪಂಚದಲ್ಲಿ ಅಥವಾ ಅನಂತ ಪ್ರಪಂಚಗಳಲ್ಲಿ ಉತ್ಥಾನ ಅಥವಾ ಪತನದ ದಿಕ್ಕಿನಲ್ಲಿ ಗತಿತವಾಗಿಲ್ಲದಿರುವ ಇಕಾಯಿಯೇ ಇಲ್ಲ ಏಕೆಂದರೆ ಗತಿ ರಹಿತ ಯಾವ ಇಕಾಯಿಯು ಇಲ್ಲ. ಅತಃ ಅನಂತದ ಮಾತ್ರ ಎರಡೇ ಗತಿಗಳಿವೆ.

* ಗಟ್ಟಿ ಪದಾರ್ಥ ರಾಶಿಯ ನೃತ್ಯ (ತರಂಗ) ಮಿಶ್ರಣ ಹಾಗು ಯೌಗಿಕ ವಿಧಿಗಳಿಂದ ಸಮಸ್ತ ರಸ ಹಾಗು ಉಪರಸದ ಪ್ರಸವವಿದೆ.

ಪದಾರ್ಥ ರಾಶಿಯ ವರ್ಗೀಕರಣ ನಾಲ್ಕು ಜಾತಿಗಳಲ್ಲಿವೆ

೧.ಮಣ್ಣು ೨. ಕಲ್ಲು . ೩. ಮಣಿ ಮತ್ತು ೪. ಧಾತು

ಮಣ್ಣು ಉರ್ವರ ಅಥವಾ ಅನುವರ ಭೇದದಿಂದಿದೆ.

¤ ಉರ್ವರ - ಬೀಜವನ್ನು ಪಡೆದು ಅನೇಕ ಬೀಜವನ್ನು ತಯಾರು ಮಾಡುವ ಕ್ಷಮತೆಯಿಂದ ಸಂಪನ್ನ ಮಣ್ಣಿಗೆ ಉರ್ವರವೆಂದು ಸಂಜ್ಞೆ ತಥಾ ಇದಕ್ಕಿಂತ ವಿವರಿತ ಸ್ವಭಾವದ ಮಣ್ಣಿಗೆ 'ಅನುವರ' ಎಂದು ಸಂಜ್ಞೆ.

ಪಾಪಾಣದ ವರ್ಗೀಕರಣ ಕರೋರ ಹಾಗು ಅಕರೋರ ಭೇದದಿಂದಿದೆ.

¤ ಕರೋರ - ಅಧಿಕ ಭಾರ ತಾಳುವ ಕಲ್ಲಿನ ಕರೋರವೆಂದು ಸಂಜ್ಞೆ.

¤ ಅಕರೋರ - ಕಡಿಮೆ ಭಾರ ತಾಳುವ ಕಲ್ಲಿನ ಅಕರೋರ ಎಂದು ಸಂಜ್ಞೆ.

ಮಣಿನ ವರ್ಗೀಕರಣ ಕಿರಣ ಶ್ರಾವಿ ಹಾಗು ಕಿರಣ ಗ್ರಾಹಿ ಭೇದದಿಂದಿದೆ

29

✠ ಕಿರಣ - ತಪ್ತ ಬಿಂಬದ ಪ್ರತಿಬಿಂಬ ಅಪಾರದರ್ಶಕ ವಸ್ತುವಿನ ಮೇಲಿರುವುದೇ ಕಿರಣ. ಇಕಾಯಿಯಿಂದ ಬಹಿರ್ನಿಹಿತ ಅಗ್ನಿಗೆ ತಾಪ ಎಂದು ಸಂಜ್ಞೆ.

✠ ಕಿರಣ ಶ್ರಾವಿ - ಕಿರಣದ ಪ್ರಭಾವದಿಂದ ಪ್ರಸಾರಣ ಕ್ರಿಯೆ ಮಾಡುವ ಮಣಿಗೆ ಕಿರಣ ಶ್ರಾವಿ ತಥಾ ಗ್ರಹಿಸುವ ಕ್ರಿಯೆಗೆ ಕಿರಣ ಗ್ರಾಹಿ ಎಂದು ಸಂಜ್ಞೆ.

* ಪಾರದರ್ಶಕ ಹಾಗು ಅಪಾರದರ್ಶಕ ಭೇದದಿಂದ ವಿಕಿರಣ ಮತ್ತು ಕಿರಣ ಕ್ರಿಯೆಯಲ್ಲಿ ನಿರತವಾಗಿದೆ.

✠ ವಿಕಿರಣ - ಯಾವುದೇ ಇಕಾಯಿಯಲ್ಲಿ ಅಂತರ್ನಿಹಿತ ಅಗ್ನಿಯ ಪ್ರಭಾವದಿಂದ ಪ್ರಾಪ್ತ ಪ್ರಸಾರಣ (ಪ್ರತಿಬಿಂಬನ) ಕ್ರಿಯೆಗೆ ವಿಕಿರಣ ಎಂದು ಸಂಜ್ಞೆ.

✠ ರಶ್ಮಿ - ತಪ್ತ ಬಿಂಬದ ಪ್ರಕಾಶದ ಪ್ರತಿಬಿಂಬ, ಅನುಬಿಂಬ, ಪ್ರತ್ಯಾನುಬಿಂಬ ಕ್ರಿಯೆಗೆ ರಶ್ಮಿ ಎಂದು ಸಂಜ್ಞೆ.

✠ ಪ್ರಕಾಶ - ತಪ್ತ ಇಕಾಯಿಯ ಪ್ರತಿಬಿಂಬನ ಕ್ರಿಯೆಯ ಪ್ರಕಾಶ ಎಂದು ಸಂಜ್ಞೆ.

* ವಿಕಿರಣ ಮತ್ತು ಕಿರಣ ಮಾಧ್ಯಮ ಭೇದದಿಂದ ಶೋಷಣ ಅಥವಾ ಪೋಷಣೆ ಕ್ರಿಯೆಯಲ್ಲಿ ನಿರತವಾಗಿದೆ. ಪ್ರಾಕೃತಿಕ ವಿಧಿಯಿಂದ ಪೋಷಣೆ ಸ್ಪಷ್ಟವಾಗಿದೆ. ಭ್ರಮಿತ ಮಾನವನಿಂದ ವಿಕಿರಣೀಯ ಪ್ರಯೋಗದಿಂದ ಶೋಷಣೆ ಸಿದ್ಧವಾಗಿದೆ.

* ಪದಾರ್ಥ ರಾಶಿಯ ಸಂಘಟಿತ ಪಿಂಡಕ್ಕೆ ಗ್ರಹ-ಗೋಲ ಎಂದು ಸಂಜ್ಞೆ, ಇದರ ಎಲ್ಲಾ ದಿಕ್ಕಿನಲ್ಲಿ ಆಕಾಶವಿದೆ.

ಪ್ರತ್ಯೇಕ ಗ್ರಹ ಆಕಾಶದಲ್ಲಿ ಶೂನ್ಯಾಕರ್ಷಣೆಯ ಸ್ಥಿತಿಯಲ್ಲಿದೆ. ಹೀಗೆ ಪ್ರತಿಯೊಂದ ಇಕಾಯಿ ಅರ್ಥಾತ ಗ್ರಹ-ಗೋಲ ಆಕಾಶದಲ್ಲಿ ತನ್ನ ಗತಿಯ ಅನುಸಾರ ಸ್ಥಿತಿಯಿದೆ.

ಇಕಾಯಿಗಳು ಧನಾಕರ್ಷಣೆಯ ಸ್ಥಿತಿಯಲ್ಲಿ ಯಾವುದಾದರ ದಿಕ್ಕಿನಲ್ಲಿ ಆಕರ್ಷಿತ ತಥಾ ಋಣ-ಆಕರ್ಷಣೆಯ ಸ್ಥಿತಿಯಲ್ಲಿ ಯಾವುದಾದರನ್ನು ಆಕರ್ಷಿತ ಮಾಡುತ್ತದೆ ತಥಾ ಶೂನ್ಯಾಕರ್ಷಣೆಯ ಸ್ಥಿತಿಯಲ್ಲಿ ಸ್ವತಂತ್ರವಾಗಿದೆ.

ಭಾರ, ಆಕರ್ಷಣೆಯಿಂದ; ಆಕರ್ಷಣೆ, ಪರಸ್ಪರತೆಯಿಂದ; ಪರಸ್ಪರತೆ, ಲಘುತ ಹಾಗು ಗುರುತ್ವದಿಂದ; ಲಘುತ ಹಾಗು ಗುರುತ್ವ, ರಚನೆ ಹಾಗು ಸಾಪೇಕ್ಷ ಉರ್ಜಗಳಿಂದ; ರಚನೆ ಹಾಗು ಸಾಪೇಕ್ಷ ಉರ್ಜ, ಕ್ರಿಯೆಯಿಂದ; ಕ್ರಿಯೆ, ಪದಾರ್ಥದಿಂದ ಮತ್ತು ಪದಾರ್ಥದ ಹಾಸ

30

ಹಾಗು ವಿಕಾಸ ಸಾಪೇಕ್ಷ ಉರ್ಜವಿನ ಸದುಪಯೋಗ ಹಾಗು ದುರುಪಯೋಗದಿಂದ ಸಾಪೇಕ್ಷಿತವಾಗಿದೆ.

ಸಮಸ್ತ ಪದಾರ್ಥ ನಿರಪೇಕ್ಷ ಉರ್ಜವಿನಲ್ಲಿ ಸಂಪ್ರಕ್ಷ ಹಾಗು ಒಳಗೊಂಡಿದೆ ತಥಾ ಸಂಪೂರ್ಣ ಸೃಷ್ಟಿಯ ಸ್ಥಿತಿ ತಥಾ ಗತಿ ನಿರಪೇಕ್ಷ ಉರ್ಜದಲ್ಲಿದೆ.

ಪ್ರತ್ಯೇಕ ಚೇಷ್ಟೆಯಿಂದ ಸಾಪೇಕ್ಷ ಉರ್ಜವಿನ ಪ್ರಸವವಿದೆ.

ಮೂಲ ಚೇಷ್ಟೆಗಾಗಿ ನಿರಪೇಕ್ಷ ಉರ್ಜ ಎಲ್ಲರಿಗೂ ಪ್ರಾಪ್ತವಾಗಿದ್ದೇಯಿದೆ.

▫ ಮೂಲ ಚೇಷ್ಟೆ - ಪದಾರ್ಥದ ಪರಮಾಣಿಕ ಸ್ಥಿತಿಯಲ್ಲಿ ವಾತಾವರಣದ ಒತ್ತಡದಿಂದ ಮುಕ್ತ ಚೇಷ್ಟೆಯ ಮೂಲ-ಚೇಷ್ಟೆ ಎಂದು ಸಂಜ್ಞೆ.

ಯಾವುದೇ ಭೂಮಿಯ ಮೇಲೆ ತನ್ನ ಅವಶ್ಯಕ ಸಂಪೂರ್ಣ ರಸ, ಉಪರಸ ಹಾಗು ವಾಯುವಿನಿಂದ ಸಮೃದ್ಧವಾದನಂತರವೇ ಅದರ ಮೇಲೆ ಪೂರ್ಣ ಸೃಷ್ಟಿ ಸಂಭವವಾಗಿದೆ. ಈ ರೀತಿಯಲ್ಲಿ ಈ ಅಸೀಮ ಅವಕಾಶದಲ್ಲಿ ಅನಂತ ಭೂಮಿ ತಮ್ಮ ಪ್ರಗತಿಯ ಅನುಸಾರ ಪೂರ್ಣ-ವಿಕಸಿತ, ಅರ್ಧ-ವಿಕಸಿತ, ಅಲ್ಪ ವಿಕಸಿತ ಹಾಗು ಅವಿಕಸಿತ ಅವಸ್ಥೆಯಲ್ಲಿದೆ. ರಸ, ಉಪರಸದ ಪ್ರಮಾಣ ರಾಸಾಯನಿಕ ಕ್ರಿಯಾಕಲಾಪ ಮತ್ತು ವೈಭವದ ರೂಪದಲ್ಲಿದೆ.

ಅವಿಕಸಿತ ಸೃಷ್ಟಿ ಪದಾರ್ಥಾವಸ್ಥೆಯ ಸೃಷ್ಟಿ. ಸಮಸ್ತ ಮಣ್ಣು, ಕಲ್ಲು, ಮಣಿ ಹಾಗು ಧಾತುವಿನ ಗಣನ ಅವಿಕಸಿತ ಸೃಷ್ಟಿಯಲ್ಲಿದೆ. ಅಲ್ಪ - ವಿಕಸಿತ ಸೃಷ್ಟಿ ಪ್ರಾಣಾವಸ್ಥೆಯ ಸೃಷ್ಟಿ. ಸಮಸ್ತ ವನಸ್ಪತಿ ಪ್ರಾಣಾವಸ್ಥೆಯ ಸೃಷ್ಟಿಯಲ್ಲಿ ಸಮ್ಯುಲಿತವಾಗಿದೆ. ಅರ್ಧ - ವಿಕಸಿತ ಸೃಷ್ಟಿ ಜೀವಾವಸ್ಥೆಯ ಸೃಷ್ಟಿ. ಮಾನವೇತ್ತರ ಅಂಡಜ ಮತ್ತು ಪಿಂಡಜ ಸೃಷ್ಟಿಯ ಗಣನ ಜೀವಾವಸ್ಥೆಯಲ್ಲಿದೆ. ಜ್ಞಾನಾವಸ್ಥೆಯಲ್ಲಿ ಶರೀರ ರಚನೆ ಪೂರ್ಣ-ವಿಕಸಿತ ಸೃಷ್ಟಿ. ಅಲ್ಪ-ವಿಕಸಿತ ಸೃಷ್ಟಿಯಲ್ಲಿ ಅವಿಕಸಿತ ಸೃಷ್ಟಿ; ಅರ್ಧ-ವಿಕಸಿತ ಸೃಷ್ಟಿಯಲ್ಲಿ ಅಲ್ಪ-ವಿಕಸಿತ ಮತ್ತು ಅವಿಕಸಿತ ತಥಾ ಪೂರ್ಣ-ವಿಕಸಿತ ಸೃಷ್ಟಿಯಲ್ಲಿ ಅರ್ಧ ವಿಕಸಿತ, ಅಲ್ಪ-ವಿಕಸಿತ ತಥಾ ಅವಿಕಸಿತ ಸೃಷ್ಟಿ ಒಳಗೊಂಡಿದೆ ಎಂಬುವುದು ಸ್ಪಷ್ಟವಾಗುವುದು ಅವಶ್ಯಕವಾಗಿದೆ.

* ಫಲತಃ ಉಚ್ಚಕೊಟಿಯ ಸೃಷ್ಟಿಯಲ್ಲಿ ನಿಮ್ಮ ಕೋಟಿಯ ಸೃಷ್ಟಿಯ ಗುಣ ಸ್ವಭಾವ ಮತ್ತು ಧರ್ಮ ವಿಲಯವಾಗಿದ್ದೇಯಿರುತ್ತದೆ.

▫ ಗುಣ - ಸಾಪೇಕ್ಷ ಶಕ್ತಿಗಳಿಗೆ ಗುಣ ಎಂದು ಸಂಜ್ಞೆ. ಸಮ, ವಿಷಮ ಮಧ್ಯಸ್ಥ ರೂಪದಲ್ಲಿ ಗುರುತಾಗುತ್ತದೆ, ಇದೇ ಪ್ರಭಾವ.

▫ ಸ್ವಭಾವ - ಮೌಲಿಕತೆಯೇ ಸ್ವಭಾವ.

31

¤ ಧರ್ಮ - ಧಾರಣವೇ ಧರ್ಮ.

* ಸೃಷ್ಟಿಯ ಪೂರ್ವೋಕ್ತ ವರ್ಗೀಕರಣ ಕೋಶ ಘಟಕ ಭೇದದಿಂದಿದೆ.

¤ ಕೋಶ - ಆಶಯ ತಥಾ ಪ್ರಯೋಜನ ಸಹಿತ ನಿಶ್ಚಿತ ಕ್ರಿಯೆ ವಿಶೇಷಕ್ಕೆ ಕೋಶ ಎಂದು ಸಂಜ್ಞೆ. ಪ್ರವೃತ್ತಿಗಾಗಿ ಜವಾಬ್ದಾರಿಯಾದ ಸಂಪದವೇ ಕೋಶ.

¤ ಕೋಶದ ತಾತ್ಪರ್ಯ ಸಂಪನ್ನತೆಯಿಂದ. ಪ್ರೇರಣೆ ಸಂಪನ್ನತೆಯ ಅರ್ಥ ಉರ್ಜ ಸಂಪನ್ನತೆ, ಬಲ ಸಂಪನ್ನತೆ ಹಾಗು ಚುಂಬಕಿಯ ಸಂಪನ್ನತೆ. ಪ್ರೇರಣೆ ಸಂಪನ್ನತೆಯೇ ಪ್ರಾಣಮಾಯ ಕೋಶ. ಇದೇ ಪ್ರೇರಣೆ ಸಂಪನ್ನತೆಯ ಆಧಾರದ ಮೇಲೆ ಅಂಶಗಳ ಪರಸ್ಪರ ಗುರುತು, ನಿಶ್ಚಿತ ದೂರದಲ್ಲಿ ನಿಯಂತ್ರಿತವಾಗಿದ್ದು ಪರಮಾಣುವಿನ ರೂಪದಲ್ಲಿ ಪ್ರಮಾಣಿತವಾಗುತ್ತದೆ. ಪರಮಾಣುವಿನಲ್ಲಿ ಈ ಪ್ರವೃತ್ತಿಯೇ ಪ್ರಾಣಮಯ ಕೋಶ.

* ಅನಂತ ರಚನೆಗಳು ಐದು ಕೋಶಗಳ ಘಟಕದ ಭೇದದ ಅಂತರ್ಗತ ಪರಿಲಕ್ಷಿತವಾಗುತ್ತದೆ. ಈ ಐದು ಕೋಶಗಳನ್ನು ಕ್ರಮಶಃ ಪ್ರಾಣಮಯ ಕೋಶ, ಅನ್ನಮಯ ಕೋಶ, ಮನೋಮಯ ಕೋಶ, ಆನಂದಮಯ ಕೋಶ ಮತ್ತು ವಿಜ್ಞಾನಮಯ ಕೋಶ ಎಂದು ಸಂಜ್ಞೆ.

ಪ್ರಾಣಮಯ ಕೋಶ, ಅನ್ನಮಯ ಕೋಶ ಹಾಗು ಮನೋಮಯ ಕೋಶ ಜಡ ಪ್ರಪಂಚದಲ್ಲಿ; ತಥಾ ಮನೋಮಯ ಕೋಶ, ಆನಂದಮಯ ಕೋಶ ಹಾಗು ವಿಜ್ಞಾನಮಯ ಕೋಶ ಚೈತನ್ಯ ಪ್ರಪಂಚದಲ್ಲಿ ಸ್ಪಷ್ಟ ಅಥವಾ ಪ್ರಮಾಣಿತವಾಗುತ್ತದೆ.

¤ ಅನ್ನಮಯ ಕೋಶ - ಗ್ರಹಣೆ ಮತ್ತು ವಿಸರ್ಜನೆ ಮಾಡುವ ಅಂಗಕ್ಕೆ ಅನ್ನಮಯ ಕೋಶ ಎಂದು ಸಂಜ್ಞೆ.

¤ ಪ್ರಾಣಮಾಯ ಕೋಶ - ಪ್ರೇರಣೆಯನ್ನು ಸ್ವೀಕರಿಸುವ ಅಥವಾ ಸ್ವೀಕರಿಸದೆಯಿರುವ ಅಂಗಕ್ಕೆ ಪ್ರಾಣಮಯ ಕೋಶ ಎಂದು ಸಂಜ್ಞೆ.

¤ ಮನೋಮಯ ಕೋಶ - ಚಯನ ಮಾಡುವ ಅಥವಾ ಚುನಾಯಿತ ಮಾಡುವ ಅಂಗಕ್ಕೆ ಮನೋಮಯ ಕೋಶ ಎಂದು ಸಂಜ್ಞೆ.

¤ ಆನಂದಮಯ ಕೋಶ - ಸುಖ ಅಥವಾ ದುಃಖವನ್ನು ವ್ಯಕ್ತ ಪಡಿಸುವ ಅಂಗಕ್ಕೆ ಆನಂದಮಯ ಕೋಶ ಎಂದು ಸಂಜ್ಞೆ.

32

ವಿಜ್ಞಾನಮಯ ಕೋಶ - ವಿಶೇಷ ಜ್ಞಾನವನ್ನು ಗ್ರಹಿಸುವ ಅಂಗಕ್ಕೆ ವಿಜ್ಞಾನಮಯ ಕೋಶ ಎಂದು ಸಂಜ್ಞೆ.

ನಾಲ್ಕು ಅವಸ್ಥೆಗಳ ಸೃಷ್ಟಿಯ ತಮ್ಮ ತಮ್ಮ ವಿಶೇಷತೆಗಳಿವೆ ತಥಾ ವಿಶಿಷ್ಟತೆಗಳು ರೂಪ, ಗುಣ, ಸ್ವಭಾವ ಮತ್ತು ಧರ್ಮಕ್ಕೆ ಸಂಬಂಧಿತವಾಗಿವೆ.

ರೂಪ - ನಾಲ್ಕು ಅವಸ್ಥೆಗಳ ಸೃಷ್ಟಿಯಲ್ಲಿ ರೂಪದ ನಿರ್ಧಾರಣೆ ಆಕಾರ, ಆಯತ ಮತ್ತು ಘನತೆಯ ಭೇದದಿಂದಿವೆ.

ಗುಣ - ನಾಲ್ಕು ಅವಸ್ಥೆಗಳಲ್ಲಿ ಗುಣ ಸಮ, ವಿಷಮ ಅಥವಾ ಮಧ್ಯಸ್ಥದ ಭೇದದಿಂದಿವೆ.

ಸಮ - ಸೃಜನ ಕ್ರಿಯೆಯಲ್ಲಿ ಸಹಾಯಕ ಗುಣಕ್ಕೆ ಸಮ ಎಂದು ಸಂಜ್ಞೆ.

ವಿಷಮ - ವಿಸರ್ಜನ ಕ್ರಿಯೆಯಲ್ಲಿ ಸಹಾಯಕ ಗುಣಕ್ಕೆ ವಿಷಮವೆಂದು ಸಂಜ್ಞೆಯಿದೆ.

ಮಧ್ಯಸ್ಥ - ವಿಭವ ಕ್ರಿಯೆಯಲ್ಲಿ ಸಹಾಯಕ ಗುಣಕ್ಕೆ ಮಧ್ಯಸ್ಥ ಎಂದು ಸಂಜ್ಞೆ.

ಈ ಮೂರು ಸೃಜನ, ವಿಸರ್ಜನ ತಥಾ ವಿಭವದ ಕ್ರಿಯೆ ಉರ್ಜಾಮಯವಾಗಿವೆ

ಸ್ವಭಾವ - ಪದಾರ್ಥದಲ್ಲಿ ಸಂಘಟಣೆ - ವಿಘಟಣೆ ಕ್ರಿಯೆಗಳು ತಥಾ ವಿಘಟಣೆ - ಸಂಘಟಣೆ ಕ್ರಿಯೆಗಳು ಹಾಗು ಇದರ ನಿರಂತರತೆಯೇ ಸ್ವಭಾವ.

ಪ್ರಾಣಾವಸ್ಥೆಯಲ್ಲಿ ಸಾರಕ ಅಥವಾ ಮಾರಕ ಅಥವಾ ಸಾರಕ-ಮಾರಕ ಕ್ರಿಯೆಯ ನಿರಂತರತೆಯೇ ಸ್ವಭಾವ.

ಜೀವಾವಸ್ಥೆಯಲ್ಲಿ ಕ್ರೂರ, ಅಕ್ರೂರ ಸ್ವಭಾವವಿದೆ.

ಜ್ಞಾನಾವಸ್ಥೆಯಲ್ಲಿ ಧೀರತೆ, ವೀರತೆ ಮತ್ತು ಉದಾರತೆ, ದಯೆ, ಕೃಪಾ ಹಾಗು ಕರುಣೆ ಸ್ವಭಾವವಿದೆ.

ಧರ್ಮ - ಪದಾರ್ಥಾವಸ್ಥೆಯಲ್ಲಿ ಅಸ್ತಿತ್ವ ಧರ್ಮವಿದೆ.

ಪ್ರಾಣಾವಸ್ಥೆಯಲ್ಲಿ ಅಸ್ತಿತ್ವ ಸಹಿತ ಪುಷ್ಟಿ ಧರ್ಮವಿದೆ.

ಜೀವಾವಸ್ಥೆಯಲ್ಲಿ ಅಸ್ತಿತ್ವ, ಪುಷ್ಟಿ ಸಹಿತ ಬಾಳುವ ಆಶೆ ಧರ್ಮವಿದೆ.

ಜ್ಞಾನಾವಸ್ಥೆಯಲ್ಲಿ ಅಸ್ತಿತ್ವ, ಪುಷ್ಟಿ, ಬಾಳುವ ಆಶೆ ಸಹಿತ ಸುಖವೇ ಧರ್ಮ.

ಉಚ್ಚ ಕೋಟೆಯ ಸೃಷ್ಟಿಯಲ್ಲಿ ನಿಮ್ಮ ಕೋಟೆಯ ಸೃಷ್ಟಿ ಒಳಗೊಂಡಿರುತ್ತದೆಯೆಂದು ಮೇಲೆ ಸ್ಪಷ್ಟಮಾಡಲಾಗಿದೆ.

33

ಕೋಶ - ಪ್ರಕಾಶನ ಭೇದದಿಂದ ಸೃಷ್ಟಿಯಲ್ಲಿ ಅವಸ್ಥೆ ಭೇದ ಕಂಡುಬರುತ್ತದೆ.

* ಪದಾರ್ಥಾವಸ್ಥೆಯ ಸೃಷ್ಟಿಯಲ್ಲಿ, ಅನ್ವಯ ಕೋಶ ಮತ್ತು ಪ್ರಾಣಮಯ ಕೋಶದ ಪ್ರಕಾಶನವಿದೆ. ಈ ಎರಡು ಕೋಶಗಳ ಕ್ರಿಯೆಗಳು ಸಮಸ್ತ ಪದಾರ್ಥಾವಸ್ಥೆಯ ಮೂಲ ರೂಪ ಪರಮಾಣುಗಳಲ್ಲಿ ಕಂಡುಬರುತ್ತದೆ. ಪ್ರತ್ಯೇಕ ಪರಮಾಣು ಸಚೇಷ್ಟವಾಗಿದೆ, ಆದ್ದರಿಂದ ಅದರಲ್ಲಿ ಪ್ರೇರಣೆ ಪಡೆಯುವ ಅಂಗ ಸಿದ್ಧವಾಗಿದೆ, ಇದರ ಜೊತೆಯೇ ಪರಮಾಣು ಹಾಸ ಹಾಗು ವಿಕಾಸದಿಂದ ಮುಕ್ತವಾಗಿಲ್ಲ, ಇದು ಗ್ರಹಣ ವಿಸರ್ಜನದ ಪ್ರತಿಫಲ. ಅತಃ ಪದಾರ್ಥದಲ್ಲಿ ಅನ್ವಯ ಕೋಶವೂ ಸಿದ್ಧವಾಗಿದೆ. ಅನ್ವಯ ಕೋಶದ ಕ್ರಿಯಶೀಲತೆಯೂ ಚೇಷ್ಟೆಯ ಫಲವಾಗಿದೆ ಅರ್ಥಾತ್ ಪ್ರಾಣಮಯ ಕೋಶ ಚೇಷ್ಟಿತವಾಗಿರುವ ಫಲವೇ ಅನ್ವಯ ಕೋಶದ ಕ್ರಿಯೆಯೂ ಸಂಪಾದಿತವಾಗುತ್ತದೆ. ಅತಃ ಅನ್ವಯ ಕೋಶ ಮತ್ತು ಪ್ರಾಣಮಯ ಕೋಶದ ಅವಿಭಾಜ್ಯ ಸಂಬಂಧವಿದೆಯೆಂದು ಸಿದ್ಧವಾಗಿದೆ.

* ಪ್ರಾಣಾವಸ್ಥೆಯ ಸೃಷ್ಟಿಯಲ್ಲಿ ಮೂರು ಕೋಶಗಳ ಪ್ರಕಾಶನವಿದೆ, ಇದು - ಅನ್ವಯ ಕೋಶ, ಪ್ರಾಣಮಯ ಕೋಶ ಮತ್ತು ಮನೋಮಯ ಕೋಶ. ವನಸ್ಪತಿಗಳಲ್ಲಿ ಪದಾರ್ಥಾವಸ್ಥೆಯ ಸೃಷ್ಟಿಯ ಅಪೇಕ್ಷೆ ಚಯನವಾದಿ ಕ್ರಿಯೆ ವಿಶೇಷವಾಗಿದೆ, ಇದು ಮನೋಮಯ ಕೋಶದ ಕ್ರಿಯೆ. ಇದು ಇದರಿಂದ ಸ್ಪಷ್ಟವಾಗುತ್ತದೆ, ಒಂದೇ ಭೂಮಿಯ ಮೇಲೆ ಸ್ಥಿತ ವಿಭಿನ್ನ ವನಸ್ಪತಿಗಳು ತಮ್ಮ-ತಮ್ಮ ಅವಶ್ಯಕತೆ ಅನುಸಾರ ಆವಶ್ಯಕೀಯ ತತ್ವಗಳನ್ನು ಮತ್ತು ರಸಗಳನ್ನು ಗ್ರಹಿಸುತ್ತಾ ಪುಷ್ಪವಾಗುವುದು ಕಂಡುಬರುತ್ತದೆ.

* ಜೀವಾವಸ್ಥೆ ಹಾಗು ಭ್ರಮಿತ ಜ್ಞಾನಾವಸ್ಥೆಯಲ್ಲಿ ನಾಲ್ಕು ಕೋಶಗಳ ಕ್ರಿಯೆ ಸ್ಪಷ್ಟವಾಗಿದೆ. ಇದು - ಅನ್ವಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ ಮತ್ತು ಆನಂದಮಯ ಕೋಶ.

* ಆನಂದಮಯ ಕೋಶದ ವಿಕಾಸವೇ ಚೈತನ್ಯತೆಯ ಕಾರಣ ಹಾಗು ಇದೇ ಚೈತನ್ಯತೆಯ ಕಾರಣ ಜೀವಾವಸ್ಥೆಯಲ್ಲಿ ಸುಖ ಮತ್ತು ದುಃಖದ ಪ್ರಕಾಶನವಿದೆ. ಇದರ ಕಾರಣವೇ ಜೀವಾವಸ್ಥೆಯ ಇಕಾಯಿಗೆ ವಿಷಯಗಳ (ಆಹಾರ, ನಿದ್ರಾ, ಭಯ ಮತ್ತು ಮೈಥುನ) ಸೇವನೆ ಮಾಡುವ ಅಧಿಕಾರವಿದೆ.

* ಜಾಗೃತ ಮಾನವನಲ್ಲಿ ಐದು ಕೋಶಗಳ ಪ್ರಕಾಶನವಿದೆ, ಈ ಐದು ಕೋಶಗಳ ಕ್ರಿಯಶೀಲತೆ ಹಾಗು ಅಭಿವ್ಯಕ್ತಿ ಮಾನವನಲ್ಲಿದೆ. ಇದು - ಅನ್ವಯ ಕೋಶ,

34

ಪ್ರಾಣಮಯ ಕೋಶ, ಮನೋಮಯ ಕೋಶ, ಆನಂದಮಯ ಕೋಶ ಮತ್ತು ವಿಜ್ಞಾನಮಯ ಕೋಶ.

ವಿಜ್ಞಾನಮಯ ಕೋಶದ ಜಾಗೃತವಾಗುವುದೇ ಜ್ಞಾನ, ವಿಜ್ಞಾನ ಮತ್ತು ವಿವೇಕದ ರೂಪದಲ್ಲಿ ವಿಶೇಷ ಜ್ಞಾನದ ಕಾರಣ. ವಿವೇಕ ಮತ್ತು ವಿಜ್ಞಾನದಿಂದಲೇ ದುಃಖದ ಕಾರಣ ಮತ್ತು ನಿವಾರಣೆಯ ಅರಿವು ವಿಕಸಿತವಾಗುತ್ತದೆ. ದುಃಖದ ನಿವಾರಣೆಯಿಂದಲೇ ಸುಖ, ಶಾಂತಿ, ಸಂತೋಷ ಮತ್ತು ಆನಂದದ ಅನುಭೂತಿ ಸಂಭವವಿದೆ.

ಸಮಸ್ತ ಪದಾರ್ಥ ಸಂಘಟನೆ - ವಿಘಟನೆ ಹಾಗು ವಿಘಟನೆ - ಸಂಘಟನೆ ಕ್ರಿಯೆಯಲ್ಲಿ ಅವಿರತ ಗತಿಯಿಂದ ನಿರತವಾಗಿರುತ್ತಾ ಭೌತಿಕ ಹಾಗು ರಾಸಾಯನಿಕ ಪರಿಣಾಮ ಪ್ರಾಪ್ತವಾಗುತ್ತದೆ.

ಪ್ರಾಣಾವಸ್ಥೆಯ ಸಮಸ್ತ ಇಕಾಯಿಗಳು, ಪದಾರ್ಥಾವಸ್ಥೆಯ ಎಲ್ಲಾ ಕ್ರಿಯೆಗಳ ಸಹಿತ ಸಪ್ರಾಣ, ನಿಷ್ಪ್ರಾಣ, ಆರೋಹ ಅಥವಾ ಅವರೋಹ ಕ್ರಿಯೆಯಲ್ಲಿ ಅವಸ್ಥಿತವಾಗುತ್ತಾ ಅಥವಾ ಸಾರಕ - ಮಾರಕ ಸ್ವಭಾವ ಸಹಿತ ಕ್ರಿಯೆಯಲ್ಲಿ ಅಭಿವ್ಯಕ್ತವಾಗಿವೆ.

ಸಾರಕ - ಪ್ರಾಣಪೋಷಕ ವನಸ್ಪತಿಗೆ ಸಾರಕ ಎಂದು ಸಂಜ್ಞೆ.

ಮಾರಕ - ಪ್ರಾಣಪೋಷಕ ವನಸ್ಪತಿಗೆ ಮಾರಕ ಎಂದು ಸಂಜ್ಞೆ.

ಜೀವಾವಸ್ಥೆಯ ಸಂಪೂರ್ಣ ಶರೀರ ರಚನೆಯಲ್ಲಿ ಪದಾರ್ಥಾವಸ್ಥೆ ತಥಾ ಪ್ರಾಣಾವಸ್ಥೆಯ ಎಲ್ಲಾ ಕ್ರಿಯೆಗಳು ಸೇರಿವೆ. ಇವು ಉದ್ಭವ, ವಿಭವ ಹಾಗು ಪ್ರಳಯದ ರೂಪದಲ್ಲಿ ಸ್ಪಷ್ಟವಾಗಿದೆ. ಜೀವಾವಸ್ಥೆಯಲ್ಲಿ 'ಜೀವನ' ಆಹಾರ, ನಿದ್ರ, ಭಯ ಮತ್ತು ಮೈಥುನ ಯುಕ್ತ ವಿಷಯಗಳಲ್ಲಿ ಆಸಕ್ತವಾಗಿ ನಿರತವಾಗಿದೆ. ಜೀವಾವಸ್ಥೆಯ ಸ್ವಭಾವ ಕ್ರೂರ ಅಕ್ರೂರ.

ಜ್ಞಾನಾವಸ್ಥೆಯ ಇಕಾಯಿಗಳಿಗೆ, ಮೇಲೆ ವರ್ಣಿತ ಮೂರು ಅವಸ್ಥೆಗಳ ಕ್ರಿಯೆ, ಸ್ವಭಾವ, ವಿಷಯ ತಥಾ ದೃಷ್ಟಿ ಸಹಿತ ವಿತ್ತೇಷಣ, ಪುತ್ರೇಷಣ ಹಾಗು ಲೋಕೇಷಣದಿಂದ ಯುಕ್ತ ವ್ಯವಹಾರ ಮಾಡುತ್ತಾ ಧೀರತೆ, ವೀರತೆ ಹಾಗು ಉದಾರತೆ ಪೂರ್ಣ ಆಚರಣೆಯಿಂದ ಜ್ಞಾನ, ವಿವೇಕ ಹಾಗು ವಿಜ್ಞಾನದ ಅಧ್ಯಯನ ಮತ್ತು ಪ್ರಯೋಗದ ಅವಸರ ಪ್ರಾಪ್ತವಾಗಿದೆ ಇದರ ಪರಿಣತಿ ಪೂರ್ಣತೆ ಹಾಗು ಅಪೂರ್ಣತೆಯ ಆಧಾರದ ಮೇಲೆಯೇ ಮಾನವೀಯ ಅಥವಾ ಅಮಾನವೀಯ ದೃಷ್ಟಿಯಿದೆ.

35

ದೀರತೆ - ನ್ಯಾಯದ ಪ್ರತಿ ನಿಷ್ಠೆ ಹಾಗು ದೃಢತೆಯೇ ದೀರತೆ

ವೀರತೆ - ಮತ್ತವರಿಗೆ ನ್ಯಾಯವನ್ನು ಉಪಲಬ್ಧ ಪಡಿಸುವುದರಲ್ಲಿ ತಮ್ಮ ಬೌದ್ಧಿಕ ಹಾಗು ಭೌತಿಕ ಶಕ್ತಿಗಳನ್ನು ನಿಯೋಜಿತ ಮಾಡುವ ಪ್ರವೃತ್ತಿಯೇ ವೀರತೆ.

ಉದಾರತ - ತಮ್ಮ ಸುಖ ಸೌಕರ್ಯಗಳನ್ನು ಅರ್ಥಾತ್ ತನ, ಮನ, ಧನವನ್ನು ಪ್ರಸನ್ನತೆಪೂರ್ವಕ ಮತ್ತವರಿಗೆ ಉಪಯೋಗಿತ, ಸದುಪಯೋಗಿತ ವಿಧಿಯಿಂದ ನಿಯೋಜಿತ ಮಾಡುವ ಪ್ರವೃತ್ತಿಯೇ ಉದಾರತ.

* ಜ್ಞಾನ, ವಿವೇಕ ಹಾಗು ವಿಜ್ಞಾನದ ಅಧ್ಯಯನ ಹಾಗು ಪ್ರಯೋಗ ಕ್ರಮದಲ್ಲಿಯೇ ಮಾನವ ಭ್ರಾಂತ, ಭ್ರಾಂತಾಭ್ರಾಂತ ತಥಾ ನಿರ್ಭ್ರಾಂತ ಸ್ಥಿತಿಯಲ್ಲಿ ಸ್ಪಷ್ಟನಾಗುತ್ತಾನೆ.

ಸೃಷ್ಟಿಯಲ್ಲಿ ಕ್ರಿಯೆ ಅನಂತವಾಗಿದೆ ಹಾಗು ವ್ಯಾಪಕ ಸತ್ಕಾರದಲ್ಲಿ ಸಂಪೂರ್ಣ ಸೃಷ್ಟಿ ಸಂವೃತ್ತವಾಗಿದೆ.

* ಪ್ರೇರಿತವಾಗಿರುವ ಫಲಸ್ವರೂಪವೇ ಸಮಸ್ತ ಪದಾರ್ಥ ಶ್ರಮದಲ್ಲಿ ನಿರತವಾಗಿದೆ. ಶ್ರಮವಿಲ್ಲದೆ ಕಾರ್ಯಕಲಾಪ ಫಲ ಪರಿಣಾಮದಲ್ಲಿ ಹಾಸ ಹಾಗು ವಿಕಾಸ ಸಿದ್ಧವಾಗುವುದಿಲ್ಲ.

ಆದ್ದರಿಂದ

ಪದಾರ್ಥಾವಸ್ಥೆ + ಶ್ರಮ = ಪ್ರಾಣಾವಸ್ಥೆ

ಪ್ರಾಣಾವಸ್ಥೆ + ಶ್ರಮ = ಜೀವಾವಸ್ಥೆ

ಜೀವಾವಸ್ಥೆ + ಶ್ರಮ = ಭ್ರಮಿತ ಜ್ಞಾನಾವಸ್ಥೆ

ಭ್ರಮಿತ ಜ್ಞಾನಾವಸ್ಥೆ + ಶ್ರಮ = ವಿಶ್ವಾಮ ಅರ್ಥಾತ್ ಸಹ-ಅಸ್ತಿತ್ವದಲ್ಲಿ ಅನುಭೂತಿ

ಶ್ರಮ - ಶ್ರಮದ ತಾತ್ಪರ್ಯ ಅಧಿಕ ಉನ್ನತ ಅರ್ಥಾತ್ ಯಥಾಸ್ಥಿತಿಗಿಂತ ಅಧಿಕ ಉನ್ನತ ಯಥಾಸ್ಥಿತಿ. ಇಂತಹ ಯಥಾಸ್ಥಿತಿ ವಿಕಾಸ ಕ್ರಮ, ಇದು ಭೌತಿಕ - ರಾಸಾಯನಿಕ ವಸ್ತುಗಳರೂಪದಲ್ಲಿದೆ. ವಿಕಾಸ ಚೈತನ್ಯ ಪದ ಅಥವಾ ಜೀವನ ಪದ ರೂಪದಲ್ಲಿ ಅಧ್ಯಯನ ಸುಲಭವಾಗಿದೆ. ಇಂತಹ ಜೀವನ ಜಾಗೃತಿ ಕ್ರಮ, ಜಾಗೃತಿಯ ರೂಪದಲ್ಲಿ ಅಧ್ಯಯನ ಬೋಧ ಹಾಗು ಅನುಭವಗಮ್ಯವಾಗಿದೆ. ಅನುಭವಗಮ್ಯದ ಅರ್ಥ ವ್ಯವಹಾರ ಪರಂಪರೆಯಲ್ಲಿ ಪ್ರಮಾಣಿತವಾಗಿರುವುದು.

36

★ ಶ್ರಮದ ಕ್ಷೋಭವೇ ವಿಶ್ವಾಮದ ತೃಷೆ ಏಕೆಂದರೆ ಜ್ಞಾನಾವಸ್ಥೆಯಲ್ಲಿ 'ಸಮಸ್ತ ಶ್ರಮ' ವಿಶ್ವಾಮ ಸಹಜ ಗಂತವ್ಯ, ಯತಾಸ್ಥಿತಿ ಮತ್ತು ಅದರ ನಿರಂತರತೆಗಾಗಿ.

“ಸರ್ವ ಶುಭವಾಗಲಿ”

37

ಅಧ್ಯಾಯ - ನಾಲ್ಕು

ಮಾನವ ಸಹಜ ಪ್ರಯೋಜನ

ವಿಶ್ವಾಮಕ್ಕಾಗಿಯೇ ಈ ಪೃಥ್ವಿಯ ಮೇಲೆ ಮಾನವ ತನ್ನ ಮಹತ್ವವನ್ನು ತಿಳಿದುಕೊಳ್ಳುವ, ಗುರುತಿಸುವ ಪ್ರಯಾಸ ಹಾಗು ಪ್ರಯೋಗದಲ್ಲಿ ನಿರತನಾಗಿದ್ದಾನೆ.

ಒಬ್ಬನಿಗಿಂತ ಅಧಿಕ ಮಾನವ ಏಕತ್ವವಾಗುವುದಕ್ಕೆ ಪರಿವಾರ, ಸಮುದಾಯ ಹಾಗು ಅಖಂಡ ಸಮಾಜ ಎಂದು ಸಂಜ್ಞೆ. ಜಾಗೃತ ಮಾನವ ಪರಂಪರೆಯಲ್ಲಿ ಸಾರ್ವಭೌಮ ವ್ಯವಸ್ಥೆಪೂರ್ವಕ ಅಖಂಡ ಸಮಾಜ ಪ್ರಮಾಣಿತವಾಗುತ್ತದೆ.

* ಏಕಾಂಗಿಯಾಗಿ ಮಾನವನ ಯಾವುದೇ ಕಾರ್ಯಕ್ರಮ, ವ್ಯವಹಾರ ಹಾಗು ಉತ್ಪಾದನೆ ಸಿದ್ಧವಾಗುವುದಿಲ್ಲ. ಈ ಪೃಥ್ವಿಯ ಮೇಲೆ ಮಾನವ ಅತ್ಯಂತ ವಿಕಸಿತ ಇಕಾಯಿಯಾಗಿದ್ದಾನೆ. ಇವನಿಗಿಂತ ವಿಕಸಿತ ಇಕಾಯಿ ಈ ಪೃಥ್ವಿಯ ಮೇಲೆ ಪರಿಲಕ್ಷಿತವಾಗಿಲ್ಲ. ಮಾನವ ವಿಕಸಿತ ಇಕಾಯಿಯೆಂದು ಸಿದ್ಧವಾಗಿದ್ದಾನೆ ಏಕೆಂದರೆ -

1.ಅವನು ಮಾನವೇತ್ತರ ಸೃಷ್ಟಿಯ ಉಪಯೋಗ, ಸದುಪಯೋಗ, ಶೋಷಣೆ ಹಾಗು ಪೋಷಣೆಯಲ್ಲಿ ಸಕ್ಷಮನಾಗಿದ್ದಾನೆ.

2.ಮಾನವ ತಥಾ ಮಾನವೇತ್ತರ ಮೂರು ಸೃಷ್ಟಿಯಲ್ಲಿ ಕಂಡುಬರುವ ಗುಣ, ಸ್ವಭಾವ ಹಾಗು ಧರ್ಮದ ಜ್ಞಾತ ಮಾನವನೇಯಾಗಿದ್ದಾನೆ.

3.ಮಾನವೇತ್ತರ ಸೃಷ್ಟಿಯಲ್ಲಿ ಕಂಡುಬರುವ ಸ್ವಭಾವ, ವ್ಯವಹಾರ ಹಾಗು ಅನುಭೂತಿಯು ಮಾನವನಲ್ಲಿ ಕಂಡುಬರುತ್ತದೆ.

ಸಾಮಾಜಿಕತೆಯಿಂದ ಅವಶ್ಯಕತೆ; ಅವಶ್ಯಕತೆಯಿಂದ ಪ್ರಯೋಗ ಹಾಗು ಉತ್ಪಾದನೆ; ಪ್ರಯೋಗ ಹಾಗು ಉತ್ಪಾದನೆಯಿಂದ ಅರ್ಥೋಪಾರ್ಜನೆ; ಅರ್ಥೋಪಾರ್ಜನೆಯಿಂದ ಉಪಯೋಗ, ಸದುಪಯೋಗ ಹಾಗು ಪ್ರಯೋಜನಶೀಲತೆ; ಉಪಯೋಗ, ಪ್ರಯೋಗ ಹಾಗು ಪ್ರಯೋಜನಶೀಲತೆಯಿಂದ ವ್ಯವಹಾರಿಕತೆ; ವ್ಯವಹಾರಿಕತೆಯಿಂದ ಮಾನವೀಯತೆ ತಥಾ ಮಾನವೀಯತೆಯಿಂದ ಅಖಂಡ ಸಾಮಾಜಿಕತೆಯಿದೆ.

ಅಖಂಡತೆ - ಅಖಂಡತೆ ಸಾರ್ವಭೌಮತೆ ಸಹಜ ಸೂತ್ರ ವ್ಯಾಖ್ಯೆ ರೂಪದಲ್ಲಿ ಮಾನವನ ಪ್ರಯೋಜನ

ಸಾಮಾಜಿಕತೆ - ಸಂಪರ್ಕ ಹಾಗು ಸಂಬಂಧದ ನಿರ್ವಾಹವೇ ಸಾಮಾಜಿಕತೆ

38

ಅವಶ್ಯಕತೆ - ನಿರ್ವಾಹಕ್ಕಾಗಿ ಸಮುಚ್ಚಿತ ಸಾಧನಗಳ ಪ್ರತಿ (ಯಾವುದು ಅರಿವುಳ್ಳ ಪರಿವಾರದಲ್ಲಿ ನಿರ್ಧಾರಿತವಾಗುತ್ತದೆಯೋ) ತೀವ್ರ ಇಚ್ಛೆಯೇ ಅವಶ್ಯಕತೆಯಾಗಿದೆ. ಇದು ಶರೀರದ ಪೋಷಣೆ-ಸಂರಕ್ಷಣೆ ಸಮಾಜ ಗತಿಯ ಅರ್ಥದಲ್ಲಿದೆ.

ಸಮುಚಿತ ಸಾಧನ - ಮಾನವನ ಪರಸ್ಪರತೆಯಲ್ಲಿ ವ್ಯವಹಾರ, ಪ್ರಯೋಗ ಹಾಗು ಉತ್ಪಾದನೆಯನ್ನು ಸಂತುಲಿತ, ಸಮೃದ್ಧ ಹಾಗು ಜಾಗೃತಿ ಪೂರ್ಣ ಪ್ರಮಾಣ ಪರಂಪರವಾಗಿ ನಿಯುಕ್ತ ಅವಶ್ಯಕತೆಯ ಸಾಧನಗಳಿಗೆ ಸಮುಚಿತ ಸಾಧನವೆಂದು ಸಂಜ್ಞೆ. ಶರೀರದ ಪೋಷಣೆ, ಸಂರಕ್ಷಣೆ ಹಾಗು ಸಮಾಜ ಗತಿಗಾಗಿ ಅರ್ಪಿತ, ಸಮರ್ಪಿತ ವಸ್ತುಗಳು ಸಮುಚಿತ ಸಾಧನಗಳಾಗಿವೆ.

ಪ್ರಯೋಗ - ಮಾನವನ ಅವಶ್ಯಕತೆಯ ರೂಪದಲ್ಲಿ ಪ್ರಾಕೃತಿಕ ಐಶ್ವರ್ಯದ ಮೇಲೆ ಶ್ರಮದ ನಿಯೋಜನೆಯಿಂದ ಉಪಯೋಗಿತ ಮೌಲ್ಯ ಹಾಗು ಕಲಾ ಮೌಲ್ಯವನ್ನು ಸ್ಥಾಪಿತ ಮಾಡುವುದಕ್ಕಾಗಿ ಸಫಲವಾಗುವ ತನಕ ಪ್ರಯಾಸವೇ ಪ್ರಯೋಗವಾಗಿದೆ.

ಉತ್ಪಾದನೆ - ಪ್ರಯೋಗವನ್ನು ಸಾಮಾನ್ಯೀಕೃತ ಮಾಡಲು ವಿಕಸಿತ ಕ್ರಿಯೆ ಪದ್ಧತಿಯಲ್ಲಿ ಶ್ರಮ ನಿಯೋಜನೆ ಪ್ರಕ್ರಿಯೆಗೆ ಉತ್ಪಾದನೆ ಎಂದು ಸಂಜ್ಞೆಯಿದೆ, ಇದರಲ್ಲಿ ಬಹುತಾಯ ಉತ್ಪಾದನೆಯ ಅಥವಾ ನಿರ್ಮಾಣದ ಕಾಮನೆ ಸನ್ನಿಹಿತವಾಗಿರುತ್ತದೆ

ಧನೋಪಾರ್ಜನೆ - ಪ್ರಾಕೃತಿಕ ಐಶ್ವರ್ಯದ ಮೇಲೆ ಶ್ರಮ ನಿಯೋಜನೆಯಿಂದ ಕಲೆ ಹಾಗು ಉಪಯೋಗಿತೆಯ ಸಿದ್ಧ ಮಾತ್ರಕ್ಕೆ ಧನವೆಂದು ಸಂಜ್ಞೆಯಿದೆ, ಇದನ್ನು ಕೈಗೊಳ್ಳುವುದರಿಂದ ಕೊಡುವುದು ತಥಾ ಕೊಡುವುದರಿಂದ ಕೈಗೊಳ್ಳುವುದಾಗುವುದು ಅವಶ್ಯಕವಾಗಿದೆ. ಇಂತಹ ಧನದ ಏಕತ್ರೀಕರಣ ಕ್ರಿಯೆಗೆ ಧನೋಪಾರ್ಜನೆಯೆಂದು ಸಂಜ್ಞೆಯಿದೆ. ಇದು

39

ಧನೋಪಾರ್ಜನೆಯ ಕ್ರಿಯೆಗಾಗಿ ಪರಿಭಾಷೆಯಾಗಿದೆ.

ಉಪಾರ್ಜನೆಯ ಅರ್ಥವೇ ಉಪಾಯದಿಂದ

ಮಾಡಲಾಗುವ ಅರ್ಜನೆ.

ಉಪಯೋಗ - ಉತ್ಪಾದನೆ ಹಾಗು ಸೇವೆಗಾಗಿ ನಿಯುಕ್ತ ಅರ್ಥಕ್ಕೆ

ಉಪಯೋಗವೆಂದು ಸಂಜ್ಞೆ.

ಉತ್ಪಾದನೆ - ಉತ್ಪಾದನೆ ಎರಡು ಭೇದದಿಂದಾಗುತ್ತದೆ - ಸಾಮಾನ್ಯ

ಅಕಾಂಕ್ಷೆಯಿಂದ ಅಥವಾ ಮಹತ್ವಾಕಾಂಕ್ಷೆಯಿಂದ.

ಸಾಮಾನ್ಯ ಆಕಾಂಕ್ಷೆ - ಆಹಾರ, ಆವಾಸ ಹಾಗು ಅಲಂಕಾರದಲ್ಲಿ ನಿಯುಕ್ತ

ವಸ್ತುಗಳನ್ನು ಸಾಮಾನ್ಯ ಆಕಾಂಕ್ಷೆ ಎಂದು ಸಂಜ್ಞೆ.

ಮಹತ್ವಾಕಾಂಕ್ಷೆ - ದೂರಗಮನ, ದೂರದರ್ಶನ ತಥಾ ದೂರಶ್ರವಣಕ್ಕಾಗಿ

ನಿಯುಕ್ತ ವಸ್ತುಗಳನ್ನು ಮಹತ್ವಾಕಾಂಕ್ಷೆ ಎಂದು

ಸಂಜ್ಞೆಯಿದೆ.

ಸದುಪಯೋಗ - ಪರಿವಾರ ಮೂಲಕ ಸ್ವರಾಜ್ಯ ವ್ಯವಸ್ಥೆಯಲ್ಲಿ

ಭಾಗವಹಿಸುತ್ತಾ ತನ, ಮನ, ಧನ ರೂಪಿ ಅರ್ಥದ

ನಿಯೋಜನೆಯೇ ಸದುಪಯೋಗ.

ಪ್ರಯೋಜನೆ - ಜಾಗೃತಿ ಪೂರ್ಣತೆಯಿಂದ ಅಖಂಡ ಸಮಾಜ

ಸಾರ್ವಭೌಮ ವ್ಯವಸ್ಥೆಯಲ್ಲಿ ತನ, ಮನ, ಧನದ

ನಿಯೋಜನೆ, ಪ್ರಯೋಜನೆಯಿದೆ.

ವ್ಯವಹಾರಿಕತೆ - ಮಾನವೀಯತೆ ಪೂರ್ಣ ಆಚರಣೆಗೆ

ವ್ಯವಹಾರಿಕತೆ ಎಂದು ಸಂಜ್ಞೆ.

ಅಖಂಡ ಸಾಮಾಜಿಕತೆಯ ಅಧ್ಯಯನ ಮಾನವೀಯ ಸ್ವಭಾವ, ವಿಷಯ ಹಾಗು ದೃಷ್ಟಿಯ

ಆಧಾರದ ಮೇಲೆಯೆಯಿದೆ, ಇದರ ಸಂರಕ್ಷಣೆಗಾಗಿ ಸಾಮಾಜಿಕ ವ್ಯವಸ್ಥೆಯಿದೆ.

ಪೂರ್ವೋಕ್ತ ಆಧಾರದ ಮೇಲೆ ಅಧ್ಯಯನ ಮಾಡಿದ ನಂತರ ಮಾನವ ಪ್ರವೃತ್ತಿಗಳು ಒಟ್ಟು

ಮೂರು ಪ್ರಕಾರದಲ್ಲಿ ಗಣ್ಯವಾಗಿದೆ -

೧.ಅಮಾನವೀಯತೆ ೨. ಮಾನವೀಯತೆ ೩. ಅತಿಮಾನವೀಯತೆ

40

✠ ಅಮಾನವೀಯ ಸ್ವಭಾವ, ವಿಷಯ ಹಾಗು ದೃಷ್ಟಿಯ ಸಂರಕ್ಷಣೆ, ಸಂವರ್ಧನೆ ಹಾಗು ಪ್ರೋತ್ಸಾಹನೆ ನೀಡುವುದಕ್ಕಾಗಿ ಮಾಡಲಾಗುವ ವ್ಯವಸ್ಥೆ ಅಮಾನವೀಯ ಅಥವಾ ಪಾಶವಿಕ ಪ್ರವೃತ್ತಿ ವ್ಯವಸ್ಥೆಯಾಗಿದೆ.

✠ ಅಮಾನವೀಯ ಸ್ವಭಾವ - ಹೀನತೆ, ದೀನತೆ ಹಾಗು ಕ್ರೂರತೆಯೇ ಅಮಾನವೀಯ ಸ್ವಭಾವ

✠ ಅಮಾನವೀಯ ವಿಷಯ - ಆಹಾರ, ನಿದ್ರಾ, ಭಯ ಹಾಗು ಮೈಥುನವೇ ಅಮಾನವೀಯ ವಿಷಯ

✠ ಅಮಾನವೀಯ ದೃಷ್ಟಿ - ಪ್ರಿಯಾಪ್ರಿಯ, ಹಿತಾಹಿತ ಹಾಗು ಲಾಭಾಲಾಭವೇ ಅಮಾನವೀಯ ದೃಷ್ಟಿ

✠ ಪ್ರಿಯ - ಇಂದ್ರಿಯ ಸುಖ ಸಾಪೇಕ್ಷ ಕ್ರಿಯೆಗೆ ಪ್ರಿಯವೆಂದು ಸಂಜ್ಞೆಯಿದೆ.

✠ ಹಿತ - ಶರೀರ ಸ್ವಾಸ್ಥ್ಯ ವರ್ಧನೆ ಹಾಗು ಪೋಷಣೆ ಕ್ರಿಯೆಗೆ ಹಿತವೆಂದು ಸಂಜ್ಞೆಯಿದೆ.

✠ ಲಾಭ - ಶ್ರಮಗಿಂತ ಅಧಿಕ ದ್ರವ್ಯ ಪಡೆಯುವ ಕ್ರಿಯೆಗೆ ಲಾಭ ಅಥವಾ ಲಘು ಮೌಲ್ಯದ ಬದಲಾಗಿ ಗುರು ಮೌಲ್ಯ ಆದಾಯವೇ ಲಾಭ.

✠ ಹೀನತೆ - ವಿಶ್ವಾಸಘಾತವೇ ಹೀನತೆ

✠ ವಿಶ್ವಾಸಘಾತ - ಯಾರಿಂದ ಯಾವ ಕ್ರಿಯೆಯ ಅಪೇಕ್ಷೆಯಿದೆಯೋ, ಅದರ ವಿಪರೀತ ಆಚರಣ ಮಾಡಲಾಗುವುದೇ ವಿಶ್ವಾಸಘಾತ.

✠ ಛಲ - ವಿಶ್ವಾಸಘಾತದ ಅನಂತರವೂ ಅದರ ಆಭಾಸವಾಗದಿರುವಂತಹ ವಿಶ್ವಾಸಘಾತಕ್ಕೆ ಛಲವೆಂದು ಸಂಜ್ಞೆ.

✠ ಕಪಟ - ವಿಶ್ವಾಸಘಾತದ ಅನಂತರ ಅದರ ಪ್ರಕಟ ಅಥವಾ

41

ಸ್ವಪ್ನವಾಗುವ ಸ್ಥಿತಿಯಲ್ಲಿ ವಿಶ್ವಾಸಘಾತಕ್ಕೆ ಕಪಟವೆಂದು ಸಂಜ್ಞೆ.

ದಂಭ - ಆಶ್ವಾಸನೆ ನೀಡುವ ನಂತರವೂ ಮಾಡಲಾಗುವ ವಿಶ್ವಾಸಗಾತಕ್ಕೆ ದಂಭವೆಂದು ಸಂಜ್ಞೆ.

ಪಾಖಂಡ - ತೋರಿಕೆಯಿಂದ ಮಾಡಲಾಗುವ ವಿಶ್ವಾಸಘಾತಕ್ಕೆ ಪಾಖಂಡವೆಂದು ಸಂಜ್ಞೆ.

ದೀನತೆ - ತಮ್ಮ ದುಃಖವನ್ನು ಇನ್ನೊಬ್ಬರಿಂದ ದೂರ ಪಡಿಸುವುದಕ್ಕಾಗಿರುವ ಆಶ್ರಯ ಪ್ರವೃತ್ತಿಗೆ ದೀನತೆಯೆಂದು ಸಂಜ್ಞೆ.

* ದೀನತೆ ಅಭಾವಜನ್ಯ ಅಥವಾ ಅಕ್ಷಮತಾಜನ್ಯ ಎರಡು ಪ್ರಕಾರದಲ್ಲಿರುತ್ತದೆ.

ಅಭಾವ - ಉತ್ಪಾದನೆಗಿಂತ ಅಧಿಕ ಉಪಭೋಗ ಹಾಗು ಉಪಯೋಗದ ಇಚ್ಛೆಯೇ ಅಭಾವ. ಆಲಸ್ಯ, ಪ್ರಮಾದ, ಅಜ್ಞಾನ, ಅಪ್ರಾಪ್ತಿ, ಪ್ರಾಕೃತಿಕ ಪ್ರಕ್ಷೋಪ ತಥಾ ಸಾಮಾಜಿಕ ಅಸಹಯೋಗ ಅಭಾವದ ಕಾರಣವಾಗಿದೆ.

ಅಕ್ಷಮತೆ - ಇಚ್ಛೆ ಅನುಸಾರ ಬೌದ್ಧಿಕ ಹಾಗು ಕಾರ್ಯ- ವ್ಯವಹಾರ ಕ್ರಿಯೆಯ ಸಂಪಾದನೆ ಮಾಡಲಾಗದೇಯಿರುವುದೇ ಅಕ್ಷಮತೆ. ಅಜಾಗೃತಿ ಹಾಗು ರೋಗವೇ ಅಕ್ಷಮತೆಯ ಕಾರಣ.

ಕ್ರೂರತೆ - ಸ್ವ-ಅಸ್ತಿತ್ವವನ್ನು ಕಾಪಾಡುವುದಕ್ಕಾಗಿ ಬಲಪೂರ್ವಕ ಮತ್ತೊಬ್ಬರ ಅಸ್ತಿತ್ವವನ್ನು ನಾಶಮಾಡುವ ವೈಚಾರಿಕ ಪ್ರವೃತ್ತಿ ತಥಾ ಶೋಷಣೆ ಕಾರ್ಯಕ್ಕೆ ಕ್ರೂರತೆಯೆಂದು ಹೇಳುತ್ತೇವೆ.

* ಅಪರಾಧ ಹಾಗು ಪ್ರತಿಕಾರ ಕ್ರೂರತೆಯ ಎರಡು ಭೇದ

42

ಅಪರಾಧಾತ್ಮಕ ಕ್ರೂರತೆ ಹೆಂಗೆಯ ರೂಪದಲ್ಲಿ ವ್ಯಕ್ತ ತಥಾ ಪ್ರತಿಕಾರಾತ್ಮಕ ಕ್ರೂರತೆ ಪ್ರತಿಹಿಂಸೆಯ ರೂಪದಲ್ಲಿ ವ್ಯಕ್ತವಾಗಿದೆ.

ಮಾನವೀಯ ಸ್ವಭಾವ, ವಿಷಯ ಹಾಗು ದೃಷ್ಟಿಯನ್ನು ಸಂರಕ್ಷಿಸುವ, ಸಂವರ್ಧಿಸುವ ಹಾಗು ಪ್ರೋತ್ಸಾಹಿಸುವ ವ್ಯವಸ್ಥೆ ಮಾನವೀಯ ವ್ಯವಸ್ಥೆಯಾಗಿದೆ.

ಮಾನವೀಯ ಸ್ವಭಾವ - ಧೀರತೆ, ವೀರತೆ, ಉದಾರತೆ, ದಯೆ, ಕೃಪಾ, ಕರುಣೆಯೇ ಮಾನವೀಯ ಸ್ವಭಾವ.

ಮಾನವೀಯ ವಿಷಯ - ವಿತ್ತೇಷಣ, ಪುತ್ರೇಷಣ ಹಾಗು ಲೋಕೇಷಣವೇ ಮಾನವೀಯ ವಿಷಯ

ಮಾನವೀಯ ದೃಷ್ಟಿ - ನ್ಯಾಯಾನ್ಯಾಯ, ಧರ್ಮಾಧರ್ಮ, ಸತ್ಯಾಸತ್ಯವೇ ಮಾನವೀಯ ದೃಷ್ಟಿ

ನ್ಯಾಯ - ಮಾನವೀಯತೆಯ ಸಂರಕ್ಷಣಾತ್ಮಕ ನೀತಿಪೂರ್ವಕ ಮಾಡಲಾಗುವ ವ್ಯವಹಾರ ವ್ಯವಸ್ಥೆಯೇ ನ್ಯಾಯ.

ಅತಿಮಾನವೀಯ ಸ್ವಭಾವ, ವಿಷಯ ಹಾಗು ದೃಷ್ಟಿಯ ಜಾಗೃತಿಗಾಗಿ ಸಮುಚಿತ ಅವಸರ ಹಾಗು ಸಾಧನಗಳನ್ನು ನಿಯೋಜಿತ ಮಾಡುವ ವ್ಯವಸ್ಥೆ ಹಾಗು ವೈಯಕ್ತಿಕ ಪ್ರಯಾಸವನ್ನು ಅತಿಮಾನವೀಯ ಸಾಮಾಜಿಕ ವ್ಯವಸ್ಥೆಯೆಂದು ಹೇಳುತ್ತೇವೆ. ಅಖಂಡ ಸಮಾಜ, ಪರಿವಾರ ಮೂಲಕ ಸ್ವರಾಜ್ಯ ವ್ಯವಸ್ಥೆ ಹಾಗು ಪ್ರತ್ಯೇಕ ಮಾನವ ಸಹಜ ಪ್ರಮಾಣ ಪರಂಪರೆಯೇ ಅತಿಮಾನವೀಯ ಸಾಮಾಜಿಕ ವ್ಯವಸ್ಥೆಯಾಗಿದೆ.

ಅತಿಮಾನವೀಯ ಸ್ವಭಾವ - ದಯೆ, ಕೃಪಾ ಮತ್ತು ಕರುಣೆಯೇ ಅತಿಮಾನವೀಯ ಸ್ವಭಾವವಾಗಿದೆ.

ದಯೆ - ಯಾರಲ್ಲಿ ಪಾತ್ರತೆಯಿದೆಯೋ, ಆದರೆ ಅದರ ತಕ್ಕಂತೆ ವಸ್ತು ಉಪಲಬ್ಧವಿಲ್ಲವೋ, ಇಂತಹ ಸ್ಥಿತಿಯಲ್ಲಿ ವಸ್ತುವನ್ನು ಉಪಲಬ್ಧ ಪಡಿಸುವುದಕ್ಕಾಗಿ ಮಾಡಿರುವ ನಿಯುಕ್ತಿಯೇ ದಯೆ.

ಕೃಪಾ - ವಸ್ತು ಸಮೀಪದಲ್ಲಿದೆ ಆದರೆ ಅದಕ್ಕೆ ತಕ್ಕಂತೆ

43

ಪಾತ್ರತೆ ಅರ್ಥಾತ್ ಮಾನವೀಯತೆಪೂರ್ಣ ದೃಷ್ಟಿಯಿಲ್ಲ, ಅವರಿಗೆ ಪಾತ್ರತೆ ಉಪಲಬ್ಧ ಪಡಿಸುವ ನಿಯುಕ್ತಿಯೇ ಕೃಪಾ.

▫ ಕರುಣೆ - ಯಾರಲ್ಲಿ ಪಾತ್ರತೆಯಿಲ್ಲವೋ ಮತ್ತು ವಸ್ತುವೂ ಸಮೀಪದಲ್ಲಿಲ್ಲವೋ, ಅವರಿಗೆ ಅದನ್ನು ಉಪಲಬ್ಧ ಪಡಿಸುವ ನಿಯುಕ್ತಿಯೇ ಕರುಣೆ.

▫ ಅತಿಮಾನವೀಯ ವಿಷಯ - ಸತ್ಯ (ಸಹ-ಅಸ್ತಿತ್ವ ರೂಪಿ ಪರಮ ಸತ್ಯ)

▫ ಅತಿಮಾನವೀಯ ದೃಷ್ಟಿ - ಕೇವಲ ಸತ್ಯ.

ನ್ಯಾಯ ಹಾಗು ಅನ್ಯಾಯ ಸಹಿತ ಲಕ್ಷ್ಯ ಭೇದದಿಂದ ಸಂಪರ್ಕ ಸಫಲ ಹಾಗು ಅಸಫಲ ಸಿದ್ಧವಾಗುತ್ತದೆ, ಇದರಿಂದ ಸಾಮಾಜಿಕತೆಯ ವಿಕಾಸ ಹಾಗು ಹಾಸ ಸಿದ್ಧವಾಗುತ್ತದೆ.

▫ ಸಂಪರ್ಕ - ಯಾವ ಪರಸ್ಪರತೆಯಲ್ಲಿ ಪ್ರತ್ಯಾಶೆಗಳು ಐಚ್ಛಿಕ ರೂಪದಲ್ಲಿ ನಿಹಿತವಾಗಿವಿಯೋ, ಇಂತಹ ಮಿಲನಕ್ಕೆ ಸಂಪರ್ಕವೆಂದು ಸಂಜ್ಞೆ.

* ಐಹಿಕ ಉದ್ದೇಶದಿಂದ (ಜೀವ ಚೇತನ ವಶ) ಸಂಬಂಧವಿಲ್ಲ. ಸಂಬಂಧ ಆಮುಷ್ಟಿಕ ಉದ್ದೇಶಪೂರ್ವಕವೇ ಇದೆ. (ವಿಕಸಿತ ಚೇತನ, ಮಾನವ, ದೇವ ಮಾನವ, ದಿವ್ಯ ಮಾನವ ಸಹಜ ಪ್ರಮಾಣ) ಇದರ ನಿರ್ವಾಹವೇ ಜಾಗೃತಿ.

▫ ಸಂಬಂಧ - ಯಾವ ಪರಸ್ಪರತೆಯಲ್ಲಿ ಪ್ರತ್ಯಾಶೆಗಳು ಪೂರ್ಣತೆಯ ಅರ್ಥದಲ್ಲಿ ಪೂರ್ವನಿಶ್ಚಿತವಾಗಿರುತ್ತವೆಯೋ, ಇಂತಹ ಮಿಲನಕ್ಕೆ ಸಂಬಂಧವೆಂದು ಸಂಜ್ಞೆ

ಸಾಮಾಜಿಕತೆಯ ನಿರ್ವಾಹ ಕರ್ತವ್ಯ ಹಾಗು ನಿಷ್ಠೆಯಿಂದಾಗುತ್ತದೆ, ಇದರಿಂದ ಅಖಂಡತೆ - ಸಾರ್ವಭೌಮತೆ ರೂಪದಲ್ಲಿ ಸಾಮಾಜಿಕತೆಯ ವಿಕಾಸ ಅನ್ಯಥಾ ಹಾಸವಿದೆ.

▫ ನಿರ್ವಾಹ - ಸಮಾಧಾನ, ಸಮೃದ್ಧಿ ಸಹಿತ ಉಪಯೋಗ, ಸದುಪಯೋಗ ಹಾಗು ಪ್ರಯೋಜನೆಗಳನ್ನು ಪ್ರಮಾಣಿತ ಮಾಡುವುದು ಅಥವಾ ಪರಸ್ಪರ ಪೂರಕ ಸಿದ್ಧವಾಗುವುದು.

▫ ಕರ್ತವ್ಯ - ಮಾನವೀಯತೆ ಪೂರ್ಣ ವಿಧಿಯಿಂದ ಮಾಡಲು ಯೋಗ್ಯ ಕಾರ್ಯ - ವ್ಯವಹಾರ ಹಾಗು ಮೌಲ್ಯ ನಿರ್ವಾಹ ಕ್ರಿಯೆಯೇ ಕರ್ತವ್ಯ

▫ ನಿಷ್ಠೆ - ಕರ್ತವ್ಯ ಹಾಗು ದಾಯಿತ್ವ ನಿರ್ವಾಹದ ನಿರಂತರತೆಯೇ ನಿಷ್ಠೆ.

44

★ ಸಾಮಾಜಿಕತೆಯ ನಿರ್ವಾಹಕ್ಕಾಗಿ ಸಮಾಧಾನ, ಸಮೃದ್ಧಿ ಅವಶ್ಯಕವಾಗಿದೆ, ಇದಕ್ಕೆ ಬೌದ್ಧಿಕ ಹಾಗು ಭೌತಿಕ ಸಾಧನವಿದೆ.

□ ಸಾಧನ - ಸಾಧಕನಿಗೆ ಅಥವಾ ಸಾಧ್ಯಕ್ಕಾಗಿ ಅವಶ್ಯಕತೆಯ ವಸ್ತು ಹಾಗು ಪಾತ್ರತೆಗೆ ಸಾಧನವೆಂದು ಸಂಜ್ಞೆ, ಇದು ಪ್ರತ್ಯೇಕ ಸಾಧಕನಲ್ಲಿ ಅಪೇಕ್ಷಣೀಯವಾಗಿದೆ.

□ ಬೌದ್ಧಿಕ ಸಾಧನ - ಜಾಗೃತಿ ಸಹಜ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯ ರೂಪದಲ್ಲಿ ಬೋದ್ಧಿಕ ಸಾಧನವಿದೆ.

□ ಭೌತಿಕ ಸಾಧನ - ಸಾಮಾನ್ಯ ಹಾಗು ಮಹತ್ವಾಕಾಂಕ್ಷೆಗಳಿಗಾಗಿ ಅವಶ್ಯಕತೆಯ ರಚನೆ ಹಾಗು ವಸ್ತು ಉತ್ಪಾದನೆಯ ರೂಪದಲ್ಲಿ ಭೌತಿಕ ಸಾಧನವಿದೆ.

★ ಪೂರ್ವೋಕ್ತ ಸಾಧನಗಳನ್ನು ನಿಯುಕ್ತ ಮಾಡಲು ಪ್ರಯತ್ನ, ಪ್ರಯಾಸ ಹಾಗು ವ್ಯವಸಾಯವಿದೆ (ಉತ್ಪಾದನೆ ಕ್ರಿಯೆ), ಇದರಲ್ಲಿ ಇಚ್ಛೆಯಿರುವುದು ಅವಶ್ಯಕ.

● ಯಾರು ಯಾವುದನ್ನು ಪಡೆಯಲು ತೀವ್ರ ಇಚ್ಛೆಯಿಂದ ಸಂವೇಗಿತನಾಗುತ್ತಾನೋ, ಅವನು ಅದನ್ನು ಪಡೆಯುವ ತನಕ ತೃಪ್ತನಾಗುವುದಿಲ್ಲ.

★ ಬೌದ್ಧಿಕ ಹಾಗು ಭೌತಿಕ ಸಾಧನಗಳ ನಿಯುಕ್ತಿಗಾಗಿ ಇಚ್ಛೆ, ಯಾವುದಾದರೂ ಅವಶ್ಯಕತೆಯ ಪೂರ್ತಿಗಾಗಿಯೇ ಆಗುತ್ತದೆ. ಈ ಅವಶ್ಯಕತೆ ಸ್ವಾರ್ಥ, ಪರಾರ್ಥ ಅಥವಾ ಪರಮಾರ್ಥ ಭೇದದಿಂದಾಗುತ್ತದೆ.

□ ಸ್ವಾರ್ಥ - ಸೀಮಿತ ಹಾಗು ಸಂಕೀರ್ಣ ಅರ್ಥ ನಿಯೋಜನೆ ಯೋಜನೆಗೆ ಸ್ವಾರ್ಥವೆಂದು ಸಂಜ್ಞೆ. ಇದು ಒಬ್ಬ ಮಾನವ ಅಥವಾ ಪರಿವಾರದ ವರಗೆಯೇ ಸೀಮಿತವಾಗಿರುತ್ತದೆ ಅಥವಾ ವೈಯಕ್ತಿಕ ಅಥವಾ ಪಾರಿವಾರಿಕ ಇಂದ್ರಿಯ ಸುಖ-ಸೌಕರ್ಯಗಳಿಗಾಗಿ ವಿಚಾರ ಹಾಗು ವ್ಯವಹಾರವೇ ಸ್ವಾರ್ಥ.

□ ಪರಾರ್ಥ - ಮತ್ತವರ ಸೌಕರ್ಯಗಳಿಗಾಗಿ ವಿಚಾರ, ವ್ಯವಹಾರ ಮತ್ತು ಇದರ ಪೂರ್ತಿಗೆ ಅರ್ಥ ನಿಯೋಜನೆಯ ಪ್ರಾಥಮಿಕತೆಯೇ ಪರಾರ್ಥ.

□ ಪರಮಾರ್ಥ - ಯಾವ ವಿಚಾರ ಹಾಗು ವ್ಯವಹಾರದಲ್ಲಿ ಸಮಾಧಾನ ಸಹಿತ ಸರ್ವಶುಭದ ಉಪಲಬ್ಧತೆಯಿದೆಯೋ, ಸಮಸ್ಯೆಯ ನಿರಾಕರಣೆಯಿದೆಯೋ ಮತ್ತು ಸ್ನೇಹದ ಸಂಬಂಧವಿದೆಯೋ,

45

ಇದನ್ನು ಸರ್ವ ಸುಲಭ ಮಾಡಿಸುವುದಕ್ಕಾಗಿರುವ ಅರ್ಥ ನಿಯೋಜನೆಗೆ ಪರಮಾರ್ಥವೆಂದು ಸಂಜ್ಞೆ.

ಅರ್ಥ ಕೇವಲ ಮೂರೇ ಇರುವುದು - ಮನ (ಜೀವನ), ತನ, ಧನ

ಬೌದ್ಧಿಕ ಪ್ರಯೋಗ ಹಾಗು ಪ್ರಯಾಸವಿಂದಲೇ ಬೌದ್ಧಿಕ ಸಮಾಧಾನ ತಥಾ ಭೌತಿಕ ಪ್ರಯೋಗ, ಪ್ರಯಾಸ ಹಾಗು ಉತ್ಪಾದನೆಯಿಂದ ಭೌತಿಕ ಸಮೃದ್ಧಿಯ ಉಪಲಬ್ಧತೆಯಾಗುತ್ತದೆ. ಬೌದ್ಧಿಕ ಸಮಾಧಾನ ಮತ್ತು ಭೌತಿಕ ಸಮೃದ್ಧಿ ಸಾಮಾಜಿಕತೆಯ ವಿಕಾಸಕ್ಕಾಗಿ ಸಹಾಯಕವಾಗಿದೆ.

ಭೌತಿಕ ಸಮೃದ್ಧಿಗೆ ಪ್ರಾಕೃತಿಕ ವೈಭವದ ಉಪಯೋಗ ಹಾಗು ಸದುಪಯೋಗ ಅನಿವಾರ್ಯವಾಗಿದೆ. ಖನಿಜ, ವನಸ್ಪತಿ ಮತ್ತು ಪಶು-ಪಕ್ಷಿ, ಇವು ಪ್ರಾಕೃತಿಕ ವೈಭವ.

ಪ್ರಾಕೃತಿಕ ವೈಭವದ ಉಪಯೋಗ ಮತ್ತು ಸದುಪಯೋಗಕ್ಕಾಗಿ ಶ್ರಮ ರೂಪಿ ಅರ್ಥದ ನಿಯೋಜನೆ ಅವಶ್ಯಕವಾಗಿದೆ.

¤ ಅರ್ಥ - ತನ, ಮನ ಹಾಗು ಧನದ ನಿಯೋಜನೆ, ಮಾನವೀಯ ತಥಾ ಅತಿಮಾನವೀಯ ಭೇದದಿಂದ ನಿಯುಕ್ತ ಮಾಡಲು ಸಾಮಾಜಿಕತೆಯ ವಿಕಾಸವಿದೆ.

ಅಮಾನವೀಯ ಸಮುದಾಯಗಳ ಘಟನೆಯ ಮೂಲದಲ್ಲಿ ಭ್ರಮಿತ ಮಾನವರ ಹಾಗು ಬಲವಾದ ಜೀವಗಳ ಅರ್ಥಾತ್ ಕ್ರೂರತೆಯ ಭಯವಿದೆ.

ಇದೇ ರೀತಿಯಲ್ಲಿ ಮಾನವ ಸಮುದಾಯ ಘಟನೆಯ ಮೂಲದಲ್ಲಿ ಪ್ರಾಕೃತಿಕ ಭಯ, ಪಾಶ್ಚೀಯ ಭಯ ತಥಾ ಮಾನವನಲ್ಲಿ ನಿಹಿತ ಅಮಾನವೀಯತೆಯ ಭಯದಿಂದ ಮುಕ್ತವಾಗುವುದೇ ಲಕ್ಷ್ಯವಾಗಿದೆ.

ಮಾನವನಿಂದಲೇ ಸಮಸ್ತ ಪ್ರಯಾಸ ಹಾಗು ಪ್ರಯೋಗ ತೃಪ್ತಿ ಅಥವಾ ಸುಖಕ್ಕಾಗಿ ಮಾತ್ರ.

ಇಂದ್ರಿಯ (ಸಂವೇದನೆ), ಬೌದ್ಧಿಕ (ವೈಚಾರಿಕ ಸಮಾಧಾನ), ಮೌಲ್ಯ ಮೂಲಕ (ನ್ಯಾಯ) ಮತ್ತು ಲಕ್ಷ್ಯ ಮೂಲಕ (ಜಾಗೃತಿ ಸಹಜ ಪ್ರಮಾಣ) ಭೇದದಿಂದ ತೃಪ್ತಿಗಳು ಅಥವಾ ಸುಖವಿದೆ.

ಶಬ್ದ, ಸ್ಪರ್ಶ, ರೂಪ, ರಸ ಹಾಗು ಗಾಂಧೇಂದ್ರಿಯಗಳಿಂದಲೇ ಆಹಾರ, ನಿದ್ರೆ, ಭಯ ಮತ್ತು ಮೈಥುನದಿಂದಾಗುವ ಎಲ್ಲಾ ತೃಪ್ತಿಗಳು ಇಂದ್ರಿಯವಾಗಿವೆ, ಇವು ಸಾಮಯಿಕವಾಗಿರುತ್ತದೆ.

46

ವಿತ್ತೇಷಣ, ಪುತ್ರೇಷಣ, ಲೋಕೇಷಣದಿಂದ ಪ್ರಾಪ್ತ ತೃಪ್ತಿಯ ಬೌದ್ಧಿಕ ತೃಪ್ತಿ ಸಂಜ್ಞೆಯಿದೆ, ಇದು ದೀರ್ಘಕಾಲೀನ ಅಥವಾ ದೀರ್ಘ ಪರಿಣಾಮಿಯಾಗಿರುತ್ತದೆ.

ಸಂಬಂಧ, ಮೌಲ್ಯ, ಮೌಲೀಕರಣ, ಉಭಯ ತೃಪ್ತಿಯೇ ಮೌಲ್ಯ ಮೂಲಕ ವಿಧಿಯಿಂದ ಬಾಳುವ ಪ್ರಮಾಣವಾಗಿದೆ. ಇದರಲ್ಲಿ ನಿರಂತರ ಸುಖದ ಸಂಭವನೀಯತೆ ಕಂಡುಬರುತ್ತದೆ.

ಮಾನವ ಲಕ್ಷ್ಯ (ಸಮಾಧಾನ, ಸಮೃದ್ಧಿ, ಅಭಯ, ಸಹ-ಅಸ್ತಿತ್ವ) ಹಾಗು ಜೀವನ ಮೌಲ್ಯದ (ಸುಖ, ಶಾಂತಿ, ಸಂತೋಷ, ಆನಂದ) ಅರ್ಥದಲ್ಲಿ ಬಾಳುವುದೇ ಲಕ್ಷ್ಯ ಮೂಲಕ ವಿಧಿಯಿಂದ ಬಾಳುವ ಪ್ರಮಾಣವಾಗಿದೆ, ಇದೇ ವಿಶ್ರಾಮ ಅಥವಾ ನಿರಂತರ ಸುಖವಾಗಿದೆ. ಪ್ರಕಟನೆ ಸುಖ ರೂಪದಲ್ಲಿದೆ, ಮೂಲದಲ್ಲಿ ಶಾಂತಿ, ಸಂತೋಷ, ಆನಂದವಿದ್ದೇಯಿರುತ್ತದೆ.

¤ ವಿತ್ತೇಷಣ - ಸದುಪಯೋಗದ ಅರ್ಥದಲ್ಲಿ ನ್ಯಾಯ ದೃಷ್ಟಿಯಿಂದ ಧನ-ಬಲ ಕಾಮನೆಯೇ ವಿತ್ತೇಷಣ.

¤ ಪುತ್ರೇಷಣ - ಪರಿವಾರ ಹಾಗು ಸಮಾಜ ವ್ಯವಸ್ಥೆಯ ಅರ್ಥದಲ್ಲಿ ಜನ-ಬಲ ಕಾಮನಕ್ಕೆ ಪುತ್ರೇಷಣ ಎಂದು ಸಂಜ್ಞೆ.

¤ ಲೋಕೇಷಣ - ಅಖಂಡ ಸಮಾಜ ವ್ಯವಸ್ಥೆಯ ಅರ್ಥದಲ್ಲಿ ನ್ಯಾಯ, ಧರ್ಮ ದೃಷ್ಟಿಯಿಂದ ಯಶಸ್ಸು-ಬಲ ಕಾಮನೆಯೇ ಲೋಕೇಷಣ

¤ ಸಮಾಧಾನ - ಹೇಗೆ ಮತ್ತು ಯಾಕೆಯ ಪೂರ್ತಿಯೇ (ಉತ್ತರ) ಸಮಾಧಾನ

¤ ವಿಶ್ರಾಮ - ಯಾವುದರಲ್ಲಿ ಶ್ರಮೆಯಿಲ್ಲವೋ ಸಮಾಧಾನವಿದೆಯೋ, ಯಾವುದರಿಂದ ಶ್ರಮೆಯಾಗುವುದಿಲ್ಲವೋ ಆ ಅನುಭೂತಿಯೇ ವಿಶ್ರಾಮ.

ಇಚ್ಛೆಯ ಅನುಸಾರ ದ್ರವಿತವಾಗುವ ಅಂಗಕ್ಕೆ ಇಂದ್ರಿಯ, ಬೋಧ ಮಾಡುವ-ಮಾಡಿಸುವ ಅಂಗಕ್ಕೆ ಬುದ್ಧಿ, ಸಹ-ಅಸ್ತಿತ್ವದಲ್ಲಿ ಅನುಭೂತಿ ಮಾಡುವ ಜೀವನದಲ್ಲಿ ಅಂಗಭೂತ ಆತ್ಮ, ಸಮಸ್ತ ಆತ್ಮಗಳ ಆಧಾರಭೂತ ಸತ್ತಾವಿಗೆ ಅಧ್ಯಾತ್ಮ ಹಾಗು ಪರಮಾತ್ಮವೆಂದು ಸಂಜ್ಞೆ.

ಆವಶ್ಯಕತೆ ತಥಾ ಉಪಯೋಗಿತೆಯ ನಿರ್ಣಯ ಪೂರ್ವೋಕ್ತ ಮೂರು ತೃಪ್ತಿಕಾರಕ ಅಥವಾ ಸುಖಕಾರಕ ಲಕ್ಷ್ಯ ಭೇದದಿಂದ ನಿರ್ಣಯಮಾಡಲಾಗುತ್ತದೆ.

47

ಇಂದ್ರಿಯ ತೃಪ್ತಿ ಕ್ಷಣಿಕ, ಬೌದ್ಧಿಕ ತೃಪ್ತಿ ದೀರ್ಘ ಪರಿಣಾಮಿತ ತಥಾ ಅನುಭವ (ಲಕ್ಷ್ಮಿ ಮೂಲಕ) ತೃಪ್ತಿ ನಿತ್ಯ ಅಥವಾ ಅಪರಿಣಾಮಿ ಸಿದ್ಧವಾಗುತ್ತದೆ.

ಪ್ರಿಯಾಪ್ರಿಯ, ವಿಷಯ ಸಾಪೇಕ್ಷ; ಹಿತಾಹಿತ, ಶರೀರ ಸಾಪೇಕ್ಷ; ಲಾಭಾಲಾಭ, ವಸ್ತು ಹಾಗು ಸೇವೆ ಸಾಪೇಕ್ಷ; ನ್ಯಾಯಾನ್ಯಾಯ, ವ್ಯವಹಾರ ಸಾಪೇಕ್ಷ; ಧರ್ಮಧರ್ಮ, ಸಮಾಧಾನ ಸಾಪೇಕ್ಷ ತಥಾ ಸತ್ಯಾಸತ್ಯ, ಸಹ-ಅಸ್ತಿತ್ವದಲ್ಲಿ ಅನುಭವ ಸಾಪೇಕ್ಷ ಪದ್ಧತಿಯಿಂದ ಸ್ಪಷ್ಟವಾಗುತ್ತದೆ.

* ಪ್ರಿಯ ವಿಷಯ ಪ್ರಾಪ್ತವಾಗುವುದರಿಂದ ಕ್ಷಣಿಕ ತೃಪ್ತಿಯಾಗುತ್ತದೆ. ಅಪ್ರಿಯ ವಿಷಯ ಪ್ರಾಪ್ತವಾಗುವುದರಿಂದ ಇಂದ್ರಿಯ ತೃಪ್ತಿಯಾಗುವುದಿಲ್ಲ.

* ಹೃದಯ ತೃಪ್ತಿಯಾದನಂತರ ಹಿತ ತಥಾ ಸ್ವಾಸ್ಥ್ಯ ಲಾಭವಾಗುತ್ತದೆ. ಹೃದಯದ ಅತ್ಯಪ್ತಿಯಾಗಿರುವುದರಿಂದ ಅಹಿತ ತಥಾ ಸ್ವಾಸ್ಥ್ಯದ ಲಾಭವಾಗುವುದಿಲ್ಲ.

ಇಂದ್ರಿಯ ತೃಪ್ತಿಯು ಸಾಮಯಿಕ ಪ್ರತಿಕ್ರಿಯೆಯಾಗಿದೆ.

□ ತೃಪ್ತಿ - ಆಂದೋಲನಗಳಿಂದ ಮುಕ್ತ ಕ್ರಿಯೆಯೇ ತೃಪ್ತಿ

□ ಆಂದೋಲನ - ಶರೀರವಿರುವ ತನಕ ಹೃದಯದ ಸಂವರ್ಧನೆ ತಥಾ ಸಂರಕ್ಷಣೆಯ ಅಕ್ಷುಣ್ಣತೆ ಇದರ ಕ್ರಿಯೆ ಹಾಗು ಗತಿಯ ಸಂತುಲನದಿಂದ ಕಾಪಾಡಿರುತ್ತದೆ, ಈ ಕ್ರಿಯೆ ಹಾಗು ಗತಿ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದೇ ಆಂದೋಲನ

* ಇಂದ್ರಿಯ ತೃಪ್ತಿಯಿಂದ ಹೃದಯ ತೃಪ್ತಿ ಆವಶ್ಯಕವಿಲ್ಲ, ಆದರೆ ಹೃದಯ ತೃಪ್ತಿಯಿಂದ ಇಂದ್ರಿಯ ತೃಪ್ತಿಯಾಗುತ್ತದೆ.

ಲಘು ಮೌಲ್ಯದ ಬದಲು ಗುರು ಮೌಲ್ಯದ ಆದಾಯವೇ (ಪ್ರಾಪ್ತಿ) ಲಾಭ.

ಲಘು ಮೌಲ್ಯದ ಬದಲು ಗುರು ಮೌಲ್ಯದ ಅರ್ಪಣೆ ಮೂರು ಪರಿಸ್ಥಿತಿಗಳಲ್ಲಾಗುತ್ತದೆ.

(೧) ವಿವಶತೆ ವಶ, (೨) ಸ್ವೇಚ್ಛೆ ವಶ ತಥಾ (೩) ಅಜ್ಞಾನ ವಶ.

ಸಮಸ್ತ ವ್ಯವಹಾರ ಕುಲ ಆರು ದೃಷ್ಟಿಗಳಲ್ಲಿ ಪರಿಲಕ್ಷಿತವಾಗಿದೆ -

(೧) ಪ್ರಿಯಾಪ್ರಿಯ (೨) ಹಿತಾಹಿತ (೩) ಲಾಭಾಲಾಭ (೪) ನ್ಯಾಯಾನ್ಯಾಯ (೫) ಧರ್ಮಧರ್ಮ (೬) ಸತ್ಯಾಸತ್ಯ

48

★ ಅಮಾನವೀಯ ದೃಷ್ಟಿಯಿಂದ ಯುಕ್ತ ಮಾನವರ ವ್ಯವಹಾರ ಮೂರು ದೃಷ್ಟಿಗಳಲ್ಲಿ ಮಾತ್ರ ಯಥಾ - ಪ್ರಿಯಾಪ್ರಿಯ, ಹಿತಾಹಿತ, ಲಾಭಾಲಾಭದ ಆಶ್ರಯದಲ್ಲಿದೆ.

ಮಾನವನಿಗಾಗಿ ಆವಶ್ಯಕೀಯ ವ್ಯವಹಾರ ನ್ಯಾಯಪೂರ್ಣ ನಿಯಮಗಳ ಪಾಲನೆ ತಥಾ ಆವಶ್ಯಕೀಯ ವಿಚಾರ ಧರ್ಮಪೂರ್ಣ ನಿಯಮಗಳ ಪಾಲನೆಯಾಗಿದೆ.

ವಿಶ್ವಾಮವೇ ದುಃಖದ ನಿರ್ಮೂಲನೆ ತಥಾ ಭ್ರಮೆಯಿಂದ ಮುಕ್ತಿಯೇ ಮೋಕ್ಷ.

ಸೃಷ್ಟಿಯ ಚರಮ ಲಕ್ಷ್ಯ ವಿಶ್ವಾಮ, ಜಾಗೃತ ಮಾನವ ಪರಂಪರೆಯೇ ಇದರ ಪ್ರಮಾಣ. ಆದ್ದರಿಂದ ಪ್ರತ್ಯೇಕ ಭ್ರಮಿತ ಮಾನವನೂ ವಿಶ್ವಾಮಕ್ಕಾಗಿ ವ್ಯಾಕುಲವಾಗಿರುತ್ತಾನೆ. ಸಮಾಧಾನವೇ ವಿಶ್ವಾಮ. ಇದೇ ಅಭ್ಯುದಯ.

✠ ಸಹ-ಅಸ್ತಿತ್ವದಲ್ಲಿ ನಾಲ್ಕು ಅವಸ್ಥೆಗಳು ಮತ್ತು ನಾಲ್ಕು ಪದಗಳು ತಮ್ಮ-ತಮ್ಮ ಲಕ್ಷ್ಯಕ್ಕಾಗಿ ಮಾಡಲಾಗುವ ಕ್ರಿಯಾಕಲಾಪವೇ ಸಂಪೂರ್ಣ ಸೃಷ್ಟಿಯಾಗಿದೆ.

ಮಾನವೇತ್ತರ ಜೀವಗಳಲ್ಲಿ ಉಪಯೋಗಕ್ಕೆ ಬಂದಿರುವ ಜ್ಞಾನಕ್ಕೆ ಸಾಮಾನ್ಯ ಜ್ಞಾನವೆಂದು ಸಂಜ್ಞೆ. ಮಾನವನಿಂದ ವ್ಯವಹೃತವಾಗಿರುವುದು, ಎರಡು ವರ್ಗದಲ್ಲಿ ಪರಿಲಕ್ಷಿತವಾಗಿದೆ -

(೧)ಜ್ಞಾನ ಸಮ್ಯತ ವಿವೇಕ ಮತ್ತು (೨) ವಿಜ್ಞಾನ

ವಿವೇಕ ಮತ್ತು ವಿಜ್ಞಾನ ಸಂಪನ್ನವಾಗಿರುವ ಕಾರಣವೇ ಮಾನವ ವಿಶ್ವಾಮವನ್ನು ಗುರುತಿಸಿದ್ದಾನೆ ಹಾಗು ಅದಕ್ಕೆ ಸಮುಚಿತ ಪ್ರಯೋಗವನ್ನೂ ಮಾಡಿದ್ದಾನೆ, ಇದು ಸೃಷ್ಟಿಯ ಕಾರ್ಯದ ಉದ್ದೇಶ ಹಾಗು ಫಲಕೂಡವಾಗಿದೆ.

ಭ್ರಮಿತ ಮಾನವ ಕರ್ಮ ಮಾಡುವ ಸಮಯದಲ್ಲಿ ಸ್ವತಂತ್ರ ಹಾಗು ಫಲ ಭೋಗ ಮಾಡುವ ಸಮಯದಲ್ಲಿ ಪರತಂತ್ರವಾಗಿದ್ದಾನೆ, ಆದರೆ ಪಶು ಕರ್ಮ ಮಾಡುವ ಸಮಯವೂ ಮತ್ತು ಫಲ ಭೋಗ ಮಾಡುವ ಸಮಯವೂ ಪರತಂತ್ರವಾಗಿರುತ್ತದೆ. ಜಾಗೃತ ಮಾನವ ಕರ್ಮ ಮಾಡುವ ಸಮಯ ಸ್ವತಂತ್ರ ಹಾಗು ಫಲ ಭೋಗ ಮಾಡುವ ಸಮಯವೂ ಸ್ವತಂತ್ರನಾಗಿರುತ್ತಾನೆ.

ಕರ್ಮದ ಸ್ವತಂತ್ರತೆಯ ಫಲಸ್ವರೂಪವೇ ಮಾನವನಿಗೆ ಎಷ್ಟು ಉನ್ನತವಕಾಶವಿದೆಯೋ, ಅಷ್ಟೇ ಅವನತಾವಕಾಶವೂ ಇದೆ. ಫಲತಃ ಮಾನವ ಸಾಮಾನ್ಯತಃ ಕ್ರಮತಃ ಈಷಣಗಳು ತಥಾ ಮೋಕ್ಷದಿಂದ ವಿಶ್ವಾಮ ಪಡೆಯುವ ಪ್ರಯಾಸ ಮಾಡಿದ್ದಾನೆ. ಮೋಕ್ಷದ ತಾತ್ಪರ್ಯ

49

ಸರ್ವತೋಮುಖಿ ಸಮಾಧಾನ, ಇದೇ ಭ್ರಮೆ ಮುಕ್ತಿ. ಇದನ್ನು ಪ್ರಮಾಣಿತ ಮಾಡುವುದೇ ಜಾಗೃತಿ.

ಪೂರ್ವದಲ್ಲಿ ವರ್ಣಿಸಲಾಗಿದೆ ವಿಕಸಿತ ಇಕಾಯಿಯಲ್ಲಿ ಅವಿಕಸಿತ ಇಕಾಯಿಯ ಅಥವಾ ವಿಕಸಿತ ಸೃಷ್ಟಿಯಲ್ಲಿ ಅವಿಕಸಿತ ಸೃಷ್ಟಿಯ ಎಲ್ಲಾ ಗುಣ, ಸ್ವಭಾವ ಹಾಗು ಧರ್ಮ ವಿಲಯ ರೂಪದಲ್ಲಿರುತ್ತದೆ. ತದಾನುಸರ ಮಾನವ ತಪ್ಪು ಮಾಡುವ ಅಧಿಕಾರ ಪಡೆದಿದ್ದು ತಥಾ ಸರಿಯನ್ನು ಮಾಡುವ ಅವಸರ ಹಾಗು ಸಾಧನವನ್ನು ಪಡೆದಿದ್ದು ಜನ್ಮಿಸುತ್ತಾನೆ. ಏಕೆಂದರೆ ಪರಂಪರೆಯಲ್ಲಿ ಪ್ರತ್ಯೇಕ ಮಾನವ, ಮಾನವ ಚೇತನೆಯನ್ನು ಪಡೆದಿಲ್ಲ ಆದ್ದರಿಂದ ೨೦೦೦ ಇಸಿವಿ ತನಕ ಜೀವ ಚೇತನದಲ್ಲಿ ಬಾಳಿದ ಮತ್ತು ಜೀವ ಚೇತನದಲ್ಲಿ ತಪ್ಪು ಮಾಡೇಮಾಡುತ್ತಾನೆ. ಉದಾಹರಣೆಗೆ:-

ಒಬ್ಬ ಅಧ್ಯಾಪಕ ಕಕ್ಷದಲ್ಲಿ ಗಣಿತವನ್ನು ಹೇಳಿಕೊಡುತ್ತಾನೆ. ಅಧ್ಯಾಪಕ ನೇರಿಯಾದುದನ್ನೇ ಹೇಳಿಕೊಡುತ್ತಾನೆ ಮತ್ತು ಎಲ್ಲರಿಗೂ ಸಮಾನ ರೂಪದಲ್ಲಿ ಸಂಬೋಧಿತ ಕೂಡಾ ಮಾಡುತ್ತಾನೆ, ಆದರೂ ವಿದ್ಯಾರ್ಥಿಗಳು ತಪ್ಪು ಮಾಡುತ್ತಾರೆ. ಇದರಿಂದ, ಬಾಲಕನ ಮನ, ಮಸ್ತಿಷ್ಕದಲ್ಲಿ ಭ್ರಮೆವಶ ತಪ್ಪು ಮಾಡುವ ಪ್ರವೃತ್ತಿಯಿದೆ ಎಂಬುವುದು ಸಿದ್ಧವಾಗುತ್ತದೆ. ಇದರ ಜೊತೆಗೆ ಮಾನವೀಯ ವಾತಾವರಣ ಹಾಗು ಅಧ್ಯಾಪನ ಅರ್ಥಾತ್ ಅಧ್ಯಾಪಕ ಬೋಧ ಮಾಡುವ ಕ್ಷಮತೆಯ ಆಧಾರದ ಮೇಲೆ ಅದೇ ವಿದ್ಯಾರ್ಥಿ ಪುನಃ ಸರಿಯಾದುದನ್ನು ಮಾಡುವುದರಲ್ಲಿಯೂ ಸಮರ್ಥನಾಗುತ್ತಾನೆ ಎಂಬುವುದೂ ಸಿದ್ಧವಾಗುತ್ತದೆ. ಇದರಿಂದ ವಾತಾವರಣ ತಥ ಅಧ್ಯಯನ ಪ್ರತ್ಯೇಕ ಮಾನವನಿಗೆ ಒಂದು ಅವಸರ ಹಾಗು ಅವಶ್ಯಕತೆಯ ರೂಪದಲ್ಲಿ ಮೌಲಿಕತೆ ಪ್ರಾಪ್ತವಿದೆ ಹಾಗು ಜೀವ ಚೇತನದಲ್ಲಿ ಬಾಳುತ್ತಾ ಸರಿಯಾದುದನ್ನು ಮಾಡುವ ಪ್ರವೃತ್ತಿಯ ಸಾಕ್ಷ್ಯವಿದೆ ಎಂಬುವುದು ಸಿದ್ಧವಾಗುತ್ತದೆ.

ಮಾನವನು ತನ್ನ ಅವಶ್ಯಕತೆಯ ಪೂರ್ತಿಗಾಗಿಯೇ ಉತ್ಪಾದನೆ ಕಾರ್ಯ ಹಾಗು ಪ್ರಯೋಗ ಮಾಡಿದ್ದಾನೆ. ಉತ್ಪಾದನೆ ಹಾಗು ಪ್ರಯೋಗದ ಫಲವೇ ಅತೋಪಾರ್ಜನೆ.

ಪ್ರತ್ಯೇಕ ಮಾನವ ಪ್ರಾಪ್ತ ಅರ್ಥದ ರಕ್ಷಣೆ ಹಾಗು ಸದುಪಯೋಗ ಬಯಸುತ್ತಾನೆ

ತಮ್ಮ - ತಮ್ಮ ಯೋಗ್ಯತೆ, ಕ್ಷಮತೆ ಹಾಗು ಪಾತ್ರತೆ ಅನುಸಾರ ಪ್ರತ್ಯೇಕ ಭ್ರಮಿತ ಮಾನವ ಪ್ರಾಪ್ತ ಅರ್ಥದ ಸದುಪಯೋಗ ಹಾಗು ರಕ್ಷಣೆಯ ಕಾಮನೆಯಿಂದ ವೈಯಕ್ತಿಕ

50

ನೀತಿ ನಿರ್ಧಾರಣ ಮಾಡಿದನು, ಇದರಿಂದ ಮತಭೇದ ಉತ್ಪನ್ನವಾಯಿತು. ಫಲಸ್ವರೂಪ ಮಾನವನು ಸಾರ್ವಭೌಮ ಸಿದ್ಧಾಂತಪೂರ್ಣ ವ್ಯವಸ್ಥೆಯ ಸಂಬಂಧದಲ್ಲಿ ಅನ್ವೇಷಣೆ ಮಾಡಿದನು, ಇದರಿಂದ ಒಂದು ಮೌಲಿಕ ಸಿದ್ಧಾಂತ ಉಪಸ್ಥಿತವಾಯಿತು, ಇದು ನಿಮ್ಮಾನುಸಾರವಿದೆ -

“ಮಾನವ ಸರಿಮಾಡುವುದರಲ್ಲಿ ಏಕ ಹಾಗು ತಪ್ಪಿನಲ್ಲಿ ಅನೇಕ”

ಸಿದ್ಧಾಂತವೇ ನಿಯತಿ, ನಿಯತಿಯೇ ನಿಯಮ, ನಿಯಮವೇ ವಿಜ್ಞಾನ ಹಾಗು ವಿವೇಕ, ವಿಜ್ಞಾನ ಹಾಗು ವಿವೇಕವೇ ಜ್ಞಾನ ತಥಾ ಜ್ಞಾನವೇ ಸಿದ್ಧಾಂತವಾಗಿದೆ.

✧ ಸಿದ್ಧಾಂತ - ನಿಯಮ, ಪ್ರಕ್ರಿಯೆ ಹಾಗು ಉಪಲಬ್ಧತೆ , ಯಾವ ಸಮಯ ಭಾಷೆಯ

ರೂಪದಲ್ಲಿ ಅವತರಿತವಾಗುತ್ತದೆಯೋ, ಅದನ್ನು ಸಿದ್ಧಾಂತವೆಂದು ಹೇಳುತ್ತೇವೆ. ಪ್ರಕ್ರಿಯೆ ಕಾರ್ಯ-ವ್ಯವಹಾರದ ರೂಪದಲ್ಲಿದೆ ಇದರ ಫಲ - ಪರಿಣಾಮ ಫಲಿತವಾಗುತ್ತದೆ.

✧ ನಿಯಮ - ಕ್ರಿಯೆಯ ಸಂರಕ್ಷಣೆ ಹಾಗು ಅನುಶಾಸನೆ ರೀತಿಯೇ ನಿಯಮ.

ಮಾನವೀಯತೆಯ ಸಂರಕ್ಷಣೆಗಾಗಿ ಮಾನವ ಸಾಮಾಜಿಕತೆ ತಥಾ ಮಾನವೀಯತೆಪೂರ್ಣ ಸಂಸ್ಕೃತಿ, ಸಭ್ಯತೆ, ವಿಧಿ ಮತ್ತು ವ್ಯವಸ್ಥೆಯ ಅಧ್ಯಯನ, ಪ್ರಯೋಗ ಹಾಗು ಪಾಲಿಸಲು ಬಯಸುತ್ತಾನೆ, ಏಕೆಂದರೆ ಈ ನಾಲ್ಕು ಪರಸ್ಪರ ಪೂರಕವಾಗಿದೆ.

ವಿಜ್ಞಾನ ಹಾಗು ವಿವೇಕಪೂರ್ಣ ವಿಚಾರ, ವ್ಯವಹಾರ, ಅಧ್ಯಯನ, ಅಧ್ಯಾಪನ, ಉತ್ಪಾದನೆ, ಉಪಯೋಗ, ಸದುಪಯೋಗ, ವಿತರಣ, ಪ್ರಚಾರ, ವಿಧಿ ಹಾಗು ವ್ಯವಸ್ಥೆಯೇ ಮಾನವೀಯತೆಯ ಸಂರಕ್ಷಣೆಗಾಗಿ ಮಾನವನಿಂದ ಅನುಭೂತ ಸಂಪೂರ್ಣ ಕಾರ್ಯಕ್ರಮವಿದೆ.

✧ ವಿಚಾರ - ಪ್ರಿಯಾಪ್ರಿಯ, ಹಿತಾಹಿತ, ಲಾಭಾಲಾಭ, ನ್ಯಾಯಾನ್ಯಾಯ, ಧರ್ಮಾಧರ್ಮ ತಥಾ ಸತ್ಯಾಸತ್ಯ ತುಲನಾತ್ಮಕ ವೃತ್ತಿಯ ಕ್ರಿಯೆಯ ಫಲಸ್ವರೂಪ ನಿಶ್ಚಿತ ವಿಶ್ಲೇಷಣೆಯೇ ವಿಚಾರವಾಗಿದೆ.

✧ ಅಧ್ಯಯನ - ಅಧಿಷ್ಠಾನ ಅರ್ಥಾತ್ ಆತ್ಮ ಮತ್ತು ಅನುಭವದ ಸಾಕ್ಷಿಯಲ್ಲಿ ಅರ್ಥ

51

ಬೋಧದಿಂದ ಸ್ವರಶೆ ಸಹಿತ ಮಾಡಲಾಗುವ ಪ್ರಕ್ರಿಯೆ ಹಾಗು ಪ್ರಯಾಸವೇ ಅಧ್ಯಯನ.

¤ ಅಧ್ಯಾಪನ - ಅನುಭವ ಮೂಲಕ ವಿಧಿಯಿಂದ ಅಧಿಷ್ಠಾನದ ಸಾಕ್ಷಿಯಲ್ಲಿ ಬೋಧ ಮತ್ತು ಸಾಕ್ಷಾತ್ಕಾರಪೂರ್ವಕ ಸ್ವರಶೆ ಸಹಿತ ಗ್ರಹಣೆ ಮಾಡಿಸುವ ಯೋಗ್ಯ ಸತ್ಯತೆಪೂರ್ವಕ ಕ್ರಿಯೆಗಳನ್ನು ಬೋಧಗಮ್ಯ ಮಾಡುವ ಯೋಗ್ಯ ಪ್ರಕ್ರಿಯೆಯೇ ಅಧ್ಯಾಪನ

¤ ಪ್ರಚಾರ ಹಾಗು ಪ್ರದರ್ಶನ - ಇಚ್ಛಿತ ವಸ್ತುವಿನ ಸಾಮಾನ್ಯ ಜನ-ಜಾತಿಯ ಮನ-ಬುದ್ಧಿಯಲ್ಲಿ ಅವಗಾಹನ ಮಾಡಿಸಲು ಪ್ರಸ್ತುತ ಪ್ರಕ್ರಿಯೆಯ ಭಾಷಾತ್ಮಕ ಪ್ರಯೋಗವೇ ಪ್ರಚಾರ ತಥಾ ಕಲೆ ಹಾಗು ಭಾಷೆ ಸಹಿತ ನಿಯುಕ್ತ ಪ್ರಯಾಸವೇ ಪ್ರದರ್ಶನ.

¤ ವಿಧಿ - ಏಕ ಅಥವಾ ಅನೇಕ ವ್ಯಕ್ತಿಗಳಿಂದ ಅಖಂಡ ಸಮಾಜ ಹಾಗು ಸಾರ್ವಭೌಮ ವ್ಯವಸ್ಥೆಯನ್ನು ಅಕ್ಷುಣವಾಗಿಡುವ ಉದ್ದೇಶದಿಂದ ವ್ಯವಸ್ಥೆ ನೀಡುವುದಕ್ಕಾಗಿ ನಿರ್ಣೀತ ನಿಯಮಪೂರ್ಣ ಪದ್ಧತಿಗಳಿಗೆ ವಿಧಿಯೆಂದು ಸಂಜ್ಞೆ.

¤ ವ್ಯವಸ್ಥೆ - ವಿಧಿಯ ಆಶಯವನ್ನು ಕಾರ್ಯರೂಪ ನೀಡಲು ಪ್ರಸ್ತುತ ಪರಂಪರೆಯೇ ವ್ಯವಸ್ಥೆ.

ಸಹ-ಅಸ್ತಿತ್ವ ಸಹಜ ಪರಂಪರೆಯಿಲ್ಲದೆ ಸಾಮಾಜಿಕತೆಯ ನಿರ್ವಾಹವಿಲ್ಲ.

ಸಹ-ಅಸ್ತಿತ್ವದಲ್ಲಿ ನಿರ್ವಿರೋಧ, ನಿರ್ವಿರೋಧದಿಂದ ಜಾಗೃತಿ, ಜಾಗೃತಿಯಿಂದ ಸಮಾಧಾನ-ಸಮೃದ್ಧಿ, ಸಮಾಧಾನ-ಸಮೃದ್ಧಿಯಿಂದ ಸುಖ-ಶಾಂತಿ, ಸುಖ-ಶಾಂತಿಯಿಂದ ಸ್ನೇಹ, ಸ್ನೇಹದಿಂದ ವಿಶ್ವಾಸ, ವಿಶ್ವಾಸದಿಂದ ಸಹ-ಅಸ್ತಿತ್ವ ಪ್ರಮಾಣಿತವಾಗುತ್ತದೆ ಹಾಗು ಸಹ-ಅಸ್ತಿತ್ವದಲ್ಲಿ ಪ್ರಮಾಣಿತವಾಗುವುದೇ ಜಾಗೃತಿ.

¤ ಸಹ-ಅಸ್ತಿತ್ವ - ಪರಸ್ಪರತೆಯಲ್ಲಿ ಶೋಷಣೆ, ಸಂಗ್ರಹ ಹಾಗು ದ್ವೇಷ ರಹಿತ ತಥಾ ಉದಾರತ, ಸ್ನೇಹ ಮತ್ತು ಸೇವೆ ಸಹಿತ ವ್ಯವಹಾರ, ಸಂಬಂಧ ಹಾಗು ಸಂಪರ್ಕದ ನಿರ್ವಾಹವೇ ಸಹ-ಅಸ್ತಿತ್ವ.

¤ ನಿರ್ವಿರೋಧ - ನ್ಯಾಯ ಹಾಗು ಧರ್ಮದ ಪ್ರತಿ ನಿಶ್ಚಯ, ನಿಷ್ಠೆ ಹಾಗು ಅಭ್ಯಾಸವೇ ನಿರ್ವಿರೋಧ.

52

ಸಮ್ಮದ್ಧಿ - ಅಭಾವದ ಅಭಾವವೇ ಸಮ್ಮದ್ಧಿ ಅಥವಾ ಉತ್ಪಾದನೆ ಅಧಿಕ, ಅರ್ಥಾತ್ ಅವಶ್ಯಕತೆಗಿಂತ ಅಧಿಕ ಉತ್ಪಾದನೆಯೇ ಸಮ್ಮದ್ಧಿ.

ಸುಖ - ನ್ಯಾಯಪೂರ್ಣ ವ್ಯವಹಾರ ಹಾಗು ಧರ್ಮಪೂರ್ಣ ವಿಚಾರದ (ಸಮಾಧಾನ) ಫಲನವೇ ಸುಖ.

ಸ್ನೇಹ - ನ್ಯಾಯಪೂರ್ಣ ವ್ಯವಹಾರದಲ್ಲಿ ನಿರ್ವಿರೋಧಿತೆಯ ಫಲನವೇ ಸ್ನೇಹ. ಇದು ಜಾಗೃತ ಜೀವನದಲ್ಲಿ ವೃತ್ತಿಯಿಂದ ಅನುರಂಜಿತ ಮನದ ಕ್ರಿಯೆ.

ವಿಶ್ವಾಸ - ಜಾಗೃತ ಪರಂಪರೆಯಲ್ಲಿ ನಿಹಿತ ಪ್ರತ್ಯಾಶಕ್ತಿ ಸಾಧಕ ನಿರ್ವಾಹ ಕ್ರಿಯೆಯೇ ವಿಶ್ವಾಸ

ಸೇವೆ - ಉಪಕಾರ ಮಾಡಿ ಸಂತುಷ್ಟವಾಗುವ ಪ್ರವೃತ್ತಿ ಹಾಗು ಪ್ರತಿಫಲದ ಆಧಾರದ ಮೇಲೆ ಮಾಡಲಾಗುವ ಸಹಯೋಗ ಸಹಕರಿಸುವುದೇ ಸೇವೆ.

ಉಪಕಾರ ಪ್ರಧಾನ ಸೇವೆಯಲ್ಲಿ ಉಪಕಾರ ಮಾಡುವ ಸಂತುಷ್ಟಿ ಸಿಗುತ್ತದೆ. ಪ್ರತಿಫಲ ಪ್ರಧಾನ ಸೇವೆಯಲ್ಲಿ ಕೇವಲ ಪ್ರತಿಫಲ ವಿಮರ್ಶನವಾಗುತ್ತದೆ.

ಉಪಕಾರ = ಸಮ್ಮದ್ಧಿ ಹಾಗು ಜಾಗೃತಿಗಾಗಿ ಸಹಾಯತೆ, ಪ್ರೇರಣೆ.

ಮೇಲೆ ಉಲ್ಲೇಖಿತವಾಗಿದೆ, ಮಾನವನು ಪ್ರಯೋಗ ಹಾಗು ಉತ್ಪಾದನೆಯಿಂದ ಪ್ರಾಪ್ತ ಅರ್ಥ ಯಥಾ ತನ, ಮನ ಮತ್ತು ಧನದ ಸದುಪಯೋಗ ಹಾಗು ರಕ್ಷಣೆಯ ಕಾಮನೆ ಮಾಡಿದ್ದಾನೆ.

ಅರ್ಥದ ಸದುಪಯೋಗ ಹಾಗು ಇದರ ರಕ್ಷಣೆ ಕೇವಲ ಮಾನವೀಯತೆ ಪೂರ್ಣ ವ್ಯವಹಾರ ಹಾಗು ವಿಚಾರದ ಆಧಾರದಿಂದಲೇ ಸಂಭವ. ಇದಕ್ಕಾಗಿ ಮಾನವನಿಂದ ವಿಜ್ಞಾನ ಹಾಗು ವಿವೇಕದಿಂದ ವ್ಯವಸ್ಥೆಯ ನಿರ್ಣಯ ಮಾಡಲಾಗುತ್ತದೆ.

ಸಮಸ್ತ ಭ್ರಮಿತ ಮಾನವ ಪರಂಪರೆಯಲ್ಲಿ ಎರಡು ಪ್ರಕಾರದ ವ್ಯವಸ್ಥೆಗಳು ಪರಿಕಲ್ಪಿತವಾಗುತ್ತದೆ (೧) ಧರ್ಮನೈತಿಕ ವ್ಯವಸ್ಥೆ ಮತ್ತು (೨) ರಾಜ್ಯನೈತಿಕ ವ್ಯವಸ್ಥೆ.

ಸಾಮಾಜಿಕತೆಯ ಸರಕ್ಷಣೆಗಾಗಿ ಎರಡೂ ವ್ಯವಸ್ಥೆಗಳ ಪರಸ್ಪರ ಪೂರಕವಾಗುವುದು ಅತ್ಯಾವಶ್ಯಕ.

53

ಜಾಗೃತ ಮಾನವ ಪರಂಪರೆಯಲ್ಲಿ ಪ್ರತ್ಯೇಕ ಪರಿವಾರದಲ್ಲಿ ಪ್ರಾಪ್ತ ಅರ್ಥದ ಸದುಪಯೋಗ ಧರ್ಮನೀತಿಯ ರೂಪದಲ್ಲಿ ತಥಾ ರಕ್ಷಣೆ ರಾಜ್ಯನೀತಿಯ ರೂಪದಲ್ಲಿ ಪ್ರಮಾಣಿತವಾಗುತ್ತದೆ. ಇದೇ ಅಖಂಡ ಸಮಾಜ, ಸಾರ್ವಭೌಮ ವ್ಯವಸ್ಥೆಯ ಆಧಾರ.

★ ಈ ರೀತಿಯಲ್ಲಿ ಧರ್ಮನೈತಿಕ ವ್ಯವಸ್ಥೆ ತಥಾ ರಾಜ್ಯನೈತಿಕ ವ್ಯವಸ್ಥೆಯ ಕ್ಷೇತ್ರ ಸ್ಪಷ್ಟವಾಗಿದೆ. ಈ ಎರಡೂ ವ್ಯವಸ್ಥೆಗಳು ಒಂದಕ್ಕೊಂದು ಪೋಷಕ ಅಥವಾ ಪೂರಕವಾಗಿದೆ, ಒಂದಕ್ಕೊಂದು ಶೋಷಕ ಅಥವಾ ಒಂದು ಇನ್ನೊಂದರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲಾರಂಭಿಸಿದಾಗಲೇ, ಸಾಮಾಜಿಕ ಅಸಂತುಲನ ಉತ್ಪನ್ನವಾಗುತ್ತದೆ ಮತ್ತು ಅಮಾನವೀಯತೆವಾದಿ ವಿಚಾರ ಹಾಗು ವ್ಯವಹಾರಕ್ಕೆ ಪುಷ್ಟಿ ಸಿಗುತ್ತದೆ. ವಿಕಲ್ಪದ ರೂಪದಲ್ಲಿ ಮಾನವೀಯತೆಯ ಅವಶ್ಯಕತೆ ಉದಯವಾಗುತ್ತದೆ.

ಅರ್ಥದ ರಕ್ಷಣೆಗಾಗಿ ವಿಧಿ ಹಾಗು ವ್ಯವಸ್ಥೆ ಪಕ್ಷವಿದೆ. ವಿಧಿ ಆಚರಣೆಯಲ್ಲಿ ಹಾಗು ವ್ಯವಸ್ಥೆ ಪರಸ್ಪರತೆಯಲ್ಲಿ ಸ್ಪಷ್ಟವಾಗಿದೆ.

ವಿಧಿ ಪಕ್ಷದ ಉಪಯುಕ್ತತೆ ವಿವೇಕ ಸಮೃದ್ಧ ವೈಯಕ್ತಿಕ ಹಾಗು ಅಖಂಡ ಸಮಾಜ ಅರ್ಥದ ಪೋಷಣೆ, ಸದ್ಗುಣ ಪರಸ್ಪರತೆಯಲ್ಲಿ ತೃಪ್ತಿಯ ರೂಪದಲ್ಲಿ ಪ್ರಮಾಣಿತವಾಗುತ್ತದೆ. ಪೂರ್ವೋಕ್ತಾನುಸಾರ ವ್ಯವಸ್ಥೆಯ ಉಪಯುಕ್ತತೆ ವಿಧಿಯ ಆಶಯವನ್ನು ಕಾರ್ಯರೂಪ ನೀಡುವುದಕ್ಕಾಗಿ ಅರಿವಿನ ಪರಂಪರೆಯ ಸ್ಥಾಪನೆ ಮಾಡಬೇಕು. ವಿಧಿ ಪಕ್ಷದ ವೈಭವ ಜಾಗೃತ ಪರಂಪರೆಯಲ್ಲಿ ಪ್ರಮಾಣಿತವಾಗುತ್ತದೆ.

ಸಂಪೂರ್ಣ ಸೃಷ್ಟಿ ಜಡ ಹಾಗು ಚೈತನ್ಯ ಭೇದದಿಂದ ಪರಿಲಕ್ಷಿತವಾಗಿದೆ.

★ ಚೈತನ್ಯ ಪಕ್ಷದ ಅಭಾವದಲ್ಲಿ ಶರೀರದಿಂದ ಯಾವುದೇ ಕ್ರಿಯೆಯ ಸಂಪಾದನೆ ಸಂಭವವಿಲ್ಲ. ಮಾನವ ಚೈತನ್ಯ ಸೃಷ್ಟಿಯ ವಿಕಸಿತ ಇಕಾಯಿಯಾಗಿದ್ದಾನೆ.

ಚೇತನವೇ ವ್ಯಾಪಕ. ಚೇತನ ಪಾರಗಾಮಿ ಹಾಗು ಪಾರದರ್ಶಿಯಾಗಿದೆ, ನಿಷ್ಕ್ರಿಯ ತರಂಗ ಹಾಗು ಒತ್ತಡ ಮುಕ್ತವಾಗಿದೆ. ಚೇತನ ವ್ಯಾಪಕವಾಗಿರುವ ಕಾರಣ ಇಕಾಯಿ ಸಿದ್ಧವಾಗುವುದಿಲ್ಲ. ಚೇತನ ಸೃಷ್ಟಿಯ ಮೂಲ ಕಾರಣ ಸಿದ್ಧವಾಗುವುದಿಲ್ಲ. ಸಹ-ಅಸ್ತಿತ್ವವೇ ಸೃಷ್ಟಿಯ ಮೂಲ ಕಾರಣವಾಗಿದೆ. ಚೇತನದಲ್ಲಿ ಸಂಪ್ರದಾಯ ಪ್ರಕೃತಿಯಲ್ಲಿಯೇ ಪರಿಣಾಮವಿದೆ. ಸಾಮ್ಯ ಉರ್ಜ ಮಾನವನಲ್ಲಿ, ಮಾನವನಿಂದ, ಮಾನವನಿಗೆ ವಿಕಸಿತ ಚೇತನ ರೂಪದಲ್ಲಿದೆ.

54

ಸಮಸ್ತ ಜಡ-ಚೈತನ್ಯ ವಸ್ತು ಉರ್ಜಾ ಸಂಪನ್ನವಾಗಿರುವುದಕ್ಕಾಗಿ ಚೇತನವೇ ಮೂಲ ಕಾರಣ. ಫಲಸ್ವರೂಪ ಪದಾರ್ಥದಲ್ಲಿ ಕ್ರಿಯಾಶೀಲ, ಶ್ರಮ, ಗತಿ, ಪರಿಣಾಮದಿಂದ ವಿಕಾಸಕ್ರಮದಲ್ಲಿ ಸೃಷ್ಟಿ ಬೀಜ ಅರ್ಥಾತ್ ಜೀವ-ಜಗತ್ತಿನ (ಮಾನವೇತರ ಪ್ರಕೃತಿ) ರೂಪದಲ್ಲಿ ಸ್ಪಷ್ಟವಾಗಿದೆ. ಇದರಿಂದ ಪದಾರ್ಥ ಜಗತ್ತಿನಲ್ಲಿ ಜೀವ-ಜಗತ್ತಿನ ಬೀಜ ರೂಪ ಮತ್ತು ಫಲ ರೂಪವಾಗುವುದು ಸ್ಪಷ್ಟವಾಗಿದೆ. ಇದರ ಸಹಿತ ಮಾನವ ಶರೀರ ರಚನೆ ಮತ್ತು 'ಜೀವನ'ದಲ್ಲಿ ಜಾಗೃತಿ ಬೀಜವಾಗಿರುವುದು ಸುಸ್ಪಷ್ಟವಾಯಿತು, ಏಕೆಂದರೆ ಪ್ರತ್ಯೇಕ ಮಾನವ ಜಾಗೃತನಾಗಲು ಬಯಸುತ್ತಾನೆ. ಇದೇ ಸಹ ಅಸ್ತಿತ್ವದ ಪ್ರಮಾಣ.

ಸೃಷ್ಟಿಯ ಸಮಸ್ತ ಇಕಾಯಿಗಳು ತಮ್ಮ ಪಾತ್ರತೆಯ ಅನುಸಾರ ಚೇತನದಲ್ಲಿ ಸಂಪ್ರದಾಯವಾಗಿವೆ, ಇದೇ ಪ್ರಭಾವ. ಈ ಪ್ರಭಾವದ ಫಲವೇ ಇಕಾಯಿಗಳ ಅಕ್ಷುಣ್ಣ ಚೇಷ್ಟೆ. ಚೈತನ್ಯ ಕ್ರಿಯೆಯ ಮೂಲದಲ್ಲಿದೆ. ಶ್ರಮ, ಗತಿ ಮತ್ತು ಪರಿಣಾಮ ಸ್ವರೂಪವೇ ಜಡ ಪ್ರಕೃತಿ ವಿಕಾಸ ಕ್ರಮದಲ್ಲಿದೆ ಮತ್ತು ವಿಕಸಿತವಾಗಿ ಚೈತನ್ಯ ಪ್ರಕೃತಿಯ (ಜೀವನ) ರೂಪದಲ್ಲಿ ಸಂಕ್ರಮಿತವಾಗಿದೆ. ಚೈತನ್ಯ ಪ್ರಕೃತಿಯ ಮೂಲ ರೂಪ ಘಟನಪೂರ್ಣ ಪರಮಾಣು.

ಮಾನವನಲ್ಲಿ ಬೌದ್ಧಿಕ ತಥಾ ಭೌತಿಕ ಎರಡೂ ಪಕ್ಷಗಳ ಸಮ್ಮಿಲಿತ ರೂಪ ವ್ಯವಹಾರದಲ್ಲಿ ಕಂಡುಬರುತ್ತದೆ ತಥಾ ಶರೀರದಿಂದ ಸಂಪನ್ನವಾಗುವ ಎಲ್ಲಾ ಕ್ರಿಯೆಗಳಲ್ಲಿ ಈ ಎರಡೂ ಅರ್ಥಾತ್ ಬೌದ್ಧಿಕ ಮತ್ತು ಭೌತಿಕ ಕ್ರಿಯೆಗಳು ಸಮ್ಮಿಲಿತವಾಗಿ ಕಂಡುಬರುತ್ತದೆ.

ಭೌತಿಕ ಪಕ್ಷದ ತಾತ್ಪರ್ಯ ಶರೀರ ತಥಾ ಅದರಿಂದ ಮಾಡಲಾಗುವ ಉತ್ಪಾದನೆ ಕ್ರಿಯೆಗಳು. ಬೌದ್ಧಿಕ ಪಕ್ಷದ ತಾತ್ಪರ್ಯ ಆಶೆ, ವಿಚಾರ, ಇಚ್ಛೆ, ಋತಂಭರ ಹಾಗು ಪ್ರಾಮಾಣಿಕತೆ; ಜ್ಞಾನ, ವಿವೇಕ, ವಿಜ್ಞಾನ ಹಾಗು ಇದಕ್ಕೆ ಸಂಬಂಧಿತ ಪ್ರಕ್ರಿಯೆ.

ಆಶೆ - ಆಶ್ರಯಪೂರ್ವಕ ಮಾಡಿರುವ ಅಪೇಕ್ಷೆಗೆ ಆಶೆಯೆಂದು ಸಂಜ್ಞೆ. ಶರೀರದ ಆಶ್ರಯ ಪದ್ಧತಿಯಿಂದ ಮತ್ತು ಅನುಭವದ ಆಶ್ರಯ ಪದ್ಧತಿಯಿಂದ ಆಶಯಗಳಿರುವುದು ಕಂಡುಬರುತ್ತದೆ.

ವಿಚಾರ - ವಿಶ್ಲೇಷಣೆಯಿಂದ ಮಾಡಿರುವ ಸ್ವೀಕೃತಿಗಳು, ಇವು ಸಮಾಧಾನದ ಅರ್ಥದಲ್ಲಿ ಪ್ರಯೋಜನೆಯಾಗಿದೆ.

55

¤ ಇಚ್ಛೆ - ಆಕಾರ - ಪ್ರಕಾರ, ಪ್ರಯೋಜನ ಹಾಗು ಸಂಭವನೀಯತೆಯ ಚಿತ್ರ ಗ್ರಹಣೆ ಹಾಗು ನಿರ್ಮಾಣ ಮಾಡುವ ತಥಾ ಗುಣಗಳ ಗತಿಪೂರ್ವಕ ನಿಯೋಜನ ಮಾಡುವ ಕ್ರಿಯೆಗೆ ಇಚ್ಛೆಯೆಂದು ಸಂಜ್ಞೆ. ಜೀವನ ಶಕ್ತಿಗಳು ಗುಣ, ಸ್ವಭಾವ, ಧರ್ಮದ (ಸಮಾಧಾನ) ರೂಪದಲ್ಲಿ ವ್ಯಾಖ್ಯಾಯಿತವಾಗುತ್ತದೆ.

¤ ಋತಂಭರ - ಸಮುಚಿತ ಪ್ರಕಾರದಿಂದ ಮಾಡಿರುವ ಸ್ವೀಕೃತಿಯ ನಿರಂತರತೆ ನೀಡುವ ಬೌದ್ಧಿಕ ಕ್ರಿಯೆಯೇ ಋತಂಭರ.

* ಮಾನವನು ಸೃಷ್ಟಿಯಲ್ಲಿ ತನ್ನ ಮಹತ್ವವನ್ನು ತಿಳಿದುಕೊಳ್ಳುವ ಹಾಗು ಗುರುತಿಸುವ ಕ್ರಮದಲ್ಲಿ ಚೈತನ್ಯ ಇಕಾಯಿಯ ಘಟನಪೂರ್ಣತೆ, ಕ್ರಿಯೆಪೂರ್ಣತೆ ಮತ್ತು ಆಚರಣಪೂರ್ಣತೆಯ ಅಧ್ಯಯನ ಮಾಡುವ ಪ್ರಯಾಸ ವಿಕಲ್ಪ ರೂಪದಲ್ಲಿ ಮಾಡಲಾಗಿದೆ.

ಪರಮಾಣುವೇ ಮೂಲ ಇಕಾಯಿಯೆಂಬುವುದು, ಮೇಲೆ ವರ್ಣಿತ ಅಧ್ಯಯನದ ಕ್ರಮದಲ್ಲಿ, ಅನುಭವದಲ್ಲಿ ಬಂದಿದೆ.

¤ ಘಟನ - ಒಂದಕ್ಕಿಂತ ಅಧಿಕ ಅಂಶದ ಗುರುತಿಸುವ-ನಿರ್ವಹಿಸುವ ನಿಯಮದಿಂದ ಅನುಶಾಸಿತ ಹಾಗು ಪರಿಮಿತ ನಿಶ್ಚಿತ ಕ್ರಿಯೆಗೆ ಅಕ್ಷುಣ್ಣತೆ ನೀಡುವ ಪ್ರಕ್ರಿಯೆಯೇ ಘಟನ.

¤ ಆಚರಣ - ಯಾವ ಕ್ರಿಯೆಯಿಂದ ಮೌಲಿಕತೆಯ ಮೌಲ್ಯಮಾಪನವಾಗುತ್ತದೆಯೋ, ಅದಕ್ಕೆ ಆಚರಣವೆಂದು ಸಂಜ್ಞೆ. ಇದೇ ನಿಯಮ.

¤ ಜಡ - ವಿಚಾರ ಪಕ್ಷದಿಂದ ರಹಿತ ಇಕಾಯಿ, ಯಾವುದರ ಕಾರ್ಯ ಕ್ಷೇತ್ರ ಅದರ ಉದ್ಧಾ, ಅಗಲ, ಎತ್ತರದ ತನಕವೇ ಸೀಮಿತವಾಗಿದೆ.

¤ ಚೈತನ್ಯ - ಯಾವ ಇಕಾಯಿಯ ಕಾರ್ಯ ಕ್ಷೇತ್ರ ಅದರ ಉದ್ಧಾ, ಅಗಲ ಮತ್ತು ಎತ್ತರಗಿಂತ ಅಧಿಕವಾಗಿದೆಯೋ ತಥಾ ಯಾವುದರ ವಿಚಾರ ಪಕ್ಷ ಸಕ್ರಿಯವಾಗಿದೆಯೋ ಅಂತಹ ಇಕಾಯಿಗೆ ಚೈತನ್ಯವೆಂದು ಸಂಜ್ಞೆ.

ಇಂತಹ ವಿಶೇಷ ಸಕ್ರಿಯತೆ ಪ್ರಾಪ್ತವಾಗುತ್ತಲೇ ಆ ಇಕಾಯಿ ಆಶೆಯ ಬಂಧನೆಯಿಂದ ಯುಕ್ತವಾಗುತ್ತದೆ. ಪ್ರಮಾಣ ಪ್ರತ್ಯೇಕ ಜೀವದಲ್ಲಿ ಬಾಳುವ ಆಶೆ ಇದ್ದೇಯಿದೆ.

ಜಡ ಹಾಗು ಚೈತನ್ಯ ಇಕಾಯಿಯಲ್ಲಿ ಘಟನ ಸಿದ್ಧಾಂತದಲ್ಲಿ ಸಾಮ್ಯತೆ ಕಂಡುಬರುತ್ತದೆ.

56

ಆತ್ಮದಲ್ಲಿ ಅನುಭೂತಿ; ಬುದ್ಧಿಯಲ್ಲಿ ಬೋಧ, ಸ್ವೀಕೃತಿ ಹಾಗು ಆಪ್ಲಾವನ; ಚಿತ್ತದಲ್ಲಿ ಆಹ್ಲಾದ; ವೃತ್ತಿಯಲ್ಲಿ ಉತ್ಸಾಹ ತಥಾ ಮನದಲ್ಲಿ ಕೌತೂಹಲವೇ ಜಾಗೃತಿಯನ್ನು ಪ್ರಮಾಣಿತ ಮಾಡುವ ಪ್ರವೃತ್ತಿಗಳು.

ಅನುಭೂತಿ - ಅನುಕ್ರಮದಿಂದ ಪ್ರಾಪ್ತ ಅರಿವು, ಸ್ಥಿತಿ-ಗತಿ, ಪ್ರಕಟನೆ, ಹಾಗು ಪರಿಣಾಮವೇ ಅನುಭೂತಿಯಾಗಿದೆ.

ಆಪ್ಲಾವನ - ನಿರ್ಭ್ರಮತೆಯ ಪ್ರಭಾವಕ್ಕೆ ಆಪ್ಲಾವನವೆಂದು ಸಂಜ್ಞೆ. ಬುದ್ಧಿಯೇ ನಿರ್ಭ್ರಮತೆಯನ್ನು ಪ್ರಾಪ್ತಿಸಿ ಆಪ್ಲಾವಿತವಾಗುತ್ತದೆ.

ಆಹ್ಲಾದ - ಅಭಾವದ ಅಭಾವವೇ ಆಹ್ಲಾದ. ಚಿತ್ತದಲ್ಲಿಯೇ ಅಭಾವದ ಅಭಾವದ ಪ್ರತೀತಿಯಾಗಿ ಆಹ್ಲಾದವಾಗುತ್ತದೆ.

ಉತ್ಸಾಹ - ಉತ್ಸಾಹ ಅಥವಾ ವಿಕಾಸದ ದಿಕ್ಕಿನಲ್ಲಿರುವ ಸಾಹಸ, ಅದಕ್ಕೆ ಉತ್ಸಾಹವೆಂದು ಸಂಜ್ಞೆ. ತಥಾ ಇದು ವೃತ್ತಿಯಲ್ಲಾಗುತ್ತದೆ.

ಕೌತೂಹಲ - ಅಜ್ಞಾತವನ್ನು ಜ್ಞಾತ ಮಾಡಲು, ಅಪ್ರಾಪ್ತವನ್ನು ಪ್ರಾಪ್ತ ಮಾಡಿ ಪ್ರಮಾಣಿತ ಮಾಡುವ ಕ್ರಿಯೆಯೇ ಕೌತೂಹಲ. ಇದು ಮನದಲ್ಲಾಗುತ್ತದೆ.

* ಪ್ರತ್ಯೇಕ ಪರಮಾಣುವಿನಲ್ಲಿ ಪರಮಾಣು ಅಂಶಗಳ ಅವಸ್ಥಿತಿ ಮಧ್ಯದಲ್ಲಿ ತಥಾ ಪರಿವೇಶಗಳಲ್ಲಿ ಕಂಡುಬರುತ್ತದೆ. ಪ್ರಥಮ ಪರಿವೇಶದಲ್ಲಿ ಒಂದು ಅಥವಾ ಒಂದಕ್ಕಿಂತ ಅಧಿಕ ಅಂಶ, ಅದೇ ಪ್ರಕಾರ ದ್ವಿತೀಯ, ತೃತೀಯ ತಥಾ ಚತುರ್ಥಾದಿ ಪರಿವೇಶಗಳಲ್ಲಿಯೂ ಒಂದು ಅಥವಾ ಒಂದಕ್ಕಿಂತ ಅಧಿಕ ಅಂಶಗಳು ಕಂಡುಬರುತ್ತದೆ, ಇದು ಮಧ್ಯಾಂಶದ ಎಲ್ಲಾ ದಿಕ್ಕಿನಲ್ಲಿ ಅವಿರತ ರೂಪದಲ್ಲಿ ಭ್ರಮಣಶೀಲವಾಗಿದೆ. ಪ್ರತ್ಯೇಕ ಪರಮಾಣುವಿನ ಎಲ್ಲಾ ದಿಕ್ಕಿನಲ್ಲಿ ತಥಾ ಪರಮಾಣುವಿನ ಘಟನದಲ್ಲಿ ಕಂಡುಬರುವ ಅಂಶಗಳ ಎಲ್ಲಾ ದಿಕ್ಕಿನಲ್ಲಿ ಶೂನ್ಯದ ಸ್ಥಿತಿ ಕಂಡುಬರುತ್ತದೆ. ಶೂನ್ಯದಿಂದ ರಿಕ್ತ ಅಥವಾ ಮುಕ್ತ ಸ್ಥಾನ ಅಥವಾ ವಸ್ತುವಿಲ್ಲ.

ಚೈತನ್ಯ ಇಕಾಯಿಯ (ಘಟನಪೂರ್ಣ ಪರ್ಯಾಣ) ಮಧ್ಯಾಂಶಕ್ಕೆ ಆತ್ಮ, ಅದರ ಪ್ರಥಮ ಪರಿವೇಷೀಯ ಅಂಶಗಳಿಗೆ ಬುದ್ಧಿ, ದ್ವಿತೀಯ ಪರಿವೇಷೀಯ ಅಂಶಗಳಿಗೆ ಚಿತ್ತ, ತೃತೀಯ ಪರಿವೇಷೀಯ ಅಂಶಗಳಿಗೆ ವೃತ್ತಿ ತಥಾ ಚತುರ್ಥ ಪರಿವೇಷೀಯ ಅಂಶಗಳಿಗೆ ಮನವೆಂದು ಸಂಜ್ಞೆ.

57

ಈ ಪೃಥ್ವಿಯ ಮೇಲೆ ಪ್ರತ್ಯಕ್ಷ ರೂಪದಲ್ಲಿ ಸೃಷ್ಟಿ ನಾಲ್ಕು ಅವಸ್ಥೆಯಲ್ಲಿದೆ. ಈ ನಾಲ್ಕು ಅವಸ್ಥೆಗಳಲ್ಲಿ ಪರಮಾಣುಗಳ ಮಧ್ಯಾಂಶ ಮಧ್ಯಸ್ಥ ಕ್ರಿಯೆ, ಏಕೆಂದರೆ ಅದರ ಮೇಲೆ ಸಮ ಅಥವಾ ವಿಷಮದ ಪ್ರಭಾವ ಬೀಳುವುದಿಲ್ಲ.

ಘಟನಶೀಲ ಪರಮಾಣುಗಳಲ್ಲಿ ಶ್ರಮ, ಗತಿ ಹಾಗು ಪರಿಣಾಮ ಘಟಿತವಾಗುತ್ತಲೇ ಇರುತ್ತದೆ. ಚೈತನ್ಯ ಇಕಾಯಿ ರೂಪಿ 'ಜೀವನ'ದಲ್ಲಿ ವಿಶ್ವಾಮಾನುಭೂತಿಯಾಗುವುದು ಕಂಡುಬರುತ್ತದೆ, ಇದೇ ಜಾಗೃತಿ.

ಪದಾರ್ಥಾವಸ್ಥೆಯಲ್ಲಿ ಎಲ್ಲಾ ಪ್ರಜಾತಿಯ ಪರಮಾಣುವಿನ ಅಂತಿಮ ಪರಿವೇಷೀಯ ಅಂಶವೇ ಶ್ರಮದಿಂದ ಸಕ್ರಿಯವಾಗಿರುತ್ತವೆ ಅಥವಾ ಅಗ್ರೇಷಣ ಕ್ರಿಯೆಯಲ್ಲಿ ನಿರತವಾಗಿರುತ್ತವೆ.

ಕ್ಷೋಭ - ಕ್ಷಮತೆ ಹಾಗು ಯೋಗ್ಯತೆಯನ್ನು ಶ್ರಮದಲ್ಲಿ ಪರಿವರ್ತಿತ ಮಾಡಿದ ನಂತರವಾಗುವ ಹಾಸಕ್ಕೆ ಕ್ಷೋಭವೆಂದು ಸಂಜ್ಞೆ.

ಅಗ್ರೇಷಣ - ಕ್ಷಮತೆ ಹಾಗು ಯೋಗ್ಯತೆಯನ್ನು ಶ್ರಮದಲ್ಲಿ ಪರಿವರ್ತಿತ ಮಾಡುವುದರಲ್ಲಾಗುವ ಸಂತುಲನ ಜಾಗೃತಿ ಅಥವಾ ಪಾತ್ರತೆಯ ಅರ್ಹನೆ, ಇದಕ್ಕೆ ಅಗ್ರೇಷಣವೆಂದು ಸಂಜ್ಞೆ.

ಜಡ ಪರಮಾಣುಗಳಲ್ಲಿ ಅಂತಿಮ ಹಾಗು ಅದರ ಮೋದಲಿನ ಪರಿವೇಷೀಯ ಅಂಶವೇ ಸಕ್ರಿಯವಾಗಿ ಶ್ರಮಪೂರ್ವಕ ಯೌಗಿಕ ಕ್ರಿಯೆಯಲ್ಲಿ ಸಂಲಗ್ನವಾಗಿರುತ್ತದೆ. ಅಗ್ರಿಮ ರಚನೆ ಪ್ರಾಣಾವಸ್ಥೆಗಾಗಿ ಅಗ್ರೇಷಿತವಾಗಿರುತ್ತದೆ.

ಜೀವಾವಸ್ಥೆಯಲ್ಲಿ ಶರೀರ ರಚನೆಗಳು ಪ್ರಾಣ ಕೋಶದಿಂದಲೇ ಇರುತ್ತವೆ ಮತ್ತು ಜೀವನದಲ್ಲಿ ವಂಶಾನುಷಂಗಿ ಕಾರ್ಯ ಪ್ರವೃತ್ತಿಯಿರುತ್ತದೆ ಚೈತನ್ಯ ಪರಮಾಣುವಿನಲ್ಲಿ ಚತುರ್ಥ, ತೃತೀಯ, ದ್ವಿತೀಯ ಪರಿವೇಶಗಳ ಅಂಶ ಆಂಶಿಕ ರೂಪದಲ್ಲಿ ಸಕ್ರಿಯವಾಗಿರುತ್ತದೆ ಮತ್ತು ಇದಕ್ಕಿಂತ ಶ್ರೇಷ್ಠ ಅಭಿವ್ಯಕ್ತಿಗಾಗಿ ಅಗ್ರೇಷಿತವಾಗಿರುತ್ತದೆ.

ಜ್ಞಾನಾವಸ್ಥೆಯಲ್ಲಿಯೂ ಶರೀರ ರಚನೆ ಪ್ರಾಣ ಕೋಶಗಳಿಂದಲೇ ಇರುತ್ತವೆ ಮತ್ತು ಜೀವನ ಜಾಗೃತಿ ಶ್ರಮದಲ್ಲಿ ಚತುರ್ಥ, ತೃತೀಯ, ದ್ವಿತೀಯ ಪರಿವೇಶಗಳ ಕ್ರಿಯಾಶೀಲತೆ ವಿಧಿಯಿಂದ ನಾಲ್ಕುವರೆ (4 ½) ಕ್ರಿಯೆಗಳನ್ನು ಶರೀರ ಮೂಲಕ ವಿಧಿಯಿಂದ ವ್ಯಕ್ತ ಮಾಡುತ್ತದೆ.

58

ಜಾಗೃತಿಪೂರ್ವಕ ಅನುಭವ ಮೂಲಕ ವಿಧಿಯಿಂದ ಹತ್ತು ಕ್ರಿಯೆಗಳನ್ನು ಪ್ರಮಾಣಿತಮಾಡುತ್ತದೆ. ಮಾನವ ಶರೀರ ರಚನೆ ಮಾನವ ಪರಂಪರೆಯಲ್ಲಿ 'ಜೀವನ'ದಲ್ಲಾಗುವ ಹತ್ತು ಕ್ರಿಯೆಗಳನ್ನು ಪ್ರಮಾಣಿತ ಮಾಡಲು ಯೋಗ್ಯವಾಗಿರುತ್ತದೆ.

ಜ್ಞಾನಾವಸ್ಥೆಯಲ್ಲಿ ಈಷ್ಟ ಸೇವನೆಯ ಲಕ್ಷ್ಯ ಈಷ್ಟದಲ್ಲಿ ತಾದಾತ್ಮಯ (ತದ್ರೂಪ), ತತ್ಸಾನಿಧ್ಯ ಹಾಗು ತದಾವಲೋಕನ. ಈಷ್ಟದ ನಾಮ ರೂಪ, ಗುಣ ಹಾಗು ಸ್ವಭಾವ ತಥಾ ಸಾಧಕನ ಕ್ಷಮತೆ, ಯೋಗ್ಯತೆ ತಥಾ ಪಾತ್ರತೆಯ ಅನುಪಾತದಲ್ಲಿ ಸಫಲವಾಗುತ್ತದೆ.

☆ ಈಷ್ಟ - ನಿರ್ಭ್ರಾಂತ ಜ್ಞಾನ ಸಹಿತ ಸ್ವೇಚ್ಛಾಪೂರ್ವಕ ಸಹ-ಅಸ್ತಿತ್ವದ ಪ್ರತಿ ಶ್ರದ್ಧಾ, ವಿಶ್ವಾಸ ಹಾಗು ನಿಷ್ಠೆಯೇ ಈಷ್ಟ.

☆ ತಾದಾತ್ಮಯ (ತದ್ರೂಪ) - ಜಾಗೃತಿಯೇ ಪರಮ ಉಪಲಬ್ಧತೆ ಯಾಗಿರುವ ಕಾರಣ

ತದ್ರೂಪ, ಅನುಭವ ಬೋಧದಿಂದ ತದಾತ್ಮಯವಾಗುವುದು ಜೀವನ ಸಹಜ ತಥಾ ಅನುಭವ ಸಹಜ ಕ್ರಿಯೆ. ಸಹ-ಅಸ್ತಿತ್ವದಲ್ಲಿ ಅನುಭವವೇ ತದ್ರೂಪ, ತದಾಕಾರ ವಿಧಿ. ಏಕೆಂದರೆ ನಿಯಮ, ನಿಯಂತ್ರಣ, ಸಂತುಲನ, ನ್ಯಾಯ, ಧರ್ಮ, ಸತ್ಯ, ಅನುಭವದ ಫಲದಲ್ಲಿ ಪ್ರಮಾಣಿತವಾಗುತ್ತದೆ.

☆ ತತ್ಸಾನಿಧ್ಯ - ತತ್ಸಾನಿಧ್ಯದ ಅರ್ಥ ಸುಖ, ಶಾಂತಿ, ಸಂತೋಷ, ಆನಂದದ ಸಾನಿಧ್ಯ

☆ ತದಾವಲೋಕನ - ಸಹ-ಅಸ್ತಿತ್ವದಲ್ಲಿ ದೃಷ್ಟ ಪದ ಪ್ರತಿಷ್ಠವೇ ತದಾವಲೋಕನ ಕ್ರಿಯೆ. ಸಹ-ಅಸ್ತಿತ್ವದ ದೃಷ್ಟ ಜಾಗೃತ ಜೀವನವೇ.

* ಜಾಗೃತಿಯನ್ನು ತತ್ ಶಬ್ದದಿಂದ ಇಂಗಿತ ಮಾಡಲಾಗಿದೆ.

ಜ್ಞಾನಾವಸ್ಥೆಯ ಇಕಾಯಿಯ ಸಮಸ್ತ ಕ್ರಿಯೆಗಳ ಲಕ್ಷ್ಯ ನಿರ್ಬೀಜನ ವ್ಯವಹಾರದ ಉಪಲಬ್ಧತೆ ಯಾಗಿದೆ. ನಿರ್ಬೀಜನದ ತಾತ್ಪರ್ಯ ಭ್ರಮೆ ಮುಕ್ತಿ ಮತ್ತು ಪ್ರಮಾಣ ರೂಪದಲ್ಲಿ ಜಾಗೃತಿ.

☆ ಸಬೀಜನವಾಗಿರುವುದರ ತಾತ್ಪರ್ಯ - ಶರೀರ ಭೌತಿಕ-ರಾಸಾಯನಿಕ ವಸ್ತುವಿನ ರಚನೆಯಾಗಿರುವಾಗ, ಅದನ್ನು 'ಜೀವನ' ಎಂದು ನಂಬುವುದು. 'ಜೀವನ'

59

ಘಟನಪೂರ್ಣ ಪರಮಾಣು ಚೈತನ್ಯ ಇಕಾಯಿಯಾಗಿದೆ ತಥಾ ರಾಸಾಯನಿಕ - ಭೌತಿಕ ಪ್ರಪಂಚದ ದೃಷ್ಟವಾಗಿದೆ.

ನಿರ್ಬೀಜನ ವ್ಯವಹಾರ ಭ್ರಮೆ-ಮುಕ್ತಿಯ ಸ್ಥಿತಿಯಲ್ಲಾಗುತ್ತದೆ.

ನಿರ್ಬೀಜನ ವ್ಯವಹಾರದಲ್ಲಿ ಅಮಾನವೀಯತೆಯಿಂದ ಮುಕ್ತಿ, ಮಾನವೀಯತೆಯ ಪೋಷಣೆ ತಥಾ ಅತಿಮಾನವೀಯತೆಪೂರ್ಣ ಸ್ಥಿತಿಯ ಪ್ರಮಾಣವಾಗಿದೆ.

ಶರೀರದ ನಶ್ವರತೆ ಮತ್ತು 'ಜೀವನ'ದ ಅಮರತ್ವ ಹಾಗು ನಿರಂತರತೆ, ಕಾರ್ಯ-ವ್ಯವಹಾರದ ನಿಯಮಗಳ ಪೂರ್ಣ ಸ್ವೀಕೃತಿ ಹಾಗು ಅನುಭೂತಿಯೇ ನಿರ್ಬೀಜ (ಅನಾಸಕ್ತ) ವಿಚಾರವಾಗಿದೆ ಮತ್ತು ತದನುಸಾರ ವ್ಯವಹಾರವೇ ನಿರ್ಬೀಜನ ವ್ಯವಹಾರ. ಇದೇ ಭ್ರಮೆ ಮುಕ್ತಿ.

ಅನಾಸಕ್ತ ವಿಚಾರವೇ ಜೀವನ ಮುಕ್ತದ ಅಥವಾ ದಿವ್ಯ ಮಾನವನ ಸ್ವಭಾವ - ಸಿದ್ಧ ವೈಚಾರಿಕ ಪ್ರಕ್ರಿಯೆ. ಏಕೆಂದರೆ ಸಂಪೂರ್ಣ ಆಸಕ್ತಿ ಭ್ರಮೆಯಾಗಿದೆ.

ಜೀವನ-ಮುಕ್ತ ಅರ್ಥಾತ್ ಜೀವ ಚೇತನ ಹಾಗು ಭ್ರಮೆ ಮುಕ್ತ ಮಾನವ ಅರ್ಥಾತ್ ಸಹ-ಅಸ್ತಿತ್ವದಲ್ಲಿ ಅನುಭವ ಸಂಪನ್ನ ಮಾನವನಲ್ಲಿ ಭೂತಕಾಲದ ಸ್ಮರಣೆಯಿಂದ ತಥಾ ಭವಿಶ್ಯದ ಆಶೆಯಿಂದ ಪೀಡೆಯಾಗುವುದಿಲ್ಲ ಹಾಗು ವರ್ತಮಾನದಿಂದ ವಿರೋಧವಾಗುವುದಿಲ್ಲ.

ಭ್ರಮೆ ಮುಕ್ತಿ ಅಥವಾ ಜಾಗೃತಿಯೇ ಮಧ್ಯಸ್ಥ ಸ್ಥಿತಿ ಹಾಗು ಗತಿಯಾಗಿದೆ. ಮಧ್ಯಸ್ಥ ಸ್ಥಿತಿ ಪ್ರಾಪ್ತಿಸುವುದರಲ್ಲಿ ಸಮ-ವಿಷಮ ಕ್ರಿಯೆಯ ಕ್ಷೋಭದಿಂದ ಮುಕ್ತಿಯಿದೆ. ಜೀವನದಲ್ಲಿ ಜಾಗೃತಿಪೂರ್ವಕ ಉಪಯೋಗಿತ, ಸದುಪಯೋಗಿತ, ಪ್ರಯೋಜನಶೀಲತೆ, ಪೂರಕತೆ ವಿಧಿಗಳಿಂದ ಸಂತುಷ್ಟವಾಗುವ ವ್ಯವಸ್ಥೆಯಿದೆ. ಜಾಗೃತ ಜೀವನದಲ್ಲಿ ಮಧ್ಯಸ್ಥ ಅರ್ಥಾತ್ ಆತ್ಮ ಅಥವಾ ಅನುಭವ ಬೋಧ ವಿಧಿಯಿಂದಲೇ ಸಂತುಲಿತ, ಸಂತುಷ್ಟವಾಗಿರುವುದು ಕಂಡುಬರುತ್ತದೆ.

* ಜಾಗೃತಿ ಕ್ರಮದಲ್ಲಿ ಸರ್ವಮಾನವ ರೂಪ, ಬಲ, ಧನ, ಪದ ಹೆಚ್ಚಾಗುವುದನ್ನು ಸಮ ಕ್ರಿಯೆ ತಥ ಇವುಗಳಿರುವುದಕ್ಕೆ ಮಧ್ಯಸ್ಥ ಕ್ರಿಯೆ ಹಾಗು ಇವುಗಳು ಕಡಿಮೆಯಾಗುವುದಕ್ಕೆ ವಿಷಮ ಕ್ರಿಯೆಯ ರೂಪದಲ್ಲಿ ಗುರುತಿಸಿರುತ್ತೇವೆ. ಈ ರೀತಿಯಲ್ಲಿ ಜಾಗೃತಿ ಕ್ರಮದಲ್ಲಿ ಭ್ರಮೆವಶ ಸಮ ಹಾಗು ಮಧ್ಯಸ್ಥ ಕ್ರಿಯೆಗಳು ಎಲ್ಲರಿಗೂ ಸ್ವೀಕೃತವಾಗಿರುತ್ತದೆ ತಥಾ ವಿಷಮ ಅಸ್ವೀಕಾರವಾಗಿರುತ್ತದೆ, ಆದ್ದರಿಂದ

60

ಕ್ಷೇಪದಲ್ಲಿರುತ್ತೇವೆ. ಜಾಗೃತ ಮಾನವ ಪರಂಪರೆಯಲ್ಲಿ 'ಜೀವನ'ದ ವೈಭವ ಹಾಗು ಮಹತ್ವಾ ಪ್ರಾಥಮಿಕವಾಗುತ್ತದೆ ತಥಾ ಭೌತಿಕತೆಗಳು ದ್ವಿತೀಯವಾಗುತ್ತದೆ ತಥಾ ಭೌತಿಕತೆ ಸಹಜ ಸಮ, ವಿಷಮ, ಮಧ್ಯಸ್ಥ ಕ್ರಿಯೆಗಳು ನಿಯಂತ್ರಿತವಾಗುತ್ತದೆ.

ಕ್ಷೋಭವೇ ದುಃಖ ಅಥವಾ ಕ್ಷೇಪ.

ಕ್ಷೋಭ ಅಥವಾ ಸಮಸ್ಯೆ ಅಥವಾ ದುಃಖದ ನಿವಾರಣೆಗಾಗಿ ಬಾಳುವ ಆಕೆ ಜಾಗೃತಿಪೂರ್ವಕ ಪ್ರಮಾಣ ಅವಶ್ಯಕತೆಯಿದೆ.

ಬಾಳುವ ಆಳೆಯಲ್ಲಿ ಉದ್ಭವ, ವಿಭವ ಹಾಗು ಪ್ರಳಯ ಸಮಾವಿಷ್ಣುವಾಗಿದೆ. ಜೀವಾವಸ್ಥೆಯ ಶರೀರ ರಚನೆ, ಪ್ರಾಣಾವಸ್ಥೆಯ ರಚನೆ ಕ್ರಿಯೆಯಾಗಿದೆ. ಇದರಲ್ಲಿ ವಿಭವ ಎಲ್ಲಗಿಂತಲೂ ಪ್ರಿಯ, ಇದು ಸ್ಥಾಯಿಯಲ್ಲ. ಭ್ರಮುವಶ ಮಾನವ ವಿಭವದಲ್ಲಿಯೇ ಬಲ, ರೂಪ, ಪದ ಹಾಗು ಧನದ ಸ್ಥಾಯಿಕರಣೆಗಾಗಿ ಪ್ರಯಾಸ ಮಾಡುತ್ತಾನೆ, ಇದು ಇವುಗಳ ಸ್ಥಾಯಿ ಗುಣವಾಗದಿರುವುದರಿಂದ ಅಸಫಲನಾಗಿದ್ದಾನೆ. ಪೂರ್ವೋಕ್ತಾನುಸಾರ ವಿಭವ ಕಾಲದ ಸ್ಥಿರತೆ ತಥಾ ಇದರಲ್ಲಿ ಮಾಡಿರುವ ಉಪಲಬ್ಧತೆ ಗಳ ಸ್ಥಿರತೆ ಸಿದ್ಧವಾಗುವುದಿಲ್ಲ. ಮಾನವನ ವಿಭವ ಜಾಗೃತ ಪರಂಪರೆಯೇ ಆಗಿದೆ.

ಆಕೃತಿಯನ್ನು ರೂಪ, ಪ್ರಭಾವವನ್ನು ಗುಣ, ವಸ್ತುಸ್ಥಿತಿಯನ್ನು ತತ್ವ ತಥಾ ಯಾವುದೇ ರೂಪ, ಕ್ರಿಯೆ, ವಸ್ತು ಹಾಗು ಸ್ಥಾನವನ್ನು ನಿರ್ದೇಶ ಮಾಡುವುದಕ್ಕಾಗಿ ನಿಯುಕ್ತ ಶಬ್ದಕ್ಕೆ 'ನಾಮ' ಎಂದು ಸಂಜ್ಞೆ.

ರೂಪ ಹಾಗು ಗುಣ ನಾಪೇಕ್ಷ ಮತ್ತು ನಾಮಯಿಕ ತಥ್ಯ.

ನಾಮಯಿಕ ತಥ್ಯ - ಯಾವುದೇ ಕ್ರಿಯೆ ಅಥವಾ ಕ್ರಿಯೆ ಸಮುಚ್ಚಯದ ಪರಿಣಾಮ ಭಾವಿಯಾಗಿದೆ, ಇದಕ್ಕೆ ನಾಮಯಿಕ ತಥ್ಯವೆಂದು ಸಂಜ್ಞೆ.

ಸಮಸ್ತ ತತ್ವ ನಿರಪೇಕ್ಷದಲ್ಲಿ ಸಂವೃತ್ತ ಕಾರ್ಯ ನಿರತವಾಗಿದೆ.

ಭಾಷೆಯ ಮೂಲದಲ್ಲಿ ಭಾವ; ಭಾವದ ಮೂಲದಲ್ಲಿ ಮೌಲಿಕತೆ; ಮೌಲಿಕತೆಯ ಮೂಲದಲ್ಲಿ ಮೌಲೀಕರಣೆ; ಮೌಲೀಕರಣೆಯ ಮೂಲದಲ್ಲಿ ದರ್ಶನ; ದರ್ಶನದ ಮೂಲದಲ್ಲಿ ದರ್ಶಕ; ದರ್ಶಕನ ಮೂಲದಲ್ಲಿ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆ; ಕ್ಷಮತೆ ಯೋಗ್ಯತೆ ಹಾಗು ಪಾತ್ರತೆಯ ಮೂಲದಲ್ಲಿ ಸತ್ಯ ಭಾಸ, ಆಭಾಸ, ಪ್ರತೀತಿ ಅನುಭೂತಿ; ಭಾಸ, ಆಭಾಸ,

61

ಪ್ರತೀತಿ ಹಾಗು ಅನುಭೂತಿಯ ಮೂಲದಲ್ಲಿ ಭಾಷೆಯಿದೆ. ಇವೆಲ್ಲಾ ದರ್ಶಕನ ಜಾಗೃತಿಯ ಅನುಸಾರ ಸಫಲವಾಗಿರುವ ಚಿಂತನ ಕ್ರಿಯೆ.

ಪದಾರ್ಥಾವಸ್ಥೆ ಹಾಗು ಜೀವಾವಸ್ಥೆಯ ಸೃಷ್ಟಿ ಮಸ್ತಿಷ್ಕ ರಹಿತ ತಥಾ ಜೀವಾವಸ್ಥೆ ಹಾಗು ಜ್ಞಾನಾವಸ್ಥೆಯ ಸೃಷ್ಟಿ ಮಸ್ತಿಷ್ಕ ಸಂಪನ್ನವಾಗಿದೆ.

▫ ಮಸ್ತಿಷ್ಕ - ಚೈತನ್ಯ ಇಕಾಯಿಯ ಇಚ್ಛೆಗಳು ಹಾಗು ಆಕಾಂಕ್ಷೆಗಳ ಸಂಕೇತವನ್ನು ಗ್ರಹಿಸಲು ಯೋಗ್ಯ ಕ್ಷಮತೆ, ಯೋಗ್ಯತೆ ಮತ್ತು ಪಾತ್ರತೆ ಸಹಿತ ಸಪ್ತಾಣ ಅಂಗವೇ ಮಸ್ತಿಷ್ಕ, ಇದರ ಅವಸ್ಥಿತಿ ಸಾಮ್ಯತಃ ಮಾನವನ ಶಿರೋಭಾಗದಲ್ಲಿ ಕಂಡುಬರುತ್ತದೆ.

ಜೀವನ ಪೂಂಜಸ್ತ ಆಶೆ, ವಿಚಾರ, ಇಚ್ಛೆ, ಋತಂಭರ ಹಾಗು ಪ್ರಾಮಾಣಿಕತೆ (ಪ್ರಮಾಣ)ದ ಪ್ರಸಾರಣ (ಸಂಕೇತ ಗ್ರಹಣ) ಮಸ್ತಿಷ್ಕದ ಮೇಲೆಯೆಯಿದೆ, ಇದರ ಅನಂತರವೇ ಜ್ಞಾನವಾಹಿ ಹಾಗು ಕ್ರಿಯೆವಾಹಿ ಪ್ರಕ್ರಿಯೆಗಳು ಪ್ರತ್ಯೇಕ ಮಾನವ ಶರೀರದಲ್ಲಿ ಕಂಡುಬರುತ್ತದೆ, ಇದು ಮಾನವ ಪರಂಪರೆಯಲ್ಲಿ ಪರಾವರ್ತಿತವಾಗುತ್ತದೆ.

▫ ಪುಂಜ - ಚೈತನ್ಯ ಇಕಾಯಿ ಸಹಜ ಕಾರ್ಯ ಸೀಮೆ ಸಹಿತವಿರುವ ಆಕಾರ, ಇದಕ್ಕೆ ಪುಂಜವೆಂದು ಸಂಜ್ಞೆ. ಇಂತಹ ಪುಂಜದ ಮೂಲದಲ್ಲಿ ಒಂದೇ ಘಟನಪೂರ್ಣ ಪರಮಾಣುವಿನ ಅಸ್ತಿತ್ವವಿದೆ, ಇದರಲ್ಲಿ ಆತ್ಮ, ಬುದ್ಧಿ, ಚಿತ್ತ, ವೃತ್ತಿ ತಥಾ ಮನದ ಕ್ರಿಯೆಗಳು ದ್ರುಷ್ಪವ್ಯವಾಗಿದೆ.

▫ ಪ್ರಸಾರಣೆ - ಆಶೆ, ವಿಚಾರ, ಇಚ್ಛೆ, ಋತಂಭರ ಹಾಗು ಪ್ರಾಮಾಣಿಕತೆ ಸಹಜ ಪ್ರಮಾಣಗಳ ಸಂಕೇತದಿಂದ ಮಸ್ತಿಷ್ಕ ತಂತ್ರದ ಮೇಲೆ ಪ್ರಭಾವವನ್ನು ಹಾಕುವುದಕ್ಕಾಗಿ ನಿಯುಕ್ತ ತರಂಗಕ್ಕೆ ಪ್ರಸಾರಣವೆಂದು (ಸಂಕೇತ ಗ್ರಹಣ) ಸಂಜ್ಞೆ, ಇದರಿಂದ ಪ್ರತ್ಯಾಶವಿರುವುದು ಅವಶ್ಯಕ.

ಗ್ರಹಣೆ, ವಿಸರ್ಜನೆ, ನಿಗ್ರಹ, ಸಂಗ್ರಹ ಹಾಗು ಉದಾರತೆಯ ಭೇದದಿಂದಲೇ ಸಮಸ್ತ ಸುಖಾಕಾಂಕ್ಷೆಗಳಿವೆ.

▫ ಗ್ರಹಣ - ಉಪಯೋಗಿತೆಯ ಮೌಲಿಕರಣೆಗೆ ಗ್ರಹಣವೆಂದು ಸಂಜ್ಞೆ

▫ ವಿಸರ್ಜನೆ - ಅನುಪಯೋಗಿತೆಗೆ ವಿಸರ್ಜನೆಯೆಂದು ಸಂಜ್ಞೆ

0%