ಮಾನವ ವ್ಯವಹಾರ ದರ್ಶನ

ಸರ್ವ ಶುಭವಾಗಲಿ

87

ಸರ್ವ ಶುಭವಾಗಲಿ

88

ಅಧ್ಯಾಯ ೬

ಕರ್ಮ ಏವಂ ಫಲ

ಸಂಪೂರ್ಣ ವ್ಯವಹಾರದಿಂದ ಮಾನವ ಸುಖದ ಕಾಮನೆ ಮಾಡಿದ್ದಾನೆ.

ಮಾನವೀಯತೆಯೇ ಸುಖ, ಸಮಾಧಾನ ಹಾಗು ಸದುಪಯೋಗಿತೆಯನ್ನು ಸಿದ್ಧ ಮಾಡುವ ವ್ಯವಸ್ಥೆ ಹಾಗು ವ್ಯವಹಾರದ ಪ್ರಮಾಣ ಸಮರ್ಥನ ತಥಾ ಅನುಸರಣೆ ಸುಖಿಯಾಗಲು ಮಾತ್ರ ಒಂದೇ ವಿಧಿಯಾಗಿದೆ.

ಪ್ರತ್ಯೇಕ ಕರ್ಮದಲ್ಲಿ ಕರ್ತಾ, ಕಾರ್ಯ, ಕಾರಣ, ಪ್ರಭಾವ ಮತ್ತು ಫಲ ನಿಹಿತವಾಗಿದೆ. ಏಕೆಂದರೆ ಕರ್ತವಿಲ್ಲದೆ ಕಾರ್ಯ, ಕಾರ್ಯವಿಲ್ಲದೆ ಕಾರಣ, ಕಾರಣವಿಲ್ಲದೆ ಪ್ರಭಾವ, ಪ್ರಭಾವವಿಲ್ಲದೆ ಫಲ, ಫಲವಿಲ್ಲದೆ ಅವಶ್ಯಕತೆ ಹಾಗು ಅವಶ್ಯಕತೆಯಿಲ್ಲದೆ ಕರ್ತಾವಿನ ಪದ ಸಿದ್ಧವಿಲ್ಲ.

¤ ಕರ್ತಾ - ಯಾವ ಕಾರ್ಯದಲ್ಲಿ ಎಷ್ಟು ವಿಚಾರ ಪಕ್ಷದ ನಿಯೋಜನೆವಿದೆಯೋ, ಆ ವಿಚಾರ ಪಕ್ಷವೇ ಆ ಕಾರ್ಯದ ಕರ್ತಾ ಪದವನ್ನು ಸ್ಪಷ್ಟಮಾಡುತ್ತದೆ.

¤ ಕಾರ್ಯ - ವಿಚಾರ ಪಕ್ಷದ ಆಕಾರದ ಅನುಕರಣ ಮಾಡಲು ಜಡ ಪಕ್ಷದ ಮೇಲೆ ಶ್ರಮಕ್ಕೆ ಕಾರ್ಯವೆಂದು ಸಂಜ್ಞೆಯಿದೆ.

¤ ಕಾರಣ - ಪ್ರತ್ಯೇಕ ಸೂಕ್ಷ್ಮ ಕ್ರಿಯೆ ಅರ್ಥಾತ್ ವಿಚಾರದ ಉದ್ದಮಕ್ಕಾಗಿ ಪ್ರಮುಖ ಸ್ಪಂದನವೇ ಅರಿವು. ಅರಿವಿನ ಮೂಲ ಸ್ಪಂದನವೇ ಸಹ- ಅಸ್ತಿತ್ವ. ಕ್ರಿಯೆಯ ವ್ಯತ್ಯಭೂಮಿಯೇ ವಿಚಾರ. ಇದೇ ಸಂಸ್ಕಾರದ ಪ್ರಮಾಣ.

¤ ಪ್ರಭಾವ - ಯಾವುದೇ ಫಲ ಪರಿಣಾಮವನ್ನು ಪ್ರಕಟಿಸುವುದಕ್ಕಾಗಿ ಕಂಡುಬರುವ ಸ್ಪಷ್ಟ ಪ್ರೇರಣೆ ಅಥವಾ ಸ್ವರೂಪಕ್ಕೆ ಪ್ರಭಾವವೆಂದು ಸಂಜ್ಞೆ. ಪ್ರತ್ಯೇಕ ಘಟನೆ ಮತ್ತು ಫಲ ಪರಿಣಾಮ ಪ್ರೇರಣೆ ಮತ್ತು ಸ್ವರೂಪದಿಂದಲೇ ಪ್ರಕಟವಾಗುತ್ತದೆ.

¤ ಅವಶ್ಯಕತೆ - ಸಂಪರ್ಕ ಹಾಗು ಸಂಬಂಧದ ನಿರ್ವಾಹಕ್ಕಾಗಿ ಉಪಯೋಗಕ್ಕಿರುವ

89

ಪ್ರವೃತ್ತಿಗಳಿಗೆ ಅವಶ್ಯಕತೆಯೆಂದು ಸಂಜ್ಞೆ. ಎಲ್ಲಾ ಯೋಗಗಳಲ್ಲಿ ಉಪಯೋಗ, ಸಮಪಯೋಗ, ಪ್ರಯೋಜನ ನಿಹಿತವಾಗಿದೆ.

ಕರ್ತವ್ಯದಿಂದ ಕಾರ್ಯದ ಸಂಪಾದನೆ ಅವಶ್ಯಕತೆಯ ಪೂರ್ತಿಗಾಗಿ ಅಥವಾ ದಾಯಿತ್ವ ಕರ್ತವ್ಯದ ಪಾಲನೆಗಾಗಿ ಮಾಡಲಾಗುತ್ತದೆ.

ಸಂಪೂರ್ಣ ಕೃತಿಗಳು ಹಾಸದ ದಿಕ್ಕಿನಲ್ಲಿ ಅಥವಾ ವಿಕಾಸದ ದಿಕ್ಕಿನಲ್ಲಿಯೆಯಿದೆ.

ಕಾರಣ (ಕ್ರಿಯೆಯ ಪೃಷ್ಠಭೂಮಿ) ಸ್ವರೂಪ ಅಥವಾ ಪ್ರೇರಣೆ ಭೇದದಿಂದಿದೆ, ಇದು ಸಂಸ್ಕಾರದ ರೂಪ.

ಪ್ರಭಾವ ಸಮ, ವಿಷಮ, ಮಧ್ಯಸ್ಥ ಮೂರೇ ಪ್ರಕಾರಗಳಿವೆ, ಇವು ಕ್ರಿಯೆ-ಪ್ರತಿಕ್ರಿಯೆ, ಫಲ-ಪರಿಣಾಮದ ರೂಪದಲ್ಲಿ ಪರಿಲಕ್ಷಿತವಾಗುತ್ತವೆ.

ಫಲದ ಎರಡು ಭೇದಗಳಿವೆ - ಪೂರ್ಣ ಫಲ ಮತ್ತು ನ್ಯೂನ ಫಲ. ಪ್ರತ್ಯೇಕ ಕ್ರಿಯೆ ಯಾವುದೇ ಅವಶ್ಯಕತೆಯ ಪೂರ್ತಿಗಾಗಿ ಸಂಪನ್ನ ಮಾಡಲಾಗುತ್ತದೆ. ಕ್ರಿಯೆಯ ಪ್ರತಿಕ್ರಿಯೆಯ ಅಂತಿಮ ಪರಿಣಾಮದಲ್ಲಿ ಆಶಯದ ಪೂರ್ತಿಯಾದ ನಂತರ ಪೂರ್ಣ ಫಲ ಹಾಗು ಅಪೂರ್ತಿಯಾದ ನಂತರ ನ್ಯೂನ ಫಲವೆಂದು ಸಂಜ್ಞೆ.

ಸಾಧಕ, ಸಾಧ್ಯ ಹಾಗು ಸಾಧನ ಸಮುಚ್ಚಯದ ಔಚಿತ್ಯತೆ ಸಮನ್ವಿತವಾದ ನಂತರ ಪೂರ್ಣ ಫಲವಾಗುತ್ತದೆ.

ಮಾನವನಿಂದ ಮಾನವೀಯತೆಯ ಪ್ರತಿ ಕರ್ತವ್ಯ-ಬುದ್ಧಿಯನ್ನು ಅಂಗೀಕರಿಸದೆ ಜಾಗೃತಿ, ಜಾಗೃತಿಯಿಲ್ಲದೆ ಸಮಾಧಾನ-ಸಮೃದ್ಧಿ, ಸಮಾಧಾನ-ಸಮೃದ್ಧಿಯಿಲ್ಲದೆ ಮಾನವತ್ವ-ಸಮತ್ವ, ಮಾನವತ್ವ-ಸಮತ್ವವಿಲ್ಲದೆ ಪೂರ್ಣ ಫಲ, ಪೂರ್ಣ ಫಲವಿಲ್ಲದೆ ಪರಂಪರೆಯಲ್ಲಿ ಸ್ವರೂಪ ಅಥವಾ ಪ್ರೇರಣೆ ಮತ್ತು ಸ್ವರೂಪ ಅಥವಾ ಪ್ರೇರಣೆಯಿಲ್ಲದೆ ಕರ್ತವ್ಯ ಬುದ್ಧಿ ಪ್ರಾಪ್ತವಾಗುವುದಿಲ್ಲ.

ಮಾನವೀಯತೆಪೂರ್ಣ ಬುದ್ಧಿಯಿಂದ ನಿಶ್ಚಿತ ಕರ್ತವ್ಯದ ಪರಿಪಾಲನೆಯಿಂದ ಮಾನವ ಸಫಲ ಹಾಗು ಸುಖಿಯಾಗಿದ್ದಾನೆ.

✠ ಕಾರಣ - ಚೇಷ್ಟೆಯನ್ನು ಆಶೆ, ವಿಚಾರ, ಇಚ್ಛೆ ಹಾಗು ಋತಂಭರಪೂರ್ವಕ ಕಾರ್ಯ ಚೇಷ್ಟೆಯಲ್ಲಿ ಪ್ರವೃತ್ತ ಮಾಡುವುದಕ್ಕಾಗಿ ಪ್ರಾಪ್ತ ಪೃಷ್ಠಭೂಮಿಗೆ ಕಾರಣವೆಂದು ಸಂಜ್ಞೆ.

✠ ಪ್ರಭಾವ - ವಾತಾವರಣ, ಅಧ್ಯಯನ ಹಾಗು ಅಭ್ಯಾಸಪೂರ್ವಕ ಪೂರ್ಣ

90

ಸಂಸ್ಕಾರವೇ ಪ್ರಭಾವ.

✧ ಫಲ - ಸಂಸ್ಕಾರದ ಪ್ರಭಾವವೇ ಫಲ.

ಮಾನವನಲ್ಲಿ ಅಧ್ಯಾಸದಿಂದ ವಂಶಾನುಷಂಗಿಕ ಶರೀರ ಸಂರಚನೆ ಹಾಗು ಯೋಗದ ಘಟನೆಯಿದೆ. ಚೈತನ್ಯ ಪಕ್ಷದಲ್ಲಿ ಸಂಸ್ಕಾರ ಮನ, ವೃತ್ತಿ, ಚಿತ್ತ ಹಾಗು ಬುದ್ಧಿ ಜಾಗೃತವಾಗುವ ರೂಪದಲ್ಲಿ ಉಪಲಬ್ಧವಾಗಿದೆ, ಇದು ಮಾನವೀಯತೆ ಮತ್ತು ಅತಿಮಾನವೀಯತೆಯ ರೂಪದಲ್ಲಿ ಪರಿಲಕ್ಷಿತವಾಗುತ್ತದೆ. ಇದು ಜಾಗೃತ ಪರಂಪರೆಯ ಕೊಡುಗೆ.

✧ ಅಧ್ಯಾಸ - ಅಧ್ಯಾಸದ ತಾತ್ಪರ್ಯ ಪ್ರಾಣಾವಸ್ಥೆಯಲ್ಲಿ ಕಾರ್ಯರತ ಪ್ರಾಣಕೋಶಗಳಲ್ಲಿ ಸ್ಪಷ್ಟವಾಗಿರುತ್ತದೆ. ಇದರ ಸ್ವರೂಪ ಪ್ರಾಣಸೂತ್ರಗಳಲ್ಲಿ ನಿಹಿತ ರಚನೆ ವಿಧಿಯಾಗಿದೆ.

“ಸರ್ವ ಶುಭವಾಗಲಿ”

91

ಅಧ್ಯಾಯ - ಏಳು

ಮಾನವೀಯ ವ್ಯವಹಾರ

ವ್ಯವಹಾರದ ಲೌಕಿಕ ಹಾಗು ಪಾರಲೌಕಿಕ ಎರಡು ಭೇದಗಳಿವೆ.

ಲೌಕಿಕ ವ್ಯವಹಾರ - ಜಾಗೃತ ಮಾನವ ಪರಂಪರೆಯಲ್ಲಿ ಪುತ್ರೇಷಣ, ವಿತ್ತೇಷಣ ಹಾಗು ಲೋಕೇಷಣಾತ್ಮಕ ಕಾರ್ಯ-ವ್ಯವಹಾರವಾಗಿದೆ. ಭ್ರಮಿತ ಮಾನವ ಪರಂಪರೆಯಲ್ಲಿ ಕಾರ್ಯ ವ್ಯವಹಾರ ನಾಲ್ಕು ವಿಷಯಗಳಲ್ಲಿ ಗ್ರಹಿತವಾಗಿರುವುದು ಕಂಡುಬರುತ್ತದೆ.

¤ ವಿಷಯ ಚತುಷ್ಪಯ - ಆಹಾರ, ನಿದ್ರಾ, ಭಯ ಮತ್ತು ಮೈಥುನ

ಅನುಭವ ಮೂಲಕ ವಿಧಿಯಿಂದ ಜಾಗೃತಿಯಿಂದ ಸಮಾಧಾನ, ಸಮೃದ್ಧಿ, ಅಭಯ, ಸಹ ಅಸ್ತಿತ್ವ ಸಹಜ ಪ್ರಮಾಣ ಪರಂಪರೆ ರೂಪದಲ್ಲಿ ಪಾರಲೌಕಿಕತೆಯಿದೆ.

ಪಾರಲೌಕಿಕ ವ್ಯವಹಾರ - ಅನುಭವ ಮೂಲಕ ಆತ್ಮಕೇಂದ್ರಿತ ಸಮಾಧಾನ, ಸಮೃದ್ಧಿ, ಅಭಯ, ಸಹ-ಅಸ್ತಿತ್ವ ಸಹಜ ಪ್ರಮಾಣ ಅಭಿಮುಖ ವ್ಯವಹಾರಕ್ಕೆ ಪಾರಲೌಕಿಕವೆಂದು ಸಂಜ್ಞೆ.

ಮಾನವ ಯಾವುದನ್ನು ಲಕ್ಷ್ಯವೆಂದು ನಂಬುತ್ತಾನೋ ಅದನ್ನು ಪಡೆಯಲು ಪ್ರಯಾಸರತನಾಗುತ್ತಾನೆ. ಮಾನವನ ಲಕ್ಷ್ಯ ಸಮಾಧಾನ, ಸಮೃದ್ಧಿ, ಅಭಯ, ಸಹ-ಅಸ್ತಿತ್ವವೇ.

ಲಕ್ಷ್ಯ ಭೇದದಿಂದ ಪ್ರಯಾಸ, ಪ್ರಯಾಸ ಭೇದದಿಂದ ಪ್ರಗತಿ, ಪ್ರಗತಿ ಭೇದದಿಂದ ಫಲ, ಫಲ ಭೇದದಿಂದ ಪ್ರಭಾವ, ಪ್ರಭಾವ ಭೇದದಿಂದ ಅನುಭವ, ಅನುಭವ ಭೇದದಿಂದ ಪ್ರತಿಭಾವ, ಪ್ರತಿಭಾವ ಭೇದದಿಂದ ಸ್ವಭಾವ, ಸ್ವಭಾವ ಭೇದದಿಂದ ಯಥಾರ್ಥ, ಯಥಾರ್ಥತೆಯೇ ಮಾನವ ಲಕ್ಷ್ಯ ಸಹಜ ಪರಂಪರೆ.

¤ ಲಕ್ಷ್ಯ - ಜಾಗೃತಿಯಿಂದಲೇ ಮಾನವ ಲಕ್ಷ್ಯ ಸುನಿಶ್ಚಿತವಾಗುತ್ತದೆ. ಇದು ಸಮಾಧಾನ, ಸಮೃದ್ಧಿ, ಅಭಯ, ಸಹ-ಅಸ್ತಿತ್ವ ಸಹಜ ಪ್ರಮಾಣ.

¤ ಪ್ರಯಾಸ - ಲಕ್ಷ್ಯದ ಉಪಲಬ್ಧತೆಗಾಗಿ ಯತ್ನದಿಂದ ಮಾಡಲಾಗುವ ಕಾರ್ಯಕ್ಕೆ ಪ್ರಯಾಸವೆಂದು ಸಂಜ್ಞೆ.

¤ ಪ್ರಗತಿ - ಪೂರ್ವಗಿಂತ ಭಿನ್ನ ಮುಂದೆ ಗುಣಾತ್ಮಕ ವಿಕಾಸದ ದಿಕ್ಕಿನಲ್ಲಿ ಗತಿಗೆ ಪ್ರಗತಿಯೆಂದು ಸಂಜ್ಞೆ. ಶ್ರೇಷ್ಠತೆ ಮತ್ತು ಗುರುಮೌಲ್ಯದ ದಿಕ್ಕಿನಲ್ಲಿ

92

ಗತಿ. ¤ ಫಲ - ಯಾವ ಅವಧಿಯ ನಂತರ ಕ್ರಿಯೆ ಪ್ರಣಾಳಿ ಬದಲಾವಣೆಯಾಗುತ್ತದೋ, ಆ ಅವಧಿಗೆ ಫಲವೆಂದು ಸಂಜ್ಞೆ. ¤ ಪ್ರಭಾವ - ಬದಲಾವಣೆಗಾಗಿರುವ ಸ್ವೀಕೃತಿ ಪ್ರಭಾವವೆಂದು ಸಂಜ್ಞೆ. ¤ ಅನುಭವ - ಅನುಕ್ರಮದಿಂದ ಪ್ರಾಪ್ತ ಅರಿವು ಅಥವಾ ಅನುಕ್ರಮದಲ್ಲಿ ನಿಹಿತ ಪ್ರಭಾವಗಳ ಪೂರ್ಣ ಸ್ವೀಕೃತಿಯೇ ಅನುಭವ. ¤ ಪ್ರತಿಭಾವ - ಅನುಭವದ ನಂತರ ಬೋಧ, ಸಾಕ್ಷಾತ್ಕಾರದ ರೂಪದಲ್ಲಿ ಪ್ರಮಾಣಿತ ಮಾಡುವುದಕ್ಕಾಗಿರುವ ಪ್ರವೃತ್ತಿಯೇ ಪ್ರತಿಭಾವ. ¤ ಸ್ವಭಾವ - ಪ್ರತಿಭಾವದಿಂದ ಯುಕ್ತ ಸ್ವಮೌಲೀಕರಣೆಗೆ ಸ್ವಭಾವವೆಂದು ಸಂಜ್ಞೆ ¤ ಆಸಕ್ತಿ - ಹಾಸ ಅಥವಾ ಭ್ರಮೆಯ ದಿಕ್ಕಿನಲ್ಲಾಗುವ ಅಥವಾ ಭ್ರಮೆಯ ದಿಕ್ಕಿನಲ್ಲಿ ಮಾಡಲಾಗುವ ತಪ್ಪುಗಳನ್ನು ಸರಿಯೆಂದು ನಂಬುವುದೇ ಆಸಕ್ತಿ. ಇದೇ ಅಮಾನವೀಯತೆ. ¤ ಭಾವ - ಮೌಲೀಕರಣ್ ಹಾಗು ಮೌಲಿಕತೆಗೆ ಭಾವವೆಂದು ಸಂಜ್ಞೆ. ಭಾವ ಮೌಲಿಕತೆ, ಹಾಗು ಯಾವ ಅವಸ್ಥೆ ಮತ್ತು ಪದದಲ್ಲಿರುವ ಅರ್ಥ, ಸ್ವಭಾವ ಮತ್ತು ಧರ್ಮದ ರೂಪದಲ್ಲಿರುತ್ತದೆಯೋ, ಅವು ಅದರ ಮೌಲಿಕತೆ. ಮಾನವ ಸುಖಧರ್ಮ. ಧೀರತೆ, ವೀರತೆ, ಉದಾರತೆ, ದಯೆ, ಕೃಪಾ, ಕರುಣೆಯೇ ಸ್ವಭಾವ. ಭಾವ = ಮೌಲಿಕತೆ = ಮೌಲ್ಯ = ಜವಾಬ್ದಾರಿ, ಭಾಗವಹಿಸುವಿಕೆ = ಫಲ ಪರಿಣಾಮ = ಮೌಲೀಕರಣ್. ಆದರೆ ಭ್ರಮಿತ ಮಾನವನಲ್ಲಿ ಹೀನತೆ, ದೀನತೆ, ಕ್ರೂರತೆ ಸ್ವಭಾವವಾಗಿದೆ. ಹಾಗು ಆಸಕ್ತಿ ಮತ್ತು ಪ್ರಲೋಭನೆಯನ್ನು ಧರ್ಮವೆಂದು ನಂಬಿರುತ್ತಾನೆ.

ಲೋಕ ಹಾಗು ಲೋಕೇಶ ಭೇದದಿಂದ ಲಕ್ಷ್ಯ, ಅಂತರಂಗ ಹಾಗು ಬಹಿರಂಗ ಭೇದದಿಂದ ಯತ್ನ, ವೃಷ್ಟಿ ಹಾಗು ಸಮಷ್ಟಿ ಭೇದದಿಂದ ಪ್ರಯಾಸ, ಹಾಸ ಹಾಗು ವಿಕಾಸ ಭೇದದಿಂದ ಪ್ರಗತಿ, ನ್ಯೂನ ಹಾಗು ಪೂರ್ಣ ಭೇದದಿಂದ ಫಲ, ಸಮ-ವಿಷಮ ಹಾಗು ಮಧ್ಯಸ್ಥ

93

ಭೇದದಿಂದ ಪ್ರಭಾವ, ಇಂದ್ರಿಯ ಹಾಗು ಇಂದ್ರಿಯಾತೀತ ಭೇದದಿಂದ ಅನುಭವ, ಸಹಜ ಹಾಗು ಅಸಹಜ ಭೇದದಿಂದ ಪ್ರತಿಭಾವ, ವಿಹಿತ ಹಾಗು ಅವಿಹಿತ ಭೇದದಿಂದ ಪ್ರವೃತ್ತಿ ಹಾಗು ಆಸಕ್ತಿ ತಥಾ ಉಚ್ಚ ಮತ್ತು ನೀಚ ಭೇದದಿಂದ ಭಾವದ ಸ್ಥಿತಿ ಮಾನವನಲ್ಲಿದೆ. ಜೀವನವೇ ಲಕ್ಷ್ಯದ ಧಾರಕ-ವಾಹಕ.

ಪರಿಣಾಮವಾದಿ ಲಕ್ಷ್ಯವನ್ನು ಲೋಕ ಹಾಗು ಅದರಿಂದ ಮುಕ್ತವಾಗಿರುವುದಕ್ಕೆ ಲೋಕೇಶ; ಮನ, ವೃತ್ತಿ, ಚಿತ್ತ ಹಾಗು ಬುದ್ಧಿಯಿಂದ ಮಾಡಲಾಗುವ ಕಾರ್ಯಕ್ಕೆ ಅಂತರಂಗ ಹಾಗು ಶಬ್ದ, ಸ್ಪರ್ಶ, ರೂಪ, ರಸ, ಗಂಧೇಂದ್ರಿಯಗಳಿಂದ ಮಾಡಲಾಗುವ ಕಾರ್ಯಕ್ಕೆ ಬಹಿರಂಗ, ಇಕಾಯಿ ತ್ವಕ್ಕೆ ವೃತ್ತಿ ಹಾಗು ಸಂಪೂರ್ಣಕ್ಕೆ ಸಮಷ್ಟಿ, ಅವನತಿಯ ದಿಕ್ಕಿನಲ್ಲಿ ಹಾಸ, ಉನ್ನತಿಯ ದಿಕ್ಕಿನಲ್ಲಿ ವಿಕಾಸ, ಯಾವ ಪ್ರಾಪ್ತಿಯಿಂದ ವಂಚಿತ ಆಶಯದ ಪೂರ್ತಿಯಿದೆಯೋ ಅದರಿಂದ ಪೂರ್ಣಫಲ ಹಾಗು ಅನ್ಯಥವಾಗಿ ನ್ಯೂನ ಫಲ, ಉದ್ಭವವಾದಿ ಪ್ರಭಾವಕ್ಕೆ ಸಮ, ವಿಭವವಾದಿ ಪ್ರಭಾವಕ್ಕೆ ಮಧ್ಯಸ್ಥ ಹಾಗು ಪ್ರಳಯವಾದಿ ಪ್ರಭಾವಕ್ಕೆ ವಿಷಮ, ಶಬ್ದ, ಸ್ಪರ್ಶ, ರೂಪ, ರಸ, ಗಂಧೇಂದ್ರಿಯಗಳಿಂದ ಮಾಡಲಾಗುವ ವ್ಯವಹಾರದಿಂದ ಮಾತ್ರ ಪ್ರಾಪ್ತ ಸೂಚನೆಗೆ ಇಂದ್ರಿಯಾನುಭವ ಹಾಗು ಮನ, ವೃತ್ತಿ, ಚಿತ್ತ ಹಾಗು ಬುದ್ಧಿಯಿಂದ ಆತ್ಮದಲ್ಲಾಗುವ ಅನುಭವವನ್ನು ಪ್ರಮಾಣಿತ ಮಾಡುವ ಪ್ರವೃತ್ತಿಗಳಿಗೆ ಅತೀಂದ್ರಿಯಾನುಭವ ಅಥವಾ ಇಂದ್ರಿಯಾತೀತ ಅನುಭವ, ಯಥಾರ್ಥದ ದಿಕ್ಕಿನಲ್ಲಿರುವ ಪ್ರೇರಣೆಗೆ ಸಹಜ ಪ್ರತಿಭಾವ ಹಾಗು ಅದರ ವಿಪರೀತದಲ್ಲಿ ಅಸಹಜ ಪ್ರತಿಭಾವ, ನ್ಯಾಯ, ಧರ್ಮ ಹಾಗು ಸತ್ಯದ ಪ್ರತಿಯಿರುವ ನಿಷ್ಠೆಗೆ ವಿಹಿತ ಸ್ವೀಕೃತಿ ಹಾಗು ಅದರ ವಿಪರೀತದಲ್ಲಿ ಅವಿಹಿತ ಆಸಕ್ತಿ, ಸಮಾಧಾನವಾದಿ ಭಾವಕ್ಕೆ ಉಚ್ಚ ಭಾವ ಹಾಗು ಸಮಸ್ಯಾವಾದಿ ಪ್ರವೃತ್ತಿಗೆ ನೀಚ ಭಾವವೆಂದು ಸಂಜ್ಞೆಯಿದೆ.

ಅಧ್ಯಯನ ವಿಧಿಯಿಂದ ಸಹ-ಅಸ್ತಿತ್ವ ರೂಪಿ ಸತ್ಯ ಸಹಜ ಮನದಲ್ಲಿ ಪುಷ್ಟಿ ಮನನ (ಸ್ವೀಕರಿಸುವ ರೂಪದಲ್ಲಿ), ವೃತ್ತಿಯಲ್ಲಿ ಪುಷ್ಟಿ ತುಲನ (ಗುಣಾತ್ಮಕ ವಿಧಿಯಿಂದ), ಚಿತ್ತದಲ್ಲಿ ಪುಷ್ಟಿ ಸಾಕ್ಷಾತ್ಕಾರ, ಬುದ್ಧಿಯಲ್ಲಿ ಪುಷ್ಟಿಗೆ ಬೋಧವೆಂದು ಸಂಜ್ಞೆ.

ಅಜ್ಞಾನದ ಮೂಲದಲ್ಲಿ ಅಹಂಕಾರ (ಅಬೋಧತೆ) ಹಾಗು ಜ್ಞಾನದ ಮೂಲದಲ್ಲಿ ಆತ್ಮಬೋಧ ಹಾಗು ಸಹ-ಅಸ್ತಿತ್ವದ ರೂಪಿ ಪರಮ ಸತ್ಯಬೋಧವನ್ನು ಪಡೆಯಲಾಗಿದೆ.

94

ಸ್ವರೂಪ, ಪ್ರೇರಣೆ ಹಾಗು ಕ್ರಾಂತಿಯ ಭೇದದಿಂದ ಮನನ, ಸಂತುಲನ ಅಥವಾ ಅಸಂತುಲನದ ಭೇದದಿಂದ ತುಲನ, ಅರ್ಥಪೂರ್ಣ ಅಥವಾ ಆರೋಪದ ಭೇದದಿಂದ ಚಿತ್ರಣ ಹಾಗು ಅನುಭವಮೂಲಕ ವಿಧಿಯಿಂದ ಸತ್ಯ ಬೋಧವಿದೆ.

ಸಂತುಲನದಿಂದ (ಶ್ರೇಯ) ಪ್ರಾಪ್ತ ಸಂವೇಗಕ್ಕೆ ಸ್ವರೂಪ ಹಾಗು ಪ್ರೇರಣೆ ಮತ್ತು ಅಸಂತುಲನದಿಂದ (ಪ್ರೇಯ) ಪ್ರಾಪ್ತ ಸಂವೇಗಕ್ಕೆ ಪ್ರತಿಕ್ರಾಂತಿಯೆಂದು ಸಂಜ್ಞೆ.

ನ್ಯಾಯಾನ್ಯಾಯ, ಧರ್ಮಾಧರ್ಮ, ಸತ್ಯಾಸತ್ಯ ದೃಷ್ಟಿಕೋಣದಿಂದ ಮಾಡಿರುವ ತುಲನಕ್ಕೆ ಸಂತುಲಿತ ಹಾಗು ಪ್ರಿಯಾಪ್ರಿಯ, ಹಿತಾಹಿತ, ಆಭಾಲಾಭ ದೃಷ್ಟಿಕೋಣದಿಂದ ಮಾಡಿರುವ ತುಲನಕ್ಕೆ ಅಸಂತುಲಿತ ವೃತ್ತಿಯೆಂದು ಸಂಜ್ಞೆ ನೀಡಲಾಗುತ್ತದೆ.

ನ್ಯಾಯಾನ್ಯಾಯ, ಧರ್ಮಾಧರ್ಮ, ಸತ್ಯಾಸತ್ಯ ದೃಷ್ಟಿಕೋಣದಿಂದ ಮಾಡಲಾಗಿರುವ ಚಿಂತನ ಹಾಗು ಚಿತ್ರಣಕ್ಕೆ ಯಥಾರ್ಥ ಹಾಗು ಪ್ರಿಯಾಪ್ರಿಯ, ಹಿತಾಹಿತ, ಲಾಭಾಲಾಭದ ದೃಷ್ಟಿಕೋಣದಿಂದ ಮಾಡಲಾಗಿರುವ ಚಿತ್ರಣಕ್ಕೆ ಅಯಥಾರ್ಥ ಚಿತ್ರಣವೆಂದು ಸಂಜ್ಞೆಯಿದೆ.

ಅನುಭವದ ಸಾಕ್ಷಿಯಲ್ಲಿ ಮಾಡಲಾಗಿರುವ ಬೋಧಕ್ಕೆ ಸತ್ಯಬೋಧ ಹಾಗು ಇದರ ವಿವರೀತದಲ್ಲಿ ಸಂವೇದನೆಗಳನ್ನು ಸತ್ಯವೆಂದು ನಂಬುವುದೇ ಭ್ರಮೆ, ಇದೇ ಅಸತ್ಯ. ಅಸತ್ಯವನ್ನು ಸತ್ಯವೆಂದು ನಂಬುವುದೇ ಅಹಂಕಾರ. ಯಾವ ರೀತಿಯಲ್ಲಿ ಅಸತ್ಯದ ಅಸ್ತಿತ್ವವಿಲ್ಲವೋ, ಅದೇ ರೀತಿಯಲ್ಲಿ ಅಹಂಕಾರದ ಅಸ್ತಿತ್ವವಾಯಿಲ್ಲ. ಅಸತ್ಯವನ್ನು ಸತ್ಯವೆಂದು ನಂಬುವ ಕಾರ್ಯ ಚಿತ್ತದಲ್ಲಿ ಚಿತ್ರಿತವಾಗುತ್ತದೆ. ಇದು ಕಲ್ಪನೆಯ ಆಧಾರದ ಮೇಲೆ ಘಟಿತವಾಗುತ್ತದೆ.

ಕರ್ತವ್ಯದ ದಿಕ್ಕಿನಲ್ಲಿ ಅಗ್ರೇಶಿತ ಸಂವೇಗಕ್ಕೆ ಸ್ವರೂಪ ಹಾಗು ಪ್ರೇರಣೆ ಹಾಗು ವಿವಷತಪೂರ್ವಕ ಪ್ರಾಪ್ತ ಬೌದ್ಧಿಕ ಪ್ರಯಾಸ ಹಾಗು ಶಾರೀರಿಕ ಚೇಷ್ಟೆಗೆ ಪ್ರತಿಕ್ರಾಂತಿಯ ಸಂಜ್ಞೆಯಿದೆ. ಶ್ರೇಷ್ಠತೆಯ ದಿಕ್ಕಿನಲ್ಲಿ ಕ್ರಾಂತಿ ಮತ್ತು ನೇಷ್ಠತೆಯ ದಿಕ್ಕಿನಲ್ಲಿ ಪ್ರತಿಕ್ರಾಂತಿಯೆಂದು ಸಂಜ್ಞೆ.

ಸಮಸ್ಯೆ ರಹಿತ ಅಥವಾ ಸಮಸ್ಯೆಯ ಸಮಾಧಾನವನ್ನು ಅನುಭವಿಸಲು ಸಂತುಲನ ಮತ್ತು ಸಮಸ್ಯೆ ಸಹಿತ ಅಥವಾ ಸಮಸ್ಯೆಯನ್ನು ಉತ್ಪನ್ನ ಮಾಡುವ ಕ್ರಿಯೆಗೆ ಪ್ರತಿಕ್ರಾಂತಿ ಅಥವಾ ಅಸಂತುಲನದ ನಾಮದಿಂದ ಅಂಕಿತ ಮಾಡಲಾಗಿದೆ.

ಸಮಸ್ಯೆ ಬೌದ್ಧಿಕ ಸಂಕಟ ಹಾಗು ವಿವಶತೆ ಭೌತಿಕ ಸಮಸ್ಯೆ (ದರಿದ್ರತೆ).

95

ಸರ್ವಾಂಗೀಣ ದರ್ಶನ ಸಹ ಅಸ್ತಿತ್ವ ದರ್ಶನ ಜ್ಞಾನ, ಜೀವನ ಜ್ಞಾನ, ಮಾನವೀಯತೆಪೂರ್ಣ ಆಚರಣ ಜ್ಞಾನಕ್ಕೆ ಯಥಾರ್ಥ ಜ್ಞಾನವೆಂದು ಸಂಜ್ಞೆ ಮತ್ತು ಅದರ ವಿವರೀತದಲ್ಲಿ ಆರೋಪವೆಂದು ಸಂಜ್ಞೆ.

ಅಪರಿಣಾಮವಾದಿ ಸತ್ತಾವಿನಲ್ಲಿ ಸಹ-ಅಸ್ತಿತ್ವದ ಗುರುತಿನ ಸಹಿತ ಅನುಭವ ಸಹಜ ಅರಿವನ್ನು ಸತ್ಯ ಬೋಧ ಮತ್ತು ಅದರ ವಿವರೀತಕ್ಕೆ ಭ್ರಮೆಯೆಂದು ಸಂಜ್ಞೆ.

ಕ್ರಿಯೆಯ ರೂಪದಲ್ಲಿ ಅವತರಿತವಾಗುವುದೇ ತೀವ್ರ ಸಂವೇಗ.

ಸಂವೇಗದ ಒತ್ತಡ, ಅದರ ಗತಿ ಹಾಗು ಪಿಪಾಸೆಯ ನಿರ್ಧಾರಣೆ ಇಚ್ಛೆ ತಥಾ ಪ್ರಯೋಜನೆಯಿಂದ ನಿಯಂತ್ರಿತವಾಗಿದೆ.

ಮಾನವನ ಪರಸ್ಪರತೆಯಲ್ಲಿರುವ ಸಂಪರ್ಕ ಹಾಗು ಸಂಬಂಧ ನಿರ್ವಾಹಕ್ಕಾಗಿ, ಜಾಗೃತಿ ಸಹಜ ವಿಧಿಯಿಂದ ಉಪಯೋಗ, ಸದುಪಯೋಗಕ್ಕಾಗಿ ಇರುವುದು. ಜಾಗೃತಿಗಾಗಿರುವ ಸಂಪರ್ಕ ಹಾಗು ಸಂಬಂಧದ ಪ್ರಯಾಸ ಸಾಮಾಜಿಕತೆಗಾಗಿ ಇರುವುದು. ನಿರ್ವಾಹಕ್ಕಾಗಿರುವ ಸಂಪರ್ಕ ಹಾಗು ಸಂಬಂಧದ ಪ್ರಯಾಸ ಕರ್ತವ್ಯ ಪಾಲನೆ ಮಾಡುತ್ತಾ ವರ್ತಮಾನವನ್ನು ಸಂತುಲಿತವಾಗಿರುವುದಕ್ಕಾಗಿ ಹಾಗು ಭೋಗಚ್ಛೆಯಿಂದಿರುವ ಸಂಪರ್ಕ ಹಾಗು ಸಂಬಂಧದ ಪ್ರಯಾಸ ಇಂದ್ರಿಯ ಲಿಪ್ಸೆಗೆ ಮಾತ್ರ ಹಾಗು ಶೋಷಣೆಗೆ ಕಾರಣ. ಇದರಿಂದ ಅಸಂತುಲನ ಮತ್ತು ಸಮಸ್ಯೆ ವಶ ಪೀಡನವಾಗುತ್ತದೆ.

ಜಾಗೃತಿಗಾಗಿ ಮಾಡಲಾಗುವ ವ್ಯವಹಾರಕ್ಕೆ ಪುರುಷಾರ್ಥ, ನಿರ್ವಾಹಕ್ಕಾಗಿ ಮಾಡಲಾಗುವ ಪ್ರಯಾಸಕ್ಕೆ ಕರ್ತವ್ಯ ತಥಾ ಭೋಗಕ್ಕಾಗಿ ಮಾಡಲಾಗುವ ವ್ಯವಹಾರಕ್ಕೆ ವಿವಶತೆಯ ಹೆಸರಿನಿಂದ ತಿಳಿದುಬರುತ್ತದೆ.

ಕರ್ತವ್ಯ ಹಾಗು ಅವಶ್ಯಕತೆಯ ಭಾವ ಮಾನವನಲ್ಲಿದೆ

ಕರ್ತವ್ಯ - ಸಂಬಂಧಗಳ ಗುರುತು ಸಹಿತ ನಿರ್ವಾಹ ಕ್ರಿಯೆ, ಇದರಿಂದ ನಿಷ್ಠೆಯ ಬೋಧವಾಗುತ್ತದೆ.

ದಾಯಿತ್ವ - ಸಂಬಂಧಗಳ ಗುರುತು ಸಹಿತ ಮೌಲ್ಯಗಳ ನಿರ್ವಾಹ ಸಹಿತ ಮೌಲ್ಯೀಕರಣ ಕ್ರಿಯೆ ಇದರಿಂದ ತೃಪ್ತಿಯ ಬೋಧವಾಗುತ್ತದೆ.

ಕರ್ತವ್ಯದ ಪೂರ್ತಿಯಿದೆ, ಭೋಗರೂಪಿ ಅವಶ್ಯಕತೆಯ ಪೂರ್ತಿಯಿಲ್ಲ.

ಕರ್ತವ್ಯದ ಪೂರ್ತಿ ಸಂಭವವೇಕೆಂದರೆ ಅದು ನಿಶ್ಚಿತ ಹಾಗು ಸಾರ್ಥಕ.

96

ಭೋಗರೂಪಿ ಅವಶ್ಯಕತೆಗಳ (ಸೌಲಭ್ಯ-ಸಂಗ್ರಹ) ಪೂರ್ತಿ ಸಂಭವವಿಲ್ಲ ಏಕೆಂದರೆ ಅದು ಅನಿಶ್ಚಿತ ಹಾಗು ಅಸೀಮಿತ.

ಕರ್ತವ್ಯವಾದಿ ಪ್ರಗತಿ ಶಾಂತಿಯ ದಿಕ್ಕಿನಲ್ಲಿ ಹಾಗು ಭೋಗವಾದಿ ಪ್ರವೃತ್ತಿ ಅಶಾಂತಿಯ ದಿಕ್ಕಿನಲ್ಲಿ ಉನ್ಮುಖವಾಗಿರುವುದಕ್ಕೆ ಇದೇ ಕಾರಣ.

ಸಮಸ್ತ ಕರ್ತವ್ಯ ಸಂಬಂಧ ಹಾಗು ಸಂಪರ್ಕದ ಸೀಮೆಯವರಿಗಿದೆ.

ಸಂವೇಗದಿಂದಲೇ ಚಯನ ಕ್ರಿಯೆಯಿದೆ, ಇದು ಸಂಗ್ರಹವಾದಿ, ಪೋಷಣವಾದಿ, ಸುಲಿಗೆವಾದಿ, ತ್ಯಾಗವಾದಿ ಅಥವಾ ಶೋಷಣವಾದಿಯಾಗಿದೆ. ಈ ಸಮಸ್ತ ಕ್ರಿಯೆಗಳು ಆಶೆಯ ಪ್ರಕ್ರಿಯೆಯಲ್ಲಿವೆ.

ಕರ್ತವ್ಯದ ಪೂರ್ತಿಯಿಲ್ಲದೆ ಮಾನವನ ಜೀವನ ಸಫಲವಿಲ್ಲ.

ಭೌತಿಕ ಸಮೃದ್ಧಿ ಹಾಗು ಬೌದ್ಧಿಕ ಸಮಾಧಾನದಿಂದ ಪರಿಪೂರ್ಣ ಜೀವನವೇ ಸಫಲ ಜೀವನ.

ಅವಶ್ಯಕತೆಗಿಂತ ಅಧಿಕ ಉತ್ಪಾದನೆ ಹಾಗು ಸಹ-ಅಸ್ತಿತ್ವದಲ್ಲಿಯೇ ಭೌತಿಕ ಸಮೃದ್ಧಿಯಿದೆ ಹಾಗು ಅಸ್ತಿತ್ವದಲ್ಲಿ ಅನುಭವ ಸ್ವಯಂ ನಿರ್ಭ್ರಮತೆ ಹಾಗು ಬೌದ್ಧಿಕ ಸಮಾಧಾನವಾಗಿದೆ.

ವಿಜ್ಞಾನ ಹಾಗು ವಿವೇಕದ ಸಮನ್ವಿತ ಅಧ್ಯಯನ ತಥಾ ಕರ್ಮಾಭ್ಯಾಸವೇ ನಿರ್ಭ್ರಮತೆ ಸಹಜ ಪ್ರಮಾಣ.

ಮಾನವೀಯತೆಪೂರ್ಣ ಜೀವನದಲ್ಲಿ ಅವಶ್ಯಕತೆಗಳು ಸೀಮಿತ ಹಾಗು ಮರ್ಯಾದಿತವಾಗುತ್ತವೆ. ಅತಿಮಾನವೀಯತೆಪೂರ್ಣ ಜೀವನದಲ್ಲಿ ಅವಶ್ಯಕತೆಗಳು ಇನಷ್ಟು ಸಂಯಮಿತವಾಗುತ್ತವೆ.

ಯಾರು ಎಷ್ಟು ಭ್ರಮೆ ಅಥವಾ ಭಯದ ಪಾತ್ರರಾಗಿರುತ್ತಾರೋ, ಅವರು ಸಾಧನಗಳನ್ನು ಸುಖಿಯಾಗುವುದಕ್ಕಾಗಿ ಅಷ್ಟೇ ಮಹತ್ವಪೂರ್ಣವೆಂದು ನಂಬಿರುತ್ತಾರೆ. ಹೇಗೆಂದರೆ, ಭಯ ತ್ರಸ್ತ ಮಾನವ ಆಯುಧ ಹಾಗು ಆಶ್ರಯದ ಮೇಲೆ, ಲೋಭ ತ್ರಸ್ತ ಮಾನವ ಸಂಗ್ರಹದ ಮೇಲೆ, ದ್ವೇಷ ತ್ರಸ್ತ ಮಾನವ ನಾಶದ ಮೇಲೆ, ಅಜ್ಞಾನಿ ಇನ್ನೊಬ್ಬರನ್ನು ದೂಶಿಸುವುದರಮೇಲೆ, ಅಭಿಮಾನ ತ್ರಸ್ತ ಇನ್ನೊಬ್ಬರ ಉಪೇಕ್ಷೆ ಹಾಗು ಘೃಣ ಮಾಡುವುದರ ಮೇಲೆ ಸುಖಿಯಾಗುವ ಪ್ರಯಾಸ ಮಾಡುತ್ತಾನೆ, ಆದರೆ ಸ್ವ-ಪಾತ್ರತೆಯೇ ಸುಖಿ ಹಾಗು ದುಃಖಿಯಾಗಲು ಕಾರಣ.

97

ವಾತಾವರಣ ಹಾಗು ಅಧ್ಯಯನ ಸುಪಾತ್ರ ಅಥವಾ ಕುಪಾತ್ರ ಮಾಡಲು ಸಹಾಯಕವಾಗಿದೆ.

ಮಾನವೀಯತೆ ಪೂರ್ಣ ವ್ಯವಹಾರ, ಉತ್ಪಾದನೆ, ಅಧ್ಯಯನ, ಕಾರ್ಯ ಹಾಗು ನೀತಿಗಳಲ್ಲಿ ಪಾರಂಗತವಾದ ನಂತರವೇ ಮಾನವ ಸುಖಿಯಾಗುತ್ತಾನೆ.

“ಸರ್ವ ಶುಭವಾಗಲಿ”

98

ಅಧ್ಯಾಯ - ಎಂಟು

ಪದ ಹಾಗು ಪದಾತೀತ

ಪದ ಹಾಗು ಪದಾತೀತರ ಭೇದದಿಂದ ಅರ್ಥವಿದೆ.

ಪದಗಳ ವರ್ಗೀಕರಣ, ಅಪೇಕ್ಷಾಕೃತ ರೀತಿಯಿಂದ, ರೂಪ-ಗುಣ, ಸ್ವಭಾವ-ಧರ್ಮದ ಅವಸ್ಥೆ ಹಾಗು ಅನುಪಾತದ ಅಧ್ಯಯನದಿಂದ ಸಿದ್ಧವಾಗಿದೆ, ಆದ್ದರಿಂದ ಪದ ಅನೇಕ ಮತ್ತು ಪದಾತೀತ ವ್ಯಾಪಕ.

ಪದದ ನಿರ್ಣಯ ರೂಪದ ಅನುಪಾತ, ಅದರ ಅವಸ್ಥೆ (ಸ್ವಭಾವ) ಹಾಗು ಅದರಲ್ಲಿ ನಿಹಿತ ಬಲ ಮತ್ತು ಶಕ್ತಿಯಿಂದಾಗುತ್ತದೆ. ಇದೇ ಸ್ಥಿತಿ-ಗತಿ.

ಯಾವುದು ಯಾವುದೇ ಪದದಲ್ಲಿಲ್ಲವೋ ಅಥವಾ ಸೀಮಿತವಾಗಿಲ್ಲವೋ, ಯಾವುದರಲ್ಲಿ ಎಲ್ಲಾ ಪದ ನಿಹಿತವಾಗಿದೆಯೋ ಅಥವಾ ಯಾವುದರಲ್ಲಿ ಅದರ ಸಮಾವೇಶವೂ ಇದೆಯೋ, ಅದಕ್ಕೆ ಪದಾತೀತವೆಂದು ಸಂಜ್ಞೆ. ಇದು ವ್ಯಾಪಕ ಸತ್ತಾ.

ಆಕಾರ, ಆಯತನ ಮತ್ತು ಘನತ್ವದ ಭೇದದಿಂದ ರೂಪದ; ನಾದ, ಗತಿ, ಭಾಷೆ, ಪರಿಭಾಷೆಯ ಭೇದದಿಂದ ಶಬ್ದದ ಹಾಗು ಉದ್ಭವ, ವಿಭವ ಹಾಗು ಪ್ರಳಯದ ಭೇದದಿಂದ ಗುಣದ ಅವಸ್ಥೆ ಹಾಗು ಅನುಪಾತವಿದೆ.

ನಿಯಮ ಹಾಗು ಪ್ರಕ್ರಿಯೆಪೂರ್ವಕ ಸಿದ್ಧ ಸಿದ್ಧಿಗೆ 'ಅರ್ಥ' ಎಂದು ಸಂಜ್ಞೆ. ಆಚರಣವೇ ನಿಯಮ.

ಸರ್ವತ್ರ ಪ್ರಾಪ್ತ ಸಾಮ್ಯ ಸತ್ತಾವಿನ್ನಲ್ಲಿ ಅನುಭೂತಿಯ (ಜ್ಞಾನದ) 'ಪದಾತೀತ ಅರ್ಥ' ಸಂಜ್ಞೆ, ಏಕೆಂದರೆ ಅದರ ಅಸ್ತಿತ್ವದ ಅನುಭವವಿದೆ. ಇದು ಸಾಮ್ಯ ಸತ್ತಾ ಸಂಪೂರ್ಣ ಕ್ರಿಯೆಯ ಮೂಲ ರೂಪದಲ್ಲಿದೆ ಮತ್ತು ಮಾನವನಿಂದ ಜ್ಞಾನದ ರೂಪದಲ್ಲಿ ಪ್ರಾಪ್ತವಾಗಿದೆ ಮತ್ತು ಸ್ವಷ್ಟವಾಗಿದೆ.

ಸರ್ವತ್ರ ಒಂದೇ ರೀತಿಯಲ್ಲಿ ಸ್ಥಿತವಾಗಿರುವ ಕಾರಣ ಸಾಮ್ಯ ಸತ್ತಾಗೆ ವ್ಯಾಪಕವೆಂದು ಸಂಜ್ಞೆ. ಆದ್ದರಿಂದ ಪದಾತೀತ ವ್ಯಾಪಕ ಮತ್ತು ಪದ ಅನೇಕ ಹಾಗು ಸೀಮಿತವಾಗಿದೆ, ಏಕೆಂದರೆ ಇಕಾಯಿ ಗಳು ಅನಂತವಾಗಿವೆ.

ಪ್ರತ್ಯೇಕ ಇಕಾಯಿ ತನ್ನ ಹಾಸ ಅಥವಾ ವಿಕಾಸದಿಂದ ಕ್ಷಮತೆ, ಯೋಗ್ಯತೆ, ಪಾತ್ರತೆಯ ಅನುಸಾರ ತಮ್ಮ - ತಮ್ಮ ಪದದಲ್ಲಿ ಅವಸ್ಥಿತವಾಗಿದೆ.

99

ಪದದ ನಿರ್ಣಯ ಇಕಾಯಿಯ ಘಟನೆ, ಪ್ರಕ್ರಿಯೆ ಹಾಗು ಆಚರಣೆಯಿಂದವಾಗುತ್ತದೆ.

ಪದ ಭೇದದಿಂದ ಅರ್ಥ ಭೇದ, ಅರ್ಥ ಭೇದದಿಂದ ಆಚರಣ ಮತ್ತು ವ್ಯವಹಾರ ಭೇದ, ಆಚರಣ ಮತ್ತು ವ್ಯವಹಾರ ಭೇದದಿಂದ ಪ್ರಕ್ರಿಯೆ ಭೇದ ಹಾಗು ಪ್ರಕ್ರಿಯೆ ಭೇದದಿಂದ ಅರ್ಥ ಭೇದವಿದೆ.

ಆರು ದಿಕ್ಕಿನಿಂದ ಸೀಮಿತ ಪಿಂಡಕ್ಕೆ ಇಕಾಯಿ ಹಾಗು ಇಂತಹ ಅನಂತ ಇಕಾಯಿ ಅಥವಾ ಇಕಾಯಿ ಗಳ ಸಮೂಹಕ್ಕೆ ಅನಂತ ಹಾಗು ಅಸೀಮ ಸ್ಥಿತಿಗೆ ನಿರಪೇಕ್ಷ ಉರ್ಜವೆಂದು ಸಂಜ್ಞೆ, ಇದೇ ವ್ಯಾಪಕ ಸತ್ತಾ. ವ್ಯಾಪಕ ನಿರಂತರ ಮಾನವನಿಂದ ಆನಂದದ ಅರ್ಥದಲ್ಲಿ ಅನುಭೂತವಾಗಿದೆ.

ಸೀಮಿತ ಅರ್ಥದಿಂದ ಮಾತ್ರ ಸುಖ ಮತ್ತು ದುಃಖ ಭಾಸವಾಗುತ್ತದೆ. ಸುಖ ಮತ್ತು ದುಃಖದ ಮನದಲ್ಲಿ ಭಾಸ, ವೃತ್ತಿಯಲ್ಲಿ ಆಭಾಸವಾಗುತ್ತದೆ. ಸುಖದ ನಿರಂತರತೆಯಲ್ಲಿ ಬುದ್ಧಿಯಲ್ಲಿ ಪ್ರತೀತಿ, ಆತ್ಮದಲ್ಲಿ ಅನುಭೂತಿಯಾಗುವುದು ಕಂಡುಬರುತ್ತದೆ, ಇದರ ನಿರಂತರತೆಯಿರುತ್ತದೆ.

ಇಚ್ಛಾನುಸಾರ ದ್ರವಿತವಾಗುವ ಮತ್ತು ಚೇಷ್ಟೆ ಮಾಡುವ ಅಂಗಕ್ಕೆ ಇಂದ್ರಿಯವೆಂದು ಸಂಜ್ಞೆ, ಇವಕ್ಕೆ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧೇಂದ್ರಿಯಗಳ ನಾಮದಿಂದ ತಿಳಿಯಲಾಗುತ್ತದೆ.

ಪರಿಣಾಮವಾದಿ ಫಲದ ದಿಕ್ಕಿನಲ್ಲಿ ಮಾಡಲಾಗುವ ಚೇಷ್ಟೆ ಅಥವಾ ಪ್ರಯಾಸಕ್ಕೆ 'ಅಪೂರ್ಣ ಪ್ರಯಾಸ' ಹಾಗು ಅಪರಿಣಾಮವಾದಿ ಫಲದ ದಿಕ್ಕಿನಲ್ಲಿ ಅರ್ಥಾತ್ ಕ್ರಿಯೆ ಪೂರ್ಣತೆ ಮತ್ತು ಆಚರಣಪೂರ್ಣತೆಯ ಅರ್ಥದಲ್ಲಿ ಮಾಡಲಾಗುವ ಚೇಷ್ಟೆ ಅಥವಾ ಪ್ರಯಾಸಕ್ಕೆ 'ಪೂರ್ಣ ಪ್ರಯಾಸ' ಎಂದು ಸಂಜ್ಞೆ.

ನಿತ್ಯ ಹಾಗು ಶಾಶ್ವತ ಸತ್ತಾವಿನಲ್ಲಿ ಸತ್ಯಬೋಧ, ಸತ್ಯಬೋಧದಿಂದ ಸತ್ಯ ಪ್ರತೀತಿ ಹಾಗು ಅನುಭೂತಿ, ಸತ್ಯ ಪ್ರತೀತಿ ಹಾಗು ಅನುಭೂತಿಯಿಂದ ಸಂತುಲನ, ಸಂತುಲನದಿಂದ ಸ್ವರೂಪ, ಸ್ವರೂಪದಿಂದ ಜಾಗೃತಿ, ಜಾಗೃತಿಯಿಂದ ಸಮಾಧಾನ, ಸಮಾಧಾನದಿಂದ ವ್ಯವಹಾರ ಶುದ್ಧಿ, ವ್ಯವಹಾರ ಶುದ್ಧಿಯಿಂದ ಸಹ-ಅಸ್ತಿತ್ವ, ಸಹ-ಅಸ್ತಿತ್ವದಿಂದ ಸ್ವರ್ಗೀಯತೆ, ಸ್ವರ್ಗೀಯತೆಯಿಂದ ನಿರ್ವಿರೋಧ ಭಾವ ಹಾಗು ನಿರ್ವಿರೋಧ ಭಾವದಿಂದ ನಿತ್ಯ ಹಾಗು ಶಾಶ್ವತ ಸತ್ಯ ಬೋಧವಿದೆ.

100

ಅವಶ್ಯಕತೆ ಭೇದದಿಂದಲೇ ಲಕ್ಷ್ಯ ಭೇದವಿದೆ, ಇದರಲ್ಲಿ (ಚೈತನ್ಯ ಪಕ್ಷದ ಜಾಗೃತಿ) ಪಾರಲೌಕಿಕ ಲಕ್ಷ್ಯದಿಂದ ಮಾನವ ಜೀವನ ಸಫಲವಾಗುತ್ತದೆ, ಅನ್ಯಥಾ ಅಸಫಲವೇಯಾಗಿದೆ. ವಿಕೃತ ವಿಚಾರದಿಂದ ಮೂಲತಃ ವ್ಯವಹಾರಿಕ ವ್ಯವಧಾನ ಹಾಗು ಸಂಸ್ಕೃತ ಸಂಸಾರದಿಂದ ವ್ಯವಹಾರ ಸುಗಮತೆ ಕಂಡುಬರುತ್ತದೆ.

“ಸರ್ವ ಶುಭವಾಗಲಿ”

101

ಅಧ್ಯಾಯ - ಒಂಬತ್ತು

ದರ್ಶನ-ದೃಶ್ಯ-ದೃಷ್ಟಿ

ದರ್ಶನಕ್ಕಾಗಿ, ದರ್ಶಕ, ದೃಶ್ಯ ಹಾಗು ದೃಷ್ಟಿಯಿರುವುದು ಅನಿವಾರ್ಯ.

ದರ್ಶಕನ ಕ್ಷಮತೆ, ದೃಷ್ಟಿಯ ಪರಿಮಾರ್ಜನೆಯ ಯೋಗದಿಂದ ದೃಶ್ಯದ ಸಹಿತ ದರ್ಶನ ಕ್ರಿಯೆಯಿದೆ. ಯಾವುದು ಹೇಗಿದೆಯೋ, ಅದನ್ನು ಹಾಗೆಯೇ ಅರಿತುಕೊಳ್ಳುವ ಕ್ಷಮತೆ, ಅದನ್ನು ಹಾಗೆಯೇ ನೋಡುವ ಪ್ರಕ್ರಿಯೆಯ ಯೋಗದಿಂದ ದರ್ಶನ ಕ್ರಿಯೆಯಿದೆ.

ದರ್ಶನದ ಭೇದದಿಂದ ಲಕ್ಷ್ಯ ಭೇದವಿದೆ, ಏಕೆಂದರೆ ಯಾರು ಹೇಗೆ ಯಾವುದರ ದರ್ಶನ ಮಾಡುತ್ತಾರೋ, ಅದರ ಅನುಸಾರ ಅದರ ಜೊತೆಯಿರುವ ಅರ್ಥವನ್ನು, ಅದನ್ನು ಲಕ್ಷ್ಯವೆಂದು ಸ್ವೀಕರಿಸುತ್ತಾರೆ. ಈ ಮೌಲಿಕರಣ ಕ್ರಿಯೆ ಭ್ರಮೆ ಮತ್ತು ಜಾಗೃತಿಯನ್ನು ಸ್ಪಷ್ಟಪಡಿಸುತ್ತದೆ.

ವಾತಾವರಣ ಅಧ್ಯಯನ, ಪೂರ್ವ ಸಂಸ್ಕಾರಗಳ ಅನುಭಂದನಾನುಕ್ರಮ ವಿಧಿಯಿಂದ ದರ್ಶನ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯಿದೆ. ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯ ಅನುಸಾರವೇ ಜಾಗೃತಿ ಹಾಗು ಹ್ರಾಸದ ದಿಕ್ಕಿನಲ್ಲಿ ಗತಿಯಿದೆ.

ದೃಷ್ಟಿಯಿಂದ ಪ್ರಾಪ್ತ ಅರಿವಿಗೆ (ವ್ಯಂಜನೆಯಿಂದ / ಸ್ವೀಕೃತಿ) ದರ್ಶನವೆಂದು ಸಂಜ್ಞೆ.

ದರ್ಶನ - ನ್ಯಾಯ-ಧರ್ಮ-ಸತ್ಯ ಸಹಜ ದೃಷ್ಟಿಯಿಂದ ಮಾಡಲಾಗುವ ಕ್ರಿಯೆ-ಪ್ರಕ್ರಿಯೆಗೆ ದರ್ಶನವೆಂದು ಸಂಜ್ಞೆ.

ಪ್ರಾಕೃತಿಕ ಹಾಗು ಮಾನವಕೃತ ಭೇದದಿಂದ ವಾತಾವರಣವಿದೆ.

ದರ್ಶನ, ವಿಚಾರ, ಶಾಸ್ತ್ರ, ಇತಿಹಾಸ ಹಾಗು ಕಾವ್ಯ ಭೇದದಿಂದ ಅಧ್ಯಯನವಿದೆ.

ವಂಶಾನುಗತ ಅಧ್ಯಾಸ, ವಿಧಿ ವಿಹಿತ ಹಾಗು ವಿಧಿ ಹೀನ ಭೇದದಿಂದ ಪ್ರಯೋಗವಿದೆ.

ರಚನೆ ವಿರಚನೆ ಪರ್ಯಂತ ಜಡ ಪ್ರಕೃತಿ ಸಂಜ್ಞೆಯಿದೆ ಹಾಗು ವರ್ತಮಾನಗಿಂತ ಮುಂಚೆ ಯಾವುದರ ನಿರ್ಮಾಣವಾಗಿದೆಯೋ, ಅದರ ಅಧ್ಯಯನ ಹಾಗು ಭವಿಷ್ಯದಲ್ಲಿ ಯಾವುದರ ನಿರ್ಮಾಣವಾಗುವುದರ ಸಂಭವನೀಯತೆಯಿದೆಯೋ, ಅದರ ಅನುಮಾನ ಮಾನವನು ಮಾಡಿದ್ದಾನೆ. ಸಂಪೂರ್ಣ ರಚನೆಗೆ ಜಡ ಪ್ರಕೃತಿಯೆಂದು ಸಂಜ್ಞೆಯಿದೆ.

✝ ಶಾಸ್ತ್ರ - ನಿರ್ದಿಷ್ಟ ಲಕ್ಷ್ಯೋನ್ಮುಖ ಸಿದ್ಧಾಂತ - ಪ್ರಕ್ರಿಯೆ ಹಾಗು ನಿಯಮ ತಥ

102

ವಸ್ತುಸ್ಥಿತಿಯ ನಿರ್ದೇಶಪೂರ್ವಕ ಬೋಧ ಮಾಡಿಸುವ ಶಬ್ದ ವ್ಯೂಹಕ್ಕೆ ಶಾಸ್ತ್ರವೆಂದು ಸಂಜ್ಞೆ.

ನಿಯಮ, ಪ್ರಕ್ರಿಯೆ ಮತ್ತು ಫಲದ ಸಂಯುಕ್ತ ಪ್ರಮಾಣವೇ ಸಿದ್ಧಾಂತ, ಏಕೆಂದರೆ ಸಮಾಧಾನ ಪೂರ್ವಕ ನಿಯಮ ಹಾಗು ಪ್ರಕ್ರಿಯೆಯ ಅಭಾವದಲ್ಲಿ ಯಾವುದೇ ಕ್ರಿಯೆ ಹಾಗು ಫಲದ ದರ್ಶನ ಸಿದ್ಧವಾಗಿಲ್ಲ. ಕ್ರಿಯೆಯ ನಿಯಮ ಹಾಗು ಪ್ರಕ್ರಿಯೆ ಪ್ರಯೋಜನೆಯ ಬೋಧದಿಂದಲೇ ವೈಚಾರಿಕ ಪರಿಮಾರ್ಜನೆ ಅರ್ಥಾತ್ ಸಮಾಧಾನ ಸಂಭವವಾಗಿದೆ.

¤ ಕಾವ್ಯ - ಮಾನವ ಲಕ್ಷ್ಯದ ಅರ್ಥದಲ್ಲಿರುವ ಜಾಗೃತ ಮಾನವನ ಭಾವ, ವಿಚಾರ ಹಾಗು ಕಲ್ಪನೆಯನ್ನು ಮತ್ತವರ ಬಳಿಗೆ ಪ್ರಸಾರಿತ ಮಾಡಲು ನಿಯುಕ್ತ ಶಬ್ದ ವ್ಯೂಹಕ್ಕೆ ಕಾವ್ಯವೆಂದು ಸಂಜ್ಞೆ.

¤ ಇತಿಹಾಸ - ವಿಗತದ ಮಾನವೀಯತೆಯ ದಿಕ್ಕಿನಲ್ಲಿ ಕೃತಿಗಳು ಹಾಗು ಘಟನೆಗಳ ಶೃಂಖಲಾಬದ್ಧ ಕ್ರಮದ ಸ್ಮರಣಾರ್ಥ ಪ್ರಸ್ತುತ ಭಾಷೆ ಅಥವಾ ಶಬ್ದ ರಾಶಿಗೆ ಇತಿಹಾಸವೆಂದು ಸಂಜ್ಞೆ.

¤ ಭೂಗೋಳ - ಮಾನವ ಮತ್ತು ಮಾನವೀಯತೆಯ ಅರ್ಥದಲ್ಲಿ ಪೃಥ್ವಿಯ ಸರ್ವೇಕ್ಷಣೆ, ನಿರೀಕ್ಷಣಪೂರ್ವಕ ಮನ ಚಿತ್ತದ ಸಹಿತ ರಚನೆಗಾಗಿ (ಜ್ಞಾನವನ್ನು ಪಡೆಯಲು) ಸಂಪಾದಿತ ಅಧ್ಯಯನಕ್ಕೆ ಭೂಗೋಲವೆಂದು ಸಂಜ್ಞೆ.

¤ ಸುಸಂಸ್ಕೃತ ಸಂಸ್ಕಾರ - ವಿಧಿ ಮಾನವ ಚೇತನ, ದೇವ ಚೇತನ ಹಾಗು ದಿವ್ಯ ಚೇತನ ಕ್ರಮದಲ್ಲಿದೆ. ವಿಧಿಯಲ್ಲಿರುವ ವಿಶ್ವಾಸಕ್ಕೆ ಸುಸಂಸ್ಕೃತಿ ಸುಸಂಸ್ಕಾರ ಸಂಜ್ಞೆ.

ಮಾನವೀಯತೆಪೂರ್ಣ ಪ್ರವೃತ್ತಿ ಹಾಗು ವ್ಯವಹಾರಕ್ಕೆ ನ್ಯಾಯ ಹಾಗು ಅಮಾನವೀಯ ಪ್ರವೃತ್ತಿ ಹಾಗು ವ್ಯವಹಾರಕ್ಕೆ ಅನ್ಯಾಯವೆಂದು ಸಂಜ್ಞೆ.

ಯಥಾರ್ಥ ಬೋಧದ ಪಶ್ಚಾತ್ತ ಅದರ ಪ್ರತಿ ಉತ್ಪನ್ನ ದೃಢತೆಗೆ ವಿಶ್ವಾಸವೆಂದು ಸಂಜ್ಞೆ.

¤ ನ್ಯಾಯಪೂರ್ವಕ ಮಾಡಲಾಗುವ ಕೃತಿಗೆ ಸುಕೃತಿ ಹಾಗು ಅನ್ಯಾಯಪೂರ್ವಕ ಮಾಡಲಾಗುವ ಕೃತಿಗೆ ದುಷ್ಟತೆಯಿಂದ ಸಂಜ್ಞೆ.

103

ಮಾನವೀಯತೆಗಾಗಿ ಅವಶ್ಯಕ ನಿಯಮವೇ ನ್ಯಾಯ, ಇದರಿಂದಲೇ ಮಾನವೀಯತೆಯ ಸಂರಕ್ಷಣೆ ಹಾಗು ಸಂವರ್ಧನೆ ಸಿದ್ಧವಾಗಿದೆ.

ಮಾನವನ ವ್ಯವಹಾರದ ನಿಯಂತ್ರಣ ನ್ಯಾಯದಿಂದ, ವೈಚಾರಿಕ ಸಂಯಮತೆ ಧರ್ಮದಿಂದ ಹಾಗು ಅನುಭವ ಮಾತ್ರ ಸತ್ಯದಿಂದ ಸಂಪನ್ನವಾಗಿದೆ.

ನಿಯಮದಿಂದಲೇ ನಿಯಂತ್ರಣ. ಸ್ವೀಕರಿಸಲು ಯೋಗ್ಯ ಲಕ್ಷ್ಯದಿಂದಲೇ ಧಾರಣ ಹಾಗು ನಿತ್ಯ ವರ್ತಮಾನವೇ ಸತ್ಯ.

ಮಾನವನು ಸ್ವೀಕರಿಸಲು ಯೋಗ್ಯ ತಥ್ಯ ಹಾಗು ಲಕ್ಷ್ಯ ಸುಖವನ್ನು ಜನ್ಮದಿಂದಲೇ ಸ್ವೀಕರಿಸಿದ್ದಾನೆ. ಇದು ಜೀವನ ಲಕ್ಷ್ಯ. ಇದು ಮಾನವ ಲಕ್ಷ್ಯ ರೂಪಿ ಸಮಾಧಾನ, ಸಮೃದ್ಧಿ, ಅಭಯ, ಸಹ-ಅಸ್ತಿತ್ವ ಸಹಜವಾಗಿದೆ.

ಸ್ಥೂಲ ಹಾಗು ಸೂಕ್ಷ್ಮ ಭೇದದಿಂದಲೇ ವಿಕೃತಿ ಅಥವಾ ಸುಕೃತಿ. ವಿಜ್ಞಾನ ಹಾಗು ವಿವೇಕದ ಅಧ್ಯಯನ ಹಾಗು ಪ್ರಯೋಗದಿಂದಲೇ ಮಾನವೀಯ ಜಾಗೃತಿಯಿದೆ.

ಜಾಗೃತಿ ಹಾಗು ಹ್ರಾಸದಿಂದಲೇ ಮಾನವನ ಮನಾಕಾರ ಸಾಕಾರವಾಗುತ್ತದೆ.

ಆಸಕ್ತಿ ಹಾಗು ಯಥಾರ್ಥ (ಅನಾಸಕ್ತಿ) ಭೇದದಿಂದಲೇ ಮಾನವನ ಮನಃ ಸ್ವಸ್ಥತೆಯ ಆಶೆಗಳಿವೆ.

ಈ ಆಶೆಗಳು ಭ್ರಮೆ ಮುಕ್ತಿ ಪೂರ್ವಕ ಸಾರ್ವಭೌಮ ವ್ಯವಸ್ಥೆ; ಅರ್ಥ ಹಾಗು ಕಾಮದ ರೂಪದಲ್ಲಿ ಪ್ರಲೋಭನೆ; ಪ್ರತ್ಯಾಷೆ ಭೇದದಿಂದ ದರ್ಶನ (ಶಾಸ್ತ್ರ); ಸ್ವೀಕೃತ ಹಾಗು ಅನುಕರಣ ಭೇದದಿಂದ ಕಾವ್ಯ; ಯಾವ ಕಾರ್ಯ, ವಿಚಾರ ಹಾಗು ವ್ಯವಹಾರದಿಂದ ಕ್ಲೇಶೋದಯವಾಗುತ್ತದೆಯೋ ಅದು ನಿಷೇಧ ಹಾಗು ಯಾವುದರಿಂದ ಸುಖೋದಯವಾಗುತ್ತದೆಯೋ, ಅದೇ ವಿಧಿಯ ರೂಪದಲ್ಲಿ ಸ್ವೀಕರಿಸಲಾಗುತ್ತದೆ.

ಪ್ರಾಕೃತಿಕ ಹಾಗು ಕೃತ್ರಿಮ ವಾತಾವರಣೆ ಮಾನವನಿಗಾಗಿ ಅನುಕೂಲ ಅಥವಾ ಪ್ರತಿಕೂಲವಾಗುತ್ತದೆ.

ಮಾನವನಲ್ಲಿ ಆಶೆಗಳು ಮಾನವೀಯ, ಅಮಾನವೀಯ ಹಾಗು ಅತಿಮಾನವೀಯ ಅವಸ್ಥೆ ಭೇದದಿಂದಿವೆ.

ಪ್ರವೃತ್ತಿ ಹಾಗು ನಿವೃತ್ತಿ (ಬಂಧನ ಹಾಗು ಮೋಕ್ಷದ ಸ್ಪಷ್ಟೀಕರಣ) ಭೇದದಿಂದಲೇ ಶಾಸ್ತ್ರ, ವಿಹಿತಾವಿಹಿತ ಭೇದದಿಂದ ಆಶೆಗಳು, ವಿಚಾರ, ಇಚ್ಛೆ ಹಾಗು ಋತಂಭರವಿದೆ, ಇದರ

104

ವಿವೇಚನೆ, ಅಧ್ಯಯನ ಹಾಗು ಪ್ರಯೋಗ ಮಾಡುವ ಅವಕಾಶ ಹಾಗು ಅವಸರ ಕೇವಲ ಮಾನವನಲ್ಲಿದೆ.

ಜಡ ವಸ್ತುವಿನಲ್ಲಿ ಸ್ಥಿತಿ - ಗತಿ ಮಾತ್ರವಾಗಿರುವುದು ಕಂಡುಬರುತ್ತದೆ.

ಸಮಸ್ತ ಜಡ ಕ್ರಿಯೆಯಲ್ಲಿ ಪರಮಾಣುಗಳು ಕ್ರಿಯಾಶೀಲವಾಗಿರುವುದು ಕಂಡುಬರುತ್ತದೆ. ಪರಮಾಣುಗಳು ಸಮೂಹದ ರೂಪದಲ್ಲಿ ಅಥವಾ ಸಂಘಟಿತ ರೂಪದಲ್ಲಿ ಕ್ರಿಯಾಶೀಲ ಮಧ್ಯಾಂಶ ಹಾಗು ಆಶ್ರಿತ ಅಂಶಗಳ ಸಹಿತ ಕ್ರಿಯೆಯ ರೂಪದಲ್ಲಿ ಪರಿಲಕ್ಷಿತವಾಗುತ್ತದೆ. ಆದ್ದರಿಂದ, ಜಡ ಪದಾರ್ಥದಲ್ಲಿ ಕ್ರಿಯಾಶೀಲತೆ ಸ್ವತಂತ್ರವಾಗಿದೆಯೆಂದು ಜ್ಞಾತವಾಗುತ್ತದೆ.

ಯಾವಾಗ ಒಂದು ಪರಮಾಣುಪೂರ್ವಕ ಚೈತನ್ಯವಾಗುತ್ತದೆ, ಅದೇ ಸಮಯದಲ್ಲಿ ಬಾಳುವ ಆಕೆ ಬಂಧನ ಸ್ವರೂಪ ಕಂಡುಬರುತ್ತದೆ. ಪ್ರತ್ಯೇಕ ಜೀವ ಬಾಳಲು ಬಯಸುತ್ತದೆಯೆಂದು ಇಂದರಿಂದ ಸಿದ್ಧವಾಗುತ್ತದೆ.

ಮಾನವ ಬುದ್ಧಿಜೀವಿ, ವಿಚಾರಶೀಲವಾಗುವ ಕಾರಣ, ಜೀವಿತವಾಗಿದ್ದು ವಿಚಾರ, ಇಚ್ಛೆ, ಅಹಂಕಾರ ಅಥವಾ ಸಂಕಲ್ಪದ ಪ್ರಯೋಗ, ಮನ, ವೃತ್ತಿ, ಚಿತ್ತ ಹಾಗು ಬುದ್ಧಿಯಿಂದ ಮಾಡುತ್ತಾನೆ.

ವೃತ್ತಿಯ ಬಂಧನ, ಭ್ರಮಿತ ವಿಚಾರದ ಬಂಧನ, ಇದು ಸ್ವವಿಚಾರವನ್ನು ಶ್ರೇಷ್ಠವೆಂದು ನಂಬಿರುವುದರಿಂದ ಹಾಗು ಇದರಿಂದ ಅಮಾನವೀಯ ವಿಚಾರದ ಪ್ರಸವವಾಗುತ್ತದೆ.

ನ್ಯಾಯ ಪೂರ್ಣ ವಿಚಾರ ಹಾಗು ವ್ಯವಹಾರದಿಂದ ಆಕೆ ಬಂಧನದಿಂದ ಮುಕ್ತಿ, ಧರ್ಮಪೂರ್ಣ ವಿಚಾರದಿಂದ ವಿಚಾರ ಬಂಧನದಿಂದ ಮುಕ್ತಿಯಾಗುತ್ತದೆ.

ಚಿತ್ತದ ಬಂಧನ ಇಚ್ಛೆಯ ಬಂಧನ, ಇದು ಸ್ವಯಂನಿಂದ ಮಾಡಲಾಗುವ ಚಿತ್ರಣವನ್ನು ಶ್ರೇಷ್ಠ (ಭ್ರಮೆವಶ ಚಿಂತನ) ನಂಬುವುದರಿಂದಾಗುತ್ತದೆ. ಇದರಲ್ಲಿ ಅಮಾನವೀಯತೆಯ ಪೋಷಣೆ ಹಾಗು ಚಿಂತೆಯ ಜನ್ಮವಾಗುತ್ತದೆ.

ಸತ್ಯ ಬೋಧ ಪೂರ್ಣ ಚಿಂತನದಿಂದ (ಸಮಾಧಾನ ಚಿತ್ರಣ) ಇಚ್ಛೆ ಬಂಧನದಿಂದ ಮುಕ್ತಿಯಾಗುತ್ತದೆ.

ಭ್ರಮಿತ ಮಾನವ ಮಾನ್ಯತೆ ಪೂರ್ವಕ ಚಿತ್ರಣ ಕ್ರಿಯೆಯಿಂದ ಸ್ವಯಂನನ್ನು ಶ್ರೇಷ್ಠವೆಂದು ನಂಬುವುದರಿಂದ ಇಚ್ಛೆ ಬಂಧನವಾಗುತ್ತದೆ. ಇದೇ ಅಭಿಮಾನ.

ಸತ್ಯ ಬೋಧದಿಂದ ಪರಿಪೂರ್ಣ ಋತಂಭರದಿಂದ ಭ್ರಮೆ ಮುಕ್ತಿಯಾಗುತ್ತದೆ.

105

ಲೋಕಾಸಕ್ತಿಯಿಂದ (ಜಡ ಪಕ್ಷದಿಂದ) ದುಃಖ ಸಮಸ್ಯೆ ಹಾಗು ಆತ್ಮಬೋಧದಿಂದ ಸಹಜ ಸುಖದ ನಿರಂತರತೆಯಿದೆ.

ಲೋಕ ಪರಿಣಾಮವಾದಿ, ಅತಃ ಅದರ ಸುಖವೂ ಕ್ಷಣಿಕ. ಆದ್ದರಿಂದ ಲೋಕಾಸಕ್ತಿ ಬಂಧನದ ಕಾರಣವಾಗಿದೆ.

ಆತ್ಮಬೋಧ ಅಮರ ಹಾಗು ಅಪರಿಣಾಮಿ, ಆದ್ದರಿಂದ ಆತ್ಮಬೋಧದ ಸುಖ ಶಾಶ್ವತ. ಆತ್ಮಬೋಧದ ತಾತ್ಪರ್ಯ ಅನುಭವ ಬೋಧದಿಂದಿದೆ.

ಅತಃ ಯಾವುದರಲ್ಲಿ ಸುಖದ ನಿರಂತರತೆಯಿಲ್ಲವೋ ಅದರಲ್ಲೇ ಸುಖವನ್ನು ಪಡೆಯುವ ಪ್ರಯಾಸವೇ ಬಂಧನ ಹಾಗು ಯಾವುದರಲ್ಲಿ ಸುಖ ಸ್ವಭಾವವೋ ಅದರ ಅನುಭವವೇ ಮೋಕ್ಷವೆಂದು ಸಿದ್ಧವಾಗುತ್ತದೆ.

ಭ್ರಮಿತ ಇಚ್ಛೆಯ ಪೂರ್ತಿಗಾಗಿ ಕ್ರಿಯೆ ಹಾಗು ಕ್ರಿಯೆಯ ಪೂರ್ತಿಗಾಗಿ ಭ್ರಮಿತ ಇಚ್ಛೆ ನಿರತವಾಗಿದೆ, ಇದರ ಪೂರ್ತಿಯಿಲ್ಲ. ಅರ್ಥಾತ್ ಭ್ರಮಿತ ಇಚ್ಛೆ ಹಾಗು ಕ್ರಿಯೆಯ ಸಮ್ಮಿಲಿತ ಸ್ವರೂಪಕ್ಕೆ 'ಲೋಕ' ಎಂದು ಸಂಜ್ಞೆ.

ಯಾವುದರ ಪೂರ್ತಿಯಿಲ್ಲವೋ, ಯಾವುದು ಪೂರ್ಣವಲ್ಲವೋ, ಅದರ ಪೂರ್ತಿಯ ಪ್ರತಿ ಮತ್ತು ಪೂರ್ಣತೆಯ ಪ್ರತಿಯಿರುವ ಹಠವಾದಿ ಇಚ್ಛೆಗಳಿಗೆ 'ಮೃಗತ್ಕೃಷ್ಣಾ' ಹಾಗು ಭ್ರಾಂತಿಯೆಂದು ಸಂಜ್ಞೆ, ಇದೇ ಬಂಧನ.

ಮೃಗತ್ಕೃಷ್ಣಾ ಅಥವಾ ಭ್ರಾಂತಿಯ ನಿರಾಕರಣೆ ಸಹ ಅಸ್ತಿತ್ವವಾದಿ ವಿಧಿಯಿಂದ ಅನುಭವ ದರ್ಶನವೇ ಪ್ರಮಾಣಿತವಾಗಿದೆ.

ಸಹ ಅಸ್ತಿತ್ವದಲ್ಲಿಯೇ ಜೀವನ ದರ್ಶನ, ಅನುಭವವಿದೆ ಮತ್ತು ಇದಕ್ಕಾಗಿ ಇಕಾಯಿಯ ರೂಪ, ಗುಣ, ಸ್ವಭಾವ ಮತ್ತು ಧರ್ಮದ ಅಧ್ಯಯನ ಅನಿವಾರ್ಯವಾಗಿದೆ.

ಸಂಪೂರ್ಣ ಸೃಷ್ಟಿಯ ಸಕಲ ಅಧ್ಯಯನ ಜಡ, ಚೈತನ್ಯ ಹಾಗು ವ್ಯಾಪಕತೆಯ ಸಂದರ್ಭದಲ್ಲಿಯೆಯಿದೆ. ಇದೇ ಭೌತಿಕ, ರಾಸಾಯನಿಕ ಹಾಗು ಜೀವನ ಕ್ರಿಯೆಯ ರೂಪದಲ್ಲಿ ಸ್ಪಷ್ಟವಾಗಿದೆ.

ಸಂಪೂರ್ಣ ಸೃಷ್ಟಿಯ ಅಧ್ಯಯನ ಮಾನವನು ಒಟ್ಟು ಆರು ದೃಷ್ಟಿಕೋನಗಳಿಂದ ಮಾಡಿದ್ದಾನೆ -

106

(೧)ಪ್ರಿಯಾಪ್ರಿಯ (೨) ಹಿತಾಹಿತ (೩) ಲಾಭಾಲಾಭ (೪) ನ್ಯಾಯಾನ್ಯಾಯ (೫) ಧರ್ಮಧರ್ಮ ಮತ್ತು (೬) ಸತ್ಯಾಸತ್ಯ

ಸುಖಾಕಾಂಕ್ಷೆಯಿಂದ ಆಶಯ, ಆಶಯದಿಂದ ಅವಶ್ಯಕತೆ, ಅವಶ್ಯಕತೆಯಿಂದ ಅಧ್ಯಯನ, ಅಧ್ಯಯನದಿಂದ ಕ್ಷಮತೆ, ಕ್ಷಮತೆಯಿಂದ ದೃಷ್ಟಿ, ದೃಷ್ಟಿಯಿಂದ ದರ್ಶನ ಹಾಗು ದರ್ಶನದಿಂದ ಸ್ಪಷ್ಟೀಕರಣ, ಸ್ಪಷ್ಟೀಕರಣದಿಂದ ನಿಶ್ಚಿತ ಯೋಜನೆಯಿದೆ.

ಮಾನವನಲ್ಲಿ ಅರ್ಥ ತಥಾ ಕಾಮದ ಪ್ರಲೋಭನೆಯಿಂದಲೇ ಪ್ರಿಯಾಪ್ರಿಯ, ಹಿತಾಹಿತ ಹಾಗು ಲಾಭಾಲಾಭ ದೃಷ್ಟಿಗಳು ಕ್ರಿಯಾಶೀಲವಾಗಿವೆ, ಜೊತೆಗೆ ಧರ್ಮ ಹಾಗು ಮೋಕ್ಷದ ಸಂಕಲ್ಪಗಳಿಂದ ನ್ಯಾಯಾನ್ಯಾಯ, ಧರ್ಮಧರ್ಮ ಹಾಗು ಸತ್ಯಾಸತ್ಯ ದೃಷ್ಟಿಗಳು ಕ್ರಿಯಾಶೀಲವಾಗಿವೆ. ಭ್ರಮೆಯಿಂದ ಮುಕ್ತಿಯೇ ಮೋಕ್ಷ.

ಮಾನವೀಯತೆ ಹಾಗು ಅತಿಮಾನವೀಯತೆಯಿಂದ ಸಮೃದ್ಧವಾಗಲು ಮೋಕ್ಷ ಹಾಗು ಧರ್ಮ ಪ್ರಮಾಣಿತವಾಗುವುದು ಅವಶ್ಯಕ.

ಭ್ರಮುವಶ ಸೌಲಭ್ಯ-ಸಂಗ್ರಹ ಪ್ರಾಪ್ತಿಗಾಗಿ ಮಾಡಲಾಗಿರುವ ಪ್ರಾರಂಭಿಕ ತಯಾರಿಯೇ ಪ್ರಲೋಭನೆ. ಸಾರ್ಥಕ ಪ್ರಾಪ್ತಿಯ ಸಂಭಾವನಾತ್ಮಕ ವಿಚಾರಗಳ ಆಶಯ, ಯಾವುದರ ಉಪಲಬ್ಧತೆಯಿಲ್ಲದೆ ತೃಪ್ತಿ ಸಂಭವವಿಲ್ಲವೋ ಅದಕ್ಕೆ ಅವಶ್ಯಕತೆಯೆಂದು ಸಂಜ್ಞೆ.

ಅಧಿಷ್ಠಾನದ (ಆತ್ಮದ) ಸಾಕ್ಷಿಯಲ್ಲಿ ಸ್ಮರಣಪೂರ್ವಕ ಮಾಡಿರುವ ಪ್ರಯಾಸಕ್ಕೆ ಅಧ್ಯಯನವೆಂದು ಸಂಜ್ಞೆ, ಯಾರು ಎಷ್ಟು ಯೋಗ್ಯತೆಯಿಂದ ಸಂಪನ್ನವಾಗಿದ್ದಾರೋ, ಅದು ಅವರ ಕ್ಷಮತೆಯ ಬಲ ಮತ್ತು ಶಕ್ತಿಯ ರೂಪದಲ್ಲಿ ಪ್ರಕಾಶನವಿದೆ. ಪ್ರತ್ಯೇಕ ಮಾನವ ಜೀವನದಲ್ಲಿ ಕ್ಷಮತೆ ಸಮಾನ. ಕ್ಷಮತೆಯಿಂದ ಮಾಡಲಾಗುವ ಅಭಿವ್ಯಕ್ತಿಗೆ ದೃಷ್ಟಿ, ಮತ್ತು ದೃಷ್ಟಿಯಲ್ಲಾಗುವ ಪ್ರತಿಬಿಂಬನ ಕ್ರಿಯೆಗೆ ದರ್ಶನವೆಂದು ಸಂಜ್ಞೆ. ಪ್ರತಿಬಿಂಬನದ ತಾತ್ಪರ್ಯ ಅರಿವಿನಿಂದಿದೆ.

ಸಹ-ಅಸ್ತಿತ್ವವೇ ಸಂಪೂರ್ಣ ದೃಶ್ಯ.

ದೃಶ್ಯದ ದರ್ಶನ ವ್ಯಾಪಕ ವಸ್ತುವಿನಲ್ಲಿ ಸಂಪ್ರತ್ಚ ಜಡ - ಚೈತನ್ಯ ಪ್ರಕೃತಿಯ ರೂಪದಲ್ಲಿ ವಿದ್ಯಮಾನ ಸತ್ಯಾವಿನಲ್ಲಿ ಅನುಭವವೇ ಜ್ಞಾನಾವಸ್ಥೆಯ ಇತಾಯಿಯ ಪೂರ್ಣ ಜಾಗೃತಿಯ ಸಂಕೇತವಾಗಿದೆ.

107

ಲೋಕ ತೃಪ್ತದಿಂದ ತೃಪ್ತ ಹಾಗು ಇದರಲ್ಲಿ ನಿರತ ಸಮಸ್ತ ಪ್ರಯತ್ನಗಳಲ್ಲಿ ಮಾನವನಿಗೆ ಶ್ರಮದ ಪೀಡೆಯಿಂದ, ಇದೇ ಭ್ರಮೆ. ಆದ್ದರಿಂದ ಮಾನವನು ಶ್ರಮದ ಪೀಡೆಯಿಂದ ಮುಕ್ತನಾಗಲು ಯತ್ನವನ್ನು ಮಾಡಿದ್ದಾನೆ, ಇದು ಮಾನವನ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯ ಅನುಸಾರ ಸಫಲ ಅಥವಾ ಅಸಫಲವಾಗಿದೆ.

ಮಾನವನು ಅಮಾನವೀಯತೆಯ ಸಮೀಕ್ಷೆ ಹಾಗು ಮಾನವೀಯತೆ ಮತ್ತು ಅತಿಮಾನವೀಯತೆಯ ಅಧ್ಯಯನ ಮಾಡುವ ಪ್ರಯಾಸ ಮಾಡಿದ್ದಾನೆ. ಪೂರ್ವೋಕ್ತ ಮೂರು ದೃಷ್ಟಿ, ಸ್ವಭಾವ ಹಾಗು ವಿಷಯದ ವರ್ಣನೆ ಪೂರ್ವದಲ್ಲಿ ಮಾಡಲಾಗಿದೆ.

ಸಹ-ಅಸ್ತಿತ್ವದಲ್ಲಿ ದರ್ಶನವೇ ಜ್ಞಾನ, ಜ್ಞಾನವೇ ನಿಯಮ ಹಾಗು ನಿಯಮವೇ ನಿಯಂತ್ರಣ, ಇದು ಅಸ್ತಿತ್ವದಲ್ಲಿ ಕಂಡುಬರುತ್ತದೆ.

ಪ್ರತ್ಯೇಕ ಕ್ರಿಯೆ ನಿಯಮದಿಂದ ನಿಯಂತ್ರಿತವಾಗಿದೆ.

ವಿಷಯ, ವಿಷಯ ಹಾಗು ವಿಷಯ-ವಸ್ತು, ಈ ಮೂರೂ ಕ್ರಿಯೆಗಳು.

ಜಡ ಕ್ರಿಯೆಯನ್ನು ಪಡೆದು ಮಾಡಲಾಗುವ ಶ್ರಮದಿಂದ ವಿಶ್ರಾಮದ ಪ್ರತೀಕ್ಷೆ ಹಾಗು ಪ್ರಯಾಸವನ್ನು ಮಾನವ ಮಾಡಿದ್ದಾನೆ, ಇದು ಅಸಫಲ ಸಿದ್ಧವಾಗಿದೆ. ಇದರ ಜೊತೆಗೆ ವ್ಯವಹಾರಿಕ ಹಾಗು ವೈಚಾರಿಕ ಏಕ-ಸೂತ್ರತೆಯಿಂದ ಸಹ-ಅಸ್ತಿತ್ವವೂ ಸಿದ್ಧವಾಗಿದೆ, ಇದು ನಿಯಮ ಹಾಗು ವ್ಯಾಪಕತೆಯ ಮಹಿಮೆ.

ಸಮಸ್ತ ಕ್ರಿಯೆಗಳು ಸತ್ತಾವಿನಲ್ಲಿ ನಿಯಂತ್ರಿತ ಹಾಗು ಸಂರಕ್ಷಿತವಾಗಿವೆ. ಏಕೆಂದರೆ ಇಕಾಯಿ ಮತ್ತು ಇಕಾಯಿಯ ನಡುವೆ ಸತ್ತಾವಿನ ಅಭಾವವಿಲ್ಲ. ಆದ್ದರಿಂದ ಸತ್ತಾವೇ ನಿಯಮ ಹಾಗು ನಿಯಂತ್ರಣದ ಕಾರಣ ಸಿದ್ಧವಾಗಿದೆ. ಇದರದೇ ಭಾಸ, ಆಭಾಸ ಹಾಗು ಅನುಭೂತಿಯ ಯೋಗ್ಯ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯಿಂದ ಸಂಪನ್ನವಾಗುವುದಕ್ಕೆ ಮಾನವನು ಹಲವಾರು ಪ್ರಯಾಸ ವಿಭಿನ್ನ ಸ್ತರಗಳಲ್ಲಿ ಮಾಡಿದ್ದಾನೆ, ಮಾಡುತ್ತಿದ್ದಾನೆ ಮತ್ತು ಮಾಡುತ್ತಲಿರುತ್ತಾನೆ.

ಉಕ್ತ ಪ್ರಯಾಸದ ಮೂಲದಲ್ಲಿ ಕ್ಷಮತೆ, ಕ್ಷಮತೆಯ ಮೂಲದಲ್ಲಿ ಅಧ್ಯಯನ, ಅಧ್ಯಯನದ ಮೂಲದಲ್ಲಿ ಪಾತ್ರತೆ, ಪಾತ್ರತೆಯ ಮೂಲದಲ್ಲಿ ಯೋಗ್ಯತೆ, ಯೋಗ್ಯತೆಯ ಮೂಲದಲ್ಲಿ ಕರ್ಮಾಭ್ಯಾಸ, ಕರ್ಮಾಭ್ಯಾಸದ ಮೂಲದಲ್ಲಿ ಸಾಧನ, ಸಾಧನದ ಮೂಲದಲ್ಲಿ ಏಕಸೂತ್ರತೆ, ಏಕಸೂತ್ರತೆಯ ಮೂಲದಲ್ಲಿ ಪ್ರಯಾಸ ಪ್ರತ್ಯೇಕ ಮಾನವ ಇಕಾಯಿಯಲ್ಲಿ ತಮ್ಮ-ತಮ್ಮ ಅವಸ್ಥೆ ಮತ್ತು ಜಾಗೃತಿಯ ಅನುಸಾರವಿರುವುದು ಕಂಡುಬರುತ್ತದೆ.

108

ಪರಸ್ಪರ ಸಮಾಧಾನದ ಅರ್ಥದಲ್ಲಿ ಜೀವನ ಕ್ರಿಯೆ ಹಾಗು ಸಂಕೇತ ಗ್ರಹಣ ಸಹಿತ ಅನುಸರಣೆ ಕ್ರಿಯೆಯೇ 'ಏಕಸೂತ್ರತೆ'.

ಸ್ವಪ್ನತೆಯಿಂದ ಪ್ರಸಾರಿತ ಸಂಕೇತಾನುಸರಣೆವೇ ಏಕಸೂತ್ರತೆ ಹಾಗು ಜಾಗೃತಿಯಿರುತ್ತದೆ ಅನ್ಯಥಾ ಭ್ರಮೆ ಹಾಗು ಹಾಸವಿರುತ್ತದೆ.

ಭ್ರಮಿತ ವ್ಯಕ್ತಿಯಿಂದ, ಭ್ರಮಿತ ವ್ಯಕ್ತಿಗೆ ಸಂಚೋಧನೆ ಹಾಗು ಅಮಾನವೀಯ ಶಿಕ್ಷಣದಿಂದ ಜಾಗೃತಿಯನ್ನು ಪ್ರಮಾಣಿತ ಮಾಡುವುದು ಅಸಂಭವ. ಜಾಗೃತ ವ್ಯಕ್ತಿಯಿಂದ ಭ್ರಮಿತ ವ್ಯಕ್ತಿಗೆ ಜಾಗೃತಿಗಾಗಿ ಮಾರ್ಗ ಪ್ರಶಸ್ತ ಮಾಡುವುದು ಪ್ರಮಾಣಿತವಾಗುತ್ತದೆ, ಇದೇ ಸ್ವಯಂನಲ್ಲಿ ಜಾಗೃತಿಯ ಪ್ರಮಾಣ.

ಪ್ರತ್ಯೇಕ ಇಕಾಯಿ ಅನಂತದ ತುಲನದಲ್ಲಿ ಅಂಶವೇ.

ಪ್ರತ್ಯೇಕ ಇಕಾಯಿಯ ಘಟನೆ ಅನೇಕ ಇಕಾಯಿಗಳಿಂದ ಸಂಪನ್ನವಾಗಿದೆ.

ವಿಖಂಡನದಿಂದ ಏಕಸೂತ್ರತೆಯ ಉಪಲಬ್ಧತೆ ಸಿದ್ಧವಿಲ್ಲ, ಏಕೆಂದರೆ ಕ್ರಿಯೆ ಯಾವುದಾದರೂ ಘಟನೆಯ ಮೇಲೆಯೇ ಆಧಾರಿತವಾಗಿರುತ್ತದೆ. ಅದೇ ಆಧಾರದ ಮೇಲೆ ವಿಖಂಡನ ವಿಧಿಯಲ್ಲಿ ದಾಹ (ತಾಪ ಅಥವಾ ದುಃಖ) ಕಂಡುಬರುತ್ತದೆ, ಈ ದಾಹ, ತಾಪ ಅಥವಾ ದುಃಖ ಪುನಃ ಇನ್ನೊಬ್ಬರಿಗೆ ವಿಖಂಡನ ಕ್ರಿಯೆಗಾಗಿ ಕಾರಕವಾಗುತ್ತದೆ.

ವಿಖಂಡನ ಕ್ರಿಯೆಯಿಂದ ಯಾವುದರ ಅಸ್ತಿತ್ವವನ್ನು ಸಮಾಪ್ತಿಸಲಾಗುವುದಿಲ್ಲ, ಏಕೆಂದರೆ ಗಣಿತಶಃ ಇಕಾಯಿಯ ವಿಖಂಡನ ಮಾಡುತ್ತಲೂ-ಮಾಡುತ್ತಲೂ ಶೇಷವಿದ್ದೇವಿರುತ್ತದೆ. ಮಾನವ ಪರಂಪರೆಯಲ್ಲಿ ವಿಖಂಡನವನ್ನು ಸಮುದಾಯದ ರೂಪದಲ್ಲಿ ಗುರುತಿಸಲಾಗುತ್ತದೆ ಮತ್ತು ಅಖಂಡತೆಯಲ್ಲಿ ಏಕಸೂತ್ರತೆಪೂರ್ವಕ ಸಂಪೂರ್ಣ ಮಾನವ ಒಂದು ಇಕಾಯಿಯ ರೂಪದಲ್ಲಿ ಕಂಡುಬರುತ್ತದೆ.

ಮಾನವ ಲೌಕಿಕ ಹಾಗು ಪಾರಲೌಕಿಕ ಭೇದದಿಂದ ವ್ಯವಹಾರಮಾಡುತ್ತಾನೆ.

ಸಮಸ್ತ ಲೌಕಿಕ ವ್ಯವಹಾರ ಸ್ವಾರ್ಥ ಅಥವಾ ಪರಾರ್ಥ ಭೇದದಿಂದಿದೆ ಹಾಗು ಪಾರಲೌಕಿಕ ವ್ಯವಹಾರ ಸಬೀಜ ಮತ್ತು ನಿರ್ಬೀಜ ಭೇದದಿಂದಿದೆ.

ನೈತಿಕ ಹಾಗು ಅನೈತಿಕ ಭೇದದಿಂದ ಸ್ವಾರ್ಥವಾದಿ ವ್ಯವಹಾರವಿದೆ. ಇದರ ಸಂಬಂಧ ಸ್ವಜನ, ಸ್ವವರ್ಗ, ಸ್ವಜಾತಿ, ಸ್ವಮನ, ಸ್ವಸಂಪ್ರದಾಯ, ಸ್ವಪಕ್ಷ ಹಾಗು ಸ್ವಭಾಷೆ ಭೇದದಿಂದಿದೆ, ಆದರೆ ಪರಮಾರ್ಥ ವ್ಯವಹಾರ ಸರ್ವ-ಜನ, ಸರ್ವ-ವರ್ಗ, ಸರ್ವ-ಮನ, ಸರ್ವ-ಸಂಪ್ರದಾಯ, ಸರ್ವ-ಪಕ್ಷ ಹಾಗು ಸರ್ವ-ಭಾಷೆ ಭೇದದ ಸಮಾಧಾನವಾಗಿದೆ.

109

ಸ್ವಾರ್ಥ (ಪ್ರಲೋಭನೆ) ಅರ್ಥ ಮತ್ತು ಕಾಮದ ಭೇದದಿಂದಿದೆ.

ಪರಾರ್ಥ ವ್ಯವಹಾರ ಧರ್ಮ ಮತ್ತು ಅರ್ಥದ ಭೇದದಿಂದಿದೆ.

ಪರಮಾರ್ಥ ವಿಚಾರ ಹಾಗು ವ್ಯವಹಾರ ಧರ್ಮ ಹಾಗು ಮೋಕ್ಷದ ಭೇದದಿಂದಿದೆ.

ಮಾನವೀಯತೆಗಾಗಿ ಆವಷ್ಯಕೀಯ ನಿಯಮಪೂರ್ವಕ ಮಾಡಲಾಗುವ ಸಮಸ್ತ ರಾಜ್ಯನೀತಿ ಹಾಗು ಧರ್ಮನೀತಿ ಸಮ್ಯಕ್ತ ವ್ಯವಹಾರವನ್ನು 'ನೈತಿಕ' ಹಾಗು ಭ್ರಮುವಶ ಅಮಾನವೀಯತೆಪೂರ್ವಕ ಮಾಡಲಾಗುವ ವ್ಯವಹಾರವನ್ನು 'ಅನೈತಿಕ' ಎಂದು ಸಂಜ್ಞೆ.

ಸ್ವಜನ, ವಸ್ತು ಹಾಗು ಸೇವೆಯನ್ನು ಮಹತ್ವಪೂರ್ಣ ಮತ್ತು ಅನ್ಯವನ್ನು ಗೌಣವೆಂದು ತಿಳಿಯುವ ಪ್ರವೃತ್ತಿಗೆ ಸ್ವಾರ್ಥವೆಂದು ಸಂಜ್ಞೆ. ಇದೇ ರೀತಿಯಲ್ಲಿ ಪರಜನ, ವಸ್ತು ಹಾಗು ಸೇವೆಯಲ್ಲಿ ಅಧಿಕ ಮಹತ್ವದ ಅನುಮಾನ ಮಾಡುವ ಪ್ರವೃತ್ತಿ ಹಾಗು ಪ್ರಯಾಸಕ್ಕೆ ಪರಾರ್ಥವೆಂದು ಸಂಜ್ಞೆ ನೀಡಲಾಗುತ್ತದೆ.

ವಿಷಯ ಚತುಷ್ಪಯ ವಿಚಾರವೇ ಸಬೀಜ ವಿಚಾರ. ಲೋಕೇಷಣ ಮತ್ತು ಈಷಣಾಮುಕ್ತಿ ನಿರ್ಬೀಜ ವಿಚಾರ. ಮಾನವ ಪದದಲ್ಲಿ ಪುತ್ರೇಷಣ ಮತ್ತು ವಿತ್ತೇಷಣ ಸಬೀಜವಾಗಿರುತ್ತಾ ಮಾನವ ನ್ಯಾಯ ಸಮ್ಯಕ್ತ ಸಮಾಧಾನ ಸಂಪನ್ನವಾಗುತ್ತಾನೆ. ಆದ್ದರಿಂದ 'ಮಾನವ' ಭ್ರಮೆಬಾಧದಿಂದ ಮುಕ್ತವಾಗುತ್ತಾನೆ ಹಾಗು ಜಾಗೃತನಾಗಿರುತ್ತಾನೆ. ಮಾನವ ಪದಕ್ಕೆ ಭ್ರಾಂತಾಭ್ರಾಂತವೆಂದೂ ಸಂಜ್ಞೆಯಿದೆ. ಮಾನವ ಪದದಲ್ಲಿ ಸಬೀಜ ವಿಚಾರದ ಸಮೀಕ್ಷೆಯಿರುತ್ತದೆ.

ಅರಿವಿನಿಂದ ವಿಚಾರ ಅರ್ಥಾತ್ ಜ್ಞಾನ, ವಿಜ್ಞಾನ, ವಿವೇಕ ಪ್ರಮಾಣಿತವಾಗುವುದೇ ನಿರ್ಬೀಜ ವಿಚಾರ. ಇದು ದಿವ್ಯ ಮಾನವ ಕೋಟಿಯಲ್ಲಿ ಉಪಕಾರ ಪ್ರಧಾನ ವಿಧಿಯಿಂದಲೇ ಪ್ರಮಾಣಿತವಾಗುತ್ತದೆ.

ವ್ಯಷ್ಟಿಯ ಅಸ್ತಿತ್ವದಲ್ಲಿ ಕಂಡುಬರುವ ಅಭಿಮಾನ ಹಾಗು ಅಹಂಕಾರವೇ ಸಂಕೀರ್ಣತೆ ಹಾಗು ಕ್ಲೇಶದ ಮೂಲ ಕಾರಣ.

ಸಮಷ್ಟಿಯ ಅಸ್ತಿತ್ವದ ಯಥಾರ್ಥ ಅರಿವಿನಿಂದ ಉದಾರತೆ ಹಾಗು ಕೃತಜ್ಞತೆಯ ಉಪಲಬ್ಧತೆಯಾಗುತ್ತದೆ ಮತ್ತು ವ್ಯಾಪಕ ಸತ್ತಾವಿನಲ್ಲಿ ಅನುಭೂತಿಯಿಂದ ಭ್ರಾಂತಿಯ ನಿರ್ಮೂಲನವಾಗುತ್ತದೆ.

ಯಥಾರ್ಥ ದರ್ಶನವಿಲ್ಲದೆ ಮಾನವೀಯ ವಿಚಾರ, ಮಾನವೀಯ ವಿಚಾರವಿಲ್ಲದೆ ಮನವೀಯ ಕಾರ್ಯ-ವ್ಯವಹಾರದಲ್ಲಿ ಪ್ರವೃತ್ತಿ, ಮಾನವೀಯ ಕಾರ್ಯ-ವ್ಯವಹಾರವಿಲ್ಲದೆ

110

ವ್ಯವಹಾರದ ಏಕಸೂತ್ರತೆ, ವ್ಯವಹಾರದ ಏಕಸೂತ್ರತೆಯಿಲ್ಲದೆ ನಿರ್ವಿರೋಧತೆ, ನಿರ್ವಿರೋಧತೆಯಿಲ್ಲದೆ ನಿರ್ವಿರೋಧತೆ ಪೂರ್ಣ ಅರಿವು, ನಿರ್ವಿರೋಧತೆ ಪೂರ್ಣ ಅರಿವಿಲ್ಲದೆ ಸಹ-ಅಸ್ತಿತ್ವ, ಸಹ-ಅಸ್ತಿತ್ವವಿಲ್ಲದೆ ಸಮಾಧಾನ ಸಮೃದ್ಧಿ, ಸಮಾಧಾನ ಸಮೃದ್ಧಿಯಿಲ್ಲದೆ ಸ್ವರ್ಗೀಯತೆ, ಸ್ವರ್ಗೀಯತೆಯಿಲ್ಲದೆ ವಿವೇಕ ಹಾಗು ವಿಜ್ಞಾನ ಪೂರ್ಣ ಅಧ್ಯಯನ, ವಿವೇಕ ಹಾಗು ವಿಜ್ಞಾನಪೂರ್ಣ ಅಧ್ಯಯನವಿಲ್ಲದೆ ಯಥಾರ್ಥ ದರ್ಶನದ ಪ್ರಮಾಣವಿಲ್ಲ.

“ಸರ್ವ ಶುಭವಾಗಲಿ”

111

ಅಧ್ಯಾಯ - ಹತ್ತು

ಕ್ಲೇಶ ಮುಕ್ತಿ

ಕ್ಲೇಶ ಮುಕ್ತಿಯ ಆಳ ಸರ್ವ ಮಾನವನಲ್ಲಿ ಕಂಡುಬರುತ್ತದೆ.

ದುಃಖದಿಂದ ಮುಕ್ತಿ ಹಾಗು ಭ್ರಮೆಯಿಂದ ಮುಕ್ತಿ - ಇಂತಹ ಭೇದದಿಂದಲೇ ಮುಕ್ತಿಗೆ ಪ್ರಯಾಸವಿದೆ, ಇದಕ್ಕೆ ಸಮಸ್ತ ಅಧ್ಯಯನ, ಉಪಾಸನ, ಪ್ರಯೋಗ, ವ್ಯವಹಾರ, ವ್ಯವಸಾಯ, ಅಭ್ಯಾಸ ಮತ್ತು ನಿಷ್ಠೆ ಸಂಪನ್ನವಾಗಿದೆ. ವಿಗತ ಪರಂಪರೆಯಲ್ಲಿ ಮುಕ್ತಿಯ ಯಾವ ಪ್ರಮಾಣವೂ ಅಥವಾ ಉಪಾಯವೂ ಅಧ್ಯಯನ ಸುಲಭವಾಗಿಲ್ಲ. ಆದ್ದರಿಂದ ಭ್ರಮೆಯಿಂದ ಮುಕ್ತಿಗೆ ಈ ಪ್ರಸ್ತಾವವಿದೆ.

ಅಧ್ಯಯನದಿಂದ ಪ್ರತ್ಯೇಕ ಇಕಾಯಿಯ ಘಟನೆ, ಪ್ರಕ್ರಿಯೆ, ಪರಿಣಾಮ ಹಾಗು ಅದರ ಪ್ರಯೋಜನ ಸ್ಪಷ್ಟವಾಗುತ್ತದೆ.

ರೂಪ, ಗುಣ ಪರಿವರ್ತನಶೀಲವಾಗಿದೆ, ಆದರೆ ಸ್ವತಃ ರೂಪಿ ತತ್ವ ಶಾಶ್ವತವಾದಿ, ಏಕೆಂದರೆ ತತ್ವ ನಾಲ್ಕು ಅವಸ್ಥೆಗಳಲ್ಲಿ ಕಂಡುಬರುತ್ತದೆ. ಎಲ್ಲಾ ಬೃಹತ್ತು ಇಕಾಯಿಗಳ ಘಟನೆಯ ಮೂಲ ತತ್ವ ಪರಮಾಣುವೇ ಆಗಿದೆ. ಎಲ್ಲಾ ತತ್ವಗಳ ಪರಮಾಣುವಿನ ಘಟನೆ ಸಿದ್ಧಾಂತ ಸಮಾನವಾಗಿದೆ. ಪರಮಾಣುವಿನ ಘಟನೆಯೂ ಮಧ್ಯಾಂಶ ಹಾಗು ಆಶ್ರಿತ ಅಂಶಗಳಿಂದಾಗಿದೆ. ಪರಮಾಣುವಿನಲ್ಲಿ ಸಮಾಹಿತ ಅಂಶಗಳ ಸಕ್ರಿಯತೆ ಹಾಗು ವಿಕಾಸ ಕ್ರಮ ಭೇದದಿಂದಲೇ ಎಲ್ಲ ಅವಸ್ಥೆಗಳಿವೆ.

ಅಧ್ಯಯನವೇ ಉಪಾಸನ. ಪ್ರಮಾಣಿತ ಮಾನವನೇ ಅಧ್ಯಾಪಕ, ಇವರ ಸಾನಿಧ್ಯದಲ್ಲಿಯೇ ಅಧ್ಯಯನವಿದೆ. ಅಧ್ಯಯನದಿಂದ ಅರಿವಿನಿಂದ ತದಾಕಾರ ತದ್ರೂಪತೆಯಿಂದ ಸ್ವತಃ, ಸ್ವತಂತ್ರತೆ ಅಧಿಕಾರವಾಗುತ್ತದೆ.

ಅಧ್ಯಾಪಕ - ಅನುಭವ ಮೂಲಕ ವಿಧಿಯಿಂದ ಅನುಭವ ಗಾಮಿ ಪದ್ಧತಿಯಿಂದ ಸಹ-ಅಸ್ತಿತ್ವ ರೋಪಿ ಸತ್ಯ ಬೋಧಮಾಡಿಸುವವನು.

ಪ್ರಯೋಗದಿಂದ ಉಪಯೋಗಿ ಸಾಧನಗಳ ಗುರುತಾಗುತ್ತದೆ.

ಉತ್ಪಾದನೆಯಿಂದ ಉಪಯೋಗಿ ಸಾಮಗ್ರಿಗಳ ಉಪಲಬ್ಧತೆ ಹಾಗು ವಿಪುಲೀಕರಣವಾಗುತ್ತದೆ.

112

ಅಭ್ಯಾಸದಿಂದ ಕುಶಲತೆ-ನಿಪುಣತೆ-ಪಾಂಡಿತ್ಯದಲ್ಲಿ ಪಾರಂಗತವಾಗುವುದು ಪ್ರಮಾಣಿತವಾಗುತ್ತದೆ.

ನಿಷ್ಠೆಯಿಂದ ನ್ಯಾಯ, ಧರ್ಮ ಹಾಗು ಸತ್ಯದ ಪ್ರಕಾಶದಲ್ಲಿ ಮಾನವ ಲಕ್ಷ್ಯಕ್ಕಾಗಿ ಅಧ್ಯಯನವಾಗುತ್ತದೆ. ನಿಷ್ಠೆಯ ಫಲಸ್ವರೂಪ ಅನುಭೂತಿಯಾಗುತ್ತದೆ. ಅನುಭೂತಿ ಕೇವಲ ಸತ್ಯದಲ್ಲಿದೆ. ಸಹ-ಅಸ್ತಿತ್ವ ರೂಪಿ ಪರಮ ಸತ್ಯದಲ್ಲಿ ಅನುಭೂತಿಯೇ ಜೀವನದಲ್ಲಿ ಭ್ರಮೆ ಮುಕ್ತಿ.

ವ್ಯಾಪಕ ಸತ್ತಾ ಪಾರಗಾಮಿ-ಪಾರದರ್ಶಿ ರೂಪದಲ್ಲಿ ಹಾಗು ದೇವಿ-ದೇವತೆಗಳು ಅನೇಕ.

ಈಷ್ಟ - ನಿರ್ಭ್ರಮತೆಯಿಂದ ಶ್ರದ್ಧೆ, ವಿಶ್ವಾಸ ಸಹಿತ ಶ್ರೇಷ್ಠತೆಯ ಗುರುತಿರುವುದು ಸಹ-ಅಸ್ತಿತ್ವದಲ್ಲಿ ಈಷ್ಟ.

ಅರಿವು ರೂಪಿ ಈಷ್ಟದಲ್ಲಿ ನಿಷ್ಠೆಯ ನಿರಂತರತೆಯಿಂದಲೇ ಅನುಭೂತಿಯಿದೆ.

ಜೀವನ ತತ್ವ ಅಮರತ್ವವಾದಿ. ಆದ್ದರಿಂದ ನಿತ್ಯ ಅನುಭವ ಮಾಡಲು ಯೋಗ್ಯ ಯೋಗ್ಯತೆಯನ್ನು ಪ್ರಮಾಣಿತ ಮಾಡುವ ಅವಸರ ಪ್ರತ್ಯೇಕ ಮಾನವ ಇಕಾಯಿಯಲ್ಲಿದೆ.

ಸತ್ತಾವಿನಲ್ಲಿ ಸಂವೃತ್ತ ಜಡ-ಚೈತನ್ಯ ಸಹಜ ಪರಸ್ಪರತೆಯಲ್ಲಿಯೇ ಯಾವುದರ ಅಸ್ತಿತ್ವ ಸಿದ್ಧವಾಗುತ್ತದೆಯೋ, ಇದಕ್ಕೆ ಸಹ-ಅಸ್ತಿತ್ವವೆಂದು ಸಂಜ್ಞೆ.

ಅಸಂಗ್ರಹದಿಂದ ನಿರ್ಬೀಜ ಪ್ರವೃತ್ತಿಯ ಪ್ರಸವವಿದೆ, ಇದರ ಫಲ ಪ್ರಮಾಣ ಸರ್ವತೋಮುಖಿ ಸಮಾಧಾನದಿಂದ ಅರಿವು ಹಾಗು ಸಮೃದ್ಧಿ ಶ್ರಮದಿಂದ ಪ್ರಕಟವಾಗುತ್ತದೆ.

ಅಸಂಗ್ರಹ -ವ್ಯಯಕ್ಕಾಗಿ ಮಾಡಲಾಗುವ ಆಯಕ್ಕೆ ಅಸಂಗ್ರಹವೆಂದು ಸಂಜ್ಞೆ ಹಾಗು ಇದರ ಸದ್ವಯ ಅನಿವಾರ್ಯ. ಇದು ಸ್ವಧನ ವಿಧಿಯಿಂದ ಸಾರ್ಥಕವಾಗುತ್ತದೆ.

ಅಕತ್ಸತ್ವ - ಅಭಿಮಾನ ಮುಕ್ತ ಉಪಕಾರ ಕ್ರಿಯಾಕಲಾಪಗಳಿಗೆ ಅಕ್ರುತ್ಸತ್ವವೆಂದು ಸಂಜ್ಞೆ. ಭ್ರಮೆವಶ ಸಂಗ್ರಹ ಪ್ರವೃತ್ತಿಯ ಪ್ರತಿ ಮಾಡಲಾಗುವ ಕ್ರಿಯಾಕಲಾಪವೇ ಅಭಿಮಾನ.

ಯಾವುದನ್ನು ಮಾಡಬಾರದೋ ಅದನ್ನು ಮಾಡದೇಯಿದ್ದು ವಿಧಿ ವಿಹಿತ ಕ್ರಿಯಾಕಲಾಪಗಳನ್ನು ಕೈಕೊಳ್ಳುವುದೇ ಅನಾವಶ್ಯಕ ಕಾರ್ಯಗಳಿಂದ ಮುಕ್ತಿ. ಇದೇ ಅಕತ್ಸತ್ವ. ಭ್ರಮೆವಶ ಮಾಡಲಾಗುವಂತಿರುವ ಎಲ್ಲಾ ಕ್ರಿಯಾಕಲಾಪಗಳೇ ಬಂಧನ, ಕ್ಲೇಶ ಕಾರಿ. ಇದರ ನಿರಾಕರಣ ಅನುಭವ ಸಹಜ ಜಾಗೃತಿಯಿಂದ ಮಾಡಲಾಗುವ ಎಲ್ಲಾ

113

ಕ್ರಿಯಾಕಲಾಪ ಸಮಾಧಾನಕಾರಿ, ಸುಖಕಾರಿ ಮತ್ತು ಶುಭಕಾರಿಯಾಗಿರುವುದೇ ಅಕ್ರುತೇತ್ಯ. ಇದೇ ಉಪಲಬ್ಧತೆ ಮತ್ತು ಸಮೃದ್ಧಿ.

ಭ್ರಮೆಯಿಂದ ನಿರಾಕರ್ಷಣೆಯೇ ಅಕೃತೇತ್ಯ. ಅಮಾನವೀಯತೆಯೇ ಪ್ರತ್ಯೇಕ ಮಾನವನಿಗೆ ಅನಾಚಾರ. ಅನಾಚಾರವನ್ನು ಮಾಡದಿರುವುದೇ ಅಕ್ರುತೇತ್ಯ.

ಆಸಕ್ತಿಯಿಂದ ಮುಕ್ತಿ ಅರ್ಥಾತ್ ಅಧಿಮೌಲೀಕರಣೆ, ಅವಮೌಲೀಕರಣೆ ಹಾಗು ನಿಮೌಲೀಕರಣೆಯಿಂದ ಮುಕ್ತವಾಗುವುದು ನಿರಾಕರ್ಷಣ.

ಚೇಷ್ಟೆಯಿಂದ ಮುಕ್ತವಾಗುವ ಅಧಿಕಾರ ಯಾವ ಇಕಾಯಿಯಲ್ಲೂ ಇಲ್ಲ ಅಥವಾ ಯಾವ ಇಕಾಯಿ ಯಿಂದಲೂ ಸಿದ್ಧವಾಗಿಲ್ಲ. ಆದ್ದರಿಂದ ಚೇಷ್ಟೆಯಿಂದ ಮುಕ್ತಿಯ ಪ್ರಯಾಸವನ್ನು ಆಕರ್ಮಣ್ಯತೆ, ಆಲಸ್ಯ ಹಾಗು ಪ್ರಮಾದಾತ್ಮಕ ದೋಷವೆಂದು ನಿರೂಪಿಸಲಾಗಿದೆ.

¤ ಆಕರ್ಮಣ್ಯತೆ - ಆಲಸ್ಯ ಮತ್ತು ಪ್ರಮಾದದ ರೂಪದಲ್ಲಿರುವುದು ಕಂಡುಬರುತ್ತದೆ. ಅಥವಾ ಕರ್ಮದಿಂದ ಮುಕ್ತಿ ಪಡೆಯುವ ಪ್ರಯಾಸಕ್ಕೆ ಆಕರ್ಮಣ್ಯತೆಯೆಂದು ಸಂಜ್ಞೆ.

¤ ಆಲಸ್ಯ - ಯಾವುದೇ ಕಾರ್ಯವನ್ನು ಸರಿಯೆಂದು ನಂಬುತ್ತಾ, ಅದರ ಉಪಯುಕ್ತತೆ ಸಿದ್ಧವಾಗಿರುವಾಗಲೂ ಅದನ್ನು ಮಾಡದೇಯಿರುವುದು ಆಲಸ್ಯ.

¤ ಪ್ರಮಾದ - ಯಾವ ಕಾರ್ಯದಲ್ಲಿ ಉಪಯುಕ್ತತೆ ಸಿದ್ಧವಾಗುತ್ತದೆಯೋ, ಅದರ ಸಂಬಂಧದಲ್ಲಿ ಜ್ಞಾನದ ಅಭಾವದಲ್ಲಿ ವಾಂಛಿತ ಕ್ರಿಯೆ ಸಂಪನ್ನವಾಗದೇಯಿರುವ ಸ್ಥಿತಿ ಪ್ರಮಾದ.

ನಿರಾಕರ್ಷಣೆ, ಆಂಶಿಕ ಹಾಗು ಪೂರ್ಣ ಭೇದದಿಂದಿದೆ. ಮಾನವ ಪದದಲ್ಲಿ ಆಂಶಿಕ ನಿರಾಕರ್ಷಣೆ ತಥಾ ದಿವ್ಯ ಮಾನವ ಪದದಲ್ಲಿ ಪೂರ್ಣ ನಿರಾಕರ್ಷಣೆ ಪ್ರಮಾಣಿತವಾಗಿದೆ. ಇದು ಉಪಕಾರ ಪ್ರಕೃತಿ ಸಹಜ ವರೀಯತೆ ಕ್ರಮದಲ್ಲಿ ಸ್ಪಷ್ಟವಾಗಿದೆ.

ಅಂತರಂಗ ಮತ್ತು ಬಹಿರಂಗ ಸಮಸ್ತ ಕ್ರಿಯೆಗಳು ಸಕಾರಾತ್ಮಕ ರೂಪದಲ್ಲಿ ಮಧ್ಯಸ್ಥವಾಗಿವೆ.

ಚೈತನ್ಯ ಪಕ್ಷಕ್ಕೆ ಅಂತರಂಗ ಹಾಗು ಜಡ ಪಕ್ಷ ಸಹಿತ ಶರೀರಕ್ಕೆ ಬಹಿರಂಗವೆಂದು ಸಂಜ್ಞೆ.

114

ಸಮಾತಿರೇಕ ವಿಷಮತೆಗೆ ಕಾರಣ, ವಿಷಮಾತಿರೇಕ ಸಮ ಕ್ರಿಯೆ ಸಂಪನ್ನವಾಗುವ ಕಾರಣ. ಇದೇ ರಚನೆ-ವಿರಚನೆ ಕ್ರಮ ಸ್ಥೂಲ ಕ್ರಿಯೆಯಲ್ಲಿ ಸ್ಪಷ್ಟವಾಗಿದೆ.

ಮಾನವ ಜಾಗೃತಿಯಿಂದ ಯಥಾಸ್ಥಿತಿಯಲ್ಲಿಯೇ ಮಧ್ಯಸ್ಥನಾಗಿದ್ದಾನೆ. ಯಥಾಸ್ಥಿತಿಯೇ ಸ್ವಭಾವಗತಿ.

ಪ್ರತ್ಯೇಕ ಜಡ ಪರಮಾಣು ತನ್ನಲ್ಲಿಯೇ ಮಧ್ಯಸ್ಥ ಕ್ರಿಯೆ ಸಂಪನ್ನವಾಗಿದೆ. ಸಮ, ವಿಷಮಾತಿರೇಕ ಆಕ್ರಮಣಗಳನ್ನು ಸ್ವಭಾವಿಕರಿಸುವ ಕ್ರಿಯೆ ಸಂಪನ್ನ ಮಾಡುವ ಕ್ಷಮತೆ ಮಧ್ಯಾಂಶದಲ್ಲಿರುತ್ತದೆ.

ಆತ್ಮ ಮಧ್ಯಸ್ಥ ಕ್ರಿಯೆ. 'ಜೀವನ' ಆತ್ಮಾನುರೂಪಿ ಕಾರ್ಯ ಮಾಡುವ ಸ್ಥಿತಿಯಲ್ಲಿಯೇ ಜಾಗೃತಿ ಪ್ರಮಾಣಿತವಾಗುತ್ತದೆ. ಇದೇ ಮಧ್ಯಸ್ಥ.

ಪೂರ್ಣ ವಿಕಸಿತ ಜಾಗೃತ ಇಕಾಯಿಯಲ್ಲಿ ಆತ್ಮಾನುವರ್ತಿ ಬುದ್ಧಿ, ಚಿತ್ತ, ವೃತ್ತಿ ಹಾಗು ಮನದ ಕ್ರಿಯೆಗಳು ಮಧ್ಯಸ್ಥೀಕರಣ ಪ್ರಣಾಳಿಯಿಂದ ನಿಯಂತ್ರಿತವಾಗುತ್ತದೆ, ಇದರ ಫಲಸ್ವರೂಪವೇ ಸುಖ, ಶಾಂತಿ, ಸಂತೋಷ ಹಾಗು ಆನಂದದ ಪ್ರತಿಷ್ಠೆಯಾಗುತ್ತದೆ.

ಕ್ರಿಯೆಯಿಂದ ಮುಕ್ತ ಇಕಾಯಿಯಿಲ್ಲ. ಸಮ, ವಿಷಮ ಹಾಗು ಮಧ್ಯಸ್ಥ ಕ್ರಿಯೆಯಿರುವುದು ಕಂಡುಬರುತ್ತದೆ. ಹಿಂದೆ ವರ್ಣನಮಾಡಿದಂತೆ ಸಮ ಮತ್ತು ವಿಷಮ ಕ್ರಿಯೆಗಳಲ್ಲಿ ಸಂತುಲನವಿಲ್ಲ. ಆದ್ದರಿಂದ ಮಧ್ಯಸ್ಥೀಕರಣ ಪ್ರಣಾಳಿಯಿಂದ ಇಕಾಯಿಯನ್ನು ಮಧ್ಯಸ್ಥ ಕ್ರಿಯೆಯಿಂದ ಸಂತುಲಿತ ಮಾಡಲಾಗುತ್ತದೆಯೆಂದು ಸಿದ್ಧವಾಗುತ್ತದೆ. ಈ ರೀತಿಯಲ್ಲಿ ಮಧ್ಯಸ್ಥದ ಕ್ರಿಯೆಶೀಲತೆಯೇ ಪ್ರಮಾಣಿತವಾಗುತ್ತದೆ ಹಾಗು ಸಮ ಮತ್ತು ವಿಷಮ ಇದರಿಂದ ನಿಯಂತ್ರಿತ ಸಿದ್ಧವಾಗುತ್ತದೆ.

ಇಕಾಯಿ ನಿಷ್ಕ್ರಿಯವಾಗಿರುವುದರ ಯಾವ ಸಂಭವನೀಯತೆಯೂ ಇಲ್ಲ.

ಮಾನವನಲ್ಲಿ ವ್ಯವಹಾರಿಕ ಮಧ್ಯಸ್ಥತೆ ನ್ಯಾಯದಿಂದ, ವೈಚಾರಿಕ ಮಧ್ಯಸ್ಥತೆ ಸಮಾಧಾನದಿಂದ (ಧರ್ಮದಿಂದ) ಹಾಗು ಅನುಭವದ ಮಧ್ಯಸ್ಥತೆ ಜ್ಞಾನ, ವಿಜ್ಞಾನ ಹಾಗು ವಿವೇಕದಿಂದಿದೆ. ಮಾನವನ ಧರ್ಮ ಸರ್ವತೋಮುಖಿ ಸಮಾಧಾನ ಪರಂಪರೆ.

ಸಮಸ್ತ ವ್ಯವಹಾರ ನಿಯಮದಿಂದ ನಿಯಂತ್ರಿತವಾಗಿದೆ. ನಿಯಮ ವಸ್ತುವಿನ ಆಚರಣದ ರೂಪದಲ್ಲಿ ಪ್ರಮಾಣವಾಗಿದೆ.

ವಿಚಾರ ಸಮಾಧಾನದಿಂದ ಮಾತ್ರ ನಿಯಂತ್ರಿತವಾಗಿದೆ, ಇದು ಜಾಗೃತಿಯ ಪ್ರಮಾಣ.

115

ಅನುಭವ, ಸತ್ಯಾವಿನಲ್ಲಿ ಸಂಪ್ರತಿಕ್ರ ಪ್ರಕ್ರತಿಯಾದ ಸಹ ಅಸ್ತಿತ್ವದಲ್ಲಿ ಮಾತ್ರವಿದೆ. ಅನುಭವ ಶೂನ್ಯವಾದ ವ್ಯಾಪಕತೆಯಲ್ಲಿ ಮಾತ್ರವಿದೆ.

ಅತಃ ಸಹ-ಅಸ್ತಿತ್ವದಲ್ಲಿ ಅನುಭವವೇ ಜ್ಞಾನ ಸಹಜ ಪ್ರಮಾಣ, ವ್ಯಾಪಕದಲ್ಲಿ ಅನಂತ ಇಕಾಯಿಗಳಲ್ಲಿರುವುದರ ಅರಿವೇ ಜ್ಞಾನ, ವ್ಯಾಪಕದಲ್ಲಿ ಅನಂತ ಪ್ರಕೃತಿಯ ಅವಿಭಾಜ್ಯತೆಯೇ ಸಹ-ಅಸ್ತಿತ್ವವೆನ್ನುವುದು ಸಿದ್ಧವಾಗುತ್ತದೆ.

ಪೂರ್ಣ ಜಾಗೃತ ಮಾನವನಲ್ಲಿ ನ್ಯಾಯ ಪೂರ್ಣ ವ್ಯವಹಾರ ತಥಾ ಸಮಾಧಾನ ಪೂರ್ಣ ವಿಚಾರಗಳು ಕಂಡುಬರುತ್ತದೆ.

ಅನುಭೂತೀ ಸಹ-ಅಸ್ತಿತ್ವ ರೂಪಿ ಸತ್ಯದಲ್ಲಿ ಮಾತ್ರವಿದೆ. ಸತ್ಯದಲ್ಲಿ ಅನುಭೂತಿ ಜ್ಞಾನಾವಸ್ಥೆಯ ನಿರ್ಭ್ರಾಂತಾವಸ್ಥೆ ಇಕಾಯಿಯಿಂದಲೇ ಆಗುತ್ತದೆ ಹಾಗು ಇದರ ಪ್ರಭಾವ ಬುದ್ಧಿ, ಚಿತ್ತ, ವೃತ್ತಿ ಹಾಗು ಮನದಲ್ಲಿ ಆಪ್ತಾವನವಾಗುತ್ತದೆ.

ಸಮ, ವಿಷಮ ವಿಚಾರ ಹಾಗು ವ್ಯವಹಾರ ಎರಡೂ ಆಸ್ವಾದನೆ ಕ್ರಿಯೆಗಳು.

ಆಸ್ವಾದನೆ - ಸಮಾಧಾನ ಸಹಜ ಪ್ರಯೋಜನೆಯ ಅರ್ಥದಲ್ಲಿ ಆಶೆ ಹಾಗು ರುಚಿ ಸಹಿತ ಗ್ರಹಣ ಕ್ರಿಯೆಗೆ ಆಸ್ವಾದನೆಯೆಂದು ಸಂಜ್ಞೆ.

ವೃತ್ತಿಯ ಕ್ರಿಯೆಯಾದ ಅನುಭವ ಸಹಜ ವ್ಯವಹಾರಿಕ ಮಧ್ಯಸ್ಥತೆ, ನ್ಯಾಯ ಮತ್ತು ಸಮಾಧಾನದ ರೂಪದಲ್ಲಿ ಪರಿಲಕ್ಷಿತವಾಗುತ್ತದೆ.

ಅನುಭವ ಸಹಜ ಬೋಧದ ಸ್ಥಿತಿಯಲ್ಲಿ ಬುದ್ಧಿಯ ಕ್ರಿಯೆಯಲ್ಲಿ ಆಪ್ತಾವನವಾಗುತ್ತದೆ.

ಪೂರ್ವೋಕ್ತಾನುಸಾರ, ನ್ಯಾಯ, ಧರ್ಮ ಅಥವಾ ಸಮಾಧಾನ ಅನುಭವದ ವಿವಿಧ ಸ್ಥರಗಳೇ.

ಆದ್ದರಿಂದ ವ್ಯವಹಾರದಲ್ಲಿ ಅನುಭವದ ತಥ್ಯ ನ್ಯಾಯ, ವಿಚಾರದಲ್ಲಿ ಅನುಭವದ ತಥ್ಯ ಧರ್ಮವೇ ಸಮಾಧಾನ ಮತ್ತು ಆತ್ಮಾನುಭೂತ ತಥ್ಯ ಸಹ-ಅಸ್ತಿತ್ವ. ಇದೇ ಪರಮ ಸತ್ಯ.

ವ್ಯವಹಾರಿಕ ಮಧ್ಯಸ್ಥತೆ, ವ್ಯವಹಾರಿಕ ಸಂತುಲನ ಸಮ-ವಿಷಮ ವ್ಯವಹಾರದ ನಡುವೆ ಮಧ್ಯಸ್ಥತೆ ಮಾಡುವ ಪಾತ್ರತೆಯಿಂದಿದೆ. ಪಾತ್ರತೆ ಮತ್ತು ಯೋಗ್ಯತೆ ನ್ಯಾಯದ ರೂಪದಲಾಗುತ್ತದೆ. ವೈಚಾರಿಕ ಮಧ್ಯಸ್ಥತೆ ಸಮ, ವಿಷಮ ವಿಚಾರಗಳ ಸಮಾಧಾನ ಪ್ರಸ್ತುತ ಮಾಡುವ ಯೋಗ್ಯ ಯೋಗ್ಯತೆಯಿಂದಿದೆ ಹಾಗು ಅನುಭವದ ಮಧ್ಯಸ್ಥತೆ ವೃತ್ತಿ ಮತ್ತು ಸಮಷ್ಟಿ ವ್ಯಾಪಕದಲ್ಲಿ ಸಂಪ್ರತಿಕ್ರವಾಗಿರುವ ರೂಪದಲ್ಲಿದೆ.

116

ಆತ್ಮದಲ್ಲಿ ಜಾಗೃತಿ ವ್ಯಾಪಕ ವಸ್ತುವಿನಲ್ಲಿ ಅನುಭೂತಿ ಕ್ರಿಯೆ ಸಂಪನ್ನವಾಗುವ ಫಲನ, ಬುದ್ಧಿ ಹಾಗು ಚಿತ್ತದ ಜಾಗೃತಿ ವಿಚಾರಗಳಲ್ಲಿ ಸಮಾಧಾನ ಪ್ರಸ್ತುತ ಯೋಗ್ಯ ಯೋಗ್ಯತೆ, ವೃತ್ತಿ ಹಾಗು ಮನದ ಜಾಗೃತಿ ಸಮಸ್ತ ವ್ಯವಹಾರ ಹಾಗು ಕ್ರಿಯೆಯನ್ನು ನ್ಯಾಯದಿಂದ ಸಮನ್ವಿತ ಮಾಡುವ ಪಾತ್ರತೆ, ಯೋಗ್ಯತೆಯ ಸ್ಥಿತಿ ಜಾಗೃತಿ ಸಹಜ ಪ್ರಾಮಾಣವಾಗಿದೆ.

ಆಸಕ್ತಿ ರಹಿತ ಇಕಾಯಿಯಲ್ಲಿ ಅಕರ್ತೃತ್ವ ಭ್ರಮೆ ಮುಕ್ತಿ ರೂಪದಲ್ಲಿರುತ್ತದೆ. ಅಧಿಕಾಧಿಕ ಉಪಕಾರ ಮಾಡಿದ ನಂತರವೂ ಇನ್ನೂ ಮಾಡುವ ಸ್ವೀಕೃತಿಯಿರುತ್ತದೆ.

ಆಸಕ್ತಿಯೇ ಭ್ರಮೆ.

ಈಷ್ಟ ದಿಶೆಯಲ್ಲಿ ಪ್ರವೃತ್ತಿಯಿದ್ದು ಹಾಗು ಅನ್ಯ ದಿಶೆಗಳಲ್ಲಿ ಪ್ರವೃತ್ತಿಯಿಲ್ಲದಿರುವುದಕ್ಕೆ ಐಚ್ಛಿಕ ನಿರಾಕರ್ಷಣೆಯೆಂದು ಸಂಜ್ಞೆ. ಸಂಪೂರ್ಣ ದಿಶೆಯಲ್ಲಿ ಪ್ರಮಾಣಿತವಾಗುವುದಕ್ಕೆ ಪೂರ್ಣ ನಿರಾಕರ್ಷಣೆಯೆಂದು ಸಂಜ್ಞೆ.

ನಿರಾಕರ್ಷಣೆಯೇ ಅನಾಸಕ್ತಿ, ಇದೇ ಜಾಗೃತಿ. ಅನಾಸಕ್ತಿಯೇ ಅಕರ್ತೃತ್ವ, ಅಕರ್ತೃತ್ವವೇ ಅಸಂಚಯತೆ, ಅಸಂಚಯತೆಯೇ ಅಭಯ ಹಾಗು ಸಮೃದ್ಧಿ, ಅಭಯ ಹಾಗು ಸಮೃದ್ಧಿಯೇ ಸ್ವರ್ಗೀಯತೆ, ಸ್ವರ್ಗೀಯತೆಯೇ ನಿರಾಭಿಮಾನತೆ, ನಿರಾಭಿಮಾನತೆಯೇ ಪರ-ವೈರಾಗ್ಯ, ಪರ-ವೈರಾಗ್ಯವೇ ಯೋಗ, ಯೋಗವೇ ವ್ಯಾಪಕತೆಯಲ್ಲಿ ಅನುಭವ, ವ್ಯಾಪಕತೆಯಲ್ಲಿ ಅನುಭವವೇ ಮಧ್ಯಸ್ಥತೆ, ಮಧ್ಯಸ್ಥತೆಯೇ ಪ್ರಾಮಾಣಿಕತೆ, ಪ್ರಮಾಣಿಕತೆಯೇ ನಿರಾಕರ್ಷಣೆ ಅಥವಾ ಭ್ರಮೆ ಮುಕ್ತಿ.

ಮಾನವ ಸಮಾಜದ ಪೋಷಣೆ ಹಾಗು ಸಂವರ್ಧನೆ ಜೀವನ ಮುಕ್ತ ಅಥವಾ ಭ್ರಮೆ ಮುಕ್ತ ಮಾನವರ ಸ್ವಭಾವ.

ಪರ-ವೈರಾಗ್ಯದ ತಾತ್ಪರ್ಯ - ಜಾಗೃತಿಗೆ ಎಲ್ಲಾ ವಿರೋಧಿ (ಅತಿವ್ಯಾಪ್ತಿ, ಅನಾವ್ಯಾಪ್ತಿ, ಅವ್ಯಾಪ್ತಿ) ದೋಷಗಳಿಂದ ಮುಕ್ತವಾಗಿರುವುದು ಪರ-ವೈರಾಗ್ಯವೆಂದು ಸಂಜ್ಞೆ. ಪರದ ತಾತ್ಪರ್ಯವೇ ಜಾಗೃತಿ ಪ್ರಾಮಾಣಿಕವಾಗುವುದು.

“ಸರ್ವ ಶುಭವಾಗಲಿ”

118

ಅಧ್ಯಾಯ - ೧೧

ಯೋಗ

ಯೋಗದ ಪ್ರಾಪ್ತ ಹಾಗು ಪ್ರಾಪ್ತ ಎರಡು ಭೇದಗಳಿವೆ.

ಯಾವುದು ಪ್ರಾಪ್ತವೋ, ಅದರಲ್ಲಿ ಆಸಕ್ತಿಯೇ ಸಂಪೂರ್ಣ ಯೋಗ ವಿಯೋಗಕ್ಕೆ ಕಾರಣ.

ಮಧ್ಯಸ್ಥ ವ್ಯವಹಾರ, ವಿಚಾರ ಹಾಗು ಅನುಭವ 'ಪ್ರಾಪ್ತ ಯೋಗ', ಇದು ಅನವರತ ಉಪಲಭ, ವರ್ತಮಾನ.

ಏಕತ್ವ ಹಾಗು ನಿಕಟತ್ವದ ಭೇದದಿಂದ ಪ್ರಾಪ್ತ ಯೋಗವಿದೆ.

ಸಜಾತೀಯ ಮಿಲನಕ್ಕೆ ಏಕತ್ವ ಹಾಗು ವಿಜಾತೀಯ ಮಿಲನಕ್ಕೆ ನಿಕಟತ್ವವೆಂದು ಸಂಜ್ಞೆ.

ಇಕಾಯಿಯ ಹಾಸ ಹಾಗು ವಿಕಾಸ ಪ್ರಾಪ್ತ ಯೋಗದ ಮೇಲಿದೆ.

ವಿಕಾಸವಾದಿ ಯೋಗಕ್ಕೆ ಸುಯೋಗ ಹಾಗು ಹಾಸವಾದಿ ಯೋಗಕ್ಕೆ ಕುಯೋಗವೆಂದು ಸಂಜ್ಞೆ.

ನ್ಯಾಯ ಹಾಗು ಧರ್ಮ - ಸಮ್ಯಕ್ತ ವಿಚಾರ ಮತ್ತು ವ್ಯವಹಾರ ಸಂಪನ್ನ ಹಾಗು ಸತ್ಯಾನುಭೂತಿ ಪ್ರಮಾಣ ಸಹಿತ ಮಾನವ ಜಾಗೃತಿಪೂರ್ಣ ಅಥವಾ ಪೂರ್ಣ ವಿಕಸಿತ, ನ್ಯಾಯ ಹಾಗು ಧರ್ಮ ಸಮ್ಯಕ್ತ ವಿಚಾರ ಮತ್ತು ವ್ಯವಹಾರ ಸಂಪನ್ನ ಜಾಗೃತ ಅಥವಾ ವಿಕಸಿತ, ನ್ಯಾಯ-ಸಮ್ಯಕ್ತ ವಿಚಾರ ಮತ್ತು ವ್ಯವಹಾರ ಸಂಪನ್ನ ಮಾನವ ಪ್ರಗತಿ ಹಾಗು ಅನ್ಯಾಯಾಸಕ್ತ ವಿಚಾರ ಮತ್ತು ವ್ಯವಹಾರ ಸಂಪನ್ನ ಮಾನವ ಹಾಸದ ದಿಕಿನಲ್ಲಿ ಗತಿಯಿಲ್ಲವನಾಗಿದ್ದಾನೆ, ಪಶು ಮಾನವ ಅಥವಾ ರಾಕ್ಷಸ ಮಾನವನ ರೂಪದಲ್ಲಿ.

ಯಾರು ಯಾವುದನ್ನು ಅಪವ್ಯಯ ಮಾಡುತ್ತಾರೋ ಅವರು ಅದರಿಂದ ವಂಚಿತರಾಗುತ್ತಾರೆ.

ಮಾನವ ಹಾಸದಲ್ಲಿ ಆಸಕ್ತಿಯ ಫಲಸ್ವರೂಪ ಪ್ರಾಪ್ತ ಬಲ, ಬುದ್ಧಿ, ರೂಪ, ಪದ ಮತ್ತು ಧನದ ಅಪವ್ಯಯ ಮಾಡುತ್ತಾನೆ.

ಮಾನವನಿಗಾಗಿ ಅವಷ್ಟಕೀಯ ನಿಯಮ ಮಾನವೀಯತೆಯ ಸಂರಕ್ಷಣೆಯೇ, ಇದು ನ್ಯಾಯ ಹಾಗು ಸಮಾಧಾನ, ಇದರ ಪಾಲನೆಯಿಂದ ಸ್ವರ್ಗೀಯತೆಯ ಪ್ರಸವವಿದೆ. ಇದರ ವಿಪರೀತ ಮಾನವನಿಗಾಗಿ ಅನಾವಷ್ಟಕೀಯ ನಿಯಮ ಮಾನವೀಯತೆಯ ಶೋಷಣೆಯೇ, ಇದು ಅನ್ಯಾಯ, ಇದರಿಂದ ವಿವಶತೆಯಿಂದ ನರಕೀಯತೆಯ ಪ್ರಸವವಾಗುತ್ತದೆ.

119

ಅಸಂಗ್ರಹ ಅರ್ಥಾತ್ ಸಮಾಧಾನ - ಸಮೃದ್ಧಿ, ಸ್ನೇಹ, ವಿದ್ಯೆ, ನಿರಾಭಿಮಾನತೆ (ಸರಲತೆ), ಅಭಯ ಮತ್ತು ವಾಣಿ ಸಂಯಮದಿಂದ ಯುಕ್ತ ವಿಚಾರ ಮಾತ್ರದಿಂದ ವೈಚಾರಿಕ ಸ್ವರ್ಗೀಯತೆಯ, ಸ್ವನಾರಿ / ಸ್ವಪುರುಷ ಹಾಗು ಸ್ವಧನ ಮತ್ತು ದಯೆ ಪೂರ್ಣ ವ್ಯವಹಾರದಿಂದ ವ್ಯವಹಾರಿಕ ಸುಖ ಅಥವಾ ವ್ಯವಹಾರಿಕ ಸ್ವರ್ಗೀಯತೆಯ ಉಪಲಬ್ಧತೆಗಳಿವೆ. ಇದೇ ಸರ್ವಮಾನವನಿಗಾಗಿ ಆವಶ್ಯಕೀಯ ನಿಯಮ.

ಇದರ ವಿಪರೀತ ಸಂಗ್ರಹ, ದ್ವೇಷ, ಅವಿದ್ಯೆ, ತೋರುವಿಕೆ, ಭಯ ಮತ್ತು ವಾಣಿಯ ಅಸಂಯಮತೆಯಿಂದ ಯುಕ್ತ ವಿಚಾರದಿಂದ ವೈಚಾರಿಕ ನರಕೀಯತೆಯ ಹಾಗು ಪರನಾರಿ/ಪರಪುರುಷ, ಪರಧನ ಮತ್ತು ಪರಪೀಡನ ನಿರತ ಕಾರ್ಯ ಹಾಗು ವ್ಯವಹಾರದಿಂದ ವ್ಯವಹಾರಿಕ ಕ್ಲೇಶಗಳಿಂದ ಪೀಡಿತವಾಗುವುದಾಗುತ್ತದೆ.

ಮಾನವ - ಮಾನವನಿಗಾಗಿ ಆವಶ್ಯಕೀಯ ನಿಯಮಾನುಕ್ರಮ, ವ್ಯತಿಕ್ರಮ ಭೇದದಿಂದಲೇ ಸುಖ ಹಾಗು ದುಃಖದ, ಹರ್ಷ ಹಾಗು ಅಮರ್ಷದ ಕಾರಣ ಸಿದ್ಧವಾಗಿದೆ.

ಸಮಸ್ತ ಸಂಬಂಧಗಳು ಹಾಗು ಸಂಪರ್ಕಗಳು, ವಸ್ತು ಹಾಗು ವಿಷಯ, ರೂಪ ಹಾಗು ಆಶಯದ ಪೋಷಕ ಹಾಗು ಶೋಷಕ ಭೇದದಿಂದಲೇ ಮಾನವನು ನಿಯಮದ ಪಾಲನೆ ಮಾಡಿದ್ದಾನೆ. ಇದರಲ್ಲಿ ಮಾನವೀಯತೆಗೆ ಆವಶ್ಯಕೀಯ ಹಾಗು ಅನಾವಶ್ಯಕೀಯ ನಿಯಮಗಳನ್ನು ತಿಳಿದುಕೊಂಡು ಮತ್ತು ಅರಿತುಕೊಳ್ಳುವುದೇ ಅಧ್ಯಯನ ಹಾಗು ಇದರಲ್ಲಿ ಆವಶ್ಯಕೀಯ ವರ್ಗಗಳನ್ನು ಎಲ್ಲಾ ಸ್ತರಗಳಲ್ಲಿ ಪರ ಪ್ರಯೋಗದಲ್ಲಿ ಕೊಂಡುಬರುವುದೇ ಪ್ರಮಾಣ ಮತ್ತು ಉಪಲಬ್ಧತೆ.

ಮಾನವ ಬಾಳುವ ಸೋಪಾನಗಳನ್ನು ವ್ಯಕ್ತಿ, ಪರಿವಾರ, ಸಮಾಜ, ರಜ್ಯ, ರಾಷ್ಟ್ರ, ಅಂತರಾಷ್ಟ್ರದ ರೂಪದಲ್ಲಿ ಗುರುತಿಸಲಾಗಿದೆ. ಮತ್ತೊಂದು ವಿಧಿಯಿಂದ ವ್ಯಕ್ತಿ, ಪರಿವಾರ, ಅಖಂಡ ಸಮಾಜ, ಸಾರ್ವಭೌಮ ವ್ಯವಸ್ಥೆ ರೂಪದಲ್ಲಿ ಗುರುತಿಸಲಾಗುತ್ತದೆ. ಮೂರನೆಯ ವಿಧಿಯಿಂದ ಪ್ರತ್ಯೇಕ ವ್ಯಕ್ತಿ, ಅರಿವು ಸಹಜ ವಿಧಿಯಿಂದ ಜವಾಬ್ದಾರಿಯ ರೂಪದಲ್ಲಿ ವ್ಯವಸ್ಥೆಯ ಆರಂಭಿಕ ಸ್ವರೂಪ ಪರಿವಾರ, ಇದೇ ಕ್ರಮದಲ್ಲಿ ಹತ್ತು ಸೋಪಾನೀಯ ಪರಿವಾರ ಸಭೆಗಳ ರೂಪದಲ್ಲಿ ಗುರುತಿಸಲಾಗುತ್ತದೆ.

ಮಾನವನಿಗೆ ಆವಶ್ಯಕೀಯ ನಿಯಮವೇ ನ್ಯಾಯ, ನ್ಯಾಯವೇ ಧರ್ಮ, ಧರ್ಮವೇ ಸತ್ಯ, ಸತ್ಯದ ಆಧಾರವೇ ವ್ಯಾಪಕ ಸತ್ಯ ಮತ್ತು ಸಹ-ಅಸ್ತಿತ್ವ, ಸಹ-ಅಸ್ತಿತ್ವದಲ್ಲಿ ಅರಿವೇ ಆನಂದ, ಆನಂದವೇ ಜಾಗೃತ ಜೀವನ ಹಾಗು ಜಾಗೃತ ಮಾನವ ಜೀವನವೇ ಮಾನವ

120

ಪರಂಪರೆಗೆ ಆವಷ್ಯಕೀಯ ನಿಯಮ, ಇದು ಮಾನವ ಜೀವನದ ಜಾಗೃತ ಚಕ್ರ. ಸರ್ವ ಮಾನವ ಜೀವನಕ್ಕಾಗಿ ಇದೇ ಸುಚಕ್ರ.

ಬಾಳುವ ಆಕೆ ಸಹಿತ ಚೈತನ್ಯ ಇಕಾಯಿಯನ್ನು 'ಜೀವನ' ಹಾಗು ಜೀವನದಿಂದ ಲಕ್ಷ್ಯವನ್ನು ಪಡೆಯುವ ಕ್ರಮದಲ್ಲಿ ಪ್ರಯಾಸದ ನಿರಂತರತೆಗೆ ಜೀವನ ಜಾಗೃತಿ ಕ್ರಮವೆಂದು ಸಂಜ್ಞೆ.

ಮಾನವನಿಗೆ ಅಮಾನವೀಯ ನಿಯಮವೇ ಅನ್ಯಾಯ, ಅನ್ಯಾಯವೇ ಅಧರ್ಮ, ಅಧರ್ಮವೇ ಅಸತ್ಯ, ಅಸತ್ಯವೇ ಅನೀಶ್ವರತೆ, ಅನೀಶ್ವರತೆಯೇ ದುಃಖ, ದುಃಖವೇ ಜೀವತ್ವ (ಅಮಾನವೀಯತೆ), ಜೀವತ್ವವೇ ಮಾನವನಿಗೆ ಅನಾವಶ್ಯಕೀಯ ನಿಯಮ. ಇದೇ ಜೀವ ಚಕ್ರ, ಇದು ಮಾನವನಿಗೆ ಕುಚಕ್ರ.

ಸಾಮಾಜಿಕ ಸ್ವರದ ಮೇಲೆ ಸಾರ್ವಭೌಮಿಕ ಸಿದ್ಧಾಂತದ ಆವಿಷ್ಕಾರವನ್ನು ನಿಯಮ, ನಿಯಮವನ್ನು ವ್ಯವಸ್ಥೆಯ ಸ್ವರದಲ್ಲಿ ವ್ಯವಸ್ಥೆಪೂರ್ವಕ ನಡೆದುಕೊಳ್ಳುತ್ತಾ ನ್ಯಾಯವೆಂದು, ನ್ಯಾಯವನ್ನು ಅಂತರಾಷ್ಟ್ರೀಯ ಸ್ವರದಲ್ಲಿ ಪರಸ್ಪರ ಸಮಾಧಾನಿತ ವಿಚಾರ ಪೂರ್ಣ ನೀತಿಪೂರ್ವಕ ನಡೆದುಕೊಳ್ಳುವ ಸಮಯ ಧರ್ಮವೆಂದು, ಧರ್ಮವನ್ನು ಬ್ರಹ್ಮಾಂಡದ ಸ್ವರದಲ್ಲಿ ನಡೆದುಕೊಳ್ಳುವ ಸಮಯ ಸತ್ಯವೆಂದು, ಅನಂತ ಬ್ರಹ್ಮಾಂಡದ ಸ್ವರದ ಮೇಲೆ ನಡೆದುಕೊಳ್ಳುವ ಸಮಯ ಅದನ್ನು ಸಹ-ಅಸ್ತಿತ್ವವೆಂದು, ಸಹ-ಅಸ್ತಿತ್ವದಲ್ಲಿ ಮಾನವನಿಂದ ಅನುಭವದ ದಶೆಯಲ್ಲಿ ಆನಂದವೆಂದು, ಹಾಗು ಆನಂದವನ್ನು ವ್ಯಕ್ತಿಗತ ಜೀವನದಲ್ಲಿ ಆಚರಿತ ಮಾಡುವುದಕ್ಕೆ ಜಾಗೃತ ಜೀವನವೆಂದು ಸಂಜ್ಞೆ.

ಸುಖ, ಸಂತೋಷ, ಶಾಂತಿ ಹಾಗು ಆನಂದ, ಇವು ಸುಖದ ನಾಲ್ಕು ಅವಸ್ಥೆಗಳು.

ಸುಖದ ನಾಲ್ಕು ಅವಸ್ಥೆಗಳ ಪೋಷಕ ನಿಯಮಗಳನ್ನು ಮಾನವನಿಗಾಗಿ ಆವಷ್ಯಕೀಯ ನಿಯಮ ಹಾಗು ಇದರ ಶೋಷಕ ನಿಯಮಗಳನ್ನು ಅನಾವಷ್ಯಕೀಯ ನಿಯಮವೆಂದು ಸಂಜ್ಞೆ, ಏಕೆಂದರೆ ಸಮಸ್ತ ಮಾನವ ಸುಖಾನುಭವದ ಪ್ರತೀಕ್ಷೆ, ಆಕೆ, ಪ್ರಯೋಗ ಹಾಗು ಪ್ರಯಾಸದಲ್ಲಿ ನಿರತನಾಗಿದ್ದಾನೆ.

ಮಾನವೀಯತೆಪೂರ್ಣ ಆಚರಣ ರೂಪಿ ವಿಧಿಗೆ ನ್ಯಾಯ, ಸಮತ್ವವಾದಿ ಅಥವಾ ಶ್ರೇಯವಾದಿ ಸ್ವಭಾವಕ್ಕೆ ಧರ್ಮ, ಯಥಾರ್ಥತೆಗೆ ಸತ್ಯ, ವ್ಯಾಪಕತೆಗೆ ಈಶ್ವರ, ಪೂರ್ಣ ಸರ್ವತೋಮುಖಿ ಸಮಾಧಾನಕ್ಕೆ 'ಆನಂದ', ಆವಷ್ಯಕೀಯ ನಿಯಮಾಚರಣಕ್ಕೆ ಜಾಗೃತ ಜೀವನ, ನಿರಪೇಕ್ಷ ಶಕ್ತಿಗೆ ಸತ್ಯವೆಂದು ಸಂಜ್ಞೆ.

121

ಲೋಕೇಷಾನುಭವದ ಅವಸರ ಆತ್ಮಕ್ಕೆ, ಲೋಕದರ್ಶನದ ಅವಸರ ಬುದ್ಧಿ ಹಾಗು ಚಿತ್ತಕ್ಕೆ ಹಾಗು ನ್ಯಾಯೋಚಿತ ವ್ಯವಹಾರದ ಅವಸರ ವೃತ್ತಿ ಹಾಗು ಮನಕ್ಕೆ ಇದೆ.

ಸಂಶಯ ಹಾಗು ವಿಷಯಯಿಂದ (ಭ್ರಮೆಯಿಂದ) ಮುಕ್ತ ಬೌದ್ಧಿಕ ಸ್ಥಿತಿಗೆ ಪೂರ್ಣ ಸಮಾಧಾನ, ಇಚ್ಛೆಪೂರ್ವಕ ಮಾಡಲಾಗಿರುವ ಅಂತರಂಗ ಹಾಗು ಬಹಿರಂಗ ವ್ಯವಹಾರಕ್ಕೆ ಆಚರಣ ಹಾಗು ಸಾರ್ವಭೌಮಿಕ ಸಿದ್ಧಾಂತಕ್ಕೆ ನಿಯಮವೆಂದು ಸಂಜ್ಞೆ.

ಅನಿಶ್ಚಯತೆಗೆ ಸಂಶಯ ಹಾಗು ಅಯಥಾರ್ಥತೆ ಅರ್ಥಾತ್ ಭ್ರಮಿತ ಕಾರ್ಯ ವ್ಯವಹಾರಕ್ಕೆ ವಿಷಯಯವೆಂದು ಸಂಜ್ಞೆ.

“ಸರ್ವ ಶುಭವಾಗಲಿ”

122

ಅಧ್ಯಾಯ - ೧೨

ಲಕ್ಷಣ, ಲೋಕ, ಆಲೋಕ ಹಾಗು ಲಕ್ಷ್ಯ

ಅವಲೋಕನ ಭೇದದಿಂದಲೇ ಲಕ್ಷಣ, ಲೋಕ, ಆಲೋಕ ಹಾಗು ಲಕ್ಷ್ಯ

ಲಕ್ಷಣ - ರೂಪ, ಗುಣ, ಸ್ವಭಾವ ಹಾಗು ಧರ್ಮಕ್ಕೆ ಲಕ್ಷಣವೆಂದು ಸಂಜ್ಞೆ

ಲೋಕ - ಇಚ್ಛೆ ಹಾಗು ಕ್ರಿಯೆಯ ಸಮ್ಮಿಲಿತ ರೂಪಕ್ಕೆ ಲೋಕವೆಂದು ಸಂಜ್ಞೆ.

ಆಲೋಕ - ಜ್ಞಾನ - ವಿವೇಕ - ವಿಜ್ಞಾನವೇ ಆಲೋಕ

ಲಕ್ಷ್ಯ - ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆ ಅನುಸಾರ ಯೋಗಾನುಭೂತಿ ಯೋಗ್ಯ ವಿಕಾಸಕ್ಕಾಗಿ ಮಾಡಲಾಗುವ ಪ್ರಯೋಗ ಹಾಗು ಪ್ರಯಾಸದ ಅನುಭೂತಿಗೆ ಲಕ್ಷ್ಯವೆಂದು ಸಂಜ್ಞೆ.

ಆಲೋಕ ಸಹಿತ (ಬೋಧಪೂರ್ವಕ) ಮಾಡಿರುವ ದರ್ಶನ ಕ್ರಿಯೆಗೆ ಅವಲೋಕನವೆಂದು ಸಂಜ್ಞೆ. ಆಲೋಕ ಸಹಿತ ಅರ್ಥಾತ್ ಅನುಭವ ಮೂಲಕ ವಿಧಿಯಿಂದ ಹಾಗು ಅನುಭವಗಾಮಿ ಪದ್ಧತಿಯಿಂದ ಮಾಡಿರುವ ಸಾಕ್ಷಾತ್ಕಾರ ಬೋಧ ಅನುಭವವೇ ಅವಲೋಕನ.

ಭೋಗ, ಪ್ರಾಪ್ತ ಯೋಗ ಹಾಗು ಪ್ರಾಪ್ತ ಯೋಗದ ಭೇದದಿಂದ ಲಕ್ಷ್ಯದ ನಿರ್ಧಾರಣೆ ಮಾಡಲಾಗುತ್ತದೆ.

ಭೋಗಾಸಕ್ತಿಯ ಲಕ್ಷ್ಯ ವಿಷಯ ಚತುಷ್ಪಯ (ಆಹಾರ, ನಿದ್ರಾ, ಭಯ ಮತ್ತು ಮೈಥುನ).

ಪ್ರಾಪ್ತ ಯೋಗದ ಲಕ್ಷ್ಯ ಲೋಕೇಷಣ ಸಹಿತ ಯಾವುದೇ ಉಪಕಾರ ಕ್ರಿಯೆಯ ಯೋಗದಿಂದ ಪ್ರಾಪ್ತ ವಿಭೂತಿ ಅಥವಾ ಸಾಮರ್ಥ್ಯದಿಂದ ಜನ ಜಾತಿಯನ್ನು ಆಪ್ಲಾವಿತ, ಪ್ರಭಾವಿತಮಾಡುವುದು.

ವಿಷಯಾಸಕ್ತ ಮಾನವ ಕ್ರಿಯೆಯಿಂದ ಕ್ರಿಯೆಯ ತೃಪ್ತಿ ಬಯಸುತ್ತಾನೆ, ಇದು ಸಂಭವವಿಲ್ಲ. ಏಕೆಂದರೆ ಸಂವೇದನೆ ಕ್ರಿಯೆ + ಸಂವೇದನೆ ಕ್ರಿಯೆಯಿಂದ ಹಾಸ ಅಥವಾ ವಿಕಾಸ ಕ್ರಮವೇ ಸಂಭವ.

ಸಂಪೂರ್ಣ ಜಡ ಕ್ರಿಯೆ ಅಪೂರ್ಣ. ಅಪೂರ್ಣವನ್ನು ಪಡೆದು ಅಪೂರ್ಣ ತೃಪ್ತವಾಗಲು ಸಾಧ್ಯವಿಲ್ಲ. ತೃಪ್ತಿಯ ಸಂಭವನೀಯತೆ ಕೇವಲ ನ್ಯಾಯ, ಧರ್ಮ ಹಾಗು ಸತ್ಯಾನುಭೂತಿಯಿಂದಲೇ ಆಗುತ್ತದೆ.

123

ಪ್ರಾಪ್ತ ಯೋಗಾನುಭೂತಿಯೇ ಪೂರ್ಣ ಜಾಗೃತಿ. ಇಂತಹ ಇತಾಯಿಗಳೇ ಅನವರತ ರೂಪದಿಂದ ಅನ್ಯರ ಜಾಗೃತಿಗಾಗಿ ಸಮುಚಿತ ಪ್ರೇರಣೆ ಸ್ತೋತ್ರ. ಇದರ ಹೆಸರು ಜಾಗೃತಿ ಪರಂಪರೆಯೂ ಆಗಿದೆ.

ನಿರೀಕ್ಷಣೆ, ಪರೀಕ್ಷಣೆ ಹಾಗು ಸರ್ವೇಕ್ಷಣೆ ಕ್ರಿಯೆಯಿಂದ ಕಾರಣ, ಗುಣ ಹಾಗು ಗಣಿತದ ಸಂಯೋಗದಿಂದ ಮಾಡಿರುವ ಅವಲೋಕನ ಕ್ರಿಯೆಯಿಂದಲೇ ಸತ್ಯತೆಯ ಪರಿಚಯವಾಗುತ್ತದೆ.

ಉಕ್ತ ಸಂಯೋಗದ ಅಪೂರ್ಣತೆಯಲ್ಲಿಯೇ ಸಮಸ್ತ ಮತಭೇದವಿದೆ.

* ಮತಭೇದವೇ ಕ್ರಮದಿಂದ ವಿರೋಧ, ದ್ರೋಹ, ದ್ವೇಷ, ವಿದ್ವೇಷ, ಸಂದೇಹ, ಆತಂಕ ದಾಸ್ಯತೆ ಹಾಗು ದುಷ್ಟತೆ, ಶೋಷಣ ಮತ್ತು ಯುದ್ಧದ ಕಾರಣ.

* ಜನಜಾತಿಯ ಸ್ತರದ ಮೇಲೆ ಮತಭೇದದ ಮೂಲದಲ್ಲಿ ಒಂದಕ್ಕಿಂತ ಅಧಿಕ ಪಕ್ಷವಿರುವುದು ಅನಿವಾರ್ಯ. ಅದರಲ್ಲಿ ಎಲ್ಲಾ ತಪ್ಪಾಗಿದ್ದರೆ ಅಥವಾ ಯಾವುದಾದರೂ ಒಂದು ಪಕ್ಷ ಅವಶ್ಯ ತಪ್ಪಾಗಿದ್ದರೆ, ಸಂಘರ್ಷವಾಗುತ್ತದೆ. ಎಲ್ಲಾ ಸರಿಯಾಗಿದ್ದರೆ, ಇಂತಹ ಸ್ಥಿತಿಯಲ್ಲಿ ಸಂಘರ್ಷ ಸಂಭವವಿಲ್ಲ.

ಲಕ್ಷ್ಯ ಭೇದದಿಂದ ಆಚರಣ ಭೇದ ಹಾಗು ವಿಚಾರದಲ್ಲಿಯೂ ಪ್ರಭೇದ ಘಟಿತವಾಗುವುದು ಕಂಡುಬರುತ್ತದೆ.

ಸ್ವ, ಪರ, ಪರಿಸ್ಥಿತಿವಶವಾಗುವ ವಿವಶತೆಗಳ ಭೇದದಿಂದಲೇ ಲಕ್ಷ್ಯದ ನಿರ್ಣಯ.

ಸ್ವ-ಕೃತ ನಿರ್ಣಯ, ಪೂರ್ಣತೆ ಹಾಗು ಅಪೂರ್ಣತೆಯ ದಿಶ-ಭೇದದಿಂದಿದೆ. ಯಥಾರ್ಥತೆಯ ದಿಕ್ಕಿನಲ್ಲಿ 'ಪೂರ್ಣತೆ' ತಥಾ ಭ್ರಮೆಯ ದಿಕ್ಕಿನಲ್ಲಿ 'ಅಪೂರ್ಣತೆ' ಸಂಜ್ಞೆಯಿದೆ.

ಜ್ಞಾನಮೂಲಕ ವಿಜ್ಞಾನ ಹಾಗು ವಿವೇಕದ ವಿಧಿವತ ಅಧ್ಯಯನದಿಂದ ಯಥಾರ್ಥತೆಯ ದಿಕ್ಕಿನಲ್ಲಿ ಪ್ರಯಾಸೋದಯವಿದೆ, ಇಲ್ಲದಿದ್ದರೆ ಭ್ರಮೆಯ ದಿಕ್ಕಿನಲ್ಲಿ ಪ್ರಯಾಸವಿದೆ.

ಪ್ರಯಾಸವೇ ಕ್ರಿಯೆ ಮತ್ತು ಕಾರ್ಯ ಹಾಗು ವ್ಯವಹಾರ.

ಸುಕರ್ಮ ಹಾಗು ದುಷ್ಟರ್ಮದ ಆಶಯ ಭೇದದಿಂದ ವೈಯಕ್ತಿಕ ಜೀವನ ಹಾಗು ಜೀವಿಕವಿದ್ದು, ತದಾನುಸಾರವೇ ಭಾವಿ ಘಟಣೆಗಳು ಮತ್ತು ಕಾರ್ಯ ಸಂಪನ್ನವಾಗುತ್ತದೆ.

ಸಚ್ಚರಿಕೆ ಹಾಗು ದುಶ್ಚರಿತೆಯ ಭೇದದಿಂದ ಕುಟುಂಬವಿದೆ ಹಾಗು ತದನುರೂಪವೇ ಅಗ್ರಿಮ ಪ್ರಾಪ್ತಿಗಳಿವೆ.

124

ಸಿದ್ಧಾಂತ, ಮತ, ಸಂಪ್ರದಾಯ, ವರ್ಗ, ಭಾಷೆ ಹಾಗು ಜಾತಿಯ ವಿಚಾರ ಹಾಗು ಪ್ರಚಾರ ಭೇದದಿಂದ ಸಾಮುದಾಯಿಕ ಜೀವನವಿದ್ದು ಹಾಗು ಅದರ ಪ್ರತಿರೂಪದಲ್ಲಿ ಅದಕ್ಕೆ ಭಾವಿ ಘಟಣೆಗಳಿವೆ.

ನ್ಯಾಯ ಮತ್ತು ಸಮಯಾನುವರ್ತನೆಪೂರ್ಣ ನೀತಿ ಭೇದದಿಂದ ರಾಷ್ಟ್ರೀಯ ಜೀವನವಿದ್ದು ಹಾಗು ತದನುಸಾರವೇ ಅದರ ಭಾವಿ ಮಾರ್ಗ ಉತ್ಥಾನ ಹಾಗು ಪತನಕ್ಕೆ ಪ್ರಶಸ್ತವಾಗಿದೆ.

ವಿವೇಕ ಅಥವಾ ಅವಿವೇಕ, ವಿಜ್ಞಾನ ಅಥವಾ ಸಾಮಾನ್ಯ ಜ್ಞಾನ ಸಂಪನ್ನ ವಿಚಾರ ಹಾಗು ಮರ್ಯಾದೆಯ ಆಧಾರದ ಮೇಲೆ ಅಂತರಾಷ್ಟ್ರೀಯ ಜೀವನದ ಘಟಣೆಗಳು ಮಾನವ ಸಮುದಾಯದ ಸಂಘಟನೆ ಹಾಗು ವಿಘಟನೆಯ ರೂಪದಲ್ಲಿ ಭಾವಿ ಕ್ಷಣದಲ್ಲಿ ಪ್ರತಿಷ್ಠಿತವಾಗಿದೆ.

ಮಾನವ ಸಮುದಾಯದ ರೂಪದಲ್ಲಿ ಎಷ್ಟು ವಿಘಟಣೆಯನ್ನು ಪ್ರಾಪ್ತಿಸುತ್ತಾನೋ ಅಷ್ಟೇ ಹಾಸವಿದೆ ಹಾಗು ಎಷ್ಟೇ ಸಂಘಟಣೆಯನ್ನು ಪ್ರಾಪ್ತಿಸುತ್ತಾನೋ ಅಷ್ಟೇ ಜಾಗೃತ ಪರಂಪರೆಯ ದಿಕ್ಕಿನಲ್ಲಿ ಉನ್ನತಿಯಿದೆ.

ಮಾನವ ಸಮುದಾಯದಲ್ಲಿ ತಪ್ಪು ಇಲ್ಲದೆ ವೈಚಾರಿಕ ಮತಭೇದ ಸಿದ್ಧವಾಗುವುದಿಲ್ಲ.

ನಿಯಮಪೂರ್ವಕ ಮಾಡಲಾಗುವ ಕಾರ್ಯ ಹಾಗು ವಿಚಾರವನ್ನು 'ಸುಕರ್ಮ' ಹಾಗು ಇದರ ವಿಪರೀತ 'ದುಷ್ಟಮೇ' ಎಂದು ಸಂಜ್ಞೆ.

ನೈತಿಕತೆ ಸಂಪನ್ನ (ರಾಜ್ಯನೀತಿ ಹಾಗು ಧರ್ಮ ನೀತಿ ಸಂಪನ್ನ) ಕುಶಲತೆ, ನಿಪುಣತೆ, ಪಾಂಡಿತ್ಯ ಸಹಿತ ಮಾಡಲಾಗುವ ಚಾರಿತ್ರ್ಯ ಚಿತ್ರಣವನ್ನು 'ಸಚ್ಚರಿಕೆ' ಹಾಗು ಅದರ ವಿಪರೀತಕ್ಕೆ 'ದುಶ್ಚರಿತ' ಎಂದು ಸಂಜ್ಞೆ.

ಸಿದ್ಧಾಂತ ಮಾತ್ರ ಸತ್ಯವೇ. ಸಿದ್ಧಾಂತ ವೈವಿಧ್ಯತೆಯ ಕಾರಣವಲ್ಲ. ಸಿದ್ಧಾಂತದಲ್ಲಿ ವೈವಿಧ್ಯತೆ ಇಲ್ಲವಾಯಿಲ್ಲ, ಇದ್ದರೆ ಅದು ಸಿದ್ಧಾಂತವಲ್ಲ.

ಯಾವುದರಿಂದ ಮಾನವೀಯತೆಯ ಸಂರಕ್ಷಣೆಯಾಗುತ್ತದೆಯೋ ಅದೇ ನ್ಯಾಯಪೂರ್ಣ ನೀತಿ. ಯಾವುದರಿಂದ ಮಾನವೀಯತೆಯ ಸಂರಕ್ಷಣೆಯಾಗುವುದಿಲ್ಲವೋ ಅದೇ ಸಮಯಾನುವರ್ತನೆ ನೀತಿ.

ಮಾನವ ಲಕ್ಷ್ಯವನ್ನು (ಸಮಾಧಾನ, ಸಮೃದ್ಧಿ, ಅಭಯ, ಸಹ-ಅಸ್ತಿತ್ವ) ಗುರುತಿಸುವುದಕ್ಕಾಗಿ ಪ್ರಾಪ್ತ ಜ್ಞಾನ ವಿಜ್ಞಾನ ಸಮೃದ್ಧಿ ವಿವೇಕವಿದೆ.

✠ ವಿಜ್ಞಾನ - ಭೌತಿಕ ಸಮೃದ್ಧಿ ಸಹಿತ ಮಾನವ ಲಕ್ಷ್ಯ ಜೀವನ ಮೌಲ್ಯದ

125

ಸಫಲತೆಗೆ ದಿಶೆ ನಿರ್ಧಾರಣೆ ಜ್ಞಾನವೇ ವಿಜ್ಞಾನ.

ಅಸ್ತು, ಅಂತರಾಷ್ಟ್ರೀಯತೆಯ ಮೂಲ ಉದ್ದೇಶ ಬೌದ್ಧಿಕ ಸಮಾಧಾನ ಹಾಗು ಭೌತಿಕ ಸಮೃದ್ಧಿಯ ಸಂಕುಲನ ಹಾಗು ಸಂರಕ್ಷಣೆಯನ್ನು ಕಾಪಾಡಿಟ್ಟುಕೊಳ್ಳುವುದೇ ಸಿದ್ಧವಾಗುತ್ತದೆ, ಇದರಿಂದ ಅಖಂಡ ಮಾನವ ಸಮಾಜದಲ್ಲಿ ಸಹ-ಅಸ್ತಿತ್ವ ಸಿದ್ಧವಾಗುತ್ತದೆ, ಅನ್ಯಥಾ ಸಹ-ಅಸ್ತಿತ್ವವಿಹೀನ ಮಾನವ ಸಮುದಾಯ ವಿಖಂಡನೆಯ ರೂಪದಲ್ಲಿದ್ದೆಯಿದೆ.

ಅಂತರಂಗ (ವೈಚಾರಿಕ) ಹಾಗು ಬಹಿರಂಗ (ವ್ಯವಹಾರ) ಭೇದದಿಂದ ಸುಗಮತೆಗಳು ಹಾಗು ದುರ್ಗಮತೆಗಳಿವೆ.

ಅವಶ್ಯಕತೆಗಿಂತ ಅಧಿಕ ಉತ್ಪಾದನೆಯ ರೂಪದಲ್ಲಿ ಸಮೃದ್ಧಿಯ, ವ್ಯಕ್ತಿತ್ವದ ರೂಪದಲ್ಲಿ ಚಾರಿತ್ರ್ಯದ, ಪ್ರಾಮಾಣಿಕತೆ ಹಾಗು ಸಹಮತಿಯ ಭೇದದಿಂದ ಸಾಮಾಜಿಕತೆಯ; ನ್ಯಾಯ ಪಾಲನೆ, ಪ್ರಬೋಧನೆ ಹಾಗು ಪೋಷಣೆಯಿಂದ ರಾಷ್ಟ್ರೀಯತೆಯ; ವಿಜ್ಞಾನ ಹಾಗು ವಿವೇಕದಿಂದ ಪ್ರಾಪ್ತ ಸಮೃದ್ಧಿ, ಸಮಾಧಾನ, ಅಭಯ, ಸಹ-ಅಸ್ತಿತ್ವದಿಂದ ಅಂತರಾಷ್ಟ್ರೀಯ ಜೀವನದ ವೈಭವವಿದೆ, ಅನ್ಯಥಾ ಹಾಸವಿದೆ.

ಸಂಗ್ರಹ ಕಾಮನ ತೃಪ್ತಿಯ ಪೋಷಕವಲ್ಲ, ಏಕೆಂದರೆ ಸಂಗ್ರಹದ ಪೂರ್ತಿಯಿಲ್ಲ.

ಮಾನವ ಆಕಾಂಕ್ಷೆಗಳು, ಸಾಮಾನ್ಯ ಆಕಾಂಕ್ಷೆಗಳು ಹಾಗು ಮಹತ್ವಾಕಾಂಕ್ಷೆಗಳ ರೂಪದಲ್ಲಿ ಪರಿಲಕ್ಷಿತವಾಗಿದೆ ಹಾಗು ಮಾನವನಿಂದ ತದಾನುಸಾರವೇ ಉತ್ಪಾದನೆ ಹಾಗು ಉಪಯೋಗ - ಸದುಪಯೋಗ ವಿಧಿಯಿಂದ ಅರ್ಥದ ನಿಯೋಜನೆಯಿದೆ.

ಜಾಗೃತ ಮಾನವನ ಸಾಮಾನ್ಯ ಆಕಾಂಕ್ಷೆ ಆಹಾರ, ಆವಾಸ ಹಾಗು ಅಲಂಕಾರ ಭೇದದಿಂದಿದೆ, ಇದರ ಪೂರ್ತಿಗೆ ಅವನು ಉತ್ಪಾದನೆ ಹಾಗು ಉಪಯೋಗ, ಸದುಪಯೋಗದಲ್ಲಿ ನಿರತನಾಗಿದ್ದಾನೆ.

ಮಾನವನ ಮಹತ್ವಾಕಾಂಕ್ಷೆಗಳನ್ನು ಮೂರು ವರ್ಗದಲ್ಲಿ ವರ್ಗೀಕೃತ ಮಾಡಲಾಗುತ್ತದೆ - (೧) ದೂರ-ಗಮನ, (೨) ದೂರ ಶ್ರವಣ ಹಾಗು (೩) ದೂರ - ದರ್ಶನ. ಇದರ ಪೂರ್ತಿಗಾಗಿಯೂ ಮಾನವ ಉತ್ಪಾದನೆ ಹಾಗು ಉಪಯೋಗದಲ್ಲಿ ನಿರತನಾಗಿದ್ದಾನೆ.

ಸಾಮಾನ್ಯ ಆಕಾಂಕ್ಷೆಯ ಅಪೂರ್ತಿಯಿಂದ ಅಸಂತೋಷ, ಪೂರ್ತಿಯಿಂದ ಸಂಶರ್ತನೆ ಹಾಗು ಅಧಿಕತೆಯಿಂದ ಸಂತುಷ್ಟಿಯಾಗುತ್ತದೆ.

ಮಹತ್ವಾಕಾಂಕ್ಷೆಯ ಅಪೂರ್ತಿಯಿಂದ ಕೌತೂಹಲ, ಪೂರ್ತಿಯಿಂದ ತೃಪ್ತಿ ಹಾಗು ಅಧಿಕತೆಯಿಂದ ಅಸಂತೋಷವಾಗುತ್ತದೆ.

126

ನ್ಯಾಯವಾದಿ ಹಾಗು ಸಮಯಾನುಪತ್ತಿನ ನೀತಿ ಭೇದದಿಂದಲೇ ಮಾನವನು ಮತ್ತವರಮೇಲೆ ನಿಯಂತ್ರಣೆ ಪಡೆಯುವ ಪ್ರಯಾಸ ಮಾಡಿದ್ದಾನೆ, ಇದು ದೇಶ, ಭಾಷೆ, ವರ್ಗ, ಜಾತಿ ಹಾಗು ಬಲ ಪ್ರಭಾವಿ ಭೇದದಿಂದ ಕಂಡುಬರುತ್ತದೆ, ಇದು ರಾಷ್ಟ್ರದ ಪ್ರತಿ ನಿಷ್ಠೆ ಅಥವಾ ವಿಧ್ಯೋಹದ ರೂಪದಲ್ಲಿ ವ್ಯಕ್ತವಾಗುತ್ತದೆ.

ಅನ್ಯಾಯವಾದಿ ವಿಧಿ (ಕಾನೂನು), ವಿಧಾನ ಹಾಗು ನೀತಿಯಿಂದ ಹಿಂಸ, ಪ್ರತಿಹಿಂಸ, ಸಂಶರ್ತನೆ ಹಾಗು ಆತಂಕದ ಪ್ರಸವವಾಗುತ್ತದೆ.

ಪ್ರತ್ಯೇಕ ಮಾನವನಲ್ಲಿ ನ್ಯಾಯದ ಯಾಚನೆ ಜನ್ಮಜಾತ ಸ್ವಭಾವದ ರೂಪದಲ್ಲಿ ಕಂಡುಬರುತ್ತದೆ, ಇದರ ಸ್ಪಷ್ಟೀಕರಣ ಯೋಗ್ಯ ಅಧ್ಯಯನ ಅತಿ ಆವಶ್ಯಕವಾಗಿದೆ.

ಭ್ರಮುವಶ ನಂಬಿರುವ ನ್ಯಾಯದಿಂದ ಅನ್ಯಾಯದ ಮತ್ತು ಅನ್ಯಾಯದಿಂದ ಅನ್ಯಾಯವನ್ನು ದಮನ ಮಾಡುವ ಲಕ್ಷ್ಯ ಭೇದದ ಆಶಯದಿಂದ ಸಮಸ್ತ ವಿಧಿ, ವಿಧಾನ ಹಾಗು ನೀತಿಗಳ ಅನುಮೋದನೆ ಮಾನವ ಮಾಡುತ್ತಾನೆ. ಇದೇ ಆಧಾರದ ಮೇಲೆ ಏಕ ಅಥವಾ ಅನೇಕ ರಾಷ್ಟ್ರಗಳ ಜೀವನ ಅಸಫಲವಾಗಿದೆ.

ಪೂರ್ಣ ದರ್ಶನ ಲೋಕ-ವ್ಯಾಪ್ತವಾಗಿದೆ.

ರಹಸ್ಯಗಳ ಉನ್ಮೂಲನ ಮಾಡುವ ದರ್ಶನಕ್ಕೆ 'ಪೂರ್ಣ' ದರ್ಶನವೆಂದು ಸಂಜ್ಞೆ.

ರಹಸ್ಯಗಳ ನಿವಾರಣೆ ಸಹ-ಅಸ್ತಿತ್ವದಲ್ಲಿ ಜಾಗೃತಿ ರೂಪಿ ಅಧ್ಯಾತ್ಮ ಜ್ಞಾನ, ಬೌದ್ಧಿಕ ಜ್ಞಾನ ಹಾಗು ಭೌತಿಕ ವಿಜ್ಞಾನದ ಏಕಸೂತ್ರಾತ್ಮಕ ಅಧ್ಯಯನದಿಂದಲೇ ಸಂಭವ.

ಲೋಕದ ಪ್ರತಿ ಅನಾಸಕ್ತ ಮಾನವರೇ ಜ್ಞಾನಾನುಭವ ಮಾಡಿದ್ದಾರೆ. ಇಂತಹ ಅನುಭೂತಿ ಜಾಗೃತ ವ್ಯಕ್ತಿಯರಲ್ಲಿ ವ್ಯವಹಾರಿಕ ಸಂತುಲನ ಹಾಗು ವೈಚಾರಿಕ ಸಮಾಧಾನ ಸಹಜವಾಗಿಯೇಯಿರುತ್ತದೆ.

ಇಚ್ಛೆಯ ಅಪೇಕ್ಷೆಯಲ್ಲಿ ಸಂವೇದನೆ ಕ್ರಿಯೆ ಅಲ್ಲ. ಇಚ್ಛೆಯ ಶಕ್ತಿ ಅತ್ಯಂತ ಕ್ರಿಯೆಯಲ್ಲಿ ನಿರತವಾಗಿದೆ. ಅನುಪಾತಗಿಂತ ಅಧಿಕ ಶಕ್ತಿ ನಿಯೋಜನೆ ಅಪವ್ಯಯ. ಈ ಅಪವ್ಯಯವೇ ಆಸಕ್ತಿ. ಇದರ ನಿರೋಧ ಹಾಗು ನಿಯಂತ್ರಣವೇ ಅನಾಸಕ್ತಿ.

ಪ್ರಧಾನತಃ ಕಾರಣಾನುಕ್ರಮದಿಂದ ಅಧ್ಯಾತ್ಮ ಜ್ಞಾನದ, ಗುಣಾನುಕ್ರಮ ನ್ಯಾಯದಿಂದ ಬೌದ್ಧಿಕ ವಿಜ್ಞಾನದ ಮತ್ತು ಗಣಿತಾನುಕ್ರಮ ನಿಯಮದಿಂದ ಭೌತಿಕ ವಿಜ್ಞಾನದ ಅನುಸಂಧಾನ, ಆವಿಷ್ಕಾರ ಮತ್ತು ಉಪಲಬ್ಧತೆಗಳು ಸಾರ್ಥಕವಾಗುತ್ತದೆ.

127

ಪರಸ್ಪರ ಅನುಶಾಸಿತ (ನಿಯಂತ್ರಿತ) ಅಥವಾ ಅನುವರ್ತಿತ ಲೋಕ-ವ್ಯೂಹಕ್ಕೆ ಬ್ರಹ್ಮಾಂಡವೆಂದು ಸಂಜ್ಞೆ, ಇದರಲ್ಲಿ ಅನೇಕ ಸೌರ್ಯವ್ಯೂಹಗಳಿವೆ.

ಗಣಿತಾನುಕ್ರಮ ನಿಯಮದಿಂದ ಕ್ರಿಯೆ, ಪ್ರತಿಕ್ರಿಯೆ ಹಾಗು ಪರಿಪಾಕದ (ಫಲ); ಗುಣಾನುಕ್ರಮ ನ್ಯಾಯದಿಂದ ಹಾಸ ಹಾಗು ಜಾಗೃತಿಯ; ಕಾರಣಾನುಕ್ರಮ ವಿಧಿಯಿಂದ ಸಾಪೇಕ್ಷ ಹಾಗು ನಿರಪೇಕ್ಷ (ಶಕ್ತಿ) ಉರ್ಜದಲ್ಲಿ ಸಂಪೂರ್ಣ ಪ್ರಕೃತಿಯ ಅಧ್ಯಯನ ಆಭಾಸ ಹಾಗು ಅನುಭವ ಪೂರ್ಣವಾಗಿದೆ.

ನಿರಪೇಕ್ಷತೆಯಿಲ್ಲದೆ ವ್ಯಾಪಕತೆ ಸಿದ್ಧವಿಲ್ಲ, ಏಕೆಂದರೆ ಸಾಪೇಕ್ಷ ಸಸೀಮ ಮಾತ್ರವೇ.

ಸಹ-ಅಸ್ತಿತ್ವದಲ್ಲಿ ಅನುಭವ ಬೋಧವೆ ಅರಿವು; ಅರಿವೇ ಜ್ಞಾನ, ವಿಜ್ಞಾನ, ವಿವೇಕದ ರೂಪದಲ್ಲಿ ಪ್ರಮಾಣ; ಜ್ಞಾನವೇ ನಿಯಮ; ನಿಯಮವೇ ನಿಯಂತ್ರಣ; ನಿಯಂತ್ರಣವೇ ಸಂತುಲನ; ಸಂತುಲನಪೂರ್ವಕ ಬಾಳುವುದೇ ಮಾನವನಲ್ಲಿ ನ್ಯಾಯ; ಸಾರ್ವಭೌಮ ವ್ಯವಸ್ಥೆಯಲ್ಲಿ ನ್ಯಾಯಪೂರ್ವಕ ಬಾಳುವುದೇ ಧರ್ಮ ಅರ್ಥಾತ್ ಸಮಾಧಾನ; ಸಹ-ಅಸ್ತಿತ್ವದಲ್ಲಿ ಅನುಭವವೇ ಧರ್ಮ ಮತ್ತು ಸತ್ಯ. ನಿರಪೇಕ್ಷ ಸತ್ತಾವಿನಲ್ಲಿ ನಿಯಮ ಪೂರ್ಣ ಜ್ಞಾನವೇ ಅಭಿವ್ಯಕ್ತಿ ನಿತ್ಯ ವರ್ತಮಾನ.

ನಿಯಂತ್ರಣ ಮಹಿಮ ವ್ಯಾಪಕ ಮತ್ತು ನಿಯಂತ್ರಿತ ಅನೇಕ.

ಯಾವುದು ನಿಯಂತ್ರಿತವೋ ಅದು ಇಕಾಯಿ, ಇದೇ ಸ್ವಭಾವ ಗತಿ ಕ್ರಿಯೆ.

ಕ್ರಿಯೆಗಳು ಅನಂತ ಹಾಗು ಸಮಸ್ತ ಕ್ರಿಯೆಗಳು ಸತ್ತಾವಿನಲ್ಲಿ ಮುಳುಗಿ ಹಾಗು ನಿಯಂತ್ರಿತವಾಗಿದೆ, ಇದರಿಂದ ಪ್ರತ್ಯೇಕ ಇಕಾಯಿ ಶಕ್ತವಾಗಿದೆ ಅರ್ಥಾತ್ ಸತ್ತಾವಿನಲ್ಲಿಯೇ ಪ್ರತ್ಯೇಕ ಇಕಾಯಿಗೆ ಶಕ್ತಿ ಪ್ರಾಪ್ತವಾಗಿದೆ.

ಶಕ್ತವೇ ಇಕಾಯಿ; ಇಕಾಯಿಯೇ ಸ್ಪಂದನ; ಸ್ಪಂದನವೇ ಕ್ರಿಯೆ; ಕ್ರಿಯೆಯೇ ಅನೇಕತೆ; ಅನೇಕತೆಯೇ ಸಂಪೂರ್ಣತೆ; ಸಂಪೂರ್ಣತೆಯೇ ಪರಸ್ಪರತೆ; ಪರಸ್ಪರತೆಯೇ ನಿಯಂತ್ರಣ; ನಿಯಂತ್ರಣವೇ ಪರಿಣಾಮ; ಪರಿಣಾಮವೇ ಹಾಸ ಹಾಗು ವಿಕಾಸ; ಹಾಸ ಹಾಗು ವಿಕಾಸವೇ ಅವಸ್ಥೆ; ವಿಕಸಿತ ಅವಸ್ಥೆಯೇ ಚೈತನ್ಯ ಪದ; ಚೈತನ್ಯ ಪದವೇ ಸ್ಫುರಣ; ಸ್ಫುರಣವೇ ಕಂಪನ; ಕಂಪನವೇ ಪ್ರತಿಭೆ; ಪ್ರತಿಭೆಯೇ ಪ್ರತಿತಿ; ಪ್ರತಿತಿಯೇ ಭಾಸ; ಭಾಸವೇ ಅಧ್ಯಯನ; ಅಧ್ಯಯನವೇ ವಿಜ್ಞಾನ ಹಾಗು ವಿವೇಕ; ವಿಜ್ಞಾನ ಹಾಗು ವಿವೇಕವೇ ದರ್ಶನ; ದರ್ಶನವೇ ನಿರ್ಭ್ರಮತೆ; ನಿರ್ಭ್ರಮತೆಯೇ ಸಮಾಧಾನ;

128

ಸಮಾಧಾನವೇ ಆನಂದ; ಆನಂದವೇ ಪೂರ್ಣತೆ; ಪೂರ್ಣತೆಯೇ ಜಾಗೃತಿ; ಪೂರ್ಣ ಜಾಗೃತಿಯೇ ವಿಶ್ವಾಮ ಹಾಗು ವಿಶ್ವಾಮಸ್ಥ ಇಕಾಯಿಯೇ ಪೂರ್ಣ ಶಕ್ತ.

ಪ್ರತಿಯೊಬ್ಬ ಮಾನವ; ಪ್ರಾಪ್ತ ಶಕ್ತಿಯ ಅನುಭೂತಿ ಮಾಡುವ ತನಕ ಅವಿಶ್ರಾಂತ ಶೃಂಖಲದಲ್ಲಿ ಕಂಡುಬರುತ್ತಾನೆ.

ಘಟನ ರಹಿತ ಸಂಕುಲಿತ ಇಕಾಯಿಯಿಲ್ಲ. ಪ್ರತ್ಯೇಕ ಘಟನೆಯಲ್ಲಿ ಹಲವಾರು ಅಂಶಗಳು ಅಥವಾ ಅಂಗಗಳು ಹಾಗು ಇಕಾಯಿಗಳು ಕಂಡುಬರುವುದು ಅನಿವಾರ್ಯ.

ಪ್ರತ್ಯೇಕ ಪರಮಾಣು ಯಾವುದಾದರೂ ವಿಕಾಸ ಕ್ರಮಾಂಶದಲ್ಲಿ ಅವಸ್ಥಿತವಾಗಿದೆ

ಪ್ರತ್ಯೇಕ ವಿಕಾಸ ಕ್ರಮಾಂಶದಲ್ಲಿ ಸ್ಥಿತ ಪರಮಾಣುವಿನ ಮಧ್ಯಾಂಶ ಮಧ್ಯಸ್ಥ ಕ್ರಿಯೆಯಾಗಿರುತ್ತದೆ, ಇದು ಮಧ್ಯಸ್ಥವಾಗಿರುವ ಕಾರಣ ಅನ್ಯ ಅಂಶಗಳಿಗಿಂತ ಅಧಿಕ ಶಕ್ತವಾಗಿದೆ ಅನ್ಯ ಅಂಶಗಳನ್ನು ಸಂಕುಲಿತ ಮಾಡಿರುತ್ತದೆ. ಮಧ್ಯಾಂಶ ಮಧ್ಯಸ್ಥ ಕ್ರಿಯೆ, ಆದರೆ ಆಶ್ರಿತಾಂಶ ಸಮ ಅಥವಾ ವಿಷಮ ಕ್ರಿಯೆ.

ಮಾನವನಿಗೆ ಪೂರ್ಣ ಪದ ಅಥವಾ ಪೂರ್ಣ ಜಾಗೃತಿ ಅಥವಾ ಪೂರ್ಣ ವಿಶ್ವಾಮ ಮತ್ತು ಯಥಾಸ್ಥಿತಿಯನ್ನು ಪಡೆಯುವ ಅವಸರವಿದೆ. ಆದ್ದರಿಂದ ಸಮಸ್ತ ಪ್ರಯಾಸವಾಯಿದೆ.

ಜ್ಞಾನಾವಸ್ಥೆಯ ನಿರ್ಭ್ರಾಂತ ಇಕಾಯಿ ಪೂರ್ಣ ಜಾಗೃತ, ಭ್ರಾಂತಾಭ್ರಾಂತ ಇಕಾಯಿ ಪೂರ್ಣ ಜಾಗೃತಿಯನ್ನು ಪ್ರಮಾಣಿತ ಮಾಡುವುದಕ್ಕೆ ಅತಿ ನಿಕಟ ಹಾಗು ಭ್ರಾಂತ ಇಕಾಯಿಗಳಲ್ಲಿ ಅಪೇಕ್ಷೆಯಲ್ಲಿ ನಿಕಟವಾಗಿದೆ.

ರೂಪ, ಬಲ, ಬುದ್ಧಿ, ಪದ ಹಾಗು ಧನದ ವಿಷಮತೆಯಿಂದಲೇ ಮಾನವನಲ್ಲಿ ಪರಸ್ಪರ ಸ್ಪರ್ಧೆ, ಪ್ರಲೋಭನೆ, ಆಕಾಂಕ್ಷೆ, ಉತ್ಸಾಹ, ಅಧ್ಯಯನ, ಅನುಸಂಧಾನ, ಸಂಧಾನ, ಪ್ರಯೋಗ, ವ್ಯವಸಾಯ ಮತ್ತು ಈಷ್ಟ್ಯ, ದ್ವೇಷ, ಆತಂಕ, ಹಿಂಸಾ, ಛಲ, ಕಪಟ, ದಂಬ ಹಾಗು ಪಾಖಂಡದ ಪ್ರಸವವಿದೆ, ಇದರಿಂದ ಮಾನವನ ವಿಕಾಸ ಅಥವಾ ಹಾಸ ಸಿದ್ಧವಾಗಿದೆ.

ಸಹ-ಅಸ್ತಿತ್ವದಲ್ಲಿ ವಿರೋಧದ ವಿಜಯ ಅಥವಾ ಶಮನ, ವಿರೋಧ ಶಮನದಿಂದ ಜಾಗೃತಿ, ಜಾಗೃತಿಯಿಂದ ಸಹಜ ಜೀವನ, ಸಹಜ ಜೀವನದಿಂದ ಸ್ವರ್ಗೀಯತೆ, ಸ್ವರ್ಗೀಯತೆಯಿಂದ ಸಹ - ಅಸ್ತಿತ್ವದಲ್ಲಿ ಅನುಭವ, ಅನುಭವದಿಂದ ಕರ್ತವ್ಯ ನಿಷ್ಠೆ, ಕರ್ತವ್ಯ ನಿಷ್ಠೆಯಿಂದ ಸಫಲತೆ, ಸಫಲತೆಯಿಂದ ವಿಜ್ಞಾನ ಹಾಗು ವಿವೇಕ, ವಿಜ್ಞಾನ ಹಾಗು ವಿವೇಕದಿಂದ

129

ಸ್ವಯಂಸೂತ್ರ ಜೀವನ ಮತ್ತು ಸ್ವಯಂಸೂತ್ರ ಜೀವನದಿಂದಲೇ ಸಹ-ಅಸ್ತಿತ್ವ ಪ್ರಮಾಣಿತವಾಗುತ್ತದೆ.

ಸ್ವಯಂ ಸೂರ್ಯ ಜೀವನ ಮಾನವೀಯತೆಯ ದೃಢೀಕರಣ, ಇದು ಒಂದು ಸ್ವತಂತ್ರ ಜೀವನ.

ಸಹ-ಅಸ್ತಿತ್ವವೇ ವಿರೋಧಗಳಿಂದ ಮುಕ್ತಿ, ವಿರೋಧಗಳಿಂದ ಮುಕ್ತಿಯೇ ವಿರೋಧದ ಶಮನ ಮತ್ತು ವಿರೋಧದ ಶಮನವೇ ಸಹ-ಅಸ್ತಿತ್ವ.

ಅಜ್ಞಾನ, ಮೃತ್ಯು, ಅಂಧಕಾರ ಮತ್ತು ಭ್ರಮೆ ಇದು ನಾಲ್ಕು ಪ್ರಕಾರದ ಭ್ರಮಿತ ಮಾನ್ಯತೆಗಳು ಮಾನವ ವಿಚಾರದಲ್ಲಿ ಕಂಡುಬರುತ್ತದೆ. ಇದರ ಅಸ್ತಿತ್ವ ಸಿದ್ಧವಾಗುವುದಿಲ್ಲ.

ಮೃತ್ಯು, ಅಂಧಕಾರ ಮತ್ತು ಭ್ರಮೆಯ ಮೂಲ ಕಾರಣದಲ್ಲಿಯೂ ಅಜ್ಞಾನವೇಯಿದೆ.

ಯಾವುದು ಹೇಗಿದೆಯೋ ಅದನ್ನು ಹಾಗೆಯೇ ಅರಿತುಕೊಳ್ಳುವ ವಿಕಾಸಾಂಶದ ಅಭಾವವೇ ಅಜ್ಞಾನ, ಪಿಂಡದ ವಿಘಟನೆ ಕ್ರಿಯೆಗೆ ಮೃತ್ಯು, ಯಾವುದೇ ಇಕಾಯಿಯ ಒಂದು ಕಡೆ ಪ್ರಕಾಶ ಬಿದ್ದಾಗ ಅದರ ಇನ್ನೊಂದು ಕಡೆ ಇರುವ ನೆರಳಿಗೆ ಅಂಧಕಾರವೆಂದು ಸಂಜ್ಞೆ.

ಅಗೋಪನೀಯತೆ ಹಾಗು ರಹಸ್ಯಹೀನತೆಯೇ ಯಥಾರ್ಥ, ಇದರಿಂದಲೇ ಸಹಜತೆಯ ಉಪಲಬ್ಧತೆಯಿದೆ.

ಗೋಪನೀಯತೆಯಿಂದ ಸಂಕೀರಣತೆಯ ಹಾಗು ರಹಸ್ಯತೆಯಿಂದ ಭ್ರಮೆಯ ಪ್ರಸವವಿದೆ.

ಅಜ್ಞಾನ, ಮೃತ್ಯು, ಅಂಧಕಾರ ಹಾಗು ಭಯದ ವೈಕಲ್ಪಿಕ ರೂಪ ಹಾಗು ಗುಣದ ಕಲ್ಪನೆಯೇ 'ಭ್ರಮೆ'.

ಸಂಕೀರ್ಣತೆ ಹಾಗು ರಹಸ್ಯತೆಯಿಂದ ಮಾನವ ಹಾಸದ ದಿಕ್ಕಿನಲ್ಲಿ ಗತಿಮಾನ, ಇದರ ಕಾರಣ ವಿರೋಧ, ವಿದ್ಯೋಹ, ಆತಂಕ ಇತ್ಯಾದಿ, ಎಲ್ಲಾ ಅಮಾನವೀಯ ಗುಣ ಪ್ರಭಾವಿತವಾಗಿದೆ.

ಸಮಷ್ಟಿಯ (ಸಂಪೂರ್ಣ ಮಾನವ) ಬಲ, ಬುದ್ಧಿ, ರೂಪ, ಪದ ಹಾಗು ಧನದಿಂದ ವ್ಯಷ್ಟಿಯ ಬಲ, ಬುದ್ಧಿ, ರೂಪ, ಪದ ಹಾಗು ಧನ ಅಲ್ಪ, ಏಕೆಂದರೆ ಸಮಷ್ಟಿಯ ಆಂಶಿಕತೆಗೆ ವ್ಯಷ್ಟಿಯೆಂದು ಸಂಜ್ಞೆ.

ಮಾನವ ಇಕಾಯಿ ಅಭಿಮಾನ ಗ್ರಸ್ತವಾದನಂತರ ವಂಚನ, ಪರಿವಂಚನ, ಆತಂಕ ಹಾಗು ವಿಗ್ರಹದಿಂದ ಅನೇಕರ ಶೋಷಣೆಯಲ್ಲಿ ಪ್ರವೃತ್ತವಾಗುತ್ತದೆ. ಜೊತೆಗೆ, ಆ ಅಭಿಮಾನದಿಂದ ಮುಕ್ತವಾಗಿಯೇ ವಿವೇಕ, ವಿಜ್ಞಾನ, ಸ್ನೇಹ, ಸಹಜತೆ ಹಾಗು ಸಹ-ಅಸ್ತಿತ್ವದಿಂದ ಏಕರಿಂದ ಅನೇಕರ ಪೋಷಣೆಯ ಪ್ರವೃತ್ತಿ ಕಂಡುಬರುತ್ತದೆ ಹಾಗು ಪೋಷಣೆಯೂ ಆಗುತ್ತದೆ.

130

ಶೋಷಣವಾದಿ ಪ್ರಣಾಳಿಯಲ್ಲಿ ಸಂಘರ್ಷ ಹಾಗು ಪೋಷಣವಾದಿ ಪ್ರಣಾಳಿಯಲ್ಲಿ ಶಾಂತಿಯ ಉಪಲಬ್ಧತೆಯಿದೆ.

ಸಮಾಧಾನ ವಿಧಿಯಿಂದ ವ್ಯವಹಾರಿಕ ಏಕಸೂತ್ರತೆ ಹಾಗು ವೈಚಾರಿಕ ಏಕಸೂತ್ರತೆ ಅಖಂಡತೆ ಹಾಗು ಸಾರ್ವಭೌಮತೆಯ ಪೋಷಣವಾದಿ ಪ್ರಣಾಳಿಯ ಮೂಲ ಸೂತ್ರವೇ ನ್ಯಾಯ. ಅನ್ಯಾಯದಲ್ಲಿ ಶೋಷಣವಿದ್ದೇಯಿದೆ.

ಸಮಸ್ತ ಮಾನವನಿಗೆ ಜಾಗೃತಿಯ ಅವಸರ ಸಮಾನ, ಇದರ ಸದುಪಯೋಗ ಹಾಗು ದುರುಪಯೋಗ ವಾತಾವರಣ, ಅಧ್ಯಯನ ಹಾಗು ಪೂರ್ವ ಸಂಸ್ಕಾರಾಧೀನವಾಗಿದೆ.

ಸಂಸ್ಕೃತಿ, ಸಭ್ಯತೆ, ವಿಧಿ ಹಾಗು ವ್ಯವಸ್ಥೆ, ಈ ನಾಲ್ಕು ಪ್ರಕಾರದಿಂದ ಮಾನವ ಕೃತ ವಾತಾವರಣವಿದೆ, ಇದರಿಂದ ಮಾನವೀಯತೆಯ ಪೋಷಣೆ ಅಥವಾ ಶೋಷಣೆಯಾಗುತ್ತದೆ.

ಬೌದ್ಧಿಕ ಸಮಾಧಾನ ಹಾಗು ಭೌತಿಕ ಸಮೃದ್ಧಿ ಹಾಗು ವಿಕಲ್ಪಾತ್ಮಕ ಜ್ಞಾನ ಯಾವ ಪ್ರಕಾರದ ಮಾನವಕೃತ ವಾತಾವರಣದಿಂದ ಬೋಧಗಮ್ಯವಾಗುತ್ತದೆಯೋ, ಇದರಿಂದಲೇ ಮಾನವನ ವಿಕಾಸ ಹಾಗು ಜಾಗೃತಿಯ ಮಾರ್ಗ ಪ್ರಶಸ್ತವಾಗುತ್ತದೆ.

ವರ್ತಮಾನದ ಪೂರ್ವದಲ್ಲಿ ಮಾಡಲಾಗಿರುವ ಕ್ರಿಯೆಯ ಫಲ ಪರಿಣಾಮವೇ 'ಸಂಸ್ಕಾರ', ಇದು ಅಮಾನವೀಯತೆ, ಮಾನವೀಯತೆ ಹಾಗು ಅತಿಮಾನವೀಯತೆಪೂರ್ಣ ಭೇದದಿಂದಿದೆ, ವಿಕಲ್ಪದ ಆಧಾರದ ಮೇಲೆಯೇ ಇಕಾಯಿಯ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆ ಸುಸಂಸ್ಕಾರ. ಸುಸಂಸ್ಕಾರದ ವಿಪರೀತವಿರುವ ಎಲ್ಲಾ ಕ್ರಿಯಾಕಲಾಪ ಅಮಾನವೀಯತೆ.

“ಸರ್ವ ಶಭವಾಗಲಿ”

131

ಅಧ್ಯಾಯ - ೧೩

ಮಾನವೀಯತೆ

ಮಾನವನಿಗೆ ಮಾನವೀಯತೆ, ದೇವಮಾನವೀಯತೆ, ದಿವ್ಯಮಾನವೀಯತೆಯೇ ಸುಖ, ಶಾಂತಿ ಸಂತೋಷ, ಆನಂದಕ್ಕಾಗಿ ಆಧಾರ. ಸುಖ ಪ್ರತ್ಯೇಕ ಸ್ಥರದ ಲಕ್ಷ್ಯ ಅರ್ಥಾತ್ ಸುಖ, ಅಮಾನವೀಯತೆ, ಮಾನವೀಯತೆ ಹಾಗೂ ಅತಿಮಾನವೀಯತೆಯ ಲಕ್ಷ್ಯ.

ಭ್ರಮುವಶ ಮಾನವನು ಲಾಭದಿಂದ ಸುಖಿಯಾಗುವ ಕಾಮನೆ ಮಾಡಿದ್ದಾನೆ.

ಭಾವದಿಂದ ಸಮಾಧಾನ, ಸಮಾಧಾನದಿಂದ ಸದುಪಯೋಗ, ಸದುಪಯೋಗದಿಂದ ಅಧಿಕಾರ, ಅಧಿಕಾರದಿಂದ ವ್ಯವಸ್ಥೆ, ವ್ಯವಸ್ಥೆಯಿಂದ ಸಮಾಧಾನ-ಸಮೃದ್ಧಿ-ಅಭಯ-ಸಹ-ಅಸ್ತಿತ್ವ, ಸಮಾಧಾನ - ಸಮೃದ್ಧಿ - ಅಭಯ - ಸಹ-ಅಸ್ತಿತ್ವದಿಂದ ಭಾವವಿರುತ್ತದೆ.

ಶೋಷಣೆಯಿಂದ ಪ್ರಾಪ್ತ ಆಯದಿಂದ ಏಕರಿಂದ ಅನೇಕರ ವರಿಗೂ ಸುಖಿಯಾಗಿಲ್ಲ.

ಶೋಷಕನು ಶುಷ್ಕನಾಗುವುದು ಅನಿವಾರ್ಯ, ಏಕೆಂದರೆ ಕ್ರಿಯೆಯ ಪ್ರತಿಕ್ರಿಯೆ ಸಮಾನವಾಗಿರುತ್ತದೆ.

ಸಂಪಾದಿಸುವಾಗ ದುಂದುವೆಚ್ಚಮಾಡುವುದಿಲ್ಲ; ದುಂದುವೆಚ್ಚಮಾಡುವಾಗ ಸಂಪಾದಿಸುವುದಿಲ್ಲ.

ಸದ್ಭಯವೇ ಸಂಪಾದನೆಯ ಪ್ರಯೋಜನ ಮತ್ತು ಅಪವ್ಯಯವೇ ಹಾಳು. ಆದ್ದರಿಂದ ಸದ್ಭಯ-ಪೂರ್ವಕವೇ ಮಾನವ ನ್ಯಾಯಪೂರ್ಣ ಆದಾಯವನ್ನು ಪಡೆದು ಸಫಲ ಹಾಗು ಸುಖಿಯಾಗಿದ್ದಾನೆ, ಅನ್ಯಥಾ ಅಸಫಲ ಹಾಗು ದುಃಖಿಯಾಗಿದ್ದಾನೆ.

ತನ, ಮನ ಹಾಗು ಧನಕ್ಕೆ ಆದಾಯ - ವ್ಯಯ ಮಾಡಲಾಗುತ್ತದೆ.

ಮಾನವ ಪರಿವಾರ, ಸಮಾಜ, ರಾಷ್ಟ್ರ ಹಾಗು ಲೋಕ ಕ್ರಮದಿಂದ ಅನ್ಯೋನ್ಯಾಶ್ರಿತವಾಗಿದ್ದಾನೆ, ಇದರ ಅಧ್ಯಯನ ಹಾಗು ಅನುಸರಣ ಮಾಡುವ ಅವಸರ ಸಮಸ್ತ ಮಾನವರಿಗೆ ಪ್ರಾಪ್ತವಾಗಿದೆ.

132

ಮಾನವ ಪರಿವಾರ, ಸಮಾಜ, ರಾಷ್ಟ್ರ ಹಾಗು ಲೋಕ, ಪ್ರಾಪ್ತ ಅವಸರ ಹಾಗು ಅನುಸರಣ ಕ್ರಿಯೆಯ ಅವಶ್ಯಕವಾದ ನಿಯಮಗಳ ಪಾಲನೆಯಿಂದಲೇ ಸಫಲವಾಗಿದ್ದಾನೆ, ಇದರ ವಿಪರೀತ ಅಸಫಲವಾಗಿದ್ದಾನೆ.

ಮಾನವೀಯತೆಪೂರ್ಣ ವ್ಯವಹಾರ ಪಕ್ಷದ ಪೂರ್ಣ ಅಧ್ಯಯನವೇ ಮಾನವ-ಕುಲದ ಏಕಸೂತ್ರತೆ ಸೂತ್ರ.

ಮಾನವ ಶ್ರೇಣಿಯ ತನಕ, ಶುಭ ಆಶಯವಿಲ್ಲದಿರುವ, ಅಥವಾ ಯಾವುದಕ್ಕೂ ಪೂರಕ ಮತ್ತು ಉಪಯೋಗಿಯಾಗದೇಯಿರುವ ಯಾವುದೇ ಇಕಾಯಿಯಿಲ್ಲ, ಆದ್ದರಿಂದ ಸಮಸ್ತ ಕ್ರಿಯೆ ಪರಸ್ಪರ ಪೂರಕ ಮತ್ತು ಉಪಯೋಗಿ ಸಿದ್ಧವಾಗಿದೆ. ವಿಚಾರ ಸತ್ಯಪೂರ್ಣವಾದಾಗ ಮಾತ್ರ ಸ್ವತಂತ್ರ, ಸ್ವತಂತ್ರ ವಿಚಾರವೂ ಪರಸ್ಪರ ಪೂರಕ ಮತ್ತು ಉಪಯೋಗಿ ಸಿದ್ಧವಾಗಿದೆ.

ಮಾನವನಲ್ಲಿ ಪರಸ್ಪರ ಪೂರಕತೆ ಹಾಗು ಉಪಯುಕ್ತತೆ ವ್ಯವಹಾರದ ಏಕಸೂತ್ರತೆಯಾಗಿದೆ. ಏಕಸೂತ್ರತೆಯಿಂದ ಸಫಲತೆಯ ದಿಶೆಯಲ್ಲಿ ಅನ್ಯಥಾ ಅಸಫಲತೆಯ ದಿಶೆಯಲ್ಲಿ ಗತಿಯಿದೆ.

ಸಹ-ಅಸ್ತಿತ್ವದಲ್ಲಿ ವಿರೋಧವಿಲ್ಲ, ಏಕಸೂತ್ರತೆಯಿದೆ. ಅತಃ ಸಹ-ಅಸ್ತಿತ್ವ ಮಾನವ-ಜೀವನದಲ್ಲಿ ವ್ಯವಹಾರದ ಲಕ್ಷ್ಯ ಸಿದ್ಧವಾಗಿದೆ.

ಧರ್ಮಪೂರ್ಣ ವಿಚಾರ ಹಾಗು ನ್ಯಾಯ ಪೂರ್ಣ ವ್ಯವಹಾರದಿಂದಲೇ ಸತ್ಯದಲ್ಲಿ ಅನುಭೂತಿ ಪ್ರಮಾಣಿತವಾಗುವುದು ಸಂಭವವಾಗುತ್ತದೆ.

ಪರಾಧಿಕ ಅರ್ಥಾತ್ ಮತ್ತವರಿಗಿಂತ ಅಧಿಕ ಉನ್ನತಿಗಾಗಿರುವ ಪ್ರವೃತ್ತಿ ಹಾಗು ಪ್ರಯಾಸ, ಅದನ್ನು 'ಸ್ವರ್ಧೆ' ಹಾಗು ಇದರ ವಿರೋಧದಲ್ಲಿ ಪ್ರಾಪ್ತ ಪ್ರಯಾಸ ಹಾಗು ಪ್ರವೃತ್ತಿಗೆ 'ಈರ್ಷ್ಯ' ಎಂದು ಸಂಜ್ಞೆ. ಸ್ವರ್ಧೆಯಿಂದ ಉತ್ತೇಜನ ಹಾಗು ದ್ವೇಷ ಮತ್ತು ಈರ್ಷ್ಯೆಯಿಂದ ಅಮರ್ಷದ ಪ್ರಸವವಾಗುತ್ತದೆ.

ಸ್ವಯಂನಲ್ಲಿ ಪೂರ್ಣವಾಗಲು ಮಾನವ ಪರಂಪರೆಯಲ್ಲಿ ಜಿಜ್ಞಾಸ ಮತ್ತು ನಿಷ್ಠೆ ಉದಯವಾಗುವ ಸ್ಥಿತಿಯಲ್ಲಿ ಎಲ್ಲಾ ಈರ್ಷ್ಯ, ದ್ವೇಷ ಶಮನವಾಗಲು ಪ್ರಾರಂಭವಾಗುತ್ತದೆ. ಪೂರ್ಣ ಜಾಗೃತವಾದನಂತರ ಈರ್ಷ್ಯ, ದ್ವೇಷ ಇತ್ಯಾದಿ ಸಮಸ್ತ ಭ್ರಮೆಯಿಂದ ಮುಕ್ತಿಯಾಗುತ್ತದೆ, ಅರ್ಥಾತ್ ಸಹ-ಅಸ್ತಿತ್ವದ ಪ್ರಕಾಶದಲ್ಲಿ ಸ್ವರ್ಧೆಯ ನಿರರ್ಥಕತೆ ಸ್ವಯಂನಲ್ಲಿ, ಸ್ವಯಂನಿಂದ, ಸ್ವಯಂಗೆ ಜಾಗೃತಿಯ ಅರ್ಥದಲ್ಲಿ ಸ್ಪಷ್ಟವಾಗಿದೆ.

133

‘ಸ್ವರ್ಧೆಯಿಂದ ವಿಕಾಸ ಅಥವಾ ಜಾಗೃತಿ’ ಎಂಬುವ ಪ್ರಚಲಿತ ಮಾನ್ಯತೆಯಿದೆ, ಆದರೆ ‘ಯಥಾರ್ಥ’ದ (ಸರಿಯಾದ ಅರಿವು) ಪ್ರತಿ ಜಿಜ್ಞಾಸ ಮತ್ತು ನಿಷ್ಠೆಯಿಂದಲೇ ಮಾನವನಲ್ಲಿ ಜಾಗೃತಿ ಹಾಗು ಮಾನವೀಯ ಪರಂಪರೆಯ ಮಾರ್ಗ ಪ್ರಶಸ್ತವಾಗುತ್ತದೆ, ಇದು ಅಖಂಡ ಸಮಾಜದ ರೂಪದಲ್ಲಿ ಪ್ರಮಾಣಿತವಾಗುತ್ತದೆ.

ಸಂಗ್ರಹದಿಂದ ಲೋಭ, ದ್ವೇಷದಿಂದ ವಿರೋಧ, ಅವಿದ್ಯೆಯಿಂದ ಅಜ್ಞಾನ, ಅಭಿಮಾನದಿಂದ ಉದ್ಧಂಡತೆ ಮತ್ತು ಭಯದಿಂದ ಆತಂಕದ ಜನ್ಮವಾಗುತ್ತದೆ, ಇದು ವೈಚಾರಿಕ ಕ್ಲೇಶ.

ದ್ವೇಷ - ಇನ್ನೊಬ್ಬರ ನಾಶದಲ್ಲಿಯೇ ಸ್ವ-ಸುಖದ ಕಲ್ಪನೆ ಮಾಡುವುದು ದ್ವೇಷ.

ಸ್ವಯಂ ಕ್ಲೇಶಿತವಾಗಿರುವವನು ಮತ್ತವರಿಗೆ ಕ್ಲೇಶ ಕೊಟ್ಟೇಕೊಡುತ್ತಾನೆ, ಏಕೆಂದರೆ ಯಾರಹತ್ತಿರ ಏನಿದೆಯೋ ಅದನ್ನು ಅವನು ಹಂಚುತ್ತಾನೆಂಬುವುದು ನಿಯಮ.

ಮೇಲೆ ವರ್ಣಿತ ಐದು ಪರಿಮಾರ್ಜಿತ ಪ್ರವೃತ್ತಿಗಳ ಸಮಾಧಾನದ ರೂಪದಲ್ಲಿ ಐದು ಪರಿಮಾರ್ಜಿತ ಮೂಲ ಪ್ರವೃತ್ತಿಗಳು ಇವೆ, ಇವು ಅಸಂಗ್ರಹ (ಸಮೃದ್ಧಿ), ಸ್ನೇಹ, ವಿದ್ಯೆ, ಸರಳತೆ ಹಾಗು ಅಭಯ. ಈ ಪ್ರವೃತ್ತಿಗಳಿಂದ ಉತ್ಪನ್ನ ಸಂಪೂರ್ಣ ಸಂವೇಗ ಮತ್ತು ಪ್ರವೃತ್ತಿ ಕ್ರಮಶಃ ಉದಾರತೆ, ನಿರ್ವಿರೋಧ, ಯಥಾರ್ಥ ಜ್ಞಾನ, ಸಹ-ಅಸ್ತಿತ್ವ ಹಾಗು ಧೈರ್ಯ ಉದ್ಧಮಿತವಾಗುತ್ತದೆ, ಇದರಿಂದ ಹರ್ಷ, ಪ್ರಸನ್ನತೆ, ಉತ್ಸಾಹ, ತೃಪ್ತಿ, ಉಲ್ಲಾಸ ಹಾಗು ಆಹ್ಲಾದದ ನಿರಂತರತೆಯಿರುತ್ತದೆ, ಇದರ ಅನವರತ ಪ್ರತೀಕ್ಷೆಯಲ್ಲಿ ಮಾನವನಿದ್ದಾನೆ.

ಅನುಭವ ಬೋಧದಿಂದ (ಸಂಕಲ್ಪ) ಇಚ್ಛೆ, ಇಚ್ಛೆಯಿಂದ ವಿಚಾರ, ವಿಚಾರದಿಂದ ಆಶೆ, ಆಶೆಯಿಂದ ಸಂವೇಗ, ಸಂವೇಗದಿಂದ ಕ್ರಿಯೆ, ಕ್ರಿಯೆಯಿಂದ ಅಧ್ಯಯನ ಹಾಗು ಅಧ್ಯಯನದಿಂದ ಬೋಧವಾಗುತ್ತದೆ. ಇದು ಇಚ್ಛೆ ಹಾಗು ಕ್ರಿಯೆಯ ಕ್ರಮ-ಗತಿ.

ಸಂಗ್ರಹ ಧನದ ಮಾತ್ರವೇಯಾಗುತ್ತದೆ, ಇದು ಪ್ರತೀಕ ಮೌಲ್ಯ.

ಉತ್ಸಾದಿತ ಹಾಗು ಸಂಪಾದಿತ ಭೇದದಿಂದ ವಸ್ತುಗಳಿವೆ.

ಸಂಪಾದನೆ - ಪ್ರಾಕೃತಿಕ ವಸ್ತುಗಳ ಉಪಲಬ್ಧತೆಗೆ ‘ಸಂಪಾದನೆ’ ಎಂದು ಸಂಜ್ಞೆ.

ಉತ್ಸಾದನೆ - ಪ್ರಾಕೃತಿಕ ಐಶ್ವರ್ಯದ ಮೇಲೆ ಶ್ರಮಪೂರ್ವಕ ಸಂಪಾದಿತ ವಸ್ತುವಿಗೆ ಮಾನಾಕಾರ (ಇಚ್ಛಾನುರೂಪ ಆಕಾರ) ನೀಡುವುದೇ ‘ಉತ್ಸಾದನೆ’

ವಸ್ತುವಿನ ಸಂಗ್ರಹವಿಲ್ಲ, ಏಕೆಂದರೆ ಅದರ ಉಪಯೋಗ ಹಾಗು ಪರಿಣಾಮ ನಿಶ್ಚಿತ (ರೂಪಾಂತರಣ)

134

★ ಸ್ವ-ಶ್ರೇಷ್ಠತೆಯ ಮಾನ್ಯತೆಯ ಆಧಾರದ ಮೇಲೆ ಘೃಣ, ದುರ್ಬಲತೆಯ ತುಲನೆಯಲ್ಲಿ ಹಿಂಸ ಹಾಗು ಮತ್ತವರ ವಿಕಾಸದ ಪ್ರತಿ ಈಷ್ಟೆಯಿದೆ, ಆದರೆ ಸ್ವ-ಶ್ರೇಷ್ಠತೆಯ ಅನುರೂಪ ಅಸಕ್ಷಮರಿಗೆ ಸಮುಚಿತ ಸಹಯೋಗ ನೀಡುವುದೇ ಘೃಣವಿನ ಸ್ಥಾನದಲ್ಲಿ ಉದಾರತೆ, ತನ್ನನ್ನು ಪರ-ವಿಕಾಸಾನುರೂಪ, ಜಾಗೃತಿ ಅನುರೂಪ ಪಡೆಯುವ ಪ್ರಯಾಸವೇ ಸ್ಪರ್ಧೆ ಹಾಗು ದುರ್ಬಲರ ರಕ್ಷಮಾಡುವುದೇ ದಯೆ.

ಹಿಂಸಾತ್ಮಕ ಕಾರ್ಯ ವ್ಯಕ್ತಿ, ಪರಿವಾರ, ಸಮಾಜ, ವರ್ಗ, ಜಾತಿ, ಮತ, ಸಂಪ್ರದಾಯ, ಭಾಷೆ ಹಾಗು ರಾಷ್ಟ್ರದ ಸ್ತರ-ಭೇದದಿಂದಿದೆ, ಇದು ದ್ವಂದ್ವದ ಹಾಗು ಪ್ರತಿದ್ವಂದ್ವದ ರೂಪದಲ್ಲಿ ಪರಿಲಕ್ಷಿತವಾಗುತ್ತದೆ.

ಹಿಂಸೆಯ ಪ್ರತಿಹಿಂಸೆ, ದ್ವಂದ್ವದ ಪ್ರತಿದ್ವಂದ್ವ, ಅಪರಾಧದ ಪ್ರತಿಕಾರ ಅವಶ್ಯಂಭಾವಿಯಾಗಿದೆ. ಅತಃ ದ್ವೇಷ-ಕಾಮನೆ ಯಾವುದೇ ದೇಶ ಹಾಗು ಕಾಲದಲ್ಲಿ ಮಾನವನ ಜಾಗೃತಿಗಾಗಿ ಸಹಾಯಕವೆಂದು ಸಿದ್ಧವಾಗಿಲ್ಲ.

¤ ಅವಿದ್ಯ ಅಥವಾ ಅಜ್ಞಾನ - ಹೇಗೆ ಯಾವುದರ ರೂಪ, ಗುಣ, ಸ್ವಭಾವ ಹಾಗು ಧರ್ಮವಿದೆಯೋ, ಅದನ್ನು ಅದೇ ಪ್ರಕಾರ ಅರಿತುಕೊಳ್ಳುವ ಯೋಗ್ಯ ಜಾಗೃತಿಯ ಅಭಾವಕ್ಕೆ 'ಅವಿದ್ಯ' ಅಥವಾ 'ಅಜ್ಞಾನ' ಎಂದು ಸಂಜ್ಞೆ.

¤ ಅಭಿಮಾನ - ಸ್ವ-ಬಲ, ಬುದ್ಧಿ, ರೂಪ, ಪದ ಹಾಗು ಧನವನ್ನು ಶ್ರೇಷ್ಠ ತಥಾ ಅನ್ಯವನ್ನು ನೇಷ್ಯವೆಂದು ನಂಬುವ ಪ್ರವೃತ್ತಿಗೆ 'ಅಭಿಮಾನ' ಎಂದು ಸಂಜ್ಞೆ.

ಇಕಾಯಿ ಸಮಷ್ಟಿಯಲ್ಲಿ ಅಂಶದ ರೂಪದಲ್ಲಿದೆ.

ಪ್ರಾಣಭಯ, ಪದಭಯ, ಮಾನಭಯ ಹಾಗು ಧನಭಯ, ಇವು ಭಯದ ನಾಲ್ಕು ಕಾರಣ ಭೇದ. ಪ್ರಾಣ, ಪದ, ಮಾನ ಹಾಗು ಧನ, ಇವು ಸ್ಥಾನಾಂತರಣ ಹಾಗು ಪರಿವರ್ತನೆಯಿಂದ ಮುಕ್ತವಾಗಿಲ್ಲ.

¤ ಪ್ರಾಣಭಯ - ಶರೀರದ ಜೀವಂತತೆಯ ವಿಪರೀತದಲ್ಲಿರುವ ಮೃತ್ಯುವಿನ ಕಲ್ಪನೆ, ಇದು 'ಪ್ರಾಣಭಯ'.

¤ ಪದಭಯ - ಏಕರಿಂದ ಅನೇಕರ ತನಕ ಕಂಡುಬರುವ ಅಧಿಕಾರಕ್ಕೆ 'ಪದ' ಎಂದು ಸಂಜ್ಞೆ ಹಾಗು ಇದರ ವಿರೋಧದಲ್ಲಿ 'ಪದಭಯ' ಎಂದು ಸಂಜ್ಞೆ.

¤ ಮಾನಭಯ - ಯಶದ ವಿಪರೀತದಲ್ಲಿ ಅಥವಾ ವಿರೋಧದಲ್ಲಿ 'ಮಾನಭಯ' ಎಂದು ಸಂಜ್ಞೆ.

135

¤ ಧನಭಯ - ಧನದ ಅಭಾವ ಅಥವಾ ವಿರೋಧದ ಸಂಭಾವನೀಯತೆ ಅಥವಾ ಸ್ಥಿತಿಗೆ 'ಧನಭಯ' ಎಂದು ಸಂಜ್ಞೆ.

¤ ಮೇಲೆ ವರ್ಣಿತ ನಾಲ್ಕು ಉಪಲಬ್ಧತೆಗಳು ಅರ್ಥಾತ್ ಪ್ರಾಣ, ಪದ, ಮಾನ ಮತ್ತು ಧನ ಸಾಮಯಿಕ, ಇವನ್ನು ಸ್ಥಾಯಿಯೆಂದು ತಿಳಿದುಕೊಳ್ಳುವುದೇ ಸಂಕಟಕ್ಕೆ ಕಾರಣ. ಏಕೆಂದರೆ ಪ್ರಾಣದ ಹರಣ, ಪದದ ಪತನ ಅಥವಾ ವಿಯೋಗ, ಮಾನದ ಸ್ವೀಕೃತಿ ಹಾಗು ಧನದ ವ್ಯಯ, ಇದು ನಿಯತಿ ಕ್ರಮ ಸಿದ್ಧಿಗಳು.

ಅತಿ: ಮಾನವನಿಗೆ ಪರಮ ಲಾಭ ಮಾನವೀಯತೆ ಪೂರ್ಣ ಪ್ರಮಾಣವೇ, ಇದರಿಂದ ಮಾನವ ಸುಖಿಯಾಗುತ್ತಾನೆ.

“ಸರ್ವ ಶುಭವಾಗಲಿ”

136

ಅಧ್ಯಾಯ - ೧೪

ಮಾನವ ವ್ಯವಹಾರ ಸಹಜ ನಿಯಮ

ಮಾನವ ವ್ಯವಹಾರದಲ್ಲಿ ಪ್ರವರ್ತನಶೀಲನಾಗಿದ್ದಾನೆ. ಮಾನವನ ಜಾಗೃತ, ಸ್ವಪ್ನ ತಥಾ ಸುಶುಪ್ತಾವಸ್ಥೆಯ ಸಮಸ್ತ ವ್ಯವಹಾರದಲ್ಲಿ ಚೈತನ್ಯವಿರುವುದು ಅನಿವಾರ್ಯ.

ಆಶಾ, ವಿಚಾರ, ಇಚ್ಛೆ, ಋತಂಭರ ಹಾಗು ಪ್ರಾಮಾಣಿಕತೆಯ ಪ್ರಮಾಣದ ಸ್ವೀಕೃತಿಯ ಸಹಿತ ಹಾಗು ಈ ಐದು ಕ್ರಿಯೆಗಳ ಸಹಿತ ಪ್ರಮಾಣ ಪ್ರಸ್ತುತ ಮಾಡುವ ಇತಾಯಿಗೆ ಜಾಗೃತ ಮಾನವನೆಂದು ಸಂಜ್ಞೆ.

ಚೈತನ್ಯ ಪಕ್ಷದ ಅರ್ಥಾತ್ ಜೀವನದ ವಿಕಾಸ ಮತ್ತು ಜಾಗೃತಿಯ ಕಾರಣ ಸಂಸ್ಕಾರ, ಗುಣ ಮತ್ತು ಸ್ವಭಾವವಿದೆ.

ಸಂಸ್ಕಾರ ಅಧ್ಯಯನ, ವ್ಯವಹಾರ ಮತ್ತು ಕರ್ಮಾಭ್ಯಾಸದಿಂದಾಗುತ್ತದೆ.

ಅಧ್ಯಯನ ಜಡ - ಚೈತನ್ಯ ಹಾಗು ವ್ಯಾಪಕದಲ್ಲಿಯೇ ಇದೆ ಮತ್ತು ಇದು ಜ್ಞಾನ, ವಿವೇಕ-ವಿಜ್ಞಾನ ವಿಧಿಯಿಂದಲೇ ಸಂಪನ್ನವಾಗುತ್ತದೆ.

ವಿವೇಕಾತ್ಮಕ ಅಧ್ಯಯನದಿಂದ ಆತ್ಮದ ಅಮರತ್ವ, ಶರೀರದ ನಶ್ವರತ್ವ ಮತ್ತು ವ್ಯವಹಾರದ ನಿಯಮಗಳ ಬೋಧವಾಗುತ್ತದೆ, ಜೊತೆಗೆ ಮಾನವ ಲಕ್ಷ್ಯ ಹಾಗು ಜೀವನ ಮೌಲ್ಯ ಸ್ಪಷ್ಟವಾಗುತ್ತದೆ. ಈ ಬೋಧದಿಂದ ಉತ್ತರೋತ್ತರ ಸುಸಂಸ್ಕಾರ ಪರಿಷ್ಕೃತವಾಗುತ್ತದೆ.

ವ್ಯವಹಾರಿಕ ನಿಯಮ ಮಾನವೀಯತೆಯ ಸಂರಕ್ಷಣೆಯ ಲಕ್ಷ್ಯದಿಂದಿದೆ.

* ಮಾನವೀಯತೆಯ ಸಂರಕ್ಷಣೆಯ ಲಕ್ಷ್ಯ ಮಾನವೀಯ ದೃಷ್ಟಿ, ವಿಷಯ, ಪ್ರವೃತ್ತಿ, ಮಾನವೀಯ ಗುಣ, ಸ್ವಭಾವ ಮತ್ತು ಮಾನವೀಯ ವ್ಯವಹಾರದಲ್ಲಿ ಸ್ಪಷ್ಟವಾಗಿದೆ, ಇದರಿಂದ ಮಾನವೀಯತೆಪೂರ್ಣ ವ್ಯವಹಾರ - ಸಂಪನ್ನ ವ್ಯಕ್ತಿಯಿಂದ ಪ್ರಚಾರ, ಪ್ರದರ್ಶನ ಹಾಗು ಪ್ರೇರಣೆ, ಸಮರ್ಥ ಸಮಾಜದಿಂದ ಮಾನವೀಯತೆಪೂರ್ಣ ಸಾಮಾಜಿಕ ಕಾರ್ಯಕ್ರಮ, ಸಂರಕ್ಷಣೆ ಹಾಗು ಪ್ರೋತ್ಸಾಹನೆ, ನೀತಿಪೂರ್ಣ ವ್ಯವಸ್ಥೆಯಿಂದಲೇ ಮಾನವೀಯತೆಯ ಸಮಗ್ರ ಸಂರಕ್ಷಣಾತ್ಮಕ ಲಕ್ಷ್ಯ ಪೂರ್ಣವಾಗುತ್ತದೆ.

137

ಮಾನವನ ಬಹಿರಂಗ ವ್ಯವಹಾರಕ್ಕಾಗಿ ಸಾಂಸ್ಕೃತಿಕ ಹಾಗು ಪ್ರಾಕೃತಿಕ ಭೇದದಿಂದ ಸಾಧನ ಉಪಲಬ್ಧವಾಗಿದೆ. ಮಾನವನಿಂದ ಮಾಡಲಾಗುವ ಕೃತಿಯ (ರೀತಿ ಸಹಿತ ಕಾರ್ಯ) ಪೂರ್ವ-ರೂಪವೇ (ವಿಚಾರದ ಸ್ಥಿತಿ) ಸಂಸ್ಕಾರ ಹಾಗು ಸಂಸ್ಕೃತಿಯ ಸ್ವರೂಪ.

ಮಾನವೀಯ ಸಂಸ್ಕೃತಿ ರೂಪ, ಬಲ, ಧನ, ಪದ ಹಾಗು ಅನುಭವ ಪ್ರಮಾಣ ರೂಪದಲ್ಲಿ ಪ್ರಸ್ತುತವಾಗುತ್ತದೆ.

ಪ್ರಾಕೃತಿಕ ಸಾಧನ ಖನಿಜ, ವನಸ್ಪತಿ ಹಾಗು ಮಾನವೇತರ ಜೀವದ ಜಾತಿ-ಭೇದಗಳಿಂದಿವೆ.

ಮಾನವ ಚೈತನ್ಯ ಅವಸ್ಥೆಯಲ್ಲಿ ಜಾಗೃತಿ ಕ್ರಮ ಅಥವಾ ಜಾಗೃತ ಇಕಾಯಿಯಾಗಿದ್ದಾನೆ, ಆದ್ದರಿಂದ ಇವನಿಗೆ ಪ್ರಾಕೃತಿಕ ಸಂಪದದ ಸದುಪಯೋಗ ರಕ್ಷಣೆ ಮಾಡುವ ಅಥವಾ ಭ್ರಮುವಶ ದುರುಪಯೋಗ ಮಾಡುವ ಅವಸರ ಪ್ರಾಪ್ತವಾಗಿದೆ. ಏಕೆಂದರೆ ವಿಕಸಿತರಿಂದ ಅವಿಕಸಿತರ ಉಪಯೋಗ, ಸದುಪಯೋಗ, ಪ್ರಯೋಜನ ಸಹಜ ಪ್ರಮಾಣಿತವಾಗುವ ಮತ್ತು ಭ್ರಮುವಶ ದುರುಪಯೋಗ ಮಾಡುವ ಸಂಭವನೀಯತೆಯಿರುತ್ತದೆ. ಇದರಲ್ಲಿ ಮಾನವ ಉಪಯೋಗ, ಸದುಪಯೋಗದಿಂದಲೇ ಸುಖಿಯಾಗುತ್ತಾನೆ.

ಪ್ರಾಕೃತಿಕ ಸಂಪದದ ಸದುಪಯೋಗದಿಂದ ಅಥವಾ ದುರುಪಯೋಗದಿಂದ ಋತು - ಸಂತುಲನ ಅಥವಾ ಅಸಂತುಲನ ಸಿದ್ಧವಾಗುತ್ತದೆ.

ಪ್ರತ್ಯೇಕ ಭೂಮಿಯ ಮೇಲೆ ಕಂಡುಬರುವ - ಋತುಮಾನ, ಶೀತಮಾನ, ತಾಪಮಾನ ಮತ್ತು ವರ್ಷಮಾನ - ಆ ಭೂಮಿಯ ಮೇಲೆ ಸ್ಥಿತ ಖನಿಜ ಹಾಗು ವನಸ್ಪತಿಯ ಅನುಪಾತದ ಮೇಲೆ ಅವಲಂಬಿಸಿದೆ, ಇದರ ನಿರ್ಣಯ ಪರೀಕ್ಷಣೆ ಹಾಗು ಸರ್ವೇಕ್ಷಣೆ-ಪೂರ್ವಕ ಗಣಿತದಿಂದ ಸಿದ್ಧವಾಗುತ್ತದೆ.

ಸಾಮಾಜಿಕ ಸಂತುಲನ ಅಥವಾ ಅಸಂತುಲನ ಸ್ವ-ಧನ / ಪರ-ಧನ, ಸ್ವ-ನಾರಿ/ಪರ-ನಾರಿ ಹಾಗು ದಯೆ/ದ್ವೇಷ - ಯುಕ್ತ ವಿಚಾರ ಸಹಿತ ಮಾಡಲಾಗುವ ವ್ಯವಹಾರದಿಂದ ಸಿದ್ಧವಾಗುತ್ತದೆ.

¤ ಸ್ವ-ಧನ - ಪ್ರತಿಫಲ, ಪಾರಿತೋಷಿಕ ಹಾಗು ಪುರಸ್ಕಾರದ ರೂಪದಲ್ಲಿ ಪ್ರಾಪ್ತ ಧನ 'ಸ್ವ-ಧನ' ಅನ್ಯಥಾ 'ಪರ-ಧನ' ಎಂದು ಸಂಜ್ಞೆ.

¤ ಸ್ವ-ನಾರಿ - ಭೌಗೋಳಿಕ ಸ್ಥಿತಿಯ ಅನುಸಾರ ಸಮಾಜ ನಿರ್ಣಿತ ನಿರ್ಣಯದ

138

ಅನುಸಾರಾವೇ 'ಸ್ವ-ನಾರಿ' ಹಾಗು 'ಸ್ವ-ಪುರುಷ' ಸಂಜ್ಞೆ, ಅನ್ಯಥಾ 'ಪರ-ನಾರಿ / ಪರ-ಪುರುಷ' ಸಂಜ್ಞೆ.

¤ ದಯೆ - ಮತ್ತವರ ವಿಕಾಸಕ್ಕೆ ಯಥಾ-ಸಂಭವ ಸಹಾಯಕವಾಗಿರುವುದು

ತಥಾ ಅವರ ವಿಕಾಸದಲ್ಲಿ ಹಸ್ತಕ್ಷೇಪ ಮಾಡದಿರುವುದೇ 'ದಯೆ'. ಇದರ ವಿವರೀತ ಆಚರಣಕ್ಕೆ 'ದ್ವೇಷ' ಎಂದು ಸಂಜ್ಞೆ.

ಜನ್ಮ-ಸಿದ್ಧ ಅಧಿಕಾರ, ಪ್ರದತ್ತ ಅಧಿಕಾರ ಹಾಗು ಸಮಯೋಚಿತ ಅಧಿಕಾರ ಭೇದದಿಂದ ಮಾನವ ಕರ್ತವ್ಯ-ಪಾಲನೆಗಾಗಿ ಅಧಿಕಾರ ಪ್ರಾಪ್ತಿಸುತ್ತಾನೆ.

ಜನ್ಮ-ಸಿದ್ಧ ಅಧಿಕಾರ ಸಂಬಂಧದ ಅರ್ಥದಲ್ಲಿ, ಪ್ರದತ್ತ ಅಧಿಕಾರ ವ್ಯವಸ್ಥೆ-ಗತ ಸೀಮೆಯ ಅರ್ಥದಲ್ಲಿ ಹಾಗು ಸಮಯೋಚಿತ ಅಧಿಕಾರ ಸಂಪರ್ಕದ ಅರ್ಥದಲ್ಲಿದೆ.

ಸಂಬಂಧ - ಮಾತಾ-ಪಿತ ಮತ್ತು ಪುತ್ರ-ಪುತ್ರಿ, ಸಹೋದರ-ಸಹೋದರಿ, ಪತಿ-ಪತ್ನಿ, ಸಂಗಡಿಗ-ಸಹಯೋಗಿ ಗುರು-ಶಿಷ್ಯ ಹಾಗು ಮಿತ್ರನ ರೂಪದಲ್ಲಿದೆ.

ಪ್ರದತ್ತ ಅಧಿಕಾರ - ಕುಟುಂಬ, ಸಮಾಜ ಹಾಗು ವ್ಯವಸ್ಥೆ-ದತ್ತ ಭೇದದಿಂದಿದೆ.

ಸಮಯೋಚಿತ ಅಧಿಕಾರ ಸಮಯ ಹಾಗು ಸಮುಚಿತ ಮಿಲನದ ಅನುಸಾರ ವ್ಯವಹಾರದಲ್ಲಿ ಸಂಪನ್ನವಾಗುತ್ತದೆ.

ಕುಟುಂಬ-ದತ್ತ ಅಧಿಕಾರ ಕುಟುಂಬದಲ್ಲಿ ಕರ್ತವ್ಯಗಳ - ದಾಯಿತ್ವಗಳ ಪಾಲನೆ, ಚಾರಿತ್ರ್ಯ-ಸಂರಕ್ಷಣೆ, ಪ್ರಾಣ-ಪೋಷಣೆ ಹಾಗು ಅರ್ಥೋಪಾರ್ಜನೆಯ ಲಕ್ಷ್ಯ ಭೇದದಿಂದಿದೆ.

ಸಮಾಜ - ದತ್ತ ಅಧಿಕಾರ ಸಮಾಜ - ದತ್ತ ಕರ್ತವ್ಯಗಳ ಪಾಲನೆ, ಗಾಂಭೀರ್ಯಪೂರ್ಣ ವ್ಯಕ್ತಿತ್ವ ಹಾಗು ಸಾರ್ಥಕ ಶಾಸ್ತ್ರ ಪ್ರಚಾರ ಹಾಗು ಸಿದ್ಧಾಂತಗಳ ಶೋದದ ಆಶಯ ಭೇದದಿಂದಿದೆ.

ವ್ಯವಸ್ಥೆ-ದತ್ತ ಅಧಿಕಾರ ವ್ಯವಸ್ಥೆ-ದತ್ತ ಕರ್ತವ್ಯಗಳ ಪಾಲನೆ, ಶಾಸ್ತ್ರ ಸಿದ್ಧಾಂತಗಳ ಕುಶಲತೆ, ನಿಪುಣತೆ, ಪಾಂಡಿತ್ಯಪೂರ್ವಕ ಅಧ್ಯಯನ, ವ್ಯವಹಾರ ಹಾಗು ಕರ್ಮಾಭ್ಯಾಸದಿಂದ ಪರಿಪೂರ್ಣತೆ ಮತ್ತು ಅಧಿಕಾರ ಪೂರ್ಣ ವ್ಯಕ್ತಿತ್ವದ ಮೇಲೆ ಅವಲಂಬಿಸಿದೆ, ಇದರಿಂದ ಸಫಲತೆಯಿದೆ, ಅನ್ಯಥಾ ಅಸಫಲತೆಯಿದೆ.

ಮಾನವನಲ್ಲಿ ಮಾತ್ರ ಸುಖದ ಆಶೆ ಅಪರಿವರ್ತನೀಯವಾಗಿದೆ, ಇದರ ಅಪೇಕ್ಷೆಯಲ್ಲಿಯೇ ಚೇತನ ವಿಕಾಸ ಮೌಲ್ಯ ಶಿಕ್ಷಣದಿಂದ ವಿಧಿ ಹಾಗು ನಿಷೇಧ ಸ್ವೀಕರಿಸಲಾಗುತ್ತದೆ.

139

ಸುಖ ಹಾಗು ದುಃಖ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ವ್ಯವಹಾರ - ನೀತಿಯ ಮೇಲೆ ಆಧಾರಿತವಾಗಿದೆ.

ಮಾನವನಲ್ಲಿ ವ್ಯವಹಾರ-ನೀತಿಯ ನಿರ್ವಾಹಕ್ಕೆ ಆರು ದೃಷ್ಟಿಗಳು ಪೂರ್ವದಲ್ಲಿ ವರ್ಣಿಸಲಾಗಿದೆ, ಇದರಲ್ಲಿ ಮಾನವೀಯ - ದೃಷ್ಟಿ - ಸಂಪನ್ನ ವ್ಯವಹಾರದಲ್ಲಿಯೇ ಏಕರಿಂದ ಅನೇಕ ಸುಖಿಯಾಗಿದ್ದಾರೆ.

ಭ್ರಮಿತ ಮಾನವ ಕರ್ಮ ಮಾಡುವ ಸಮಯ ಸ್ವತಂತ್ರ ಮತ್ತು ಫಲ ಭೋಗಿಸುವ ಸಮಯ ಪರತಂತ್ರವಾಗಿರುವ ಕಾರಣ ಅಮಾನವೀಯ ದೃಷ್ಟಿಯಿಂದ ಭಯ ಹಾಗು ಪ್ರಲೋಭನೆಯಿಂದ ವ್ಯವಹಾರ ಕಾರ್ಯ ಮಾಡುತ್ತಾನೆ, ಫಲತಃ ದುಃಖ ಭೋಗಿಸುತ್ತಾನೆ, ಮತ್ತು ಸ್ವಯಂವಿನ ಜಾಗೃತಿಯನ್ನು ಅವರೊದಿಸುತ್ತಾನೆ.

ಮಾನವ ಈ ಸೃಷ್ಟಿಯಲ್ಲಿ ಸರ್ವೋಚ್ಚ ವಿಕಸಿತ, ಜಾಗೃತಿಶೀಲ ಹಾಗು ಜಾಗೃತ ರೂಪದಲ್ಲಿ ಪ್ರಮಾಣಿತವಾಗುವ ಯೋಗ್ಯ ಇಕಾಯಿಯಾಗಿದ್ದಾನೆ. ಆದ್ದರಿಂದ ಮಾನವನಲ್ಲಿ ಮೂರು ಸೃಷ್ಟಿ ಯಥ ಪದಾರ್ಥಾವಸ್ಥೆ, ಪ್ರಾಣಾವಸ್ಥೆ ಹಾಗು ಜೀವಾವಸ್ಥೆಯ ಗುಣ, ಸ್ವಭಾವ ಹಾಗು ಧರ್ಮ ಸಮಾವಿಷ್ಟವಾಗಿಯೇಯಿರುತ್ತದೆ.

ಮಾನವನು ಬೌದ್ಧಿಕ ಸಮಾಧಾನ ಹಾಗು ಭೌತಿಕ ಸಮೃದ್ಧಿಯಿಂದ ಸುಖಿಯಾಗುವ ಕಾಮನೆ ಮಾಡಿದ್ದಾನೆ.

ಭೌತಿಕ ಸಮೃದ್ಧಿ ವೈಜ್ಞಾನಿಕ ನಿಯಮಗಳ ಅಧ್ಯಯನ ಮತ್ತು ತದಾನುಸಾರ ಕರ್ಮಾಭ್ಯಾಸದಿಂದಲೇ ಸಂಭವ ಹಾಗು ಬೌದ್ಧಿಕ ಸಮಾಧಾನ ವಿವೇಕಪೂರ್ಣ ನಿಯಮಗಳ ಅಧ್ಯಯನ ಹಾಗು ತದಾನುಸಾರ ನಿಯಂತ್ರಣದಿಂದಲೇ ಸಂಭವ.

ಸ್ವಸ್ಥ ವ್ಯವಹಾರಕ್ಕೆ ಸ್ವಸ್ಥ ಶರೀರದ ಮಹತ್ವಪೂರ್ಣ ಸ್ಥಾನವಿದೆ, ಇದು ಪ್ರಾಣದ ವಿಧಿವತ ನಿಯಂತ್ರಣದಿಂದಲೇ ಸಂಭವ.

ಆಹಾರದಿಂದ ಪ್ರಾಣ-ಪೋಷಣೆ, ಉತ್ಪಾದನೆಯಿಂದ ಸಮೃದ್ಧಿ, ಸಂಯಮದಿಂದ ಅಪವ್ಯಯದ ನಿರೋಧ, ವೈಜ್ಞಾನಿಕ ಅರಿವಿನಿಂದ ಭೌತಿಕ ದರ್ಶನ, ವಿವೇಕಾತ್ಮಕ ಅರಿವಿನಿಂದ ಬೌದ್ಧಿಕ ದರ್ಶನ, ವ್ಯವಹಾರಿಕ ಅರಿವಿನಿಂದ ಸಮಾಜ ದರ್ಶನ, ಆವರ್ತನಶೀಲ ಅರ್ಥಶಾಸ್ತ್ರದ ಅರಿವಿನಿಂದ ಅರ್ಥವ್ಯವಸ್ಥೆಯ ದರ್ಶನ ಹಾಗು ಪೂರ್ಣ ಸಮಾಧಾನದಿಂದ ವ್ಯಾಪಕತೆಯಲ್ಲಿ ಅನುಭೂತಿ ಹಾಗು ದರ್ಶನವಿದೆ.

140

ಪ್ರಾಣ ಒಂದು ವಾಯು ವಿಶೇಷ, ಇದರಿಂದ ಹೃದಯ, ಕ್ರಿಯೆಗೆ ಪ್ರೇರಣೆಯನ್ನು ಪಡೆಯುತ್ತದೆ. ವಾಯು ಒಂದಕ್ಕಿಂತ ಅಧಿಕ ವಿರಳ ಪದಾರ್ಥಗಳ ಉತ್ಸವ ಅಥವಾ ಸಹ-ಅಸ್ತಿತ್ವದಿಂದ ಉತ್ಸವ, ವೇಗ ಹಾಗು ತರಂಗ ಸಹಿತ ಪದಾರ್ಥ - ರಾಶಿ. ಪ್ರಾಣದ ಐದು ಭೇದಗಳಿವೆ - (೧) ಪ್ರಾಣ, (೨) ಅಪಾನ, (೩) ವ್ಯಾನ, (೪) ಉದಾನ ಮತ್ತು (೫) ಸಮಾನ.

ಪ್ರಾಣವಾಯು ಶರೀರ ಹಾಗು ಪ್ರಾಣಕೋಶಕ್ಕೆ ಪ್ರೇರಣೆಯಿಂದ ಬಲ-ಪೋಷಕ, ಅಪಾನ ವಾಯು ಅನಾವಶ್ಯಕ ಹಾಗು ಬಲ-ಶೋಷಕ, ವ್ಯಾನ ವಾಯು ಶರೀರಕ್ಕಾಗಿ ಉಪಯೋಗಾತ್ಮಕ, ಉದಾನವಾಯು ಶರೀರಕ್ಕಾಗಿ ಸಂಚಾಲನಾತ್ಮಕ ಹಾಗು ಸಮಾನವಾಯು ಶರೀರಕ್ಕಾಗಿ ವಿಕಾಸಾತ್ಮಕವಾಗಿದೆ. ಈ ಐದು ವಾಯುವಿನ ಸಂಕುಲನ ಸಂಬಂಧಿತ ಇಕಾಯಿಯ ವಿಚಾರ, ಆಹಾರ, ವಿಹಾರ ಹಾಗು ವ್ಯವಹಾರದ ರೀತಿ, ನೀತಿ ಹಾಗು ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ.

ಆಹಾರ ಅನ್ನ ಮತ್ತು ಔಷಧಿಯ ರೂಪದಲ್ಲಿದೆ.

ಆಹಾರ - ಗ್ರಹಿಸಲು ಯೋಗ್ಯ ತತ್ವ ಯಾವುದರಲ್ಲಿದೆಯೋ, ಅದಕ್ಕೆ 'ಆಹಾರ' ಎಂದು ಸಂಜ್ಞೆ.

ಔಷಧಿ - ಶಾರೀರಿಕ ಹಾಗು ಮಾನಸಿಕ ವಿಕೃತಿಗೆ (ರೋಗ) ನಿರಾಕರಣೆಗೆ (ಉಪಚಾರ) ನಿಯುಕ್ತ ಪದಾರ್ಥಕ್ಕೆ 'ಔಷಧಿ' ಎಂದು ಸಂಜ್ಞೆ.

ಅನ್ನ - ಶಾರೀರಿಕ ಪೋಷಣೆ ಹಾಗು ಪರಿವರ್ಧನೆಗೆ ನಿಯುಕ್ತ ಪದಾರ್ಥಕ್ಕೆ 'ಅನ್ನ' ಎಂದು ಸಂಜ್ಞೆ.

ಪ್ರಾಪ್ತ ಕರ್ತವ್ಯ; ವಂಭಿತ, ಪ್ರೇರಿತ ಹಾಗು ಸೂಚಿತ ಭೇದದಿಂದಿದೆ.

ಪ್ರಾಪ್ತ ಕರ್ತವ್ಯದ ನಿಶ್ಚಯದಿಂದ ಮಾಡಲಾಗುವ ಮನನ, ಚಿಂತನ, ವಿಚಾರ, ಚೇಷ್ಟೆ, ಪ್ರಯೋಗ, ಪ್ರಯಾಸ, ವ್ಯವಸಾಯ ಹಾಗು ಅನುಸಂಧಾನ ಕ್ರಿಯೆಯೇ 'ನಿಷ್ಠೆ'. ಅನ್ಯ ಶಬ್ದಗಳಲ್ಲಿ ನಿಶ್ಚಿತ ಕ್ರಿಯೆಯ ಪೂರ್ಣತೆಗಾಗಿ ಕಂಡುಬರುವ ವೈಚಾರಿಕ ಹಾಗು ಶಾರೀರಿಕ ಯೋಗಕ್ಕೆ ನಿರಂತರತೆಯೇ ನಿಷ್ಠೆ.

ನಿಷ್ಠೆಯ ಫಲಸ್ವರೂಪವೇ ಸಾಮಾನ್ಯಾಕಾಂಕ್ಷೆ, ಮಹತ್ವಾಕಾಂಕ್ಷೆ ಸಂಬಂಧಿ ವಸ್ತುಗಳು; ವ್ಯಕ್ತಿಯ ರೂಪದಲ್ಲಿ ಸಮಾಧಾನ ಹಾಗು ಅನುಭೂತಿಯ ಅರ್ಥದಲ್ಲಿ ಉಪಲಬ್ಧತೆಗಳಿವೆ. ಸಾಮಾನ್ಯಾಕಾಂಕ್ಷೆ ವಸ್ತುಗಳೇ ಧನ. ಧನ ಸಮಾಜದ ಸಂಪತ್ತಿ. ಸಂಪತ್ತಿ ಜಡ ಪಕ್ಷದ

141

ಹಾಗು ಅದಿರುವುದು ಜಡ ಪಕ್ಷಕ್ಕಾಗಿಯೇ ಹಾಗು ಸಮಾಧಾನ ಮತ್ತು ಅನುಭೂತಿ ಚೈತನ್ಯವು ಹಾಗು ಚೈತನ್ಯಕ್ಕಾಗಿಯೆಯಿರುವುದು.

* ಧನ ಸಮಾಜದ ಸಂಪತ್ತಿಯ ತಾತ್ಪರ್ಯ - ಸಾಮಾನ್ಯ ಆಕಾಂಕ್ಷೆ ಮತ್ತು ಮಹತ್ವಾಕಾಂಕ್ಷೆ ಸಂಬಂಧಿ ವಸ್ತುಗಳಿರುವುದು ಸ್ಪಷ್ಟವಾಗಿದೆ. ಇದೇ ಉಪಯೋಗ, ಸದುಪಯೋಗ, ಪ್ರಯೋಜನಶೀಲವಾಗಿರಲು ಸಂಪೂರ್ಣ ದ್ರವ್ಯ. ಉಪಯೋಗ ಪರಸ್ಪರತೆಯಲ್ಲಾಗುತ್ತದೆ. ಒಂದಕ್ಕಿಂತ ಅಧಿಕ ಏಕತ್ರಿತವಾಗದೆ ಪರಸ್ಪರತೆಯಿಲ್ಲ. ಇದೇ ಒಂದಕ್ಕಿಂತ ಅಧಿಕವಿರುವುದೇ ಪರಿವಾರ ಅಥವಾ ಸಮಾಜ. ಇದೇ ವಿಶಾಲವಾಗುತ್ತಾ ಸಂಪೂರ್ಣ ಮಾನವ ಒಂದೇ ಇತಾಯಿಯ ರೂಪದಲ್ಲಾಗುವುದು ಅಖಂಡ ಸಮಾಜ. ಈ ರೀತಿಯಲ್ಲಿ ಅಖಂಡ ಸಮಾಜದ ಅಂಗಭೂತ ಒಂದು ಪರಿವಾರ ಹಾಗು ಒಂದು ಪರಿವಾರದ ಅಂಗಭೂತ ಒಂದು ವ್ಯಕ್ತಿಯಿರುವುದು ಕಂಡುಬರುತ್ತದೆ. ಯಾವುದೇ ವಸ್ತುವಿನ ಉತ್ಪಾದನೆ ಮತ್ತು ಉಪಯೋಗ, ಸದುಪಯೋಗ ಕಾರ್ಯದಲ್ಲಿ ಒಬ್ಬನಿಗಿಂತ ಅಧಿಕ ವ್ಯಕ್ತಿಯಿರುವುದು ಅವಶ್ಯಕ. ಈ ರೀತಿಯಲ್ಲಿ ಸಂಪೂರ್ಣ ಧನ ಸಮಾಜದಲ್ಲಿ, ಸಮಾಜದಿಂದಿದೆ, ಸಮಾಜಕ್ಕಾಗಿದೆ. ಭ್ರಮೆ ವಶವೇ ನಿನ್ನದು, ನನ್ನದು, ವೈಯಕ್ತಿಕ, ಏಕಾಂತಿಕ ಇವೆಲ್ಲಾ ಪರಿಕಲ್ಪನೆಗಳಲ್ಲಿ ಮಾನವ ಸುಖವನ್ನು ಪಡೆಯಲು ಕಲ್ಪನೆ ಹಾಗು ಪ್ರಯಾಸ ಮಾಡುತ್ತಾನೆ. ಇದು ಸಾರ್ಥಕವಾಗಲಿಲ್ಲ. ಇದನ್ನು ಪ್ರತ್ಯೇಕ ವಿವೇಕಶೀಲ ವ್ಯಕ್ತಿ ಸರ್ವೇಕ್ಷಣೆ ಮಾಡಬಲ್ಲ.

ಕಾರಣ, ಗುಣ ಮತ್ತು ಗಣಿತಾನುಕ್ರಮ ನ್ಯಾಯದಿಂದ ಪ್ರಾಪ್ತ ನಿರ್ಣಯಕ್ಕೆ 'ಸಿದ್ಧಾಂತ' ಎಂದು ಸಂಜ್ಞೆ ಹಾಗು ಸಿದ್ಧಾಂತದಿಂದಲೇ ಯಾವುದೇ ಕ್ರಿಯೆಯ ಬೋಧವಾಗುತ್ತದೆ.

ಕಾಲ, ವಿಸ್ತಾರ ಹಾಗು ರಚನೆ - ಭೇದದ ಗಣನೆ ಗಣಿತದಿಂದಿದೆ.

ಸಮ, ವಿಷಮ ಹಾಗು ಮಧ್ಯಸ್ಥ ಭೇದದಿಂದ ಗುಣದ ಪ್ರಕ್ರಿಯೆಯಿದೆ.

ಘಟನೆಯ ಪೂರ್ವ - ರೂಪವನ್ನು 'ಸಾಪೇಕ್ಷ-ಕಾರಣ' ಎಂದು ಸಂಜ್ಞೆ.

□ ಕಾಲ - ಕ್ರಿಯೆಯ ಅವಧಿಗೆ 'ಕಾಲ' ಎಂದು ಸಂಜ್ಞೆ.

□ ವಿಸ್ತಾರ - ರಚನೆಯ ಅವಧಿಗೆ 'ವಿಸ್ತಾರ' ಎಂದು ಸಂಜ್ಞೆ.

□ ರಚನೆ - ಪದಾರ್ಥದ ಅವಧಿಗೆ 'ರಚನೆ ಅಥವಾ ವಸ್ತು' ಎಂದು ಸಂಜ್ಞೆ, ಇದರ ಗಣನೆ ಮಾಡಲಾಗುತ್ತದೆ.

□ ಸಮ - ಉದ್ಭವವಾದಿ ಗುಣಗಳಿಗೆ 'ಸಮ' ಎಂದು ಸಂಜ್ಞೆ.

142

¤ ವಿಷಮ - ಪ್ರಳಯವಾದಿ ಗುಣಗಳಿಗೆ 'ವಿಷಮ' ಎಂದು ಸಂಜ್ಞೆ.

¤ ಮಧ್ಯಸ್ಥ - ವಿಭವವಾದಿ ಗುಣಗಳಿಗೆ 'ಮಧ್ಯಸ್ಥ' ಎಂದು ಸಂಜ್ಞೆ.

* ಸಮ, ವಿಷಮ ಹಾಗು ಮಧ್ಯಸ್ಥ ಗುಣಗಳಿಗೆ ಕ್ರಮಶಃ ರಜೋಗುಣ, ತಮೋಗುಣ ಹಾಗು ಸತೋಗುಣ ಸಂಜ್ಞೆಯಿಂದಲೂ ತಿಳಿದುಬರುತ್ತದೆ.

ಸಂಪೂರ್ಣ ಪರಮಾಣುಗಳಲ್ಲಿ ಕಂಡುಬರುವ ಕ್ರಿಯೆಗಾಗಿ ಪ್ರಾಪ್ತ ಉರ್ಜಾ ರೂಪಿ ಸತ್ತಾವಿಗೆ ನಿರಪೇಕ್ಷ ಕಾರಣ ಎಂದು ಸಂಜ್ಞೆ. ನಿರಪೇಕ್ಷ ಸತ್ತಾವಿನ ತಾತ್ಪರ್ಯ ಯಾವುದರ ಉತ್ಪತ್ತಿ ಕ್ರಮಕ್ಕೆ ಕಾರಣವಿಲ್ಲವೋ ಹಾಗು ನಿತ್ಯ ಸ್ಥಿತಿಯಲ್ಲಿದೆಯೋ.

ಪರಮಾಣು - ವ್ಯೂಹದಲ್ಲಿ ಪರಸ್ಪರ ಪೂರಕತೆಯಿಂದಿರುವ ಪ್ರಭಾವ - ವಿಶೇಷ, ಕ್ರಿಯೆ, ಪ್ರತಿಕ್ರಿಯೆ ಹಾಗು ಪರಿಪಾಕಕ್ಕೆ 'ಸಾಪೇಕ್ಷ ಕಾರಣ' ಎಂದು ಸಂಜ್ಞೆ.

ಹಲವಾರು ಅಣು - ಪರಮಾಣುಗಳಿಂದ ಸಂಘಟಿತ ಪಿಂಡ ಹಾಗು ಅದರ ಕ್ರಿಯೆಗೆ 'ಸ್ಥೂಲ-ಕ್ರಿಯೆ' ಮತ್ತು ಪರಮಾಣಿಕ ಕ್ರಿಯೆಗೆ 'ಸೂಕ್ಷ್ಮ - ಕ್ರಿಯೆಯೆಂದು ಸಂಜ್ಞೆ.

ಗತಿ, ಕಂಪನ ಮತ್ತು ತರಂಗ ಭೇದದಿಂದ ಸೂಕ್ಷ್ಮ ಗತಿಗಳು ಹಾಗು ಕ್ರಿಯೆಗಳಿವೆ.

ಇಕಾಯಿಯಲ್ಲಿ ಕಂಪನ ಕ್ರಿಯೆ ಹೆಚ್ಚಾಗುವುದೇ ವಿಕಾಸದ ಘಟನೆ, ಹಾಗು ಇದರ ವಿವರೀತದಲ್ಲಿ ಹಾಸದ ಘಟನೆಯಿದೆ.

ಚೈತನ್ಯ ಇಕಾಯಿಯಲ್ಲಿ ಕಂಪನದ ಅಧಿಕತೆಯೇ ವಿಶೇಷತೆ.

ಜ್ಞಾನದಲ್ಲಿ ಪಾರದರ್ಶಕತೆಯ ಅಂಶಾನುಸಾರ ಚೈತನ್ಯ ಇಕಾಯಿ ಭ್ರಾಂತ, ಭ್ರಾಂತಾಭ್ರಾಂತ ಹಾಗು ನಿರ್ಭ್ರಾಂತ ಸ್ಥಿತಿಯಲ್ಲಿದೆ.

ಜಡತೆಯಲ್ಲಿ ಪಾರದರ್ಶಕತೆಯಿಂದ ಅಂಧಕಾರದ ಅಭಾವ, ಪಾರಭಾಸಿಕತೆಯಿಂದ ಅಂಧಕಾರದ ಆಂಶಿಕತೆಯಲ್ಲಿ ಅಭಾವ ಹಾಗು ಅಪಾರದರ್ಶಕತೆಯಿಂದ ಅಂಧಕಾರವಿದೆ. ಅಂಧಕಾರ ಮೂಲತಃ ನೆರಳೇ.

ಚೈತನ್ಯ ಇಕಾಯಿಯಲ್ಲಿ ಜ್ಞಾನ ಪಾರದರ್ಶಿಯಾಗಿರುವ ಫಲಸ್ವರೂಪ ಅಜ್ಞಾನದ ಅಭಾವವಾಗುತ್ತದೆ, ಇದರಿಂದ ಯಥಾರ್ಥ ದರ್ಶನವಾಗುತ್ತದೆ, ಹಾಗು ಸರ್ವತ್ರ ಜ್ಞಾನವೇ ಪ್ರತಿಷ್ಠಿತ ಪರಿಲಕ್ಷಿತವಾಗುತ್ತದೆ. ಚೈತನ್ಯ ಇಕಾಯಿಯ ವಿಕಾಸ ಹಾಗು ಜಾಗೃತಿಯ ಈ ಸೀಮೆ 'ನಿರ್ಭ್ರಾಂತ ಅವಸ್ಥೆ'.

ಭ್ರಮಿತ ಚೈತನ್ಯ ಇಕಾಯಿ ಜ್ಞಾನದಲ್ಲಿ ಪಾರಭಾಸಿಯಾಗುವ ಫಲಸ್ವರೂಪ ಅಜ್ಞಾನದ ಪೂರ್ಣ ಅಭಾವವಿರುವುದಿಲ್ಲ, ಆದರೆ ಇದರ ಸಹಿತ ಜ್ಞಾನದ ಭಾಸವಾಗಲಾರಂಭಿಸುತ್ತದೆ,

143

ಇದರಿಂದ ಕೆಲವು ಸಲ ಯಥಾರ್ಥದ ಭಾಸವೂ ಆಗುತ್ತದೆ, ಹಾಗು ಕೆಲವು ಸಲ ಅತಿವ್ಯಾಪ್ತಿ, ಅವ್ಯಾಪ್ತಿ ಅಥವಾ ಅನಾವ್ಯಾಪ್ತಿ ದೋಷದ ಸಹಿತ ದರ್ಶನವಾಗಲಾರಂಭಿಸುತ್ತದೆ. ಇದೇ 'ಭ್ರಾಂತ' ಅವಸ್ಥೆ.

ಅನುಭವ ಸಂಪನ್ನತೆಯ ಅನಂತರ ವಿತ್ತೇಷಣೆ, ಪುತ್ರೇಷಣೆಯಲ್ಲಿ ಬಾಳುವ ತನಕ ಭ್ರಾಂತಾಭ್ರಾಂತ ಅವಸ್ಥೆಯಿದೆ.

ಭ್ರಮಿತ ಚೈತನ್ಯ ಇಕಾಯಿಯಲ್ಲಿ ಜ್ಞಾನದ ಅಪಾರದರ್ಶಿಯಾಗುವ ಫಲಸ್ವರೂಪವೇ ಅಜ್ಞಾನ ವಿವಷತೆಯ ರೂಪದಲ್ಲಿರುತ್ತದೆ, ಅರ್ಥಾತ್ ಅತಿವ್ಯಾಪ್ತಿ, ಅವ್ಯಾಪ್ತಿ ಅಥವಾ ಅನಾವ್ಯಾಪ್ತಿ ದೋಷ ಸಹಿತವೇ ಸ್ವೀಕೃತಿಯಾಗುತ್ತದೆ, ಇದೇ 'ಭ್ರಾಂತ' ಅವಸ್ಥೆ.

¤ ಅತಿವ್ಯಾಪ್ತಿ - ಯಾವುದು ಹೇಗಿದೆಯೋ, ಅದಕ್ಕಿಂತ ಅಧಿಕ ಅರಿತುಕೊಳ್ಳುವುದು.

¤ ಅವ್ಯಾಪ್ತಿ - ಯಾವುದು ಹೇಗಿದೆಯೋ, ಅದನ್ನು ಹಾಗೆಯೇ ಅರಿತುಕೊಳ್ಳದಿರುವುದು.

¤ ಅನಾವ್ಯಾಪ್ತಿ - ಯಾವುದು ಹೇಗಿದೆಯೋ, ಅದನ್ನು ಅದಕ್ಕಿಂತ ಕಡಿಮೆ ಅರಿತುಕೊಳ್ಳುವುದು.

ಜಾಗೃತಿಯ ಪರಿಪೂರ್ಣತೆ ಪಾರದರ್ಶಕತೆಯಿಂದಲೇ ಸಿದ್ಧವಾಗುತ್ತದೆ. ಮಾನವನಿಗೆ ಇದು ಜಾಗೃತಿ ಜ್ಞಾನದ ಪಾರದರ್ಶಕತೆಯಿಂದ ಸಿದ್ಧವಾಗುತ್ತದೆ.

ಆಕಾರ, ಪ್ರಕಾರ, ಶ್ವಾಸ, ಪ್ರಶ್ನಾಸ, ಆಸ್ವಾದನೆ ಹಾಗು ಉತ್ಪಾದನೆಗೆ ಏಕ-ಸೂತ್ರಾತ್ಮಕ ಹಾಗು ವಿಶ್ಲೇಷಣಾತ್ಮಕ ಭೇದದಿಂದಲೇ ಕ್ರಿಯೆಗಳು ಪರಿಲಕ್ಷಿತವಾಗಿವೆ.

ಭ್ರಮಿತ ಮಾನವನಲ್ಲಿ ಮನಾಕೃತಿ ಹಾಗು ಕಲ್ಪನಾತ್ಮಕ ಗತಿಯ ಸಮ್ಮಿಲಿತ ಕ್ರಿಯೆ 'ಆಸಕ್ತಿ', ಇದರಲ್ಲಿ ಆಕರ್ಷಣೆ ಅಥವಾ ಪ್ರತಿಕರ್ಷಣೆ ಸೇರಿರುತ್ತದೆ.

ಜಡ - ಚೈತನ್ಯ ಪರಮಾಣುವಿನಲ್ಲಿ ಆಕರ್ಷಣೆ ಹಾಗು ಪ್ರತ್ಯಾಕರ್ಷಣೆಯಿಂದ ಕಂಪನವಿದೆ. ಜಡ ಪ್ರಕೃತಿಯಲ್ಲಿ ಆಕರ್ಷಣೆ ಘಟನ ಮತ್ತು ಪರಮಾಣು ಸಂಘಟನೆ ಮತ್ತು ಅಣು ರಚನೆಯ ರೂಪದಲ್ಲಿ ಕಂಡುಬರುತ್ತದೆ. ಆಕರ್ಷಣೆ - ಪ್ರತ್ಯಾಕರ್ಷಣೆ ವಿಧಿಯಿಂದ ಕಂಪನವಾಗುವುದು ಸ್ವಾಭಾವಿಕ. ಭ್ರಮಿತ ಚೈತನ್ಯ ಪ್ರಕೃತಿಯಲ್ಲಿ ಆಕರ್ಷಣೆ ಪ್ರಲೋಭನೆಯ ರೂಪದಲ್ಲಿ, ಪ್ರತ್ಯಾಕರ್ಷಣೆ ಭಯದ ರೂಪದಲ್ಲಾಗುತ್ತದೆ. ಜಾಗೃತ ಜೀವನದಲ್ಲಿ ಆಕರ್ಷಣೆ ಸಮಾಧಾನದ ಅರ್ಥದಲ್ಲಿ ಮತ್ತು ವಿಕರ್ಷಣೆ ಸಮಸ್ಯೆಯ ಸಹಿತವಾಗುತ್ತದೆ. ಆಕರ್ಷಣೆ ಪ್ರತ್ಯಾಕರ್ಷಣೆ ಕ್ರಿಯೆಯ ಸಹಿತ ಜೀವನದಲ್ಲಿ ಕಂಪನಾತ್ಮಕ

144

ಗತಿ ವರ್ತಮಾನವಾಗಿಯೆಯಿರುತ್ತದೆ. ಜೀವನ ಪರಮಾಣುವಿನಲ್ಲಿ ಕಂಪನಾತ್ಮಕ ಗತಿ ಐದು ಅಕ್ಷಯ ಬಲ ಹಾಗು ಶಕ್ತಿಯ ರೂಪದಲ್ಲಿ ಪ್ರಕಟವಾಗಿರುತ್ತದೆ.

ಪ್ರತ್ಯಾಕರ್ಷಣೆ ಮತ್ತು ಆಕರ್ಷಣೆಯಿಂದ ವರ್ತುಲಾತ್ಮಕ ಗತಿಯಿದೆ. ಜಡ-ಚೈತನ್ಯ ಪರಮಾಣುಗಳಲ್ಲಿ ಪರಿವೇಶಗಳಲ್ಲಿ ವರ್ತುಲಾತ್ಮಕ ಗತಿಯಿರುತ್ತದೆ. ಮಧ್ಯಾಂಶದಲ್ಲಿ ಕೇವಲ ಘುರ್ಣನ ಗತಿಯಿರುತ್ತದೆ.

ಮಸ್ತಿಷ್ಯದ ಮೇಲೆ ಕಂಪನ-ಪ್ರದತ್ತ ತರಂಗದಿಂದ ಜ್ಞಾನದ ಪ್ರಕಟಣೆ ಜ್ಞಾನೇಂದ್ರಿಯಗಳಿಂದಾಗುತ್ತದೆ.

ಜೀವನದಿಂದ ಸಂಕೇತ ರೂಪಿ ಗತಿ-ಪ್ರದತ್ತ ತರಂಗದಿಂದ ಸಂವೇದನಶೀಲತೆ ಮತ್ತು ಸಂಜ್ಞಾನಶೀಲತೆಯು ವ್ಯವಹಾರದಲ್ಲಿ ಸ್ಪಷ್ಟವಾಗುತ್ತದೆ.

ಪ್ರಾಣ ಮತ್ತು ಮನದ ಸಂಯುಕ್ತ (ವಿವಷತೆಪೂರ್ಣ ಆಘಾತ) ಪ್ರೇರಣೆ ರೂಪಿ ಕಂಪನದಿಂದ ಸಂವೇಗವಿದೆ, ಅಥವಾ ಸಂವೇಗ ಮನದ ಪ್ರಭಾವದಿಂದ ಸಂಪನ್ನ ಪ್ರಾಣವಾಯು - ತರಂಗ, ಇದರಿಂದ ಇಂದ್ರಿಯ-ಜ್ಞಾನ ಅಥವಾ ಕ್ರಿಯೆಗಳು ಸಂಪನ್ನವಾಗುತ್ತದೆ ಎಂದೂ ಅರಿತುಕೊಳ್ಳಬಹುದು.

ಪ್ರತ್ಯೇಕ ಜಡ ಕ್ರಿಯೆಯಿಂದ ಪ್ರಾಪ್ತ ಸ್ವೀಕೃತಿ ಪಕ್ಷ, ಮನದಾಗಿದ್ದು, ಇದಕ್ಕೆ ಕಾತರದಿಂದ ಮಾಡಲಾಗುವ ಕ್ರಿಯೆಯ ಬದಲಾಗಿ ಪಡೆದಿರುವ ಉಪಲಬ್ಧತೆಗಳು ಸುಖ ಹಾಗು ದುಃಖವಾಗಿದೆ.

ಜಾಗೃತ ಮಾನವನ ಮನಾಕೃತಿಯಿಂದ ಉತ್ಪಾದನೆ ರೂಪಿ ಕೃತಿಗಳು, ಕೃತಿಗಳಿಂದ ಉಪಯೋಗಿ ಆಕೃತಿ, ಉಪಯೋಗಿ ಆಕೃತಿಗಳಿಂದ ಕುಶಲತೆ/ನಿಪುಣತೆಯ ಪ್ರಮಾಣ, ಕುಶಲತೆ/ನಿಪುಣತೆಯಿಂದ ಸಂವೇಗ, ಸಂವೇಗದಿಂದ ಸಮಾಧಾನ, ಸಮಾಧಾನದಿಂದ ಪರಿಸ್ಥಿತಿಗಳು, ಪರಿಸ್ಥಿತಿಗಳಿಂದ ಅಭ್ಯುದಯ, ಅಭ್ಯುದಯದಿಂದ ಯೋಗ, ಯೋಗದಿಂದ ಸುಖ, ಶಾಂತಿ, ಸಂತೋಷ; ಸುಖ, ಶಾಂತಿ, ಸಂತೋಷವೇ ರತ್ನಾತ್ಮಕ ರತಿ, ರತ್ನಾತ್ಮಕ ರತಿಯೇ ಮನಃ ಸ್ವಸ್ಥತೆ ಹಾಗು ಮನಃ ಸ್ವಸ್ಥತೆಯೇ ನಿರ್ಭ್ರಾಂತತೆ. ಜಾಗೃತ ಮಾನವ ಪೂರ್ವೋಕ್ತ ವರ್ಣಿತ ಕ್ರಮ ವಿಧಿಯಿಂದ ಪ್ರಮಾಣಿತನಾಗುತ್ತಾನೆ.

¤ ಕೃತಿ - ವಿಚಾರಾನುರೂಪ ಮಾಡಲಾಗುವ ಕ್ರಿಯೆಗೆ 'ಕೃತಿ' ಎಂದು ಸಂಜ್ಞೆ.

¤ ಆಕೃತಿ - ಕ್ರಿಯೆಯಿಂದ ಅನೇಕ ಅಣು-ಪರಮಾಣು ಸಮೂಹಗಳ ಸಂಘಟಿತ ರೂಪಕ್ಕೆ 'ಆಕೃತಿ' ಎಂದ ಸಂಜ್ಞೆ.

145

¤ ಮಾನವೀಯತೆಪೂರ್ಣ ಹಾಗು ಅತಿಮಾನವೀಯತೆಪೂರ್ಣ ವಿಚಾರಗಳ ಅನುರೂಪ ಕಾರ್ಯಕ್ಕೆ 'ಸುಕ್ಕುತಿ' ಹಾಗು ಅಮಾನವೀಯತೆವಾದಿ ವಿಚಾರದ ಅನುರೂಪ ಮಾಡಲಾಗುವ ಕಾರ್ಯಕ್ಕೆ 'ದುಷ್ಟತಿ'ಯೆಂದು ಸಂಜ್ಞೆ.

¤ ಆಸಕ್ತಿ - ಭ್ರಮೆ ಕ್ರಿಯೆಗಿರುವ ಆಕರ್ಷಣೆಗೆ 'ಆಸಕ್ತಿ'ಯೆಂದು ಸಂಜ್ಞೆ.

¤ ಸಂವೇಗ - ಜಾಗೃತಿಯ ಪ್ರತಿ ಉತ್ಕಂಠಕ್ಕೆ 'ಸಂವೇಗ'ವೆಂದು ಸಂಜ್ಞೆ.

¤ ಪರಿಸ್ಥಿತಿ - ಸಮಾಧಾನದಿಂದ ಯುಕ್ತ ಮಾನಸಿಕ ಹಾಗು ಶಾರೀರಿಕ ಅವಸ್ಥೆಗೆ 'ಪರಿಸ್ಥಿತಿ'ಯೆಂದು ಸಂಜ್ಞೆ.

¤ ಯೋಗ - ಸ್ವಯಂನಲ್ಲಿ ಯಾವುದರ ಅಭಾವವಿದೆಯೋ ಅಥವಾ ಅಭಾವ ಪ್ರತೀತವಾಗುತ್ತದೆಯೋ, ಇನ್ನೊಬ್ಬರಲ್ಲಿ ಅದರ ಸಮೃದ್ಧಿಯಿದೆಯೋ (ಸ್ವಭಾವ), ಇಂತಹ ಉಭಯ - ಸಾನಿಧ್ಯಕ್ಕೆ 'ಯೋಗ' ಎಂದು ಸಂಜ್ಞೆ.

¤ ರತಿ - ಮೇಲೆ ವರ್ಣಿತಾನುಸಾರ ಉಭಯ - ಸಾನಿಧ್ಯ, ಮಧ್ಯಸ್ಥ - ಆಕರ್ಷಣೆ ಹಾಗು ಪ್ರತ್ಯಾರ್ತಣೆಯ ಪ್ರಬಲ ವೇಗಕ್ಕೆ 'ರತಿ'ಯೆಂದು ಸಂಜ್ಞೆ.

¤ ರತ್ನಾತ್ಮಕ ರತಿ - ರತಿಯ ನಿರಂತರತೆಯಿಂದ 'ರತ್ನಾತ್ಮಕ ರತಿ' ಯಿದೆ.

¤ ವಿರತ್ಯಾತ್ಮಕ ರತಿ - ಯಾವುದರಲ್ಲಿ ರತಿಯ ನಿರಂತರತೆಯಿಲ್ಲವೋ.

¤ ವಿಯೋಗ - ರತಿ ಖಂಡನೆಗೆ 'ವಿಯೋಗ' ಎಂದು ಸಂಜ್ಞೆ.

¤ ಮನಾಕೃತಿ - ಯೋಗ ವಿಯೋಗದಿಂದ ಪ್ರಾಪ್ತ ಸೂಚನೆ ಸಹಿತ ಪುನರ್ಕಲ್ಪನೆಗೆ 'ಮನಾಕೃತಿ'ಯೆಂದು ಸಂಜ್ಞೆ.

ವಿಚಾರದ ಅಭಾವದಲ್ಲಿ ರತಿ ಕ್ರಿಯೆ ಸಿದ್ಧವಿಲ್ಲ.

ಜಡದ ಸಹಿತ ರತಿ ಕ್ರಿಯೆ ಕ್ಷಣಿಕ ಹಾಗು ಅಸ್ಥಾಯಿ, ವೈಚಾರಿಕ ರತಿ ದೀರ್ಘಕಾಲಿಕ ಹಾಗು ಸತ್ಯ ರತಿ ನಿತ್ಯಕಾಲಿಕವಾಗಿದೆ, ಇದು ಕೇವಲ ಅನುಭವ ಮತ್ತು ಅನುಭವದ ನಿರಂತರತೆಯಾಗಿದೆ.

ಮೃದ್ (ಮಣ್ಣು), ಪಾಪಾಣ (ಕಲ್ಲು), ಮಣಿ ಮತ್ತು ಧಾತು ಹಾಗು ಅದರ ವಿಕಾರಕ್ಕೆ 'ಪದಾರ್ಥಾಕಾರ', ವನಸ್ಪತಿಗಳಲ್ಲಿ ಕಂಡುಬರುವ ಪ್ರಾಣಕೊಷಿಕಗಳಿಂದ ರಚಿತ ರಚನೆಗಳಿಗೆ 'ಪ್ರಾಣಾಕಾರ', ಪಶು ಪಕ್ಷಿಗಳಲ್ಲಿ ಕಂಡುಬರುವ ಆಶಾವಿಗೆ 'ಜೀವಾಕಾರ' ಮತ್ತು ಮಾನವನಲ್ಲಿ ಕಂಡುಬರುವ ಕ್ರಿಯೆ ಮಾತ್ರಕ್ಕೆ ಪ್ರತಿ ದರ್ಶನ ಯೋಗ್ಯ ಕ್ಷಮತೆ ಸಂಪನ್ನ ಮನ, ವೃತ್ತಿ, ಚಿತ್ತ ಹಾಗು ಬುದ್ಧಿಗೆ 'ಜ್ಞಾನಾಕಾರ' ಎಂದು ಸಂಜ್ಞೆ.

146

ಮೌಲ್ಯ ಮತ್ತು ಮೌಲ್ಯೀಕರಣ ಪ್ರಕ್ರಿಯೆಗೆ 'ಭಾವ - ಕ್ರಿಯೆ' ಎಂದು ಸಂಜ್ಞೆ, ಇದು ಯಥಾರ್ಥ ಹಾಗು ಅಯಥಾರ್ಥ ಭೇದದಿಂದ ವ್ಯವಹೃತವಾಗಿದೆ, ಇದರ ಕಾರಣ ಮೌಲ್ಯೀಕರಣ ಮಾಡುವ ಇಕಾಯಿಯು ಜಾಗೃತಿ ಹಾಗು ಭ್ರಮೆ ರೂಪದಲ್ಲಿ ಭೇದವಿದೆ.

ಪೂರ್ಣ ಜಾಗೃತಿಯಿಂದಲೇ ಪೂರ್ಣ ಅರಿವು ಸಹಿತ ಸರಿಯಾದ ಮೌಲ್ಯೀಕರಣೆಯಾಗುತ್ತದೆ ಅನ್ಯಥಾ ಅವಮೌಲ್ಯೀಕರಣೆಯ ಅಥವಾ ಅಧಿಮೌಲ್ಯೀಕರಣೆಯಾಗುತ್ತದೆ.

ಮಾನವ ತನ್ನ ಜಾಗೃತಿಯ ಸ್ವರದಿಂದ ಹಾಗು ಅದರ ಅನುರೂಪದಲ್ಲಿಯೇ ಮೌಲ್ಯೀಕರಣ ಕ್ರಿಯೆ ಮಾಡುತ್ತಾನೆ.

ಹೃದಯ ಮತ್ತು ಐದು ಇಂದ್ರಿಯಗಳಿಗೆ ಸಂಬಂಧಪಟ್ಟ ವಿಷಯಗಳ ಪ್ರತಿಯಿರುವ ಆಸಕ್ತಿ ಅಥವಾ ಅನಾಸಕ್ತಿಯ ಆಧಾರದ ಮೇಲೆಯೇ ಮಾನವ ಜೀವನದ ಜಾಗೃತ ಅವಸ್ಥೆಯ ನಿರ್ಣಯವಿದೆ. ಮನ, ವೃತ್ತಿ, ಚಿತ್ತ, ಬುದ್ಧಿ ಮತ್ತು ಆತ್ಮದ ಸಂಯುಕ್ತ ಕ್ರಿಯಾಕಲಾಪದಲ್ಲಿ ಜಾಗೃತಿ ಪ್ರಮಾಣಿತವಾಗುತ್ತದೆ.

ಆಹಾರ, ನಿದ್ರಾ, ಭಯ, ಮೈಥುನ ಈ ನಾಲ್ಕು ವಿಷಯ ಹೃದಯದ, ಸ್ವಾಗತ ಭಾವ ಹಾಗು ಶಬ್ದ, ಸ್ಪರ್ಶ, ರೂಪ, ರಸ, ಗಂಧೇಂದ್ರಿಯಗಳಿಂದ ಪ್ರಾಪ್ತವಾಗುವ ಆಸ್ವಾದನದಲ್ಲಿರುವ ಸುಖ ಹಾಗು ದುಃಖ ಪಕ್ಷ ಮನದ; ನ್ಯಾಯಾನ್ಯಾಯ, ಧರ್ಮಾಧರ್ಮ, ಸತ್ಯಾಸತ್ಯ ನಿರ್ಣಯ ವೃತ್ತಿಯ; ರೂಪ, ಗುಣ, ಸ್ವಭಾವ, ಧರ್ಮ ತಥಾ ಸಮ, ವಿಷಮ, ಮಧ್ಯಸ್ಥ ಜ್ಞಾನದ, ಚಿತ್ತ ಗ್ರಹಣೆ ಹಾಗು ಚಿತ್ತ ರಚನೆ ಚಿತ್ತದ, ಕಾಲ ಕ್ರಿಯೆ ಹಾಗು ಸತ್ಯದ ಬೋಧ ಬುದ್ಧಿಯ ಮತ್ತು ಸಹ-ಅಸ್ತಿತ್ವದಲ್ಲಿ ಅನುಭವ ಆತ್ಮದ ಸ್ವತ್ವವಾಗಿದೆ.

ಶರೀರದ ಪ್ರತ್ಯೇಕ ಕ್ರಿಯೆ ಮತ್ತು ವ್ಯವಹಾರ-ಸಮುಚ್ಚಯ ವಿಚಾರ - ಪಕ್ಷದ ಯೋಗದಿಂದಲೇಯಿದೆ, ಇದಕ್ಕೆ ಪಂಚೇಂದ್ರಿಯಗಳೇ ಮಾಧ್ಯಮ.

ಮಾನವನು ತನ್ನ ಸಫಲತೆಯ ಪ್ರಯಾಸ ಸ್ವಾರ್ಥ, ಪರಾರ್ಥ ಹಾಗು ಪರಮಾರ್ಥ ಮಾತ್ರದಿಂದ ಮಾಡಿದ್ದಾನೆ.

ಪ್ರಾಣದ ವಿಷಯ ಹೃದಯ, ಹೃದಯದ ವಿಷಯ ಇಂದ್ರಿಯ ಹಾಗು ಇಂದ್ರಿಯದ ವಿಷಯ ವ್ಯವಹಾರ (ಕರ್ಮ) ಹಾಗು ಭೋಗ. ಪ್ರಾಣ, ಹೃದಯವನ್ನು; ಹೃದಯ, ಇಂದ್ರಿಯಗಳನ್ನು; ಇಂದ್ರಿಯಗಳು, ವ್ಯವಹಾರ ಹಾಗು ಭೋಗವನ್ನು ಪ್ರೇರಿತ ಮಾಡುತ್ತದೆ.

147

ಶರೀರ, ಹೃದಯ ಹಾಗು ಪ್ರಾಣ ಸಮೂಹಕ್ಕೆ 'ಸ್ಥೂಲ ಪಿಂಡ' ಅಥವಾ 'ಸ್ಥೂಲ ಶರೀರ', ಮನ, ವೃತ್ತಿ ಹಾಗು ಚಿತ್ತಕ್ಕೆ 'ಸೂಕ್ಷ್ಮ ಶರೀರ' ಮತ್ತು ಬುದ್ಧಿ ಹಾಗು ಆತ್ಮಕ್ಕೆ 'ಕಾರಣ ಶರೀರ' ಎಂದು ಸಂಜ್ಞೆಯಿದೆ.

ಬುದ್ಧಿಯಿಂದ ಬೋಧದ ಕ್ರಿಯೆ ಆತ್ಮಾಭಿಮುಖ ವಿಧಿಯಿಂದ ಜಾಗೃತಿಯನ್ನು ಮತ್ತು ಭ್ರಮುವಶ ವಿಮುಖವಾಗಿದ್ದು ಸಮಸ್ಯೆಯ ಕಾರಣವಾಗಿರುತ್ತದೆ. ಇದಕ್ಕೆ ಜಾಗೃತಿ ಮತ್ತು ಭ್ರಮೆಯೆಂದು ಸಂಜ್ಞೆ.

ಆತ್ಮದಿಂದ ವಿಮುಖ ಬುದ್ಧಿಯೇ 'ಅಹಂಕಾರ'.

ಆತ್ಮದ ಸಂಕೇತ - ಗ್ರಹಣೆಯಿಂದ ವಂಚಿತವಾಗಿರುವುದೇ 'ಆತ್ಮ ವಿಮುಖತೆ'.

ಕಾರಣ ಹಾಗು ಸೂಕ್ಷ್ಮ ಶರೀರದ ಅನುಸಾರ ಇಚ್ಛೆಗಳಿವೆ ಹಾಗು ಸೂಕ್ಷ್ಮ ಹಾಗು ಸ್ಥೂಲ ಶರೀರದ ಅನುಸಾರ ವ್ಯವಹಾರ ಕಾರ್ಯವಿದೆ.

ಸ್ಥೂಲ ಪಿಂಡದ ಯೋಗ ಸೂಕ್ಷ್ಮಕ್ಕೆ ಪ್ರಾಣದಿಂದಿದೆ.

ಸೂಕ್ಷ್ಮ ಹಾಗು ಕಾರಣ ಶರೀರದ ಯೋಗ ಚಿತ್ತದಿಂದಿದೆ. ಕಾರಣ ಮತ್ತು ಸೂಕ್ಷ್ಮ ಕ್ರಿಯೆ ಅವಿಭಾಜ್ಯವಾಗಿದೆ.

ಜಾಗೃತ ಜೀವನದಲ್ಲಿ ಆತ್ಮ ಅನವರತ ಜ್ಞಾನದಲ್ಲಿ ಮುಳುಗಿ ಹಾಗು ಅನುಭೂತವಾಗುತ್ತದೆ.

ಭ್ರಮರೂಪಿ ವಿಷಯ-ಆಶಿವಶ ಮಾನವನಲ್ಲಿ ಸಂಘರ್ಷವಿದೆ. ಈಷಣಾತ್ರಯದಲ್ಲಿ ಜನ ಬಲ ಹಾಗು ಧನಬಲ ಆವಶ್ಯಕತೆವಶ ವ್ಯವಸ್ಥೆಯಲ್ಲಿ ಪ್ರವೃತ್ತಿ ಸ್ಪಷ್ಟವಾಗಿದೆ. ವ್ಯವಸ್ಥೆಯ ಮೂಲದಲ್ಲಿ ಅಧ್ಯಯನ ಹಾಗು ಪ್ರಯೋಗವಿದೆ, ಇದರಿಂದಲೇ ವಿಕಾಸ ಮತ್ತು ಜಾಗೃತಿಯ ಪ್ರಮಾಣ ಸಂಭವವಾಗಿದೆ.

ಈಷ್ಯ ಹಾಗು ದ್ವೇಷದ ಮೂಲದಲ್ಲಿ ಭ್ರಮೆಯೆಯಿದೆ ಮತ್ತು ಹಾಸದ ದಿಕ್ಕಿನಲ್ಲಿ ಗತಿಯಿದೆ.

ಸಂಕೀರ್ಣತೆಯಲ್ಲಿ ನಿಯುಕ್ತ ಅರ್ಥ ಸ್ವಾರ್ಥ, ವಿಶಾಲತೆಯಲ್ಲಿ ಪ್ರಾಯೋಜಿತ ಅರ್ಥ ಪರಾರ್ಥ ಹಾಗು ಸಾರ್ವಭೌಮಿಕತೆಯ ಅರ್ಥದಲ್ಲಿ ನಿಯುಕ್ತ ಅರ್ಥ ಪರಮಾರ್ಥವಾಗಿದೆ.

ಬಲ, ಧನ, ಪದ ಹಾಗು ಯಶದ ಭೇದದಿಂದ ಉಪಲಬ್ಧತೆಗಳಿವೆ (ಲಾಭವಿದೆ). ವಿಜ್ಞಾನ ಹಾಗು ವಿವೇಕದ ಭೇದದಿಂದ ಅಧ್ಯಯನವಿದೆ, ಇದು ಬುದ್ಧಿಯ ಕ್ರಿಯೆ. ರೂಪ ಜನ್ಮ - ಸಿದ್ಧವೇಯಾಗಿದೆ.

148

ಪಾತ್ರೆ ಹಾಗು ಕುಪಾತ್ರೆವನ್ನು ಪ್ರದತ್ತ ಪದ ಹಾಗು ಅಧಿಕಾರ - ಭೇದದಿಂದ ನಿಯೋಜಿತವಾಗಿದೆ.

ಸಂಘರ್ಷ ಹಾಗು ಉತ್ಪಾದನೆ - ಭೇದದಿಂದ ಬಲದ ನಿಯುಕ್ತಿಯಿದೆ.

ಉಪಯೋಗ, ಸದುಪಯೋಗ ಹಾಗು ಉತ್ಪಾದನೆ - ಭೇದದಿಂದ ಅರ್ಥದ ನಿಯೋಜನೆಯಿದೆ.

ಒಬ್ಬ ಮಾನವನಿಂದ ಅನಂತ ಮಾನವನ ತನಕ ಮಾಡಿರುವ ಸಮಸ್ತ ವ್ಯವಹಾರಗಳು ಹಾಗು ಕಾರ್ಯಗಳಿಂದ ಸಮಸ್ಯೆ ಅಥವಾ ಸಮಾಧಾನದ ಉಪಲಬ್ಧತೆಯಿದೆ.

ಹೃದಯ ತೃಪ್ತಿಗಾಗಿ; ಪ್ರಾಣ ಬಲಕ್ಕಾಗಿ; ಮನ ಸುಖಕ್ಕಾಗಿ; ವೃತ್ತಿ ಶಾಂತಿಗಾಗಿ; ಚಿತ್ತ ಸಂತೋಷಕ್ಕಾಗಿ; ಬುದ್ಧಿ ಆನಂದಕ್ಕಾಗಿ; ಆತ್ಮ ಅನುಭವಕ್ಕೆ (ಪರಮಾನಂದ) ಆತುರ, ಕಾತುರ ಆಕಾಂಕ್ಷಿತ ಹಾಗು ಪ್ರತೀಕ್ಷಿತವಾಗಿದೆ.

ಬುದ್ಧಿಯಲ್ಲಿ ಪೂರ್ಣ ಬೋಧವಾಗುವ ಸಹಿತವೇ ಆತ್ಮದಲ್ಲಿ ಅನುಭವ ಪೂರ್ಣವಾಗುವುದು ಕಂಡುಬರುತ್ತದೆ. ಫಲಸ್ವರೂಪ ಅನುಭವ ಪ್ರಮಾಣಿತವಾಗುವುದು ಸಹಜ.

ಆತ್ಮ (ಸ್ವ-ಸ್ವರೂಪ) ಪೂರ್ಣ, ಮಧ್ಯಸ್ಥ, ಹಾಗು ನಿತ್ಯ ಶಾಂತವಾಗಿದೆ, ಆದ್ದರಿಂದ ಅದರಲ್ಲಿ ಅಥವಾ ಅದರ ಮೇಲೆ ಸಮ ಅಥವಾ ವಿಷಮದ ಆಕ್ರಮಣ ಸಿದ್ಧವಾಗುವುದಿಲ್ಲ.

ಆತ್ಮ-ತತ್ವಕ್ಕೂ (ಸ್ವ-ಸ್ವರೂಪ) ಸಾಮ್ಯ- ಸತ್ತಾ ಅನವರತ ಸುಲಭ ಹಾಗು ಒಂದೇ ರೀತಿಯಲ್ಲಿ ಪ್ರಾಪ್ತವಾಗಿದೆ, ಇದನ್ನು ಅನುಭವಿಸಲು ಸಕ್ಷಮವಾಗಿದೆ, ಆದ್ದರಿಂದ ಆತ್ಮದಲ್ಲಿ ವಿಕಾರ ಅರ್ಥಾತ್, ಸಮ-ವಿಷಮಾತ್ಮಕ ಕ್ರಿಯೆಗಳು ಕಂಡುಬರುವುದಿಲ್ಲ. ವಿಕಾರ ಮತ್ತು ವಿಷಮತೆ ಅಪೇಕ್ಷಾಕೃತ ಪರಿಣಾಮ, ಕ್ರಿಯೆ ಹಾಗು ಸಮ, ವಿಷಮ ಶಕ್ತಿಯಲ್ಲಿಯೇ ಕಂಡುಬರುತ್ತದೆ.

ಮನದ ಪೂರ್ವಾಪರಾನುಷಂಗಿ ಪ್ರಭಾವ ಭೇದದಿಂದ ಪ್ರವೃತ್ತಿಗಳು ಕಂಡುಬರುತ್ತದೆ, ಇದರ ಅನುಸಾರವೇ ಕ್ರಿಯೆ ಫಲ ಪರಿಣಾಮ ಸಿದ್ಧವಾಗುತ್ತದೆ.

ಅನುಕ್ರಮದಿಂದ ಪ್ರಾಪ್ತ ಅರಿವಿಗೆ 'ಅನುಭವ' ಎಂದು ಸಂಜ್ಞೆ.

ಪೂರ್ವಾಪರ - ಪರದ ತಾತ್ಪರ್ಯ ಶರೀರಮೂಲಕ, ಪೂರ್ವ ಅರ್ಥಾತ್ ಅನುಭವ ಮೂಲಕ ಆತ್ಮಾನುಷಂಗಿ.

ಅನುಕ್ರಮ - ಕ್ರಿಯೆ-ಪ್ರಕ್ರಿಯೆಯ ಪೂರ್ಣ ಚಕ್ರಕ್ಕೆ 'ಅನುಕ್ರಮ' ಎಂದು ಸಂಜ್ಞೆ.

149

ಮನದಿಂದ ಪೂರ್ವ ಅರ್ಥಾತ್ ವೃತ್ತಿ, ಚಿತ್ತ, ಬುದ್ಧಿ ಹಾಗು ಆತ್ಮದಿಂದ ಪ್ರಾಪ್ತ ಪ್ರೇರಣೆಗೆ ನ್ಯಾಯ ಸಹಜ 'ಪೂರ್ವಾನುಕ್ರಮ' ಹಾಗು ಸಂವೇದನೆಯಿಂದ ಪ್ರಾಪ್ತ ಒತ್ತಡ ಮತ್ತು ಪ್ರವೃತ್ತಿಗೆ 'ಪರಾನುಕ್ರಮ' ಎಂದು ಸಂಜ್ಞೆ. ಪೂರ್ವಾನುಕ್ರಮ ಮತ್ತು ಆಸಕ್ತಿ ರೂಪಿ ಪರಾನುಕ್ರಮ ಭೇದದ ಆಧಾರದ ಮೇಲೆಯೇ ಮಾನವೀಯ ಹಾಗು ಅಮಾನವೀಯ ವ್ಯವಹಾರದ ವರ್ಗೀಕರಣೆಯಿದೆ.

ಮನ ಯಾವಾಗ ಕ್ರಮವಾಗಿ ಪ್ರಾಣ, ಹೃದಯ, ಶರೀರ ಹಾಗು ವ್ಯವಹಾರದಿಂದ ಒತ್ತಡ ಪಡೆಯುತ್ತದೆಯೋ, ಅವಾಗ ಇದಕ್ಕೆ 'ಪರಾನುಕ್ರಮ' ಎಂದು ಸಂಜ್ಞೆ. ಪರಾನುಕ್ರಮದ ಒತ್ತಡದ ಕಾರಣ ಆಯ್ಕೆಯು (ಚಯನ) ತದಾನುಸಾರವಾಗುತ್ತದೆ.

ಮನ ಪ್ರಾಣದ ಜೊತೆ ಸೇರಿ ಬಲದ; ಪ್ರಾಣ, ಹೃದಯದ ಜೊತೆ ಸೇರಿ ತೃಪ್ತಿಯ; ಹೃದಯ ಶರೀರದಿಂದ ಸೇರಿ ವಿಷಯಗಳ ಸೇವನೆ ಮಾಡುವುದರಲ್ಲಿ ನಿರತವಾಗಿದೆ, ಇದರ ಪೂರ್ತಿಯಿಲ್ಲ. ಆದ್ದರಿಂದ ಮಾನವನಲ್ಲಿ ವರ್ಣಿತ ಕ್ರಿಯೆ-ಸೀಮಾಂತದ ತನಕ ನಿರತತೆ ಹಾಗು ಶ್ರಮದ ಆಭಾಸವಾಗಿದೆ.

ಪೂರ್ವಾನುಶಾಸಿತ ಸ್ಥಿತಿಯಲ್ಲಿ ಮನ ಹಾಗು ವೃತ್ತಿಯ ನಿರ್ವಿರೋಧಿತೆಯ ಫಲಸ್ವರೂಪವೇ ಸುಖದ ಅನುಭೂತಿ ಉಪಲಬ್ಧವಾಗುತ್ತದೆ. ವೃತ್ತಿ ಹಾಗು ಚಿತ್ತದ ನಿರ್ವಿರೋಧಿತೆಯಲ್ಲಿ ಶಾಂತಿಯ, ಚಿತ್ತ ಹಾಗು ಬುದ್ಧಿಯ ನಿರ್ವಿರೋಧಿತೆಯಲ್ಲಿ ಸಂತೋಷ, ಬುದ್ಧಿ ಮತ್ತು ಆತ್ಮದ ನಿರ್ವಿರೋಧಿತೆ ಆನಂದದ ರೂಪದಲ್ಲಿ ಅನುಭೂತವಾಗುತ್ತದೆ. ಸುಖ, ಶಾಂತಿ, ಸಂತೋಷ, ಆನಂದದ ಅನುಭೂತಿಯೇ ಮನಃ ಸ್ವಸ್ಥತೆ.

ಮನಃ ಸ್ವಸ್ಥತೆಯ ಸಹಿತ ಮಾಡಿರುವ ಮನಾಕಾರ ಸಾಕಾರ, ಸಾರ್ಥಕ ಮತ್ತು ಪ್ರಯೋಜನಶೀಲವಾಗಿರುವುದು ಕಂಡುಬರುತ್ತದೆ. ಅಸ್ತು ಮನಾಕಾರ ಭೇದದಿಂದ ಪ್ರವೃತ್ತಿ, ಪ್ರವೃತ್ತಿ ಭೇದದಿಂದ ಭ್ರಾಂತ ನಿರ್ಭ್ರಾಂತ ಅವಸ್ಥೆ, ಅವಸ್ಥೆ ಭೇದದಿಂದ ಲಕ್ಷ್ಯ, ಲಕ್ಷ್ಯ ಭೇದದಿಂದ ನಿಯಂತ್ರಣ, ನಿಯಂತ್ರಣ ಭೇದದಿಂದ ನೀತಿ, ನೀತಿ ಭೇದದಿಂದ ನಿಷ್ಠೆ, ನಿಷ್ಠೆ ಭೇದದಿಂದ ಆಶಯ ಹಾಗು ಆಶಯ ಭೇದದಿಂದ ಮನಃಸ್ವಸ್ಥತೆಯ ಆಧಾರದ ಮೇಲೆ ಮನಾಕಾರ ಸಾಕಾರವಾಗುತ್ತದೆ.

ಕಿರ್ಯೆಯನ್ನು ಮಾತ್ರ ಅರಿತುಕೊಳ್ಳುವುದರಲ್ಲಿರುವ ಅಪೂರ್ಣತೆಯೇ ರಹಸ್ಯ.

ರಹಸ್ಯತೆಯ ನಿವಾರಣೆ ಮಾತ್ರ ಯಥಾರ್ಥ ದರ್ಶನದಿಂದಲೇಯಿದೆ.

150

ಯಥಾರ್ಥ ದರ್ಶನದಿಂದ 'ನಿಶ್ಚಯ'ವಿದೆ, ಅನ್ಯಥಾ ಅನಿಶ್ಚಯವಾದಿ ಪ್ರವೃತ್ತಿಯ ಕಾರಣ ಸಂಶಯವಿರುತ್ತದೆ.

ವಿವೇಕ ಹಾಗು ವಿಜ್ಞಾನ ಸಮ್ಯತ ವಿಚಾರ ಹಾಗು ಕ್ರಿಯೆಯ ಪರಿಪೂರ್ಣ ಜ್ಞಾನವೇ ಯಥಾರ್ಥ ಜ್ಞಾನ.

▫ ಪರಿಪೂರ್ಣ ಜ್ಞಾನ - ಕ್ರಿಯೆಯ ನಿಯಮ ಹಾಗು ಪ್ರಕ್ರಿಯೆಯ ಅರಿವು, ವಿಚಾರದ ಕಾರಣ ಹಾಗು ನಿಯಮದ ಅರಿವಿಗೆ 'ಪರಿಪೂರ್ಣ ಜ್ಞಾನ' ಎಂದು ಸಂಜ್ಞೆ.

ಸಹ-ಅಸ್ತಿತ್ವ ಜ್ಞಾನ ಸಮ್ಯತ ವಿಜ್ಞಾನ ಹಾಗು ವಿವೇಕದ ಅಧ್ಯಯನದಿಂದಲೇ ಅಖಂಡ ಸಮಾಜ ಸಾರ್ವಭೌಮ ವ್ಯವಸ್ಥೆ ಪ್ರಮಾಣಿತವಾಗುತ್ತದೆ.

ಪದಾರ್ಥ, ವನಸ್ಪತಿ, ಜೀವ ಹಾಗು ಮಾನವರಲ್ಲಿ ಕಂಡುಬರುವ ಘಟಣೆಗಳು ಕ್ರಮಶಃ ಪರಿಣಾಮಕೃತ, ಋತುಕ್ರಮ, ವಿಷಯಕ್ರಮ ಹಾಗು ಈಶಣಾಕ್ರಮದಿಂದಲೇಯಾಗುತ್ತದೆ.

ಸಾಪೇಕ್ಷತೆ; ದೃಷ್ಟಿ, ದೃಶ್ಯ ಮತ್ತು ದರ್ಶನ ಭೇದದಿಂದಿದೆ.

ದೃಷ್ಟ, ಮಹತ್ ತತ್ವ, ಪುರುಷ, ಕೇಂದ್ರೀಯ, ಸ್ವಸ್ವರೂಪ, ಅಧಿಷ್ಠಾನ, ಪೂರ್ಣ, ಸಹಜ, ಸರ್ವಜ್ಞ, ಆತ್ಮ ಇವೆಲ್ಲಾ ಒಂದರದ ಪರ್ಯಾಯವಾಚಿ ಸಂಜ್ಞೆ. ಈ ಎಲ್ಲಾ ಸಂಜ್ಞೆಗಳಿಂದ ಸಂಚೋಧಿತ ಅಥವಾ ನಿರ್ದೇಶಿತ ಒಂದೇ ತತ್ವ, ಅದು ಚೈತನ್ಯ ಪರಮಾಣುವಿನ ಮಧ್ಯಾಂಶ.

ಪ್ರಕೃತಿಯಲ್ಲಿಯೇ ವಸ್ತು, ವನಸ್ಪತಿ ಹಾಗು ಸಂವೇದನೆ ಹಾಗು ಸಂಜ್ಞಾನೀಯತೆಯ ಪ್ರೇರಣೆ, ಕಲ್ಪನೆ, ಕ್ರಿಯೆ-ಪ್ರತಿಕ್ರಿಯೆ, ಪ್ರಭಾವ, ವ್ಯಂಜನ, ಕ್ರಾಂತಿ ಹಾಗು ಸಮಾಧಾನದಂತಹ ಪರಿಪಾಕಾತ್ಮಕ ಪ್ರವೃತ್ತಿಗಳು ಕಂಡುಬರುತ್ತದೆ.

▫ ಪರಿಪಾಕ - ಯಾವುದೇ ಘಟನೆಗಾಗಿ ಮಾಡಿರುವ ವಿವಿಧ ಪ್ರಕ್ರಿಯೆಯ ಸಂಯುಕ್ತ ಪರಿಣಾಮ ಫಲವೇ ಪರಿಪಾಕ.

▫ ವಿಕಾರ - ಆವೇಶವುಳ್ಳ ಗತಿ

▫ ವಿವಾಕ - ಆವೇಶವುಳ್ಳ ಪರಿಣಾಮ

▫ ವ್ಯಂಜನ - ಪ್ರಭಾವಿತವಾಗುವುದು.

ಸಮಸ್ತ ಪದಾರ್ಥ ಪರಿಣಾಮ-ಘಟಣೆ-ಕ್ರಮದಿಂದ, ಸಮಸ್ತ ವನಸ್ಪತಿ ಋತು-ಘಟಣೆ-ಕ್ರಮದಿಂದ, ಸಮಸ್ತ ಜೀವ ವಿಷಯ-ಘಟಣೆ-ಕ್ರಮದಿಂದ ಹಾಗು ಸಮಸ್ತ ಮಾನವ ಜೀವನ ಸಂಸ್ಕಾರ-ಘಟಣೆ-ಕ್ರಮದಿಂದ ನಿರತವಾಗಿದೆ.

151

ಪ್ರತಿಕ್ರಾಂತಿಯಿಂದ ಭ್ರಾಂತಿ ಹಾಗು ಕರ್ತವ್ಯದಿಂದ ಶಾಂತಿಯಿದೆ.

ಮಧ್ಯಸ್ಥ, ಕೇಂದ್ರೀಯವಾಗಿರುವ ಕಾರಣವೇ ಜ್ಞಾನದ ಸ್ಪರ್ಶ ಸರ್ವತೋಮುಖಿ ಸಮಾಧಾನ ರೂಪದಲ್ಲಿ ಪ್ರಾಪ್ತಿಸುತ್ತದೆ, ಪ್ರಭಾವಿತ ಮಾಡುತ್ತದೆ. ಆತ್ಮದ ಮಧ್ಯಸ್ಥತೆ, ವ್ಯವಹಾರಿಕ ಹಾಗು ವೈಚಾರಿಕ ಏಕಸೂತ್ರತೆಯಿಂದ ಮಾತ್ರ ಪ್ರಮಾಣಿತವಾಗಿದೆ.

ವಿಹಿತ ಪ್ರವೃತ್ತಿಗಳಿಂದ ಸಮಾಧಾನ ಹಾಗು ಅವಿಹಿತ ಪ್ರವೃತ್ತಿಗಳಿಂದ ಸಮಸ್ಯೆಯ ಪ್ರಸವವಾಗುತ್ತದೆ.

ಸಮಾಧಾನದಿಂದ ತಾತ್ಪರ್ಯ ವಿವೇಕ ವಿಜ್ಞಾನ ಸಮ್ಮತ ವಿಚಾರ ಹಾಗು ಪ್ರವೃತ್ತಿಗಳು. ವಿಷಮತೆ ಸಹಿತ ವಿಚಾರವು ಸಮಸ್ಯೆ, ಇದೇ ಕ್ಷೋಭ. ಕ್ಷೋಭದ ತಾತ್ಪರ್ಯ ಮತ್ತವರ ಪ್ರಭಾವದಿಂದ ಕ್ಷುಬ್ಧವಾಗುವುದೇ ಅಥವಾ ತನ್ನ ವ್ಯವಹಾರದಿಂದ ಮತ್ತವರನ್ನು ಕ್ಷುಬ್ಧ ಮಾಡುವುದೇ.

ರೂಪ, ಬಲ ಹಾಗು ಬುದ್ಧಿಯ ವಿಕಾಸ ಆಹಾರ, ವಿಹಾರ ಹಾಗು ವ್ಯವಹಾರದ ಸಂಯಮತೆ ಮೇಲಿದೆ.

ಲೋಕ ಸೇವನೆಯಿಂದ 'ಪ್ರೇಯ' ಮತ್ತು ಲೋಕೇಶಾನುಭೂತಿಯಿಂದ (ಸಹ-ಅಸ್ತಿತ್ವದಲ್ಲಿ ಅನುಭೂತಿ) 'ಶ್ರೇಯ' ಸಿದ್ಧಿಗಳು ಉಪಲಬ್ಧವಾಗುತ್ತದೆ.

ಬದಲಾಗುವ ದೃಷ್ಟಿಗೆ 'ಅನಿತ್ಯ ದೃಷ್ಟಿ' ಎಂದು ಸಂಜ್ಞೆ. ಇದು ಪ್ರಿಯಾಪ್ರಿಯ, ಹಿತಾಹಿತ ಹಾಗು ಲಾಭಾಲಾಭ ದೃಷ್ಟಿಗಳು. ಬದಲಾಗದೇಯಿರುವ ದೃಷ್ಟಿಗೆ 'ನಿತ್ಯ ದೃಷ್ಟಿ' ಎಂದು ಸಂಜ್ಞೆ. ಇದು ನ್ಯಾಯ, ಧರ್ಮ ಹಾಗು ಸತ್ಯ ದೃಷ್ಟಿಗಳು. ಬದಲಾಗುವ ದೃಷ್ಟಿಯಿಂದ ಕ್ಷೋಭವಾಗುವುದು ಅನಿವಾರ್ಯ ಹಾಗು ಸ್ವಾಭಾವಿಕ.

ಸತ್ಯ ನಿರೂಪಣೆ ಕಲೆಗೆ 'ಪೂರ್ಣ ಕಲೆ' ಹಾಗು ಇದರಿಂದ ಭಿನ್ನವಾದುದಕ್ಕೆ 'ಅಪೂರ್ಣ ಕಲೆ' ಎಂದು ಸಂಜ್ಞೆ.

ನ್ಯಾಯದಿಂದ ಪದ, ಉದಾರತೆಯಿಂದ ಧನ, ದಯೆಯಿಂದ ಬಲ, ಸಚ್ಚರಿತೆಯಿಂದ ರೋಷ ಹಾಗು ವಿಜ್ಞಾನ ಹಾಗು ವಿವೇಕದಿಂದ ಬುದ್ಧಿ, ನಿಷ್ಠೆಯಿಂದ ಅಧ್ಯಯನ, ಕರ್ತವ್ಯದಿಂದ ಸೇವೆ, ಸಂತೋಷದಿಂದ ತಪ, ಸ್ನೇಹದಿಂದ ಲೋಕ, ಪ್ರೇಮದಿಂದ ಲೋಕೇಶ, ಅಜ್ಞಾಪಾಲನೆಯಿಂದ ರೋಗಿ ಹಾಗು ಬಾಲಕನ ಸಫಲತೆ ಹಾಗು ಕಲ್ಯಾಣ ಸಿದ್ಧವಾಗಿದೆ.

“ಸರ್ವ ಶುಭವಾಗಲಿ”

153

ಅಧ್ಯಾಯ - ೧೫

ಮಾನವ ಸಹಜ ನ್ಯಾಯ

ಮಾನವ ಸಮುದಾಯ ನ್ಯಾಯ ಹಾಗು ಅವಸರ ಭೇದದಿಂದ ಪ್ರವೃತ್ತವಾಗಿರುವುದು ಸ್ಪಷ್ಟವಾಗಿದೆ.

ಆಶ್ರಿತದ ಆಶ್ರಯ ಪಡೆಯುವ ನಿಯಮಕ್ಕೆ 'ನಿಯಂತ್ರಣ' ಎಂದು ಸಂಜ್ಞೆ.

ಆಶ್ರಯ - ಯಾವುದರಿಂದ ಯಾವುದರ ಅಸ್ತಿತ್ವ ಅಥವಾ ವ್ಯವಹಾರ ನಿಯಂತ್ರಿತವಾಗಿದೆಯೋ, ಅದು ಅದರ 'ಆಶ್ರಯ'.

ನ್ಯಾಯಾಶ್ರಿತ ಮಾನವ ಮಾತ್ರ ಸತ್ಯಾಸತ್ಯ, ಧರ್ಮಾಧರ್ಮ ಹಾಗು ನ್ಯಾಯಾನ್ಯಾಯದ ಜ್ಞಾತ, ವ್ಯವಹಾರಿಕ ಏಕಸೂತ್ರತೆ ಸ್ಥಾಪಿತ ಮಾಡುವುದರಲ್ಲಿ ನಿಪುಣ ಹಾಗು ನಿರ್ದೋಷ ಜೀವನದಲ್ಲಿ ನಿರತವಾಗಿರುತ್ತಾನೆ, ಇದರಿಂದಲೇ ಮಾನವೀಯತೆ ಸಂರಕ್ಷಿತವಾಗಿದೆ.

ಸಮಯಾನುವರ್ತಿ ಮಾನವ ಪ್ರಿಯಾಪ್ರಿಯ, ಹಿತಾಹಿತ, ಲಾಭಾಲಾಭದಿಂದ ಗ್ರಹಿತ ಹಾಗು ವ್ಯವಹಾರದಲ್ಲಿ ತೋರಿಕೆ ಮಾಡುತ್ತಾನೆ. ಇದರಿಂದ ಅಸಂತುಷ್ಟಿ, ವ್ಯಾಕುಲತೆ ಹಾಗು ಅನಿಶ್ಚಯತೆಯ ಪೀಡನೆಯೇ ಉಪಲಬ್ಧವಾಗುತ್ತದೆ, ಏಕೆಂದರೆ ಅಜ್ಞಾನದ ಮಾನ್ಯತೆಗಳು ಶೀಘ್ರ ಪರಿವರ್ತನಶೀಲವಾಗಿರುತ್ತವೆ. ಸಮಯಾನುವರ್ತಿ ಮಾನವನ ಕರ್ತವ್ಯದ ಲಕ್ಷ್ಯವೂ ಸುಖ, ಆದರೆ ಅದು ಈ ಪ್ರಣಾಳಿಯಿಂದ ಸಫಲವಾಗುವುದಿಲ್ಲ.

ವ್ಯಕ್ತಿಗತ, ಪಾರಿವಾರಿಕ, ಸಾಮಾಜಿಕ, ರಾಷ್ಟ್ರೀಯ, ಅಂತರಾಷ್ಟ್ರೀಯ ಜೀವನದಲ್ಲಿ ಕ್ಲೇಶ, ಕಲಹ ಹಾಗು ಆತಂಕ ಉತ್ಪನ್ನ ಮಾಡುವ ಸಮಸ್ತ ಪ್ರವೃತ್ತಿಯನ್ನು 'ಸದೋಷ ವಿಚಾರ' ಅಥವಾ 'ಸಮಯಾನುವರ್ತಿ ವಿಚಾರ' ಮತ್ತು ಹರ್ಷ, ಉತ್ಸಾಹ, ಸಹ-ಅಸ್ತಿತ್ವ, ನಿರ್ಭ್ರಮತೆಯನ್ನು ಉತ್ಪನ್ನ ಮಾಡುವ ಕಾರ್ಯ ಹಾಗು ವಿಚಾರವನ್ನು 'ನಿರ್ದೋಷ ವಿಚಾರ' ಅಥವಾ 'ನ್ಯಾಯವಾದಿ ವಿಚಾರ' ಎಂದು ಸಂಜ್ಞೆ.

ಕ್ಲೇಶ, ಕಲಹ ಹಾಗು ಆತಂಕದ ಕಾರಣ ಕೇವಲ ಸಂಗ್ರಹ, ದ್ವೇಷ, ಅಜ್ಞಾನ ಅಭಿಮಾನ ಹಾಗು ಭಯ.

ಸಮಯಾನುವರ್ತಿ ವಿಚಾರ ಅಥವಾ ಸದೋಷ ವಿಚಾರ - ವ್ಯವಹಾರ, ಹೃದಯ, ಪ್ರಾಣ, ಮನ, ವೃತ್ತಿ, ಚಿತ್ತ, ಬುದ್ಧಿಯ ಪರಸ್ಪರ ವಿರೋಧಿ ವಿಚಾರ, ಇದರಿಂದ ಕ್ಷೋಭ, ಖೇದ, ತ್ಯಜ್ಯ, ದುಃಖ, ಅಶಾಂತಿ ಹಾಗು ಅಸಂತೋಷದ ಪೀಡನೆಯಾಗುತ್ತದೆ.

154

ವ್ಯವಹಾರ ಹಾಗು ಹೃದಯದ ಪರಸ್ಪರ ವಿರೋಧದಿಂದ ಕ್ಷೋಭ, ಹೃದಯ ಹಾಗು ಪ್ರಾಣದ ಪರಸ್ಪರ ವಿರೋಧದಿಂದ ಖೇದ, ಪ್ರಾಣ ಹಾಗು ಮನದ ಪರಸ್ಪರ ವಿರೋಧದಿಂದ ತ್ಯಜ, ಮನ ಹಾಗು ವೃತ್ತಿಯ ಪರಸ್ಪರ ವಿರೋಧದಿಂದ ದುಃಖ, ವೃತ್ತಿ ಹಾಗು ಚಿತ್ತದ ಪರಸ್ಪರ ವಿರೋಧದಿಂದ ಆಶಾಂತಿ, ಚಿತ್ತ ಹಾಗು ಬುದ್ಧಿಯ ಪರಸ್ಪರ ವಿರೋಧದಿಂದ ಅಸಂತೋಷ ಹಾಗು ಬುದ್ಧಿಯ ಆತ್ಮವಿಮುಖವಾಗುವುದರಿಂದ ಅಹಂಕಾರವಿದೆ.

ವ್ಯವಹಾರ, ಶರೀರ, ಹೃದಯ ಹಾಗು ಪ್ರಾಣ ಮನಾಶ್ರಿತವಾಗಿದೆ. ಫಲತಃ ಮನಃಸ್ಥಿತಿ ಕ್ರಮದಿಂದ ಪ್ರಾಣ, ಹೃದಯ ಹಾಗು ಕರ್ಮದ ಆಕಾರದಿಂದ ಕೃತಿ - ಆಕೃತಿಯಾಗುತ್ತದೆ. ಮನವೇ ಮಸ್ತಿಷ್ಯದ ಮೇಲೆ ಪ್ರಭಾವದಿಂದ ಆಶಾನುರೂಪ ಆಕಾರದ ಸಂಕೇತ ಮಾಡುತ್ತದೆ ಹಾಗು ಬದಲಿನಲ್ಲಿ ಸುಖಾಸ್ವಾದನೆ ಬಯಸುತ್ತದೆ.

ವ್ಯವಹಾರ ಹಾಗು ಹೃದಯ, ಹೃದಯ ಹಾಗು ಪ್ರಾಣ, ಪ್ರಾಣ ಹಾಗು ಮನ, ವೃತ್ತಿ ಹಾಗು ಮನ ತಥಾ ವಿರೋಧ ಹಾಗು ನಿರ್ವಿರೋಧದ ಪ್ರಭಾವ ಮನದ ಮೇಲೆಯೇಯಿದೆ, ಏಕೆಂದರೆ ಮನವೇ ರಸಾಸ್ವಾದನೆ ಮಾಡುವ ಜೀವನ ಕ್ರಿಯೆ. ಫಲತಃ ಮನವೇ ವ್ಯವಹಾರ, ಹೃದಯ, ಪ್ರಾಣ, ವೃತ್ತಿ, ವಿರೋಧವಶ ಅಥವಾ ನಿರ್ವಿರೋಧದಿಂದ ಪ್ರಾಪ್ತ ದುಃಖ ಹಾಗು ಸುಖದ ಬೋರ್ಡವಾಗಿದೆ.

ಕಾರಣ ಕ್ರಿಯೆಯ ಅನುಕೂಲ ಸೂಕ್ಷ್ಮ, ಸೂಕ್ಷ್ಮ ಕ್ರಿಯೆಯ ಅನುಕೂಲ ಸ್ಥೂಲ ವ್ಯವಹಾರ ಕ್ರಮದಿಂದ ಜಾಗೃತಿ ತಥಾ ಫಲಸ್ವರೂಪ ಸಮೃದ್ಧಿ ಹಾಗು ಸಮಾಧಾನ ತಥಾ ಇದರ ವಿಪರೀತ ಕ್ರಮದಿಂದ ಹಾಸ ತಥಾ ಫಲಸ್ವರೂಪ ಅಸಮೃದ್ಧಿ ಹಾಗು ಸಮಸ್ಯೆಯಿದೆ.

ಕಾರಣ ಕ್ರಿಯೆ - ಆತ್ಮ ಹಾಗು ಬುದ್ಧಿಯ ಸಮ್ಮಿಲಿತ ಕ್ರಿಯೆ 'ಕಾರಣ' ಕ್ರಿಯೆ.

ಸೂಕ್ಷ್ಮ ಕ್ರಿಯೆ - ಚಿತ್ತ, ವೃತ್ತಿ ಹಾಗು ಮನದ ಸಮ್ಮಿಲಿತ ಕ್ರಿಯೆಯ 'ಸೂಕ್ಷ್ಮ ಕ್ರಿಯೆ' ಎಂದು ಸಂಜ್ಞೆ.

ಸ್ಥೂಲ ಶರೀರ ಪಿಂಡ - ಪಂಚೇಂದ್ರಿಯಗಳಿಂದ ಯುಕ್ತ ಕಾಯಕ್ಕೆ (ಶರೀರ) 'ಸ್ಥೂಲ ಪಿಂಡ' ಎಂದು ಸಂಜ್ಞೆ.

ಕಾರಣ ಕ್ರಿಯವಿಲ್ಲದೆ ಸೂಕ್ಷ್ಮ ಕ್ರಿಯೆ ತಥಾ ಕಾರಣ ಹಾಗು ಸೂಕ್ಷ್ಮ ಕ್ರಿಯೆಯಿಲ್ಲದೆ ಸ್ಥೂಲ ಪಿಂಡ ರೂಪಿ ಶರೀರದ ಕ್ರಿಯೆಕಲಾವವಿಲ್ಲ.

155

• ಸಮಯಾನುವರ್ತನೆಯು ಶೀಘ್ರ ಪರಿಣಾಮವಾದಿಯಾಗಿರುವ ಕಾರಣ ಇದರ ವ್ಯವಹಾರದಲ್ಲಿ ಏಕಸೂತ್ರತೆಯ ಅಭಾವವಿರುತ್ತದೆ. ಏಕಸೂತ್ರತೆಯ ಅಭಾವದಲ್ಲಿ ಆತ್ಮೋನ್ಮುಖ ಬುದ್ಧಿಯಿಲ್ಲದಿರುವುದರಿಂದ ಬುದ್ಧಿ ಕ್ಷೋಭ, ಬುದ್ಧಿ ಅನುಯಾಯಿ ಚಿತ್ತವಿಲ್ಲದಿರುವುದರಿಂದ ಚಿತ್ತ ಕ್ಷೋಭ, ಚಿತ್ತ ಅನುಯಾಯಿ ವೃತ್ತಿಯಿಲ್ಲದಿರುವುದರಿಂದ ವೃತ್ತಿಕ್ಷೋಭ, ವೃತ್ತಿ ಅನುಯಾಯಿ ಮನವಿಲ್ಲದಿರುವುದರಿಂದ ಮನಃ ಕ್ಷೋಭ, ಮನೋನುಕೂಲ ಪ್ರಾಣ, ಹೃದಯ, ಶರೀರ ಹಾಗು ಕ್ರಿಯೆಯಿಲ್ಲದಿರುವುದರಿಂದ ಸಂಪರ್ಕಾತ್ಮಕ ಹಾಗು ಸಂಬಂಧಾತ್ಮಕ ವ್ಯವಹಾರದಲ್ಲಿ ಮನಃ ಕ್ಷೋಭವಾಗುತ್ತದೆ.

• ಬುದ್ಧಿ ಕ್ಷುಬ್ಧ (ಅಹಂಕಾರ) ಮಾನವ ತನ್ನ ಜ್ಞಾನವನ್ನು ಶ್ರೇಷ್ಠ, ಚಿತ್ತ - ಕ್ಷುಬ್ಧ ಮಾನವ ತನ್ನ ಚಿತ್ರಣವನ್ನು ಶ್ರೇಷ್ಠ, ವೃತ್ತಿ-ಕ್ಷುಬ್ಧ ಮಾನವ ವಿಚಾರ ಹಾಗು ಕಾರ್ಯ ಯೋಜನೆಯನ್ನು ಶ್ರೇಷ್ಠವೆಂದು ನಂಬುತ್ತಾನೆ. ಫಲಸ್ವರೂಪವೇ ವಾದವಿವಾದ ಉತ್ಪನ್ನವಾಗುತ್ತದೆ. ಅತಃ, ಸಮಯಾನುವರ್ತನೆಯೇ ವಾದ-ವಿವಾದದ ಮೂಲ ಕಾರಣವೆಂದು ಸಿದ್ಧವಾಗುತ್ತದೆ.

• ವಾದ-ವಿವಾದಕ್ಕೆ ಎರಡೂ ಪಕ್ಷಗಳ ಅಥವಾ ಒಂದು ಪಕ್ಷ ತಪ್ಪಾಗಿರುವುದು (ಭ್ರಮೆಯಲ್ಲಿ) ಅವಶ್ಯಕ, ಏಕೆಂದರೆ ಎರಡೂ ಪಕ್ಷ ಸಹಿಯಾಗಿದ್ದು ವಾದವಿವಾದವೂ ಇರುವುದು ಸಂಭವವಿಲ್ಲ.

• ಸಮಯಾನುವರ್ತನೆಯಾದಿತೆ ವ್ಯವಹಾರದ ಮೂಲ ಕಾರಣ ಬುದ್ಧಿ ಅಥವಾ ವಿಜ್ಞಾನಮಯ ಕೋಶದ ಪೂರ್ಣ ವಿಕಸಿತವಾಗದಿರುವುದು ಅಥವಾ ಮಾನವನು ಭ್ರಾಂತವಾಗಿರುವುದು.

\* ಕಾರ್ಯವನ್ನು ಮಾಡುವ ಸ್ವತಂತ್ರತೆಯ ಕಾರಣವೇ ಮಾನವನಿಗೆ ನ್ಯಾಯಾನ್ಯಾಯ, ಧರ್ಮಾಧರ್ಮ, ಸತ್ಯಾಸತ್ಯಾತ್ಮಕ ವಿಚಾರ, ಇಚ್ಛೆ, ಸಂಕಲ್ಪಪೂರ್ವಕ ವ್ಯವಹಾರ, ವಿಚಾರ ಹಾಗು ಅನುಭವ ಮಾಡುವ ಅವಸರ ಪ್ರಾಪ್ತವಾಗಿದೆ.

\* ಜಡ ಸೃಷ್ಟಿಯಲ್ಲಿ ಬೀಜ, ಪರಿಣಾಮ ಹಾಗು ಪ್ರಾಣದ ಭೇದದಿಂದ ಮತ್ತು ಚೈತನ್ಯ ಜೀವನದಲ್ಲಿ ಬೀಜ, ಆಶೆ ಹಾಗು ಇಚ್ಛೆಯ ರೂಪದಲ್ಲಿ ವಂಶಾನುಷಂಗಿ, ಸಂಸ್ಕಾರಾನುಷಂಗಿ ಭೇದದಿಂದಿದೆ. ಮಾನವನಲ್ಲಿ ಬೀಜ ಸಂಸ್ಕಾರಗಳ ರೂಪದಲ್ಲಿ ಮನ, ವೃತ್ತಿ, ಚಿತ್ತ ಹಾಗು ಬುದ್ಧಿಯಲ್ಲಿ ಸ್ಥಾಪಿತವಾಗಿರುವುದು ಕಂಡುಬರುತ್ತದೆ, ಏಕೆಂದರೆ ಪ್ರತ್ಯೇಕ ಭ್ರಮಿತ ವೃತ್ತಿಯ ಬೌದ್ಧಿಕ ಸ್ತರದಲ್ಲಿ ಅಂತರವಿದೆ. ಬೌದ್ಧಿಕ ಕ್ಷಮತೆಯ ಭೇದವೇ ಮಾನವ ಕ್ರಿಯೆಕಲಾಪದಲ್ಲಿ ವೈವಿಧ್ಯತೆಯ ಮೂಲ ಕಾರಣ. ಬೌದ್ಧಿಕ ವೈವಿಧ್ಯತೆಯ ಕಾರಣವೇ ಮಾನವ ನ್ಯಾಯವಾದಿ ತಥಾ

156

ಸಮಯಾನುವರ್ತನವಾದಿತೆ ವ್ಯವಹಾರ ತನ್ನ ಜಾಗೃತಿಯ ಅನುಸಾರ ಅಂಗೀಕರಿಸುತ್ತಾನೆ.

ಬೀಜ ಮಾತ್ರ ಉದ್ದವದ ಅನಂತರ ಪ್ರಳಯದ (ಬೀಜ) ದಿಕ್ಕಿನಲ್ಲಿ ಹಾಗು ಪ್ರಳಯದ (ಬೀಜ) ನಂತರ ಉದ್ದವದ ದಿಕ್ಕಿನಲ್ಲಿ ಗತಿಮಾನವಾಗಿದೆ.

ಬುದ್ಧಿಯಲ್ಲಿ ಪ್ರಾಪ್ತ ಅವಧಾರಣಗಳು (ಸಂಸ್ಕಾರ) ಕ್ರಮವಾಗಿ ವಿಚಾರ ಹಾಗು ಕ್ರಿಯೆಯಲ್ಲಿ ಅಭಿವ್ಯಕ್ತವಾಗುತ್ತದೆ ಮತ್ತು ಕ್ರಿಯೆಯಿಂದ ಪ್ರಾಪ್ತ ವಿಚಾರ ಪುನಃ ಅನುಮಾನ ಸಹಿತ ಅವಧಾರಣದಲ್ಲಿ (ಸಂಸ್ಕಾರ) ಸ್ಥಿತವಾಗುತ್ತದೆ. ಸಂಸ್ಕಾರವೇ ಧಾರಣ.

ಸಮಸ್ತ ಮಾನವನ ಧಾರಣ ಮಾತ್ರ 'ವಿಶ್ರಾಮ'ವೆಯಾಗಿದೆ. ಸಮಸ್ತ ಶ್ರಮ, ವಿಶ್ರಾಮಕ್ಕೇಯಿರುವುದು.

ವಿಶ್ರಾಮ ಯೋಗ್ಯ ಅವಧಾರಣ ಮಾತ್ರ ನ್ಯಾಯ ಪೂರ್ಣ ವ್ಯವಹಾರದಿಂದ, ಧರ್ಮ ಪೂರ್ಣ ವಿಚಾರದಿಂದ ಹಾಗು ಸತ್ಯದಲ್ಲಿ ಅನುಭೂತಿ ಸಹಿತ ಪ್ರಮಾಣಿತವಾಗುತ್ತದೆ.

ಸತ್ಯದ ಆಶ್ರಯದಲ್ಲಿ ಧರ್ಮ ಹಾಗು ನ್ಯಾಯವಿದ್ದೇಯಿದೆ.

ನ್ಯಾಯಾಶ್ರಿತ ಮಾನವೀಯ ಇಕಾಯಿಯಿಂದ (ವ್ಯಕ್ತಿ, ಪರಿವಾರ, ಸಮಾಜ, ರಾಷ್ಟ್ರ ಹಾಗು ವಿಶ್ವ) ಸಂಪಾದಿತ ಸಮಸ್ತ ಕ್ರಿಯೆ ತಥಾ ವ್ಯವಹಾರ ಮಾತ್ರ ಸುಕೃತ ಪರಿಣಾಮ, ಪರಿಪಾಕ ಫಲಕ್ಕಾಗಿಯಿರುವುದು (ಕಾರಣ), ಇದರಿಂದಲೇ ಸಮಾಧಾನ ಹಾಗು ಸಹ-ಅಸ್ತಿತ್ವ ಸಿದ್ಧವಾಗುತ್ತದೆ.

ನ್ಯಾಯಾಶ್ರಿತ ವ್ಯವಹಾರ ಸಂಪನ್ನ ಸಮಾಜದಲ್ಲಿ ಮಾನವೀಯತೆ ಹಾಗು ಅತಿಮಾನವೀಯತೆಯ ಪ್ರತಿಷ್ಠೆ ಸ್ಪಷ್ಟವಾಗಿದೆ.

ಅದರ ವಿಪರೀತ ಸಮಯಾನುವರ್ತಿ ವ್ಯವಹಾರದಿಂದ ಭ್ರಮೆ ಹಾಗು ಅಜ್ಞಾನದಿಂದ ಪೀಡಿತವಾಗುತ್ತದೆ, ಇದರಿಂದ ಅಮಾನವೀಯತೆಯ ಆವಿರ್ಭಾವವಾಗುತ್ತದೆ.

ಲಘು ಮೌಲಿಕತೆಯಿಂದ ಗುರು ಮೌಲಿಕತೆಯ ದಿಕ್ಕಿನಲ್ಲಿ ಪ್ರಗತಿಗೆ 'ಸುಕೃತ' ಮತ್ತು ಗುರು ಮೌಲಿಕತೆಯಿಂದ ಲಘು ಮೌಲಿಕತೆಯ ದಿಕ್ಕಿನಲ್ಲಿ ಗತಿಗೆ 'ವಿಕೃತ' ಪರಿಣಾಮ, ಪರಿಪಾಕ ಹಾಗು ಫಲವೆಂದು ಸಂಜ್ಞೆ.

ಮಾನವೀಯ ವ್ಯವಹಾರದ ದೃಷ್ಟಿ, ಗುಣ ಹಾಗು ವಿಷಯದ ಆಧಾರದ ಮೇಲೆ ಸಾಮಾಜಿಕತೆಯ ನಿಮ್ಮಾನುಸಾರ ವರ್ಗೀಕರಣ ಮಾಡಲಾಗಿದೆ -

157

(1)ಮಾನವೀಯತೆ

(2)ಅತಿಮಾನವೀಯತೆ,

(3)ಅಮಾನವೀಯತೆ.

* ಮಾನವೀಯತೆಯ ಪೋಷಕ ದೃಷ್ಟಿ, ಸ್ವಭಾವ ಹಾಗು ವಿಷಯವಿರುವ ಇಕಾಯಿಗೆ 'ಮಾನವ' ಎಂದು ಸಂಜ್ಞೆ. ಅತಿಮಾನವೀಯತೆಯ ಪೋಷಕ ದೃಷ್ಟಿ, ಸ್ವಭಾವ ಹಾಗು ವಿಷಯವಿರುವ ಇಕಾಯಿಗೆ ಎರಡು ಶ್ರೇಣಿಯಲ್ಲಿ ವರ್ಗೀಕೃತ ಮಾಡಲಾಗಿದೆ - (೧) ದೇವ ಮಾನವ ಮತ್ತು (೨) ದಿವ್ಯ ಮಾನವ. ಅಮಾನವೀಯತೆಯ ಪೋಷಕ ದೃಷ್ಟಿ ಸ್ವಭಾವ ಹಾಗು ವಿಷಯವಿರುವ ಇಕಾಯಿಗಳಿಗೂ ಎರಡು ಶ್ರೇಣಿಯಲ್ಲಿ ವರ್ಗೀಕೃತ ಮಾಡಲಾಗಿದೆ - (೧) ಪಶು ಮಾನವ ಮತ್ತು (೨) ರಾಕ್ಷಸ ಮಾನವ.

ಮಾನವ ಜಾಗೃತ; ಅತಿಮಾನವ ಪೂರ್ಣ ಜಾಗೃತ ತಥಾ ಅಮಾನವನು ಅಜಾಗೃತ ಇಕಾಯಿ.

ಶೋಷಣೆ ತಥಾ ಪೋಷಣೆ ಭೇದದಿಂದಲೇ ಮಾನವ ಗುರು-ಮೌಲೀಕರಣೆ ಹಾಗು ಲಘು - ಮೌಲೀಕರಣೆ ಪ್ರಕ್ರಿಯೆಯನ್ನು ಸಂಪನ್ನ ಮಾಡುತ್ತಾನೆ, ಇದು ವಿಕಾಸ ಹಾಗು ಹಾಸನ ರೂಪದಲ್ಲಿ ಪರಿಲಕ್ಷಿತವಾಗುತ್ತದೆ.

ಲಘುತ್ವದ ಗುರುತ್ವದ ಮೇಲೆ, ಸಂಕೀರ್ಣತ್ವದ ವ್ಯಾಪಕತ್ವದ ಮೇಲೆ, ಅಲ್ಪತ್ವದ ಬೃಹತ್ವದ ಮೇಲೆ, ವ್ಯಷ್ಟಿತ್ವದ ಸಮಷ್ಟಿತ್ವದ ಮೇಲೆ, ದುರ್ಬಲದ ಸಬಲದ ಮೇಲೆ, ಅಕ್ಷಮದ ಸಕ್ಷಮದ ಮೇಲೆ, ಅನಾಧಿಕಾರಿಯ ಅಧಿಕಾರಿಯ ಮೇಲೆ ಆಕ್ರಮಣದಿಂದ ಅಧಿಕಾರ ಪಡೆಯುವ ಪ್ರಯಾಸ ಸಫಲವಾಗುವುದಿಲ್ಲ. ತದನುಸಾರ ಸಮಯಾನುವರ್ತನೆ, ನ್ಯಾಯವಾದಿತೆಯ ಮೇಲೆ ಸಫಲ ಹಾಗು ಸಿದ್ಧವಾಗಿಲ್ಲ ಮತ್ತು ಸಿದ್ಧವಾಗುವುದೂಯಿಲ್ಲ.

ಏಕವನ್ನು ಅನೇಕದಿಂದ ತಥಾ ಅನೇಕವನ್ನು ಏಕದಿಂದ ಅನುಸರಣೆ ಹಾಗು ಅನುಕೂಲತೆ ಕೇವಲ ನ್ಯಾಯಪೂರ್ವಕ ಮಾಡಲಾಗುವ ವ್ಯವಹಾರದಿಂದಲೇ ಸಫಲವಾಗಿದೆ, ಅನ್ಯಥಾ ಅಸಫಲವಾಗಿದೆ.

ಪೂರ್ವೋಕ್ತಾನುಸಾರವೇ ಒಬ್ಬ ವ್ಯಕ್ತಿಯಿಂದ ಕುಟುಂಬದ, ಒಂದು ಕುಟುಂಬದಿಂದ ಸಮಾಜದ, ಒಂದು ಸಮಾಜದಿಂದ ರಾಷ್ಟ್ರದ, ಒಂದು ರಾಷ್ಟ್ರದಿಂದ ವಿಶ್ವದ ಸಹಿತ ನ್ಯಾಯಸಮ್ಮತ ವ್ಯವಹಾರ ತಥಾ ಅನುಸರಣೆ - ಪ್ರಣಾಳಿಯಿದೆ. ಅನುಸರಣೆ-

158

ಪ್ರಣಾಳಿಯಿಂದ ಸ್ವರ್ಗೀಯತೆಯ ಅನುಭವ ಜಾಗೃತ ಮಾನವ ಪರಂಪರೆಯಲ್ಲಿಯೆಯಿದೆ. ಇದರ ವಿಪರೀತ ಕ್ರಮದಿಂದ ನರಕೀಯತೆಯಿದೆ. ಇದು ಸಿದ್ಧವೇಕೆಯಾಗುತ್ತದೆ ಅಂದರೆ, ಗುರುಮೌಲ್ಯವನ್ನು ಲಘುಮೌಲ್ಯದಲ್ಲಿ ಸೇರಿಸಲಾಗುವುದಿಲ್ಲ.

ಮಾನವೋಚಿತ ನಿಯಮ ಪಾಲನೆ ಪ್ರಕ್ರಿಯೆ ಹಾಗು ನೀತಿಯನ್ನು ಅನುಕೂಲ ಹಾಗು ಇದರ ವಿಪರೀತಕ್ಕೆ ಪ್ರತಿಕೂಲ ಆಚರಣೆ ಎಂಬ ಸಂಜ್ಞೆಯಿದೆ.

ನಿಯಮವೇ ನ್ಯಾಯ, ನ್ಯಾಯವೇ ಜ್ಞಾನ, ಜ್ಞಾನವೇ ವಿಜ್ಞಾನ ಹಾಗು ವಿವೇಕ, ವಿವೇಕ ಹಾಗು ವಿಜ್ಞಾನವೇ ಸಮಾಧಾನ, ಸಮಾಧಾನವೇ ನಿತ್ಯ ಸುಖ. ಸಮಾಧಾನವೇ ನಿಯಂತ್ರಣ, ನಿಯಂತ್ರಣವೇ ನಿಯಮ.

ರೂಪ, ಬಲ ಹಾಗು ಬುದ್ಧಿ ವೈಯಕ್ತಿಕ ಸಂಪತ್ತಿ. ಇದರ ಸಫಲತೆ ಇದರ ಸದುಪಯೋಗದಿಂದಲೆಯಿದೆ, ಇದು ಸಾಮಾಜಿಕ ಹಾಗು ಬೌದ್ಧಿಕ ನಿಯಮ ಪಾಲನೆಯಿಂದಲೇ ಸಂಭವ. ಇದು ನಿಮ್ಮಾನುಸಾರವಿದೆ:-

* ರೂಪದ ವ್ಯವಹಾರ ಸಚ್ಚರಿಕೆಯ ಸಹಿತ, ಬಲದ ವ್ಯವಹಾರ ದಯೆಯ ಸಹಿತ ಹಾಗು ಬುದ್ಧಿಯ ವ್ಯವಹಾರ ವಿವೇಕ ಹಾಗು ವಿಜ್ಞಾನದ ಸಹಿತ ಸಂಕುಲಿತ ರೂಪದಲ್ಲಿ ಪ್ರತಿಷ್ಠಿತವಿದೆ. ಇದೇ ನಿಯಮ ಹಾಗು ನ್ಯಾಯ.

ಉಕ್ತ ವ್ಯವಹಾರ ನ್ಯಾಯಾಶ್ಚಿತವಾದ ಮೇಲೆಯೇ ಸಫಲವಾಗುತ್ತದೆ, ಅನ್ಯಥಾ ಸಮಯಾನುವರ್ತನೆಯಾಗಿದ್ದು, ಇದು ಕ್ಲೇಶದ ಕಾರಣವಾಗುತ್ತದೆ.

ಜನ, ಧನ ಹಾಗು ಯಶ, ಇದು ಕೌಟುಂಬಿಕ ಮತ್ತು ಅಖಂಡ ಸಮಾಜದ ಸಂಪತ್ತಿಯಾಗಿದೆ. ನ್ಯಾಯ-ಸಮ್ಮತ ಸಂಬಂಧ ನಿರ್ವಾಹದ ನೀತಿ ಹಾಗು ರೀತಿಯಿಂದ, ವಿಧಿ - ವಿಹಿತ ಮಾಡಲಾಗುವ ವ್ಯವಸಾಯ, ಪ್ರಯೋಗ ಹಾಗು ಆವಿಷ್ಕಾರದಿಂದ ಹಾಗು ಅನುಸಂಧಾನ ಮತ್ತು ಪ್ರಯೋಜನಾರ್ಥದಿಂದಲೇ ಈ ಸಂಪತ್ತಿಗಳ ಸದುಪಯೋಗ ಸಿದ್ಧವಾಗಿದೆ ತಥಾ ಸಫಲತೆ ಸಿಕ್ಕಿದೆ, ಅರ್ಥಾತ್ ಜನ, ಧನ ಹಾಗು ಯಶದ ಉಪಯೋಗ ಕೌಟುಂಬಿಕ ಮತ್ತು ಅಖಂಡ ಸಮಾಜ ಸಮೃದ್ಧಿಗೆ ಇರಬೇಕು, ವೈಯಕ್ತಿಕ ಸಮೃದ್ಧಿಗಲ್ಲ. ಈ ರೀತಿಯಲ್ಲಿ ನ್ಯಾಯಪೂರ್ಣ ವ್ಯವಹಾರದಿಂದಲೇ ಕುಟುಂಬದಲ್ಲಿ ಪರಸ್ಪರ ಸಹಯೋಗ, ಸಹಕಾರ್ಯ ಹಾಗು ಸಹ-ಅಸ್ತಿತ್ವದ ಭಾವನೆಯ ವಿಕಾಸ ಸಂಭವ, ಇದರಿಂದ ಪರಸ್ಪರತೆಯಲ್ಲಿ ವಿಶ್ವಾಸದ ಪ್ರತಿ ದೃಢತೆಯಾಗುತ್ತದೆ. ಈ ರೀತಿಯಲ್ಲಿ ಸಮಾಯಾನುವರ್ತನೆ ಮನೋವೃತ್ತಿಯ ನಾಶವಾಗುತ್ತದೆ.

159

ನ್ಯಾಯವಾದಿ ವ್ಯವಹಾರದಿಂದ ಸಾಮಾಜಿಕ ಸ್ಥರದಲ್ಲಿ ನೈತಿಕ ಮಾರ್ಗ ದರ್ಶನ, ವೈಚಾರಿಕ ಸಮಾಧಾನ ಯೋಗ್ಯ ಪ್ರೇರಣೆ ತಥಾ ವ್ಯಾಪಕ ಸತ್ತಾನುಭೂತಿ ಯೋಗ್ಯ ಅಧ್ಯಯನದಿಂದ ಅರ್ಥದ ರಕ್ಷಣೆ ಹಾಗು ಸದುಪಯೋಗಾತ್ಮಕ ನೀತಿಯ ಉದ್ಘಾಟನೆಯಿದೆ. ಮಾನವೀಯತೆ ಹಾಗು ಅತಿಮಾನವೀಯತೆಯನ್ನು ಬೋಧಗಮ್ಯ ಮಾಡಲು ಯೋಗ್ಯ ಅಧ್ಯಾಪನ ಮತ್ತು ಸತ್ತಾನುಭೂತಿ ಯೋಗ್ಯ ಸಮಾಧಾನ ಹಾಗು ಸಮೃದ್ಧಿ ಯೋಗ್ಯ ಕರ್ಮಾಭ್ಯಾಸ ಹಾಗು ಪರಂಪರೆಯ ಪಾಲನೆಗೆ ನಿಷ್ಠೆಯ ಉದ್ಭವ ಹಾಗು ವಿಕಾಸದಿಂದ ಸಾಮಾಜಿಕ ಜೀವನದ ಸಫಲತೆಯ ಮಾರ್ಗ ಪ್ರಶಸ್ತವಾಗುತ್ತದೆ.

ಸಫಲ ಸಾಮಾಜಿಕ ಜೀವನ ಹಾಗು ವ್ಯವಸ್ಥೆಯಿಂದ ವ್ಯಕ್ತಿಗಳಿಗೆ ತಮ್ಮ ಜಾಗೃತಿಗಾಗಿ ಪ್ರೇರಣೆ ಪಡೆಯಲು ಅಧಿಕ ಸಂಭವನೀಯತೆಯಿದೆ. ಲಘು ಮೌಲ್ಯವೂ ಗುರು ಮೌಲ್ಯದ ದಿಕ್ಕಿನಲ್ಲಿ ಆಕೃತವಾಗುವುದು ಸ್ವಾಭಾವಿಕವೇಯಾಗಿದೆ ಮತ್ತು ಸಫಲ ಸಮಾಜದಲ್ಲಿ ಈ ದಿಕ್ಕಿನಲ್ಲಿ ಉನ್ಮುಖವಾಗಲು ಹಾಗು ತದನುಸಾರ ಪ್ರಯೋಗ, ಪ್ರಯಾಸ ಹಾಗು ವ್ಯವಸಾಯ ತಥಾ ಅಧ್ಯಯನಕ್ಕಾಗಿ ಉಪಯುಕ್ತ ವಾತಾವರಣ, ಅವಸರ ಹಾಗು ಸಾಧನ ಉಪಲಬ್ಧವಾಗಿರುತ್ತದೆ.

ನ್ಯಾಯವೇ ವಿಧಾನ, ವಿಧಾನವೇ ವ್ಯವಸ್ಥೆ, ವ್ಯವಸ್ಥೆಯೇ ಜ್ಞಾನ - ವಿವೇಕ - ವಿಜ್ಞಾನ, ಜ್ಞಾನ - ವಿವೇಕ - ವಿಜ್ಞಾನವೇ ನಿಯಮ, ನಿಯಮವೇ ನಿಯಂತ್ರಣ, ನಿಯಂತ್ರಣವೇ ನ್ಯಾಯ.

ನ್ಯಾಯ, ವಿಧಾನ ವ್ಯವಸ್ಥೆ ಜ್ಞಾನ ಹಾಗು ನಿಯಮಕ್ಕಾಗಿ ಪ್ರೇರಣೆ ನೀಡಲು ಹಾಗು ಇದರಲ್ಲಿ ನಿಷ್ಠೆ ಉತ್ಪನ್ನ ಮಾಡಲು ಕ್ರಮದಿಂದ ವ್ಯವಸ್ಥಾಪಕ, ವಿಧಾಯಕ, ವಿದ್ವಾನ, ವಿಚಾರಕ ಹಾಗು ಪ್ರಚಾರಕನ ಉಪಯುಕ್ತತೆ ಅಪರಿಹಾರ್ಯವಾಗಿದೆ.

¤ ವ್ಯವಸ್ಥಾಪಕ - ವಿಧಿ ವಿಧಾನದಲ್ಲಿ ಪಾರಂಗತ ನೈತಿಕತೆಯ ಆಚರಣೆ ಮಾಡುವವ - ಮಾಡಿಸುವವ ತಥಾ ವಿಪರೀತ ಆಚರಣೆ ಮಾಡುವವರಿಗೆ ತಿಳಿವಳಿಕೆಪೂರ್ವಕ ಸುಧಾರಣೆ ತರಲಾಗುವಂತಹ ವ್ಯಕ್ತಿಗೆ ವ್ಯವಸ್ಥಾಪಕವೆಂದು ಸಂಜ್ಞೆ.

¤ ವಿಧಾಯಕ - ವಿಧಿ ವಿಧಾನದಲ್ಲಿ ಪಾರಂಗತ. ವರ್ತಮಾನ ವಾತಾವರಣ ಹಾಗು ಪರ್ಯಾವರಣ ಹಾಗು ಸಂತುಲನದ ಯೋಗ್ಯ ಸ್ಪಷ್ಟ ನೀತಿ - ನಿರ್ಣಯ ಮಾಡುವ ವಿದ್ವಾನ ಹಾಗು ವ್ಯಕ್ತಿತ್ವ-ಸಂಪನ್ನ ವ್ಯಕ್ತಿಗೆ 'ವಿಧಾಯಕ' ಎಂದು ಸಂಜ್ಞೆ.

160

✧ ವಿದ್ಯಾನ - ಮಾನವೀಯತೆಪೂರ್ಣ ಆಚರಣ ಸಹಿತ, ಮಾನವನ ಪರಸ್ಪರತೆಯ ಮಧ್ಯದಲ್ಲಿ ಕಂಡುಬರುವ ವಿಷಯತೆಯನ್ನು ಸಮಾಪಕರಣ ಮಾಡಲು ಯೋಗ್ಯ ಸಮಾಧಾನದ ನಿರ್ಬ್ಯಂತ ಸ್ವರೂಪದಲ್ಲಿ ಅಧ್ಯಯನ ಮಾಡಿಸುವವ ವ್ಯಕ್ತಿಗೆ 'ವಿದ್ಯಾನ' ಎಂದು ಸಂಜ್ಞೆ.

✧ ವಿಚಾರಕ - ಮಾನವೀಯತೆಪೂರ್ಣ ಆಚರಣ ಸಹಿತ ಮಾನವನ ಪರಸ್ಪರತೆಯ ಮಧ್ಯದಲ್ಲಿ ಕಂಡುಬರುವ ವಿಷಯತೆಯನ್ನು ಸಮಾಪಕರಣ ಮಾಡಲು ಯೋಗ್ಯ ಸಮಾಧಾನವನ್ನು ಪ್ರಸ್ತುತ ಮಾಡುವ ವ್ಯಕ್ತಿಗೆ 'ವಿಚಾರಕ' ಎಂದು ಸಂಜ್ಞೆ.

✧ ಪ್ರಚಾರಕ - ನೈತಿಕತೆ ಚಾರಿತ್ರ್ಯ ಹಾಗು ಮೌಲ್ಯದ, ಕಲಾಪೂರ್ಣ ರೀತಿಯಲ್ಲಿ ಲೋಕ ಜನ - ಮಾನಸದಲ್ಲಿ, ವಿಶ್ವಾಸ ಉತ್ಪನ್ನ ಮಾಡುವವನಿಗೆ 'ಪ್ರಚಾರಕ' ಎಂದು ಸಂಜ್ಞೆ.

✧ ಪ್ರಜೆ - ನಿಯಮ ಸಹಿತ ಮಾನವೀಯತೆ ಪೂರ್ಣ ಆಚರಣದ ಪಾಲನೆ ಮಾಡುವ ಪ್ರತ್ಯೇಕ ಮಾನವನಿಗೆ 'ಪ್ರಜೆ' ಎಂದು ಸಂಜ್ಞೆ.

✧ ವಿಚಾರಕ ಹಾಗು ವಿದ್ಯಾನರ ಪ್ರಚಾರಕರಾಗಬಹುದು.

ಶಾಸನ ಮತ್ತು ಶಾಸಕ ಭ್ರಮಿತ ಮಾನವ ಪ್ರವೃತ್ತಿಯ ಉಪಜ. ಅತಃ ಶಾಸಕ ವಿಚಾರಕನಾಗುವುದು ಸಾಧ್ಯವಿಲ್ಲ. ವಿಚಾರಕ ಸದಾ-ಸದಾ ವ್ಯವಸ್ಥೆಯ ಪೋಷಕನಾಗಿರುತ್ತಾನೆ. ಶಾಸಕ ಸದಾ-ಸದಾ ವ್ಯವಸ್ಥೆಯ ಶೋಷಕನಾಗಿರುತ್ತಾನೆ. ಅತಃ ವಿಚಾರಕ (ವ್ಯವಸ್ಥಾಪಕ) ಎಂದಿಗೂ ಶಾಸಕನಾಗಲು ಸಾಧ್ಯವಿಲ್ಲ ಹಾಗು ಶಾಸಕ ಎಂದಿಗೂ ವಿಚಾರಕನಾಗಲು ಸಾಧ್ಯವಿಲ್ಲ.

ಯಾವಾಗ ವ್ಯಕ್ತಿ ವ್ಯವಸ್ಥೆ ಅರ್ಥಾತ್ ಅಖಂಡ ಸಮಾಜ, ಸಾರ್ವಭೌಮ ವ್ಯವಸ್ಥೆಯ ಅರ್ಥದಲ್ಲಿ ಸಮಾಧಾನ ಪೂರ್ಣ ವಿಧಿಯಿಂದ ತನ್ನ ವೈಚಾರಿಕ ಜೀವನದ ಪ್ರತಿಷ್ಠೆ ಯೋಗ್ಯ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯನ್ನು ಅರ್ಜಿತ ಮಾಡುತ್ತಾನೋ; ಆವಾಗ ಅವನು ವ್ಯವಹಾರ ಪಕ್ಷದ ಸಮಸ್ಯೆಗಳ ಸಮಾಧಾನದಿಂದ ಯುಕ್ತವಾಗುತ್ತಾನೆ ಹಾಗು ಇದೇ ಅವನ ತೃಪ್ತಿಯೂ ಆಗಿರುತ್ತದೆ. ಇಂತಹ ವ್ಯಕ್ತಿಯಲ್ಲಿ ಕ್ಷೋಭದ ಅಭಾವವಾಗುತ್ತದೆ. ಇದೇ ಮಾನವೀಯತೆಯ ವೈಭವ.

161

ನ್ಯಾಯ ಪೂರ್ಣ ವ್ಯವಹಾರವನ್ನು ಸ್ವೀಕರಿಸುವ ಅರ್ಥವೇ ಸಮಾಧಾನ. ನ್ಯಾಯಪೂರ್ಣ ವ್ಯವಹಾರದಲ್ಲಿ ಸಮಾಧಾನ ನಿಹಿತವಿರುತ್ತದೆ.

ಮಾನವನಿಂದ ಮಾಡಲಾಗುವ ಸಮಸ್ತ ಕ್ರಿಯೆಗಳು ವಿಚಾರ ಮೂಲಕವೇ. ಅತಃ ವೈಚಾರಿಕ ಪಾರಂಗತೆಯಿಂದಲೇ ಕ್ರಿಯೆಯ ನಿಪುಣತೆ, ಕುಶಲತೆ, ಪಾಂಡಿತ್ಯ, ವೈಚಾರಿಕ ಶಿಷ್ಟತೆಯಿಂದಲೇ ವ್ಯವಹಾರಿಕ ನ್ಯಾಯ, ವ್ಯವಹಾರಿಕ ನ್ಯಾಯದಿಂದಲೇ ವೈಚಾರಿಕ ಪಾರಂಗತ್ವ, ವೈಚಾರಿಕ ಪಾರಂಗತ್ವದಿಂದಲೇ ಭಾವದ ಶಿಷ್ಟ ಭಾಶಾಕರಣ ಸಂಭವ. ಯಥಾರ್ಥತೆಯ ಅಧ್ಯಯನವೇ ವೈಚಾರಿಕ ಸಮಾಧಾನ ಹಾಗು ಸತ್ಯಾನುಭೂತಿಯೇ ಆನಂದ, ಇದೇ ಸಫಲತೆಯ ಪರಾಕಾಷ್ಠೆ.

ಸಮಸ್ತ ವ್ಯವಸಾಯ ಸಮೃದ್ಧಿಯ ವಾಂಛೆಯಿಂದ ಮಾತ್ರ, ಸಮಸ್ತ ವ್ಯವಹಾರ ಪರಿಮಾರ್ಜಿತ ಮಾನವ ಸಮಾಜ ನ್ಯಾಯದ ಪೋಷಣೆಯ ಮೂಲ ಭಾವನೆಯಿಂದ, ಮಾನವೀಯತೆ - ಸಂಪನ್ನ ಸಮಸ್ತ ಭಾವಪೂರ್ಣ ಭಾಷೆ - ಪ್ರಸಾರಣೆ - ಕ್ರಿಯೆಯನ್ನು ಮಾನವನ ಅಭ್ಯುದಯ ಹಾಗು ವಿಕಾಸದ ಕಾಮನೆಯಿಂದ ಸತ್ಯತೆಯಲ್ಲಿ 'ಅನುಭೂತಿ ಹಾಗು ಅಧ್ಯಯನ' ಮಾನವನು ವಿಶ್ವಾಮದ ಆಕಾಂಕ್ಷೆಯಿಂದ ಮಾಡಿದ್ದಾನೆ. ವಿಶ್ವಾಮವೇ ಸಮಾಧಾನ.

ಉತ್ಪಾದನೆಗಿಂತ ಅಧಿಕ ಉಪಭೋಗ, ಪ್ರಯಾಸ ಹಾಗು ಪ್ರವೃತ್ತಿ, ಸಮಾಜ - ಶೋಷಕ ಸಿದ್ಧವಾಗಿದೆ, ತಥಾ ಸಮಯಾನುವರ್ತನೆವಾದಿತೆಯಿಂದ ಮಾತ್ರ ಫಲವಾಗುತ್ತದೆ, ಅನ್ಯಥಾ ನ್ಯಾಯವಾದಿ ವ್ಯವಹಾರದಿಂದಲೇ ಆವಶ್ಯಕತೆಗಿಂತ ಅಧಿಕ ಉತ್ಪಾದನೆ ಹಾಗು ಸಮಾಜ ನ್ಯಾಯ ಪೋಷಕವಾಗುವುದು ಸಿದ್ಧವಾಗಿದೆ. ಸಮಯಾನುವರ್ತನೆವಾದಿತೆ ವ್ಯವಹಾರದಲ್ಲಿ ಪರಧನ, ಪರನಾರಿ ಹಾಗು ಪರಪೀಡನ ಒಳಗೊಂಡಿರುವುದು ಆವಶ್ಯಕ, ಇದರಿಂದಲೇ ಅಮಾನವೀಯತೆವಾದಿ ಮಾನಸಿಕತೆ, ಭಾಷೆ, ಪ್ರಸಾರಣೆ, ಪ್ರಕಾಶನ ಹಾಗು ಪ್ರದರ್ಶನ ಅನಿವಾರ್ಯವಾಗಿದೆ, ಇದರಿಂದ ಭ್ರಮೆಯ ಹಾಗು ವಿಲಾಸಿಕತೆಯ ಪ್ರಚಾರವಾಗುತ್ತದೆ, ಇದು ಮಾನವ-ಕುಲವನ್ನು ಅಸಂತುಲಿತ, ವ್ಯಾಕುಲ ಹಾಗು ತೃಪ್ತಮಾಡಿದೆ.

ಮಾನವ ತಪ್ಪು ಮಾಡುವ ಅಧಿಕಾರವನ್ನು ಹೊಂದಿದ್ದು ಹಾಗು ಸಹಿಯನ್ನು ಮಾಡುವ ಅವಸರ ಹಾಗು ಸಾಧನವನ್ನು ಹೊಂದಿದ್ದು ಜನ್ಮಿಸುತ್ತಾನೆ.

162

ಪೂರ್ವೋಕ್ತಾನುಸಾರ ಮಾನವನಿಗೆ ನ್ಯಾಯವಾದಿ ಮಾಡುವುದಕ್ಕಾಗಿ ಹಾಗು ನ್ಯಾಯದಲ್ಲಿ ನಿಷ್ಠೆ ಉತ್ಪನ್ನಿಸಲು ಅವನನ್ನು ಸ್ವಭಾವವಾದಿ ಮಾಡಲು ವ್ಯವಸ್ಥೆ ಹಾಗು ಶಿಕ್ಷಣ ಸಂಸ್ಕಾರದ ಯೋಗದಾನ ಅವಶ್ಯಕ.

ಭ್ರಾಂತಿಯೇ ಸಮಯಾನುಪತ್ತನೆಯಲ್ಲಿ ಆಸಕ್ತಿಯ ಕಾರಣ. ಭ್ರಾಂತಿಯು ಮಾತ್ರ ಆರೋಪವೇ.

ಭ್ರಾಂತಿ ನಿರ್ಭ್ರಮತೆಯ ವಿಪರೀತದಲ್ಲಿದೆ. ನಿರ್ಭ್ರಮತೆಯೇ ನ್ಯಾಯದ ಕಾರಣ. ನಿರ್ಭ್ರಮತೆಯ ಫಲಸ್ವರೂಪ ಸಮಾಧಾನ, ಮನೋಬಲ, ಸುಖ, ಕರ್ತವ್ಯದಲ್ಲಿ ನಿಷ್ಠೆ, ಸ್ನೇಹ, ಅನುರಾಗ, ಶಾಂತಿ, ಸಂತೋಷ, ಪ್ರೇಮ, ಸಹಜತೆ, ಸರಳತೆ, ಉತ್ಸಾಹ, ಆಹ್ಲಾದ ಹಾಗು ಆನಂದ ಸಹಜ ಉಪಲಬ್ಧತೆಯಾಗಿದೆ. ಇವೆಲ್ಲ ಅನನ್ಯ ರೂಪದಲ್ಲಿ ಸಂಬಂಧವಾಗಿದೆ.

ಸಮಾಧಾನ - ಯಾಕೆ, ಏನು, ಎಷ್ಟು, ಹೇಗೆಯ ಪೂರ್ತಿ ಅಥವಾ ಕ್ರಿಯೆಗಿಂತ ಅಧಿಕ ಜ್ಞಾನದ 'ಸಮಾಧಾನ' ಎಂದು ಸಂಜ್ಞೆ.

ಮನೋಬಲ - ಕೇಂದ್ರೀಕೃತ ಮನಃ ಅರ್ಥಾತ್ ಅರಿವನ್ನು ಪ್ರಮಾಣಿತ ಮಾಡುವುದರಲ್ಲಿ ಮನೋಯೋಗ ಸ್ಥಿತಿಗೆ 'ಮನೋಬಲ' ಎಂದು ಸಂಜ್ಞೆ.

ಸುಖ - ನ್ಯಾಯದಲ್ಲಿ ದೃಢತೆಗೆ 'ಸುಖ' ಎಂದು ಸಂಜ್ಞೆ.

ಕರ್ತವ್ಯದಲ್ಲಿ ನಿಷ್ಠೆ - ಉತ್ತರದಾಯಿತ್ವವನ್ನು ವಹಿಸುವುದೇ ಕರ್ತವ್ಯದಲ್ಲಿ ನಿಷ್ಠೆ.

ಸ್ನೇಹ - ನ್ಯಾಯ, ಧರ್ಮ ಹಾಗು ಸತ್ಯದ ನಿರ್ವಿರೋಧಿತೆಯೇ 'ಸ್ನೇಹ'.

ಅನುರಾಗ - ನಿರ್ಭ್ರಮತೆಯಿಂದ ಪ್ರಾಪ್ತ ಆಪ್ತಾವನೆಗೆ 'ಅನುರಾಗ' ಎಂದು ಸಂಜ್ಞೆ.

ಶಾಂತಿ - ವೇದನೆ ವಿಹಿತ ಜಾಗೃತ ವೈಚಾರಿಕ ಸ್ಥಿತಿ.

ಸಂತೋಷ - ಅಭಾವದ ಅಭಾವ (ಸಮೃದ್ಧಿ, ಸಮಾಧಾನ) ಅಥವಾ ಅಭಾವದಿಂದ ಅಭಾವಿತ ಚಿತ್ರಣ ವಿಚಾರ ಸಂಪನ್ನತೆ.

ಪ್ರೇಮ - ದಿವ್ಯ ಮಾನವ, ದೇವ ಮಾನವರ ಸಾನಿಧ್ಯತೆ,

163

ಸಾಮೀಪ್ಯತೆ, ಸಾರೂಪ್ಯತೆ ಹಾಗು ಸಾಲೋಕ್ಯತೆ

ಪ್ರಾಪ್ತಿಸಲು ಅಂತಿಮ ಸಂಕಲ್ಪಕ್ಕೆ 'ಪ್ರೇಮ' ಎಂದು ಸಂಜ್ಞೆ.

ದಯೆ, ಕೃಪೆ, ಕರುಣೆಯ ಸಂಯುಕ್ತ ಅಭಿವ್ಯಕ್ತಿ.

▫ ಸಹಜತೆ - ಜಾಗೃತಿ ಸಹಜ ಮಾನಸಿಕ ವೈಚಾರಿಕ, ಚಿಂತನ

ಸ್ಥಿತಿಯಲ್ಲಿ ಸಂಗೀತಕ್ಕೆ 'ಸಹಜತೆ' ಎಂದು ಸಂಜ್ಞೆ.

▫ ಸರಳತೆ - ಜಾಗೃತಿ ಸಹಜ ಸ್ವಭಾವಪೂರ್ಣ ವ್ಯವಹಾರಕ್ಕೆ

'ಸರಳತೆ' ಎಂದು ಸಂಜ್ಞೆ. ಕಾಯಿಕ, ವಾಚಿಕ, ಮಾನಸಿಕ

ರೂಪದಲ್ಲಿ ನಿಯಮಗಳನ್ನು ವಚನಪೂರ್ವಕ ಪ್ರಮಾಣಿತ

ಮಾಡುವುದು.

▫ ಆನಂದ - ಸಹ-ಅಸ್ತಿತ್ವದಲ್ಲಿ ಅನುಭೂತಿಗೆ 'ಆನಂದ' ಎಂದು ಸಂಜ್ಞೆ.

▫ ಪೂರ್ಣತೆ - ಸರ್ವತೋಮುಖಿ ಸಮಾಧಾನ ಸಂಪನ್ನತೆಯೇ

'ಪೂರ್ಣತೆ'.

▫ ನಿರ್ಭ್ರಮತೆ - ನ್ಯಾಯ, ಧರ್ಮ ಹಾಗು ಸತ್ಯತೆಪೂರ್ಣ ವ್ಯವಹಾರ, ಭಾಷೆ,

ಭಾವ, ಭೋಧ, ಸಂಕಲ್ಪ ಹಾಗು ಅನುಭೂತಿಗೆ

'ನಿರ್ಭ್ರಮತೆ' ಎಂದು ಸಂಜ್ಞೆ.

ಭಾವ, ವಿಚಾರದ ಪ್ರತಿರೂಪವೇ ಭಾಷೆ ಹಾಗು ವ್ಯವಹಾರದ ರೂಪದಲ್ಲಿ

ಪರಿಲಕ್ಷಿತವಾಗುತ್ತದೆ.

ನ್ಯಾಯ, ಧರ್ಮ ಹಾಗು ಸತ್ಯಾನುಭೂತಿ ಯೋಗ್ಯ ಕ್ಷಮತೆಯಿಂದ ಭಾವ, ವ್ಯವಹಾರ

ಹಾಗು ಭಾಷೆ ಸಂಯಮಿತ ಮತ್ತು ಪರಿಮಾರ್ಜಿತವಾಗುತ್ತದೆ.

ಪವಿತ್ರ ವಿಚಾರವೇ ಮನೋಬಲ ಅರ್ಥಾತ್ ಪವಿತ್ರ ವಿಚಾರಗಳು ವ್ಯವಹಾರದಲ್ಲಿ

ಪ್ರಮಾಣಿತವಾಗುವುದು, ಮನೋಬಲವೇ ಕರ್ತವ್ಯ ನಿಷ್ಠೆ, ಕರ್ತವ್ಯ ನಿಷ್ಠೆಯೇ ಸಮಾಧಾನ-

ಸಮೃದ್ಧಿ, ಸಮಾಧಾನ-ಸಮೃದ್ಧಿಯೇ ಸಹ-ಅಸ್ತಿತ್ವ ಹಾಗು ಸಹ-ಅಸ್ತಿತ್ವವೇ ಪವಿತ್ರ

ವಿಚಾರ, ಇದರಿಂದ ನ್ಯಾಯವಾದಿ ವ್ಯವಹಾರ ಪ್ರತಿಷ್ಠಿತ ಹಾಗು ಸಮಯಾನುವರ್ತನೆ

ವ್ಯವಹಾರ ಅಪ್ರತಿಷ್ಠಿತವಾಗಿದೆ.

ಸಮಯಾನುವರ್ತನೆ ಮೇಲೆಯೇ ಸಂಯಮತೆ, ನಿಯಂತ್ರಣ ಹಾಗು ಸುಧಾರಣೆಯ

ಅಧಿಕಾರ ಜಾಗೃತಿಪೂರ್ವಕ ಪ್ರಮಾಣಿತವಾಗುತ್ತದೆ.

164

ಪ್ರತ್ಯೇಕ ಮಾನವ ಜನ್ಮದಿಂದಲೇ ನ್ಯಾಯದ ಯಾಚಕ. ನ್ಯಾಯಪೂರ್ಣ ವ್ಯವಹಾರ ಪ್ರಸ್ತುತ ಮಾಡಲು ಯೋಗ್ಯ ಕ್ಷಮತೆ, ಯೋಗ್ಯತೆ ಹಾಗು ಪಾತ್ರತೆಯನ್ನು ಉತ್ಪನ್ನ ಮಾಡುವುದೇ, ಒಬ್ಬರಿಂದ ಹಲವಾರು ಮಾನವರಿಂದ ಮಾಡುತ್ತಿರುವ ಅನವರತ ಪ್ರಯಾಸದ ಮೂಲ ಉದ್ದೇಶ.

ನ್ಯಾಯವಾದಿ ಮಾನವರ ಪರಸ್ಪರತೆಯಲ್ಲಿ ಸಹಜ ಸ್ವಭಾವವೇ 'ಸಾಮಾಜಿಕತೆ' ಹಾಗು ಇದೇ ಮಾನವೀಯತೆಪೂರ್ಣ ಸಮಾಜ.

“ಸರ್ವ ಶುಭವಾಗಲಿ”

0%