ಮಾನವ ವ್ಯವಹಾರ ದರ್ಶನ

ಅಧ್ಯಾಯ - ೧೬

165

ಅಧ್ಯಾಯ - ೧೬

ಪೋಷಣೆ ಹಾಗು ಶೋಷಣೆ

ಯಾವುದೇ ಮಾನವ ಸ್ವಯಂನ ಶೋಷಣೆ ಬಯಸುವುದಿಲ್ಲ.

ಇಕಾಯಿ - ಅನುಕೂಲ ಇಕಾಯಿ = ಶೋಷಣೆ

ಇಕಾಯಿ + ಅನುಕೂಲ ಇಕಾಯಿ = ಪೋಷಣೆ

* ವಿಕಾಸ ಮತ್ತು ಜಾಗೃತಿ ಸಂಪೂರ್ಣ ಸೃಷ್ಟಿಯ ಲಕ್ಷ್ಯವಾಗಿದೆ ಹಾಗು ಸೃಷ್ಟಿಯಲ್ಲಿ ಪ್ರತ್ಯೇಕ ಜಡ ಇಕಾಯಿಯ ಚೇಷ್ಟೆ ವಿಕಾಸ ಕ್ರಮ ಮತ್ತು ವಿಕಾಸದ ರೂಪದಲ್ಲಿಯೆಯಿದೆ. ಸೃಷ್ಟಿಯಲ್ಲಿ ಇಕಾಯಿಯ ಸ್ವತಂತ್ರ ಅಸ್ತಿತ್ವದ ದರ್ಶನವಾಗುವುದಿಲ್ಲ. ಪ್ರತ್ಯೇಕ ಇಕಾಯಿ ವಾತಾವರಣದಿಂದ ಪ್ರೇರಿತವಾಗಿಯೆಯಿರುತ್ತದೆ. ಸೃಷ್ಟಿ, ಜಡ ಹಾಗು ಚೈತನ್ಯ, ಎರಡು ಸ್ವರೂಪದಲ್ಲಿದೆ. ಜಡ ತನ್ನ 'ತ್ವ' ಸಹಿತ ವ್ಯವಸ್ಥೆ ಸಮಗ್ರ ವ್ಯವಸ್ಥೆಯಲ್ಲಿ ಭಾಗವಹಿಸುವಿಕೆಯ ರೂಪದಲ್ಲಿದೆ. ಇದರ ದೃಷ್ಟ ಮಾನವನೇಯಾಗಿದ್ದಾನೆ ಆದರೆ ಚೈತನ್ಯ ಸೃಷ್ಟಿಯಲ್ಲಿ ಮಾನವ ಇಕಾಯಿಯ ಜಾಗೃತಿಪೂರ್ವಕ ಸ್ವತಂತ್ರವಾಗುವ (ಸ್ವಾಯತ್ತ) ವ್ಯವಸ್ಥೆಯಿದೆ. ಇಲ್ಲಿ ಸ್ವತಂತ್ರತೆಯ ಅರ್ಥ, ಎಲ್ಲರಿಂದಲೂ ಬೇರೆಯಾಗುವ ಅರ್ಥದಲ್ಲಲ್ಲಾ, ಹಾಗಿದ್ದರೆ ಸ್ವತಂತ್ರತೆಯ ಅರ್ಥವೇನು? ಸ್ವತಂತ್ರತೆಯ ಅರ್ಥ, ತನ್ನನು ಸಹ-ಅಸ್ತಿತ್ವ ಸಹಜ ವ್ಯವಸ್ಥೆಯಲ್ಲಿ ಸಂಗೀತಮಯ ರೂಪದಲ್ಲಿ ಪ್ರಮಾಣಿತ ಮಾಡುವುದು. ಮಾನವ ಇಕಾಯಿಯಲ್ಲಿ ಇದರ ಪೂರ್ಣ ಸಂಭವನೀಯತೆಯಿದೆ ಹಾಗು ಜಾಗೃತ ಮಾನವ ಸ್ವತಂತ್ರತೆಯ ಅನುಭೂತಿಯೂ ಮಾಡಿದ್ದಾನೆ.

* ಈ ಅಧ್ಯಾಯದಲ್ಲಿ ಶೋಷಣೆ ಹಾಗು ಪೋಷಣೆಯ ಅಧ್ಯಯನ ಮಾನವನ ಸಂದರ್ಭದಲ್ಲಿಯೇ ಮಾಡಲಾಗಿದೆ. ಪೋಷಣೆ ಸಹಅಸ್ತಿತ್ವದ ಅರ್ಥದಲ್ಲಿ, ಇದರ ವಿವರಿತ ಶೋಷಣೆಯಿದೆ.

166

ವಾತಾವರಣದ ಕ್ಷೋಭದಿಂದ ಮುಕ್ತವಾಗಿ ಸ್ವತಂತ್ರ ಅಸ್ತಿತ್ವದ ಅನುಭೂತಿ ಮಾನವ ಜಾಗೃತಿಯ ಚರಮ ಪರಿಣತಿಯಾಗಿದೆ. ಸಮಸ್ತ ಅವರೋಧ ‘ಶೋಷಕ’ ಹಾಗು ಸಹಾಯಕ ಸಮಸ್ತ ತತ್ವ ‘ಪೋಷಕ’ವಾಗಿದೆ. ಆದ್ದರಿಂದ, ಇದು ಸಿದ್ಧವಾಗಿದೆ. ಜಾಗೃತಿಯನ್ನು ಅವರೋಧ ಮಾಡುವ ಸಮಸ್ತ ಕ್ರಿಯೆಗಳು ‘ಶೋಷಣೆ’ ಹಾಗು ಜಾಗೃತಿಯನ್ನು ಗತಿಶೀಲ ಮಾಡುವ ಸಮಸ್ತ ಕ್ರಿಯೆಗಳು ‘ಪೋಷಣೆ’.

ಪ್ರತ್ಯೇಕ ಇಕಾಯಿ ಪರಸ್ಪರತೆಯಿಂದ ಪ್ರಭಾವಿತವಾಗಿದೆ, ಸ್ಥೂಲಪ್ರಭಾವವಾಗಲಿ ಅಥವಾ ಸೂಕ್ಷ್ಮಪ್ರಭಾವವಾಗಲಿ. ಏಕೆಂದರೆ ಇಲ್ಲಿ ಮಾನವ ಇಕಾಯಿಯ ಪೋಷಣೆ ಹಾಗು ಶೋಷಣೆಯ ವಿಶ್ಲೇಷಣೆಯಿದೆ, ಅತಃ ನಮಗೆ ವ್ಯಕ್ತಿ, ಪರಿವಾರ, ಸಮಾಜ, ರಾಷ್ಟ್ರ ಹಾಗು ಅಂತರಾಷ್ಟ್ರೀಯ ಭೇದದಿಂದ ವಿಶ್ಲೇಷಣೆ ಮಾಡಬೇಕಾಗುತ್ತದೆ. ಅಂತರಾಷ್ಟ್ರೀಯ ಮಾನವ ಸಮುದಾಯ ಒಂದೇಯಾಗಿದೆ ಹಾಗು ಎಲ್ಲರ ಸಾಮ್ಯ ಕಾಮನ ‘ಸುಖ’ವೇ ಆಗಿದೆ. ನಿರಂತರ ಸುಖದ ಉಪಲಬ್ಧತೆಯೇ ಮಾನವನ ಚರಮ ವಿಕಾಸ ಹಾಗು ಸುಖದ ಸ್ಥಿತಿಯಲ್ಲಿಯೇ ಮಾನವ, ತನ್ನ ವಾತಾವರಣೆಯ ಒತ್ತಡದಿಂದ ಮುಕ್ತವಾಗಿ, ಅನುಭವಿಸುತ್ತಾನೆ. ಸುಖಿ ಮಾನವ ಅನ್ಯರ ಪೋಷಣೆ ಮಾಡುವುದರಲ್ಲಿಯೂ ಸಮರ್ಥನಾಗಿರುತ್ತಾನೆ.

ಸಮಾಧಾನದ ಸ್ವೀಕೃತಿ ಸುಖ ಬೌದ್ಧಿಕ ಸ್ಥಿತಿಯಾಗಿದೆ. ‘ಜೀವನ’ ಬಲ ಹಾಗು ಶಕ್ತಿಗಳ ಸಂಗೀತಮಯತೆ ಹಾಗು ಏಕಸೂತ್ರತೆಯೇ ಸುಖ. ಸರ್ವಮಾನವ ಸಮಾಧಾನಪೂರ್ವಕ ಸುಖಿಯಾಗುತ್ತಾನೆ.

ಮಾನವನು ಬೌದ್ಧಿಕ ಸಮಾಧಾನ ಹಾಗು ಭೌತಿಕ ಸಮೃದ್ಧಿಯಿಂದ ಸುಖದ ಕಾಮನಮಾಡಿದ್ದಾನೆ.

‘ಜೀವನ ಪರಮಾಣು’ ಸರ್ವೋತ್ತಮ ವಿಕಸಿತ ಪದದಲ್ಲಿದೆ ಎಂಬುದು ಉಲ್ಲೇಖನೀಯವಾಗಿದೆ.

ಬೌದ್ಧಿಕ ಸಮಾಧಾನದ ಮಾರ್ಗದಲ್ಲಿ ಎಲ್ಲಗಿಂತಲೂ ದೊಡ್ಡ ಅವರೋಧಕ ತತ್ವ ಭಯ. ಮಾನವ ಒಟ್ಟು ಮೂರು ಪ್ರಕಾರದ ಭಯದಿಂದ ಪೀಡಿತನಾಗಿದ್ದಾನೆ -

1.ಪ್ರಾಕೃತಿಕ ಭಯ

2.ಪಾಶವಿಕ ಭಯ

167

(3)ಮಾನವನಲ್ಲಿ ನಿಹಿತ ಅಮಾನವೀಯತೆಯ ಭಯ.

ಪೂರ್ವೋಕ್ತ ಮೂರರಲ್ಲಿ ಒಟ್ಟು ನಾಲ್ಕು ಪ್ರಕಾರದಿಂದ ಮಾನವ ಭಯಭೀತನಾಗಿದ್ದಾನೆ -

(1)ಪದ ಭಯ (2) ಮಾನ ಭಯ (3) ಧನ ಭಯ (4) ಮೃತ್ಯು ಭಯ

ಭೌತಿಕ ಸಮೃದ್ಧಿಗಾಗಿ ಮಾನವನ ಹತ್ತಿರ ಕೇವಲ ಮೂರ ಅರ್ಥವಿದೆ : -

(1)ತನ (2) ಮನ (3) ಧನ

ಭ್ರಮಿತ ಮಾನವ ತನ, ಮನ ಹಾಗು ಧನದ ನಿಯೋಜನೆಯಿಂದಲೇ ಪ್ರಾಪ್ತ ಪ್ರಾಕೃತಿಕ ಐಶ್ವರ್ಯವನ್ನು ಉಪಯೋಗ ಹಾಗು ಭೋಗ ಮಾಡುತ್ತಾ ಪ್ರಾಕೃತಿಕ ಭಯ, ಪಾಶವಿಕ ಭಯ ಹಾಗು ಮಾನವನಲ್ಲಿ ನಿಹಿತ ಅಮಾನವೀಯತೆಯ ಭಯದಿಂದ ಮುಕ್ತನಾಗುವ ಕಾಮನೆ ಮಾಡಿದ್ದಾನೆ.

* ಭಯದಿಂದ ನಿವಾರಣೆಗೆ ಸಮುದಾಯ ರೂಪಿ ಸಾಮಾಜಿಕತೆಯ ಕಾಮನೆ ಮಾನವನು ಮಾಡಿದ್ದಾನೆ. ಸಾಮಾಜಿಕತೆಯ ಅರ್ಥವೇ ಸಂಬಂಧ ಹಾಗು ಸಂಪರ್ಕದ ನಿರ್ವಾಹ. ಸಂಬಂಧ ಹಾಗು ಸಂಪರ್ಕದ ನಿರ್ವಾಹಕ್ಕಾಗಿ ಆಧಾರಭೂತ ಪ್ರೇರಣೆ ಸ್ಫೋಟಕ ನಾಲ್ಕು -

(1)ಸಭ್ಯತೆ, (2) ಸಂಸ್ಕೃತಿ, (3) ವ್ಯವಸ್ಥೆ, (4) ವಿಧಿ.

* ಸಭ್ಯತೆ, ಸಂಸ್ಕೃತಿ, ವ್ಯವಸ್ಥೆ ಮತ್ತು ವಿಧಿಪೂರ್ವಕ ಮಾನವನು ಪ್ರಾಪ್ತ ಅರ್ಥದ ನಿಯೋಜನೆ ಮಾಡುತ್ತಾ ಸುಖದ ಅನುಭೂತಿಯ ಕಾಮನೆ ಮಾಡಿದ್ದಾನೆ. ಚಿಕ್ಕದಿಂದ ಹಿಡಿದು ದೊಡ್ಡ ಇತಾಯಿಯ ತನಕ ಅರ್ಥದ ಉಪಯೋಗ ಮತ್ತು ಉಪಭೋಗ ಮಾಡುತ್ತಾ ಸುಖಿಯಾಗುವ ಪ್ರಯಾಸ ಮಾಡಿದ್ದಾನೆ, ಆದರೆ ಏಕಾಕಿ ಪ್ರಯೋಗದಿಂದ ಅವನಿಗೆ ಸುಖ ಉಪಲಬ್ಧವಾಗದಿದ್ದಾಗ ಸಮಾಜದ ಸಂಘಟನೆಯಾಯಿತು ಹಾಗು ಇಂತಹ ಸಂಘಟಿತ ಸಮಾಜದಲ್ಲಿ ಸಂಪರ್ಕ ಹಾಗು ಸಂಬಂಧಗಳ ನಿರ್ವಾಹಕ್ಕೆ ನಿಯಮ ಸ್ವೀಕೃತವಾಯಿತು. ಈ ನಿಯಮಗಳ ಸಭ್ಯತೆ ಹಾಗು ಸಂಸ್ಕೃತಿಯ ದೃಷ್ಟಿಕೋಣದಲ್ಲಿ ಅಧ್ಯಯನ ಮಾಡುವ ಪ್ರಯಾಸ ಮಾಡಲಾಗಿದೆ ಹಾಗು ಇವನ್ನು ಆವಷ್ಟಕೀಯ ಹಾಗು ಅನಾವಷ್ಟಕೀಯ ನಿಯಮಗಳ ರೂಪದಲ್ಲಿ ನಂಬಲಾಗಿದೆ.

168

ಸಹಿತವೇ ಇವನ್ನು ಹೀಗೆಯೇ ನಂಬುವುದಕ್ಕಾಗಿ ಮತ್ತು ಪ್ರಯೋಗ ಮಾಡುವುದಕ್ಕಾಗಿ ಪ್ರೇರಣೆ ಕೊಡಲು ವ್ಯವಸ್ಥೆ ಮತ್ತು ವಿಧಿಯ ಜನ್ಮವಾಯಿತು.

ಮಧ್ಯಸ್ಥ ದರ್ಶನ ಸಹ-ಅಸ್ತಿತ್ವವಾದದ ಪ್ರಕಾಶದಲ್ಲಿ ಸಂಸ್ಕೃತಿ ಸಮೃದ್ಧಿ ವಿಧಿ ವ್ಯವಸ್ಥೆಯನ್ನು ಸುನಿಶ್ಚಿತ ಮಾಡಲು ಪ್ರಾಪ್ತ ಅರ್ಥ 'ತನ, ಮನ ಮತ್ತು ಧನದ' ಸದುಪಯೋಗಾತ್ಮಕ ನೀತಿಗಳ ನಿರ್ಧಾರಣೆಯಾಯಿತು ಹಾಗು ಇದಕ್ಕೆ 'ಧರ್ಮ-ನೀತಿ'ಯ ಸಂಜ್ಞೆ ನೀಡಲಾಗಿದೆ. ಧರ್ಮ-ನೀತಿಯೇ ಮಾನವನ ವೈಭವ.

ಸಾಮಾಜಿಕತೆ, ಏಕಸೂತ್ರತೆಯನ್ನು ಕಾಪಾಡುವುದಕ್ಕಾಗಿ ಹಾಗು ಅಮಾನವೀಯತೆಯಿಂದ ಮುಕ್ತಿಗಾಗಿ, ಯಾವುದರಿಂದ ಮಾನವನಿಗೆ ಪ್ರಾಪ್ತ ಅರ್ಥ - ತನ, ಮನ ಮತ್ತು ಧನದ ರಕ್ಷಣೆಯೂ ಆಗುವಂತಹ ರಾಜ್ಯನೀತಿ ಅಧ್ಯಯನ ಸುಲಭಸಾಧ್ಯವಾಗಿದೆ. ಸಾಮಾಜಿಕ ಇಕಾಯಿಯಾಗಿರುವ ಕಾರಣ ಒಬ್ಬ ಮಾನವ ಹಾಗು ಪರಿವಾರದ ತನ ಹಾಗು ಧನದ ರಕ್ಷಣೆಯ ಸಹಿತ ಪರಿವಾರ, ಸಮಾಜ ಹಾಗು ರಾಷ್ಟ್ರದ ರಕ್ಷಣೆ ತಾನಾಗಿಯೇ ಸಿದ್ಧವಾಗಿದೆ. ಮಾನವನಿಂದ ಹಿಡಿದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜೀವನದಲ್ಲಿ ಏಕಸೂತ್ರತೆವಾಗುವ ಸ್ಥಿತಿಯಲ್ಲಿಯೇ ಇದು ಸಂಭವ ಹಾಗು ವ್ಯವಹಾರವಾಗುತ್ತದೆ.

ರಾಜ್ಯನೀತಿಯಿಂದ ಸಾಕಾರವಾಗುವ ಉಪಲಬ್ಧತೆಯ ಮೂಲದಲ್ಲಿ ತತ್ವ -

ಸ್ವ-ಧನ, ಸ್ವನಾರಿ / ಸ್ವ-ಪುರುಷ ಮತ್ತು ದಯೆಯಲ್ಲಿ ನಿಷ್ಠೆ ಹಾಗು ವಿಶ್ವಾಸದ ಪ್ರಮಾಣ ಹಾಗು ಪರ-ಧನ, ಪರ-ನಾರಿ/ಪರ-ಪುರುಷ ಮತ್ತು ಪರ-ಪೀಡಾತ್ಮಕ ವ್ಯವಹಾರದಿಂದ ಮುಕ್ತಿ.

ಅಂತರಾಷ್ಟ್ರೀಯ ನೀತಿಯಿಂದ ರಾಷ್ಟ್ರೀಯ ನೀತಿಗೆ ಪ್ರೇರಣೆ ಹಾಗು ದಿಶೆ, ರಾಷ್ಟ್ರೀಯ ನೀತಿಯಿಂದ ಸಾಮಾಜಿಕ ನೀತಿಗೆ ಪ್ರೇರಣೆ ಹಾಗು ದಿಶೆ, ಸಾಮಾಜಿಕ ನೀತಿಯಿಂದ ಪಾರಿವಾರಿಕ ನೀತಿಗೆ ಪ್ರೇರಣೆ ಹಾಗು ದಿಶೆ ಮತ್ತು ಪಾರಿವಾರಿಕ ನೀತಿಯಿಂದ ಮಾನವೀಯತೆಪೂರ್ಣ ಆಚರಣೆಗೆ ಪ್ರೇರಣೆ ಹಾಗು ದಿಶೆ ಪ್ರಾಪ್ತವಾಗುತ್ತದೆ.

ಇದರ ಭಿನ್ನ ಪದ್ಧತಿಯಿಂದಲೂ ನೀತಿ ನಿರ್ಧಾರಣವಾಗುತ್ತದೆ, ಇದರಿಂದ ಮಾನವ ಸಮಾಜಕ್ಕಾಗಿ ವ್ಯಕ್ತಿಯ ಮಹತ್ವ ಹಾಗು ವ್ಯಕ್ತಿಗಾಗಿ ಮಾನವ ಸಮಾಜದ ಮಹತ್ವ ಪ್ರತಿಪಾದಿತವಾಗುತ್ತದೆ. ಇದರ ಸಹಿತವೇ ವ್ಯಕ್ತಿಯಿಂದ ಹಿಡಿದು ಸಂಪೂರ್ಣ ಮಾನವ ಸಮಾಜದ ಏಕಸೂತ್ರತೆಯ ಮಹತ್ವವೂ ಹೃದಯಂಗಮವಾಗುತ್ತದೆ.

169

ಜಾಗೃತಿ ವಿಧಿಯಿಂದ ಅಂತರಾಷ್ಟ್ರೀಯ ನೀತಿಯಲ್ಲಿ ಅಖಂಡತೆ ಹಾಗು ಸಾರ್ವಭೌಮತೆಯ ನೀತಿ, ರಾಷ್ಟ್ರೀಯ ನೀತಿಯಲ್ಲಿ ವಿಧಿಯ (ನ್ಯಾಯ) ಅಕ್ಷುಜ್ಯತೆ ಕಾಪಾಡುವುದಕ್ಕಾಗಿ ವ್ಯವಸ್ಥೆ, ಸಾಮಾಜಿಕ ನೀತಿಯಲ್ಲಿ ಸ್ವಧನ, ಸ್ವನಾರಿ / ಸ್ವಪುರುಷ ಹಾಗು ದಯೆ ಪೂರ್ಣ ಕಾರ್ಯ - ವ್ಯವಹಾರದ ನೀತಿ ಮತ್ತು ವ್ಯಕ್ತಿಗತ ಜೀವನದಲ್ಲಿ ಅರಿವು ಸಂಪನ್ನ ನೀತಿಯಿಂದಲೇ ಪೋಷಣೆ ಸಂಭವ.

ಸಂಪೂರ್ಣ ಸಂಪರ್ಕ, ಸಂಬಂಧಕ್ಕಾಗಿ ಪ್ರೇರಣೆಯ ಶ್ರೋತವಾಗಿದೆ. ಸಂಪರ್ಕ ಎರಡು ಪ್ರಕಾರದಾಗಿರುತ್ತದೆ -

(೧)ಪ್ರಾಕೃತಿಕ ಸಂಪರ್ಕ (೨) ಮಾನವ ಸಂಪರ್ಕ.

ಪ್ರಾಕೃತಿಕ ಸಂಪರ್ಕದಲ್ಲಿ ಜಾಗೃತ ಮಾನವ ಪ್ರಾಕೃತಿಕ ಐಶ್ವರ್ಯದ ಉಪಯೋಗ ಹಾಗು ಸದುಪಯೋಗ ಮಾಡುತ್ತಾನೆ.

ಜಾಗೃತಿಗಾಗಿ ಪ್ರೇರಣೆ ನೀಡುವ ಮಾನವ ಸಂಪರ್ಕವೇ, ಪೋಷಣೆ.

ಯಾರು ಯಾವುದರ ಮೌಲ್ಯೀಕರಣ ಮಾಡುವುದಿಲ್ಲವೋ ಅವರು ಅದನ್ನು ಸದುಪಯೋಗ ಮಾಡುವುದಿಲ್ಲ ಅಥವಾ ಮಾಡಲಾಗುವುದಿಲ್ಲ. ಅತಃ ಮಾನವನ ಪ್ರತ್ಯೇಕ ಪಕ್ಷದ ಮೌಲ್ಯೀಕರಣ ಅವಶ್ಯಕವಾಗಿದೆ.

ಯಾವುದೇ ಉಪಲಬ್ಧತೆಯ ಪ್ರತಿ ಆವಶ್ಯಕೀಯ ನಿಯಮ ಸಹಿತ ಪೂರ್ಣ ಅರಿವಿನ 'ನಿಶ್ಚಯ' ಹಾಗು ಅಪೂರ್ಣ ಅರಿವಿನಿಂದ ಮಾಡಲಾಗುವ ಪ್ರಯಾಸಕ್ಕೆ 'ಮಾನ್ಯತೆ' ಎಂದು ಸಂಜ್ಞೆ.

ಅತಃ ಸಂಬಂಧದಲ್ಲಿ ಭಾವ ಪಕ್ಷದ ತಿರಸ್ಕಾರವೇ ಆ ಸಂಬಂಧದ ಶೋಷಣೆ.

ಮಾನವನಿಗಾಗಿ ಪೋಷಣೆ ಯುಕ್ತ ಸಂಪರ್ಕಾತ್ಮಕ ಹಾಗು ಸಂಬಂಧಾತ್ಮಕ ವಿಚಾರ ಹಾಗು ತದನುಸಾರ ವ್ಯವಹಾರದಿಂದಲೇ ಮಾನವೀಯತೆಯ ಸ್ಥಾಪನೆ ಸಂಭವ, ಅನ್ಯಥಾ, ಶೋಷಣೆ ಮತ್ತು ಅಮಾನವೀಯತೆಯ ಪೀಡೆಯಿದೆ.

ಪ್ರತ್ಯೇಕ ಇಕಾಯಿಯ ಮೂಲದಲ್ಲಿ ಮೂರು ಮಾತುಗಳು ಮುಖ್ಯವಾಗಿರುತ್ತದೆ -

(೧)ಘಟಣೆ (ಸಂಘಟಣೆ) (೨) ಉದ್ದೇಶ ಮತ್ತು (೩) ಆಚರಣದ (ಕಾರ್ಯಕ್ರಮ) ವಿಶಿಷ್ಟತೆ. ಇಲ್ಲಿ ವ್ಯಕ್ತಿಯಿಂದ ಹಿಡಿದು ಅಂತರಾಷ್ಟ್ರೀಯ ಮಾನವ ಸಮಾಜದ ಇಕಾಯಿಯ ಸಂದರ್ಭದಲ್ಲಿ ಶೋಷಣೆ ಹಾಗು ಪೋಷಣೆಯ ವಿವೇಚನೆಯ ನಂತರ, ವಿಭಿನ್ನ ಇಕಾಯಿಗಳ

170

ಘಟಕ (ಸಂಘಟಣೆ), ಉದ್ದೇಶ ಮತ್ತು ಆಚರಣದ (ಕಾರ್ಯಕ್ರಮ) ವಿಶೇಷತೆ ನಿಮ್ಮಾನುಸಾರವಾದಾಗಲೇ ಸಂಪೂರ್ಣ ಮಾನವ ಸಮಾಜ ಏಕಸೂತ್ರತೆಯಲ್ಲಿದ್ದು, ಶೋಷಣೆ ಮುಕ್ತವಾಗುತ್ತದೆ, ಎಂಬುವ ನಿಷ್ಕರ್ಷಕ್ಕೆ ಬರುತ್ತೇವೆ.

ಇಕಾಯಿಘಟಕ (ಸಂಘಟಕ) ವಿಶಿಷ್ಟತೆಘಟನೆಯ (ಸಂಘಟಕ) ಉದ್ದೇಶಆಶಿತ ಆಚರಣ
ಮಾನವಅನುಭವ ಸಂಪನ್ನ ಜೀವನ ಮತ್ತು ಶರೀರಸುಖಾನುಭೂತಿನ್ಯಾಯ ಸಮ್ಮತ ವ್ಯವಹಾರ
ಪರಿವಾರಸೀಮಿತ ಅರಿವುಳ್ಳ ವ್ಯಕ್ತಿಯರ ಸಮೂಹದ ಸಂಬಂಧ ಪ್ರಧಾನ ಸಂಘಟಕಸಮಾಧಾನ ಹಾಗು ಸಮೃದ್ಧಿಸಾಧನಗಳಿಗಾಗಿ ಉತ್ಪಾದನೆ ಹಾಗು ಪ್ರಯೋಗ ಸಮಾಧಾನಪೂರ್ವಕ
ಸಮಾಜಸೀಮಿತ ಪರಿವಾರಗಳ ಸಮೂಹ, ಇದರಲ್ಲಿ ಸಂಬಂಧ ಹಾಗು ಸಂಪರ್ಕ, ಎರಡೂ ಸಮ್ಮಿಲಿತವಾಗಿದ್ದು.ಸಮೃದ್ಧಿ ಸಹಿತ ಸತ್ಯತೆ ಹಾಗು ಅಖಂಡ ಸಾಮಾಜಿಕತೆಯನ್ನು ಅಂತರ್ಗತ ಮಾಡುವುದು, ಅರ್ಥದ ಸದುಪಯೋಗ-ರಕ್ಷಣೆಜಾಗೃತಿಗಾಗಿ ಪ್ರಚಾರ ಹಾಗು ಪ್ರದರ್ಶನ, ಪ್ರಕಾಶನ ಹಾಗು ಪ್ರೋತ್ಸಾಹನ. ಶಿಕ್ಷಣ-ಸಂಸ್ಕಾರ ವಿಧಿಯಿಂದ ಲೋಕ-ವ್ಯಾಪೀಕರಣ.
ವಿಶ್ವಹಲವಾರು ರಾಜ್ಯಗಳ ಸಮೂಹ, ಯಾವುದರ ಮೂಲ ಘಟಕೆಯಲ್ಲಿ ಮಾನವೀಯತೆ ಪ್ರಧಾನ ಸಂಯೋಜಕ ತತ್ವವಿದೆ, ಸಾರ್ವಭೌಮ ವ್ಯವಸ್ಥೆಯ ಅರ್ಥದಲ್ಲಿ.ಮಾನವೀಯತೆಗೆ ಪ್ರೋತ್ಸಾಹನೆಸಹ-ಅಸ್ತಿತ್ವದಲ್ಲಿ, ಸಹ-ಅಸ್ತಿತ್ವದಿಂದ, ಸಹ-ಅಸ್ತಿತ್ವಕ್ಕಾಗಿ.
ರಾಷ್ಟ್ರಸಂಬಂಧ ಹಾಗು ಸಂಪರ್ಕಕ್ಕಾಗಿ ವಿಧಿಯ ಪ್ರಧಾನತೆ. ರಾಷ್ಟ್ರ ವ್ಯಾಪಿ ಜನ ಜಾತಿಗಳ ಸಮೂಹದ ಘಟಕ.ಮಾನವೀಯತೆಯ ಸಂರಕ್ಷಣೆ. ಪ್ರತ್ಯಕ್ಷ ರೂಪದಲ್ಲಿ ಅರ್ಥದ ರಕ್ಷಣೆ.ನ್ಯಾಯಪೂರ್ಣ ವ್ಯವಸ್ಥೆ.

* ಪೂರ್ವೋಕ್ತ ವರ್ಣಿತ ಉದ್ದೇಶ ಅರ್ಥಾತ್, ತನ, ಮನ ಮತ್ತು ಧನದ ಸದುಪಯೋಗ ಮತ್ತು ತನ, ಮನ ಮತ್ತು ಧನದ ರಕ್ಷಣೆಯ ಪೂರ್ತಿಗೆ ಹಾಗು ತದನುಕೂಲ ಆಚರಣವನ್ನು ವ್ಯವಹಾರದಲ್ಲಿ ಕೊಂಡುಬರುವುದಕ್ಕೆ ಮತ್ತು ತದನುಸಾರ ವಿಭಿನ್ನ ಸ್ಥರಗಳ ಘಟನೆಯ ಸಂಪರ್ಕಾತ್ಮಕ ಹಾಗು ಸಂಬಂಧಾತ್ಮಕ ಪರಸ್ಪರತೆಯನ್ನು ವಿಶ್ವಾಸಪೂರ್ವಕ ಸದೃಢ ಮಾಡಲು ಒಂದು ಸಮನ್ವಯವಾದ ಧರ್ಮನೀತಿ ಹಾಗು

171

ರಾಜ್ಯ ನೀತಿ ಅವಶ್ಯಕ, ಇದರಿಂದ ಮಾನವನ ಜಾಗೃತಿಯ ಸಂಪೂರ್ಣ ಸಂಭವನೀಯತೆಗಳಿಂದ ಯುಕ್ತವಿರುವಂತಹ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿತ ಹಾಗು ವಿಕಸಿತ ಮಾಡಬಹುದು. ಇಂತಹ ವ್ಯವಸ್ಥೆ ಪೋಷಣ - ಪ್ರಧಾನ ಗುಣಗಳಿಂದ ಹಾಗು ನೀತಿಗಳಿಂದಲೇ ಮಾತ್ರ ಸಂಪನ್ನವಾಗುತ್ತದೆ, ಇದು ಜಾಗೃತಿಯ ಮಾರ್ಗವನ್ನು ಪ್ರಶಸ್ತ ಮಾಡುತ್ತದೆ.

ಪೂರ್ವೋಕ್ತಾನುಸಾರ ಧರ್ಮನೀತಿ ಹಾಗು ರಾಜ್ಯನೀತಿಯ ವ್ಯವಹಾರಾನ್ವಯದಲ್ಲಿ ಸಹಾಯಕ ಎಲ್ಲಾ ವಿಚಾರ ಹಾಗು ವ್ಯವಹಾರ ಪೋಷಕ, ಇಲ್ಲದಿದ್ದರೆ ಶೋಷಕವೇ ಸಿದ್ಧವಾಗುತ್ತದೆ.

ವಾತಾವರಣದ ಒತ್ತಡದಿಂದ ಮುಕ್ತವಾಗಲು ಶೋಷಣೆಯಿಂದ ಮುಕ್ತಿ ಅವಶ್ಯಕ, ಇದು ಸಹ-ಅಸ್ತಿತ್ವದಲ್ಲಿ ಅನುಭವಪೂರ್ವಕ ಸರ್ವತೋಮುಖಿ ಸಮಾಧಾನದಿಂದಲೇ ಮಾನವನಲ್ಲಿ ಪ್ರಮಾಣಿತವಾಗಿದೆ.

ಮಧ್ಯಸ್ಥ ದರ್ಶನ, ಸಹ-ಅಸ್ತಿತ್ವವಾದದ ಪ್ರಕಾಶದಲ್ಲಿ ಸಂಪೂರ್ಣ ಮಾನವ ಸಮಾಜಕ್ಕೆ ಸಮನ್ವಯವಾದ ಧರ್ಮನೀತಿ ಹಾಗು ರಾಜ್ಯನೀತಿ ನಿಮ್ಮ ಆಧಾರಭೂತ ಸಿದ್ಧಾಂತಗಳ ಸಹಾಯತೆಯಿಂದ ಮಾಡಲಾಗಿದೆ.

೧. ಭೂಮಿ ಏಕ (ಅಖಂಡ ರಾಷ್ಟ್ರ) ರಾಜ್ಯ ಅನೇಕ

೨. ಮಾನವ ಜಾತಿ ಏಕ ಕರ್ಮ ಅನೇಕ

೩. ಮಾನವ ಧರ್ಮ ಏಕ ಸಮಾಧಾನ ಅನೇಕ

೪. ಸತ್ತ್ವ ವ್ಯಾಪಕ ದೇವತೆ ಅನೇಕ

ಉಲ್ಲೇಖಿತ ನಾಲ್ಕು ಸಿದ್ಧಾಂತಗಳಿಂದ ಒಂದು ಮಹತ್ವಪೂರ್ಣ ಸ್ವಯಂಸಿದ್ಧ ಸೂತ್ರದ ನಿಷ್ಪತ್ತಿಯಾಗುತ್ತದೆ, ಅದು -

ಮಾನವ ಜಾತಿ ಸರಿಯಲ್ಲಿ ಒಂದು ಹಾಗು ಭ್ರಮೆ ವಶ ತಪ್ಪಿನಲ್ಲಿ ಅನೇಕ. ಅನೇಕವಾಗಿರುವ (ಪರಸ್ಪರ ವಿರೋಧ) ಕಾರಣ ರಹಸ್ಯ ಮತ್ತು ಉಪಭೋಕ್ತಾವಾದವೇಯಿರುತ್ತದೆ. ಜಾಗೃತಿಪೂರ್ವಕ ಎಲ್ಲಾ ಅನೇಕ ಪರಸ್ಪರ ಪೂರಕತೆ, ಉಪಯೋಗಿತ ವಿಧಿಯಿಂದ ಒಂದಾಗುತ್ತದೆ.

172

ಮಾನವ ಧರ್ಮ - ನೀತಿ

ಪರಿಭಾಷೆ

✠ ಸರ್ವಮಾನವ ಸುಖಪೂರ್ವಕ ಬಾಳಲು ಬಿಟ್ಟು ಹಾಗು ಬಾಳುವುದೇ ಅನುಭೂತಿ. ಅರಿವುಳ್ಳ ಮಾನವ ಸಮೃದ್ಧ ಸಂಬಂಧ ನಿರ್ವಾಹದಲ್ಲಿಯೇ ಸಮಾಧಾನವಿದೆ. ಸಮಾಧಾನ, ಸಮೃದ್ಧಿ, ಅಭಯ ಹಾಗು ಸಹ-ಅಸ್ತಿತ್ವ ಸಹಜ ಪ್ರಮಾಣ ಪ್ರಸ್ತುತ ಮಾಡುವುದು ನಿಶ್ಚಿತ ಕಾರ್ಯಕ್ರಮ, ಅದಕ್ಕೆ 'ಮಾನವ ಧರ್ಮ ನೀತಿ' ಎಂಬುವ ಸಂಜ್ಞೆಯಿದೆ.

ಅವಶ್ಯಕತೆ

ಮಾನವ ಧರ್ಮನೀತಿ ಸಹಜ ಅರಿವು ಹಾಗು ಪರಿಪಾಲನೆ ಅವಶ್ಯಕತೆಯಿದೆ, ಏಕೆಂದರೆ ಮಾನವ ಪ್ರಯೋಗ ಹಾಗು ಉತ್ಪಾದನೆಯಿಂದ ಪ್ರಾಪ್ತ ಅರ್ಥ ಹಾಗು ಪ್ರಾಪ್ತ ಪ್ರಾಕೃತಿಕ ಸಂಪದದ ಸದುಪಯೋಗದ ಕಾಮನೆ ಮಾಡುತ್ತಾನೆ.

ಲಕ್ಷ್ಮಿ ಅಥವಾ ಸಾಧ್ಯ

ಅಮಾನವೀಯತೆಯಿಂದ ಮಾನವೀಯತೆಯ ದಿಕ್ಕಿನಲ್ಲಿ ಗುಣಾತ್ಮಕ ಪರಿವರ್ತನೆಯ ಮಾರ್ಗ ಪ್ರಶಸ್ತ ಮಾಡುವುದಕ್ಕಾಗಿ ಅರಿವು, ಸಾಧನ, ಅವಸರ ತಥಾ ವ್ಯವಸ್ಥೆ ಉಪಲಬ್ಧ ಪಡಿಸುವುದು, ಇದು ಅತಿಮಾನವೀಯತೆಗೆ ಪ್ರೋತ್ಸಾಹನೆ ನೀಡುವುದರಲ್ಲಿ ಸಮರ್ಥವಾಗುತ್ತದೆ.

ಪ್ರತ್ಯೇಕ ಮಾನವನಲ್ಲಿ ಸಾಧ್ಯವನ್ನು ಪಡೆಯಲು ಮೂರು ಮಾತುಗಳಿರುವುದು ಅನಿವಾರ್ಯ -

1.ಸಾಧಕ, 2. ಸಾಧನೆ 3. ಸಾಧನ

೧.ಸಾಧಕ: ಪ್ರತ್ಯೇಕ ಮಾನವನಿಗೆ 'ಸಾಧಕ' ಎಂದು ಸಂಜ್ಞೆಯಿದೆ. ಇದು ಕ್ರಮವಾಗಿ ಅರಿವು ಸಹಿತ ವ್ಯಕ್ತಿ, ಪರಿವಾರ, ಸಮಾಜ, ರಾಷ್ಟ್ರ ಹಾಗು ಅಂತರಾಷ್ಟ್ರೀಯ ಭೇದದಿಂದಿದೆ.

173

೧.ಸಾಧನೆ: ತನ್ನ, ಮನ ಹಾಗು ಧನ ಸಹಿತ ಮಾನವೀಯ ದೃಷ್ಟಿ, ವಿಷಯ ಹಾಗು ಸ್ವಭಾವ ಸಹಿತ ಸಾಧ್ಯವನ್ನು (ಮಾನವೀಯತೆ ಹಾಗು ಅತಿಮಾನವೀಯತೆ) ಪಡೆಯಲು ನಿಯುಕ್ತ ಕ್ರಿಯೆ ಪ್ರಣಾಳಿಗೆ 'ಸಾಧನೆ' ಎಂದು ಸಂಜ್ಞೆ.

೨.ಸಾಧನೆ: ತನ್ನ, ಮನ ಹಾಗು ಧನವೇ ಸಾಧನ. ಸರ್ವ ಮಾನವನಿಗೆ ಜಾಗೃತಿಯೇ ಸಾಧ್ಯ.

ಸಾಧನದ ನಿಯುಕ್ತಿ, ಕಾಯಕ, ವಾಚಿಕ, ಮಾನಸಿಕ, ಕೃತ, ಕಾರಿತ ಹಾಗು ಅನುಮೋದಿತ ಭೇದದಿಂದ ಒಟ್ಟು ಒಂಬತ್ತು ಪ್ರಕಾರವಿರುತ್ತದೆ. ಈ ಸಮಸ್ತ ಸಾಧನಗಳನ್ನು ಮೂರು ಕ್ಷೇತ್ರಗಳಲ್ಲಿಯೇ ನಿಯುಕ್ತ ಮಾಡಲಾಗಿದೆ -

(೧)ಪ್ರಾಕೃತಿಕ ಕ್ಷೇತ್ರ (೨) ಸಾಂಸ್ಕೃತಿಕ ಕ್ಷೇತ್ರ (೩) ಬೌದ್ಧಿಕ ಕ್ಷೇತ್ರ

ಸಹ-ಅಸ್ತಿತ್ವ ಹಾಗು ಸಾಮಾಜಿಕತೆಯ ಅಧ್ಯಯನ ವ್ಯಕ್ತಿಯ ಜಾಗೃತಿ ಹಾಗು ವ್ಯವಹಾರದ ಸಂದರ್ಭದಲ್ಲಿಯೆಯಿದೆ.

ಅಖಂಡ ಸಮಾಜದ ಸಂಘಟನೆ ಅರಿವು ಸಹಿತ ಅರಿವುಳ್ಳ ವ್ಯಕ್ತಿಗಳ ಉದ್ದೇಶಪೂರ್ಣ ಆಚರಣ ಸಂಹಿತ ಸಮೇತ ವ್ಯವಸ್ಥೆ ಪ್ರಣಾಳಿಯೆಯಾಗಿದೆ. ಅಖಂಡ ಸಮಾಜದಿಂದ ವ್ಯಕ್ತಿ ಸಂಪರ್ಕ ಹಾಗು ಸಂಬಂಧದಿಂದ ಸೇರಿದ್ದಾನೆ.

ಮಾನವ ಸಮಾಜದಲ್ಲಿ ಪರಸ್ಪರ ನಿಮ್ಮ ಸಂಬಂಧ ದೃಷ್ಟಿಗೋಚರವಾಗುತ್ತವೆ -

1.ಪಿತ-ಮಾತಾ ಹಾಗು ಪುತ್ರ-ಪುತ್ರಿ ಸಂಬಂಧ

2.ಪತಿ-ಪತ್ನಿ ಸಂಬಂಧ,

3.ಗುರು ಮತ್ತು ಶಿಷ್ಯ ಸಂಬಂಧ,

4.ಸಹೋದರ ಮತ್ತು ಸಹೋದರಿ ಸಂಬಂಧ

5.ಸಂಗಡಿಗ - ಸಹಯೋಗಿ ಸಂಬಂಧ,

174

6.ಮಿತ್ರ ಸಂಬಂಧ,

7.ವ್ಯವಸ್ಥೆ ಮತ್ತು ಸಮಗ್ರ ವ್ಯವಸ್ಥೆ ಸಂಬಂಧ

* 1. ಪಿತ-ಮಾತಾ ಹಾಗು ಪುತ್ರ-ಪುತ್ರಿ ಸಂಬಂಧ: - ಮಾತಾ-ಪಿತಾ ಸಂಬಂಧದಲ್ಲಿ ಪುತ್ರ-ಪುತ್ರಿಯ ಸಹಿತ ಮಾತೃ-ಭಾವದಲ್ಲಿ ಶರೀರ-ಭಾವ ಸಹಿತ ಮೌಲಿಕತೆ ಪ್ರಧಾನವಾಗಿರುತ್ತದೆ ಹಾಗು ಪಿತೃ ಸಂಬಂಧದಲ್ಲಿ ಮೌಲ್ಯ ಮತ್ತು ಬೌದ್ಧಿಕ ಜಾಗೃತಿ ಪ್ರಧಾನ ಹಾಗು ಪೋಷಣೆ ಸಂಪನ್ನವಾಗಿರುತ್ತದೆ. ಮೂಲ ರೂಪದಲ್ಲಿ ಮಾತಾ ಪೋಷಣೆ ಪ್ರಧಾನ ಹಾಗು ಪಿತ ಸಂರಕ್ಷಣೆ ಪ್ರಧಾನ ಸ್ಪಷ್ಟವಾಗುತ್ತದೆ.

ಮಾತಾ-ಪಿತ, ಇವರನ್ನು ಪ್ರತ್ಯೇಕ ಮಾನವ ಸಂತಾನ ಗುರುತಿಸುತ್ತದೆ. ಇದು ಶಿಶುಕಾಲದ ಸ್ವಸ್ಥತೆಯ ಒಂದು ಗುರುತು. ಆದ್ದರಿಂದ ಮಾತಾ-ಪಿತಾ ಯಾವ ಮೌಲ್ಯಗಳ ಸಹಿತ ಪ್ರಸ್ತುತವಾಗುತ್ತಾರೋ, ಅವು ಮಮತೆ ಮತ್ತು ವಾತ್ಸಲ್ಯ. ಮಮತೆ ಮೌಲ್ಯದ ರೂಪದಲ್ಲಿ ಪೋಷಣೆ ಪ್ರಧಾನ ಕ್ರಿಯೆಯಾಗುವ ರೂಪದಲ್ಲಿ ಅಥವಾ ಕರ್ತವ್ಯವಿರುವ ರೂಪದಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ತಾಯಿಯ ಪಾತ್ರ ಮಮತೆ ಪ್ರಧಾನ ವಾತ್ಸಲ್ಯದ ರೂಪದಲ್ಲಿ ಅರಿವಾಗುತ್ತದೆ. ಮಮತೆ ಮೌಲ್ಯದ ಧಾರಕ - ವಾಹಕ ಸ್ವಯಂ ತಾಯಿಯೇ.

ಅಭಿಭಾವಕ ಸಂತಾನದ ಅಭ್ಯುದಯವೇ ಬಯಸುತ್ತಾರೆ. ಸ್ವಲ್ಪ ವಯಸ್ಸಾದ ಮೇಲೆ ಇದರ ಪ್ರಮಾಣ ಬಯಸುತ್ತಾರೆ.

* ಮಾತಾ ಹಾಗು ಪಿತ ಪ್ರತ್ಯೇಕ ಸಂತಾನದಿಂದ ಅದರ ಅವಸ್ಥೆಯ ಅನುರೂಪ ಪ್ರತ್ಯಾಶೆ ಇಟ್ಟಿರುತ್ತಾರೆ. ಉದಾಹರಣೆಗೆ ಶೈಶವಾವಸ್ಥೆಯಲ್ಲಿ ಕೇವಲ ಬಾಲಕನ ಲಾಲನೆ ಪಾಲನೆಯೇ ಮಾತಾ-ಪಿತವಿನ ಪುತ್ರ-ಪುತ್ರಿಯ ಪ್ರತಿ ಕರ್ತವ್ಯವಿರುತ್ತದೆ ಹಾಗು ಈ ಕರ್ತವ್ಯದ ನಿರ್ವಾಹದ ಫಲಸ್ವರೂಪ ಅವರು ಶಿಶುವಿನ ಮಾತ್ರ ಮುಗುಳುನಗುವಿನ ಅಪೇಕ್ಷೆ ಮಾಡುತ್ತಾರೆ. ಕೌಮಾರ್ಯಾವಸ್ಥೆಯಲ್ಲಿ ಸ್ವಲ್ಪ ಮಟ್ಟಿಗೆ ಶಿಕ್ಷಣ ಹಾಗು ಭಾಷೆಯ ಅಪೇಕ್ಷೆ ಇಟ್ಟುಕೊಂಡಿರುತ್ತಾರೆ. ಕೌಮಾರ್ಯಾವಸ್ಥೆಯ ಅನಂತರ ಸಂತಾನದಲ್ಲಿ ಉತ್ತಮ ಸಭ್ಯತೆಯನ್ನು ಬಯಸುತ್ತಾರೆ. ಸಭ್ಯತೆಯ ಮೂಲದಲ್ಲಿ ಪ್ರತ್ಯೇಕ ಮಾತಾ-ಪಿತ ತಮ್ಮ ಸಂತಾನದಿಂದ ಕೃತಜ್ಞತೆ (ಗೌರವತೆ)

175

ಪಡೆಯಲು ಬಯಸುತ್ತಾರೆ ಹಾಗು ಕೇವಲ ಈ ಒಂದು ಅಮೌಲ್ಯ ನಿಧಿಯನ್ನು ಪಡೆಯಲು ತನ, ಮನ ಹಾಗು ಧನದಿಂದ ಸಂತಾನರ ಸೇವೆ ಮಾಡುತ್ತಾರೆ. ಸಂತಾನ ಬಗ್ಗೆ ಮಾತಾ-ಪಿತ ತಮ್ಮ ಮನಸ್ಸಿನಲ್ಲಿ ಅಭ್ಯುದಯ ಹಾಗು ಸಮೃದ್ಧಿಯ ಕಾಮನೆ ವಿಚ್ಛಿರುತ್ತಾರೆ. ಇವೆಲ್ಲರ ಮೂಲದಲ್ಲಿ ಕೃತಜ್ಞತೆಯ ವಾಂಛೆ ಇರುತ್ತದೆ. ಯಾವ ಸಂತಾನರಲ್ಲಿ ಮಾತಾ ಪಿತ ಹಾಗು ಗುರುವಿನ ಪ್ರತಿ ಕೃತಜ್ಞವಾಗಿಲ್ಲವೋ, ಅವರು ಕೃತಜ್ಞವಾಗುವುದು ಅನಿವಾರ್ಯ, ಇದರಿಂದ ಅವರು ಸ್ವಯಂ ಕ್ಲೇಶ ಪರಂಪರೆಯನ್ನು ಪ್ರಾಪ್ತಿಸುತ್ತಾರೆ ಮತ್ತು ಇನ್ನೊಬ್ಬರನ್ನೂ ಕ್ಲೇಶಿತ ಮಾಡುತ್ತಾರೆ.

* 2. ಪತಿ-ಪತ್ನಿ ಸಂಬಂಧ -

ದಾಂಪತ್ಯ ಜೀವನದ ಚರಮ ಉಪಲಬ್ಧತೆ ಒಂದು ಮನ ಎರಡು ಶರೀರವಾಗಿ ವ್ಯವಹಾರ ಮಾಡುವುದು. ದಾಂಪತ್ಯ ಜೀವನದಲ್ಲಿ ವ್ಯವಹಾರ ನಿರ್ವಾಹ ಸಂಪರ್ಕ ಹಾಗು ಸಂಬಂಧವೇಯಾಗಿದೆ. ತಾತ್ಪರ್ಯವೇನೆಂದರೆ ದಾಂಪತ್ಯ ಜೀವನ ವ್ಯಕ್ತಿಯ ರೂಪದಲ್ಲಿ ಎರಡು ಮತ್ತು ವ್ಯವಹಾರದ ರೂಪದಲ್ಲಿ ಒಂದೇ.

ಒಂದು ಮನ ಮತ್ತು ಎರಡು ಶರೀರ ಅನುಭವಿಸಲು ಎರಡೂ ಪಕ್ಷಗಳಿಂದ ನಿರ್ವಿರೋಧಪೂರ್ವಕ ತಮ್ಮ ಸಂಬಂಧ ಹಾಗು ಸಂಪರ್ಕವನ್ನು ನಿರ್ವಹಿಸುವುದೇ ಅವಸರ, ಅವಶ್ಯಕತೆ ಹಾಗು ಉಪಲಬ್ಧತೆ. ಮಾನ, ಸಮ್ಯಾನ್, ಪ್ರತಿಷ್ಠೆ, ಆದರ ಮತ್ತು ಯಶಸ್ಸು ಪತಿ ಅಥವಾ ಪತ್ನಿ ಇಬ್ಬರಲ್ಲೂ ಸಮ್ಯಾಲಿತ ರೂಪದಲ್ಲಿರುತ್ತದೆ ಹಾಗು ಅವರಲ್ಲಿ ಯಾರೇ ಒಬ್ಬರಿಗೆ ಸಿಕ್ಕಿದಾಗ ಇನ್ನೊಂದು ಪಕ್ಷಕ್ಕೆ ಸಮಾನ ರೂಪದಲ್ಲಿ ಸಿಕ್ಕುತ್ತದೆ ಮತ್ತು ಇದರ ಸ್ವೀಕೃತಿಯಾಯಿರುತ್ತದೆ. ಪತಿ-ಪತ್ನಿಯ ರೂಪದಲ್ಲಿ ಎರಡು ಶರೀರ ಒಂದು ಮನವಿರುವ ಇದೇ ಪ್ರಮಾಣ.

ಎಲ್ಲಾ ಸಂಬಂಧಗಳಲ್ಲಿ ವಿಶ್ವಾಸ ಮೌಲ್ಯ ಸದಾ-ಸದಾವಿರುವುದು ಪರಮಾವಶ್ಯಕ. ಇದೇ ಮೂಲ ಬಿಂದು ಸಂಬಂಧಗಳನ್ನು ಗುರುತಿಸುವುದಕ್ಕೆ. ಎಲ್ಲಾ ಸಂಬಂಧ ಅಥವಾ ಸ್ಥಾಪಿತ ಸಂಬಂಧ ಗುರುತಿಸಿದ ನಂತರ ಶರೀರ ಕಾಲ ತನಕ ನಿರ್ವಾಹ ಮಾಡುವ ಮಾತು ಬರುತ್ತದೆ. ಇದೇ ಜಾಗೃತ ಮಾನವ ಪರಂಪರೆಯ ಪ್ರಮಾಣ. ಸಂಬಂಧಗಳಲ್ಲಿ ಒಂದು ಮಹತ್ವಪೂರ್ಣ ಸಂಬಂಧ ಪತಿ-ಪತ್ನಿ ಸಂಬಂಧ. ಈ ಸಂಬಂಧದಲ್ಲಿ ಪರಸ್ಪರತೆಯಲ್ಲಿ ಮೌಲ್ಯಗಳ ಗುರುತು ಈ ಪ್ರಕಾರವಾಗುತ್ತದೆ, ವಿಶ್ವಾಸ ಪೂರ್ವಕ

176

ಸಮಾಜ, ಸ್ನೇಹ ಹಾಗು ಪ್ರೇಮ ಮೌಲ್ಯಗಳ ನಿರಂತರ ಅನುಭವವಾಗುತ್ತದೆ ಅಥವಾ ಸಮಯ-ಸಮಯಕ್ಕಾಗುತ್ತದೆ. ನ್ಯೂನವಾಗಿ ವಿಶ್ವಾಸ ಮೌಲ್ಯವಿರುತ್ತದೆ. ಪ್ರೇಮ ಮೌಲ್ಯ; ದಯೆ, ಕೃಪೆ, ಕರುಣೆಯ ಅಭಿವ್ಯಕ್ತಿಯಾಗಿದೆ. ಈ ರೀತಿಯಲ್ಲಿ ಪತಿಯಲ್ಲಿ ಮೌಲಿಕರಣೆಯ ಆಧಾರದ ಮೇಲೆ ದಯೆ, ಕೃಪೆ, ಕರುಣೆ ಮೌಲ್ಯಗಳ ಸ್ಪಷ್ಟವಾಗುವುದು, ಇದೇ ಪ್ರಕಾರ ಪತ್ನಿಯಲ್ಲಿಯೂ ಈ ಮೌಲ್ಯಗಳ ಸ್ಪಷ್ಟವಾಗುವುದೇ ಪ್ರೇಮ ಮೌಲ್ಯ. ವಾಸ್ತವಿಕ ರೂಪದಲ್ಲಿ ಪಾತ್ರತೆಯ ಅನುಸಾರ ವಸ್ತುವಿನ ಮೌಲಿಕರಣೆ, ಪಾತ್ರತೆಯ ಅನುಸಾರ ಯೋಗ್ಯತೆಯ ಮೌಲಿಕರಣೆ, ಯೋಗ್ಯತೆಯ ಅನುಸಾರ ಪಾತ್ರತೆಯ ಮೌಲಿಕರಣೆ ಪರಸ್ಪರತೆಯಲ್ಲಾಗುವುದು ಸ್ವಾಭಾವಿಕ ಕ್ರಿಯೆ. ಇದು ನಿತ್ಯ ನೈಮಿತ್ಯಿಕ. ನಿತ್ಯ ಮೌಲಿಕರಣೆಯ ತಾತ್ಪರ್ಯ ನಾವು ಮೌಲಿಕರಣೆಯಲ್ಲಿ ಅಭ್ಯಸವಾಗಿದ್ದೇವೆ. ನೈಮಿತ್ಯಿಕದ ತಾತ್ಪರ್ಯ - ಪ್ರಯತ್ನದಿಂದ ಧ್ಯಾನಪೂರ್ವಕ ಮೌಲಿಕರಣೆ ಮಾಡುವುದರಿಂದಿದೆ. ಇಂತಹ ಸ್ಥಿತಿ ಪುನಃ ಪುನಃ ಆಗುತ್ತಾ ಮೌಲಿಕರಣೆ ಸಹಜ ರೂಪದಿಂದಾಗುವುದು ಕಂಡುಬರುತ್ತದೆ. ಈ ರೀತಿಯಲ್ಲಿ ಯೋಗ್ಯತೆಯ ಅನುಸಾರ ಪಾತ್ರತೆ, ಪಾತ್ರತೆಯ ಅನುಸಾರ ಯೋಗ್ಯತೆಯ ಮೌಲಿಕರಣೆ ವಿಶೇಷವಾಗಿ ಪತಿ-ಪತ್ನಿ ಸಂಬಂಧದಲ್ಲಾಗುವುದು ಅತಿ ಆವಶ್ಯಕ. ಈ ಎರಡೂ ಮೌಲಿಕರಣೆಯ ಸಹಿತವೇ ಪಾತ್ರತೆ ಮತ್ತು ಯೋಗ್ಯತೆಯಲ್ಲಿ ಸಂತುಲನ ಸ್ಥಿತಿಯು ಕಂಡುಬರುತ್ತದೆ. ಮೂರನೆಯ ವಿಧಿಯಿಂದ ಪತಿ ಅಥವಾ ಪತ್ನಿ ಅಥವಾ ಇಬ್ಬರಲ್ಲೂ ಯೋಗ್ಯತೆ, ಪಾತ್ರತೆಯೇಯಿಲ್ಲ, ಇದು ದಾಂಪತ್ಯ ಜೀವನ ಅಥವಾ ಯಾವುದೇ ಪ್ರೌಢ / ಯುವರಲ್ಲಿ ಸಂಭವವಿಲ್ಲ. ಯೋಗ್ಯತೆ ಹಾಗು ಪಾತ್ರತೆಯ ನ್ಯೂನಾತಿರೇಖವಿರಬಹುದೆಂಬುವುದು ಸಂಭವ. ಇದರಲ್ಲಿಯೇ ಹೊಂದಾಣಿಕೆ ಪಡೆಯಲು ದಾಂಪತ್ಯ ಜೀವನದ ಮಹತ್ವ ಉಪಯೋಗವಾಗುವುದು ಕಂಡುಬರುತ್ತದೆ. ಈ ತಥ್ಯಗಳನ್ನು, ಪೂರ್ವ ಆಶಯಗಳನ್ನು ನಿರ್ಲಕ್ಷಿಸುವುದೇ ದುಃಖ ಮತ್ತು ತೊಂದರೆಯ ಕಾರಣ. ಇದೇ ಭ್ರಮೆ.

* 3. ಗುರು ಮತ್ತು ಶಿಷ್ಯ ಸಂಬಂಧ -

* ಗುರುವಿನಿಂದ ಶಿಷ್ಯನ ಪ್ರತಿ, ಅಧ್ಯಯನ ಮಾಡಿಸುವುದರ ಬೋಧ ಶಿಷ್ಯನಿಗೆಯಾಗುತ್ತದೆ ಎಂಬುವ ಆಶೆ ಬಂಧಿತವಾಗಿರುತ್ತದೆ.

177

ಶಿಷ್ಯನು ಗುರುವಿನಿಂದ, ಅವನ ವಾಂಛೆ ಹಾಗು ಜಿಜ್ಞಾಸದ ಆಧಾರದ ಮೇಲೆ ಅದೇ ದಿಶೆಯಲ್ಲಿ ಗುರುವಿನಿಂದ ಅಧ್ಯಯನ ಮಾಡಿಸಲಾಗುತ್ತದೆ ಎಂಬುವ ಪ್ರತ್ಯಾಶೆಯಿರುತ್ತದೆ. ಗುರು ಮತ್ತು ಶಿಷ್ಯ, ಇಬ್ಬರಲ್ಲಿಯೂ ಉಪಲಬ್ಧತೆಯ ಕಾಮನೆಯ ಸಾಮ್ಯತೆಯಿದೆ. ಪ್ರಕ್ರಿಯೆಯಲ್ಲಿ ಪೂರಕತೆಯಿದೆ. ಒಬ್ಬ ಪ್ರದಾತ ಮತ್ತು ಇನ್ನೊಬ್ಬ ಪ್ರಾಪ್ತಕರ್ತ. ಪ್ರಾಪ್ತಕರ್ತಾ ಮತ್ತು ಪ್ರದಾತನ ಒಂದೇ ಅಭಿಲಾಶವೇನೆಂದರೆ 'ಬೋಧ' ಪೂರ್ಣವಾಗುವುದು.

ಶಿಷ್ಯನಿಗೆ ಬೋಧ-ಪೂರ್ಣವಾದಾಗ, ಅದೇ ಸಮಯ ಗುರು ಉತ್ಸವವನ್ನು ಆಚರಿಸುತ್ತಾರೆ, ಅರ್ಥಾತ್ ಗುರುವಿಗೆ ಪ್ರಸನ್ನತೆಯ ಅನುಭೂತಿಯಾಗುತ್ತದೆ, ಇದಕ್ಕೆ ವಾತ್ಸಲ್ಯವೆನ್ನುತ್ತಾರೆ. ಇದರ ತಾತ್ಪರ್ಯವೇನೆಂದರೆ ಎಲ್ಲಾ ದೊಡ್ಡವರು ತಮಗಿಂತ ಚಿಕ್ಕವರಲ್ಲಿ ವಾಂಛಿತ ಗುಣಗಳ ಪ್ರಸಾರಣೆ ಕ್ರಿಯೆಯಲ್ಲಿ ತತ್ಪರವಾಗಿರುತ್ತಾರೆ. ಇದರ ಬದಲಾಗಿ, ತೋಷವನ್ನು (ಉತ್ಸವಿತವಾಗುವುದು) ಪಡೆಯುತ್ತಾರೆ, ಇದೇ ಅವರ ಉಪಲಬ್ಧತೆ. ಅರ್ಪಣೆಯ ಬದಲಾಗಿ ಯಾವುದೇ ಭೌತಿಕ ವಸ್ತುವಿನ ಪ್ರಾಪ್ತಿಯ ಅಭಿಲಾಶವಿರುವುದಿಲ್ಲ.

ಶಿಷ್ಯ ಗುರುವಿನ ಜೊತೆ ವಿಶ್ವಾಸ ಸಹಿತ ಗುರುತಿಸಿರುವುದು ಸಹಜ. ಇದು ಸ್ವಾಭಾವಿಕ ಮಿಲನ. ಯೋಗ, ಮಿಲನದ ರೂಪದಲ್ಲಿ ಸ್ಪಷ್ಟವಾಗುತ್ತದೆ. ಗುರು-ಶಿಷ್ಯರ ಯೋಗ ತನ್ನಲ್ಲಿಯೇ ಜಾಗೃತಿಯ ಆಕಾಂಕ್ಷೆಪೂರ್ವಕ ಕಾರ್ಯ-ವ್ಯವಹಾರ ಮತ್ತು ಅಧ್ಯಯನ ಮಾಡುವುದು, ಏಕೆಂದರೆ ಗುರುವೇ ಅಧ್ಯಯನ ಮಾಡಿಸುವವನು ಎಂಬುದು ಸುಸ್ಪಷ್ಟವಾಗಿದೆ. ಅಧ್ಯಯನ ಮಾಡಿಸುವವ ಕ್ರಮದಲ್ಲಿ ಸದಾ-ಸದಾ ಶಿಷ್ಯನಲ್ಲಿ ಗ್ರಹಿಸುವ ಅಪೇಕ್ಷೆ ಹಾಗು ವಿಶ್ವಾಸ ಸೇರಿರುತ್ತದೆ. ಇದರಲ್ಲಿ ಎಷ್ಟು ಶಿಷ್ಯರು ಸಾರ್ಥಕವಾಗುತ್ತಾರೋ, ಗುರುವಿನಲ್ಲಿ ಪ್ರಸನ್ನತೆಯ ಸ್ಫೋಟ ಸೇರಿರುತ್ತದೆ, ಇದು ಸ್ಪಷ್ಟವಾಗಿದೆ. ಇದೇ ಗುರು-ಶಿಷ್ಯರ ಪರಸ್ಪರತೆಯಲ್ಲಿ ಸಫಲತೆಯ ಪ್ರಮಾಣ. ಯಾವಾಗಲೂ ಶಿಷ್ಯನ ಜಿಜ್ಞಾಸ ಮತ್ತು ಆಕಾಂಕ್ಷೆ ಶಾಂತವಾಗುತ್ತದೆಯೋ, ಆಗಾಗ ಎಲ್ಲಾ ಸಂಶಯ ದೂರವಾಗುತ್ತದೆ. ಇಂತಹ ಸಂಶಯ ಮುಕ್ತಿ ವಿಧಿಯಿಂದ ಗೌರವ, ಶ್ರದ್ಧೆ, ಕೃತಜ್ಞತೆ ಮೌಲ್ಯ ಶಿಷ್ಯನಲ್ಲಿ ಗುರುವಿಗಾಗಿ ಅರ್ಪಿತವಾಗುವುದು ಕಂಡುಬರುತ್ತದೆ. ಈ ರೀತಿಯಲ್ಲಿ ಗುರು ಶಿಷ್ಯರಲ್ಲಿ ಮೌಲ್ಯಗಳ ಮೌಲಿಕರಣೆ ಪೂರ್ವಕ ಉತ್ಸವಿತವಾಗುವುದು ಸ್ವಾಭಾವಿಕವಾಗುತ್ತದೆ.

0%